Thursday, July 01, 2010

ಲಾಲ್‍ಬಾಗಿಗೆ ಮಕ್ಕಳೊಂದಿಗೆ

ಮೊನ್ನೆ ಮಕ್ಕಳನ್ನು ಪರಿಸರ ಶಿಕ್ಷಣ ಅಧ್ಯಯನ ತರಗತಿಯಲ್ಲಿ ಲಾಲ್‍ಬಾಗಿಗೆ ಕರೆದುಕೊಂಡು ಹೋಗಿದ್ದೆ.

ಭಿನ್ನವಾದ ಲಾಲ್‍ಬಾಗನ್ನು ಮಕ್ಕಳು ನೋಡುವಂತಾಯಿತು. ಎಲ್ಲ ಕ್ರೆಡಿಟ್ಟೂ ಸಹ ಗೆಳೆಯ ಶರತ್‍ಗೆ ಸೇರಬೇಕು. ಮಕ್ಕಳೊಂದಿಗೆ interactionಗೆ ಒಪ್ಪಿಕೊಂಡು, ಲಾಲ್‍ಬಾಗಿನಲ್ಲಿ ಪಕ್ಷಿವೀಕ್ಷಣೆಯ ಮುಂದಾಳತ್ವವನ್ನು ವಹಿಸಿಕೊಂಡು ಮಕ್ಕಳಿಗೆ ಸಂತೋಷವನ್ನೂ ಜ್ಞಾನವನ್ನೂ ನೀಡಿ ಮಕ್ಕಳ ಪಾಲಿಗೆ ಅಂದಿನ ಹೀರೋ ಆಗಿಬಿಟ್ಟ ಶರತ್.

ತರಗತಿಯೊಳಗೆ ಕೂತು ನಾಲ್ಕು ಗೋಡೆಗಳ ಮಧ್ಯೆ Ecologyಯನ್ನು ಅಧ್ಯಯನ ಮಾಡುವುದಕ್ಕಿಂತ ಹೊರಗೆ ಹೋಗಿ ಅಧ್ಯಯನ ಮಾಡುವುದರ ಪ್ರತಿಫಲವೇನು ಎಂಬುದರ ಸಣ್ಣ ಸ್ಯಾಂಪಲ್ ಇಲ್ಲಿದೆ.

ಹೆಚ್ಚಿಗೆ ವಿವರ ಬರೆಯಲು ಹೋಗುವುದಿಲ್ಲ. ಈ ಚಿತ್ರಗಳೇ ವಿವರಣೆಯನ್ನು ನೀಡುವುವು!

1. ಪಕ್ಷಿಗಳನ್ನು ನೋಡುವುದು ಹೇಗೆ? ಗುರುತಿಸುವುದು ಹೇಗೆ? - ಶರತ್ ವಿವರಣೆ.2. ಕೆಲವೊಮ್ಮೆ ನಿಂತು, ಮತ್ತೆ ಕೆಲವೊಮ್ಮೆ ಕುಳಿತು, ಮತ್ತೆ ಕೆಲವೊಮ್ಮೆ ಮಲಗಿಯೂ ನೋಡಬೇಕಾಗುತ್ತೆ.. ಅದೃಷ್ಟವಿದ್ದರೆ ಕಾಣಿಸುತ್ತೆ ಪಕ್ಷಿ. ಯಾವ ಪಕ್ಷಿ?3. ಯಾವ ಪಕ್ಷಿ? ಈ ಪಕ್ಷಿ! "ಕಾಣಿಸದಿದ್ದರೂ ಪರವಾಗಿಲ್ಲ. ಫೋಟೋ ತೆಗೆಯದಿದ್ದರೂ ಪರವಾಗಿಲ್ಲ. ಆ ಪಕ್ಷಿಗೆ ತೊಂದರೆ ಕೊಡದೇ ಇರುವ ಹಾಗೆ ವರ್ತಿಸುವುದು ಬಹಳ ಮುಖ್ಯ." - ಫೋಟೋಗ್ರಾಫರ್ ಶರತ್ ಉವಾಚ.

ಈ ಪಕ್ಷಿ spotted owl.4. ಇನ್ನು ಸ್ವಲ್ಪ ಮುಂದೆ ಹೋದ ಮೇಲೆ ಸಿಕ್ಕಿತು, ಈ "super sensitive" (ಶರತ್ ಭಾಷೆಯಲ್ಲಿ) ಮಿಂಚುಳ್ಳಿ. ಅಷ್ಟೇನೂ ದೊಡ್ಡ ಕ್ಯಾಮೆರಾ ಅಲ್ಲದೇ ಇರುವುದರಿಂದ ಚಿತ್ರವು ಸ್ಪಷ್ಟ ಬಣ್ಣಗಳನ್ನು ತೋರಿಸುತ್ತಿಲ್ಲ. ಜೊತೆಗೆ ಸ್ಕೂಲು ಹುಡುಗ ಈ ಫೋಟೋ ತೆಗೆದಿರುವುದರಿಂದ ಅವನ ವಯಸ್ಸಿಗೆ ಈ ಫೋಟೋ ಚೆನ್ನಾಗಿಯೇ ಇದೆಯೆನ್ನಬೇಕು.5. ಕಾರ್ಮೊರಾಂಟ್ ಮಾಡಿದ ಭರ್ಜರಿ ಬೇಟೆ6. ಕಾರ್ಮೊರಾಂಟ್‍ಗಳು ಬೇಟೆಯ ನಂತರ ರೆಕ್ಕೆಯನ್ನು ಒಣಗಿಸಿಕೊಳ್ಳುವ ಬಗೆ ಹೀಗೆ!7. ಮತ್ತೊಂದು ಈ ಎಲ್ಲ ಆಟಗಳನ್ನೂ ನೋಡುವ ಬಗೆ ಹೀಗೆ..8. ಹೀಗೆ ನಡೆಯುತ್ತ ನಡೆಯುತ್ತ ಕೆರೆಯ ಪಕ್ಕದ ಕೊಳದಲ್ಲಿ ಡ್ರಾಂಗೋಗಾಗಿ ಕಾದಿದ್ದ ನಮಗೆ ಕಂಡಿದ್ದು ಇದು..9. ಹೂ ಹಾಸಿಗೆಯನ್ನು ಹಾಸಿದ ಮರಗಳು
10. ಎದುರಲ್ಲೇ ಮತ್ತೊಂದು ಗೂಬೆ ಜೋಡಿ!11. ನಮ್ಮ ಫೋಟೋನೂ ತೆಗೀಬೇಕಂತೆ!ಈ ಚಿತ್ರಗಳೆಲ್ಲವೂ ಶಾಲೆಯ ಹುಡುಗರು ತೆಗೆದಿರುವುದು. ಹಾಗಾಗಿ ಇದರ professionalism ಬಗ್ಗೆ ಪ್ರಶ್ನೆಯೆತ್ತುವಂತಿಲ್ಲ. ಅವರ ಮಟ್ಟಿಗೆ ಎಲ್ಲವೂ ಒಳ್ಳೆಯ ಚಿತ್ರಗಳೇ ಎಂದು ನನ್ನ ಅನಿಸಿಕೆ. ಮಕ್ಕಳನ್ನು ಒಂದು ಚಾರಣಕ್ಕೆ ಕರೆದೊಯ್ಯುವ ಮಹದಾಸೆ ನನಗೆ. ಯಾವಾಗ ಆ ಕಾಲ ಬರುತ್ತೋ ನೋಡಬೇಕಿದೆ!

ಶರತ್‍ನ ವೆಬ್ಸೈಟ್.

- ಅ
01.07.2010
3.20PM

10 comments:

 1. ರಾಜೇಶ್ ನಾಯ್ಕThursday, July 1, 2010 at 11:00:00 PM GMT+5:30

  ಮೇಷ್ಟ್ರೇ, ಆ ಮಕ್ಕಳು ಪುಣ್ಯವಂತರು. ಮಕ್ಕಳೊಂದಿಗೆ ಚಾರಣದಾಸೆ ಬೇಗ ಕೈಗೂಡಲಿ. ಹಾಗೇ, ಶರತ್ ವೆಬ್‍ಸೈಟ್‍ಗ್ ಲಿಂಕ್‍ಗಾಗಿ ಧನ್ಯವಾದ.

  ReplyDelete
 2. ಚೆನ್ನಾಗಿದೆ ರೀ ಪಕ್ಷಿ ವೀಕ್ಷಣೆ ಕಥೆ..

  ReplyDelete
 3. ಮಕ್ಕಳೊಂದಿಗೆ ಇಷ್ಟೊಂದು ಬೆರೆತು ಶಿಕ್ಷಣ ಕೊಡಲು ಹಪಹಪಿಸುವ ಶಿಕ್ಷಕರು ಕಡಿಮೆ, ತಮ್ಮ ಮಕ್ಕಳು ಅದೃಷ್ಟವಂತರು.

  ReplyDelete
 4. photos actually super aage ide :-) ... lalbagh haaLbagh aagide antha heltiddiddu nenpu ... poorti innu haaLaagilla antha ee photos inda gothaagutte.

  ReplyDelete
 5. [ವಿಜಯಾ] ಹಾಗಂತೀಯಾ? ಹಾಗಾದರೆ ಸೂಪರ್ ಆಗೇ ಇದೆ ಫೋಟೋಸು. ಲಾಲ್ ಬಾಗು ಚೆನ್ನಾಗೇ ಇದೆ. Especially ಅಲ್ಲಿ ಸಿಗುವ ಹಾಪ್‍ಕಾಮ್ಸ್ ಜ್ಯೂಸು.

  [ಸಾಗರಿ] ಇನ್ನಷ್ಟು ಅದೃಷ್ಟವು ಫಲಿಸಲು ಹವಣಿಸುತ್ತಿದ್ದೇನೆ... :-)

  [ದಿವ್ಯಾ] :-) ಥ್ಯಾಂಕ್ಯೂ ರೀ..

  [ರಾಜೇಶ್ ನಾಯ್ಕ] ಧನ್ಯವಾದಗಳು.. :-)

  ReplyDelete
 6. Thank u for using my photos sir.......!!! i liked ur way of presentation......sir its my pleasure meeting ur friend and capturing some of the moments !!!!!1

  ReplyDelete
 7. Wow, nimma blog manassige bahala khushi kodaatte. ee blog na odugarellaranu parisara premigalannaagi maadtira. Awesome:)

  ReplyDelete
 8. ಇವತ್ತಿನ ವಿ ಕೆ ಲವಲವಿಕೆಯ ವೆಬ್ಬಾಗಿಲು.............
  http://www.vijaykarnatakaepaper.com/svww_index1.php
  http://www.vijaykarnatakaepaper.com/svww_zoomart.php?Artname=20100910l_002101003&ileft=248&itop=585&zoomRatio=151&AN=20100910l_002101003
  ನಮನ

  ReplyDelete
 9. [madhoo] thank you, Madhooo...

  [namana] oh, Odide Namana avare.. tumba thanks.. :-)

  ReplyDelete

ಒಂದಷ್ಟು ಚಿತ್ರಗಳು..