Tuesday, June 22, 2010

ಹೆಸರಿನೊಳೇನಿದೆ?

ನೀರ್ಕುದುರೆಯು (ಸಮುದ್ರ ಕುದುರೆ) ಕುದುರೆಯಲ್ಲ. ನೀರಾನೆಯು ಆನೆಯಲ್ಲ. ಇದು ನಮಗೆಲ್ಲರಿಗೂ ಗೊತ್ತಿರುವುದೇ. ಇದೇ ರೀತಿ ಇನ್ನೊಂದಷ್ಟು ಸ್ಪೀಷೀಗಳು ನಮ್ಮ ಕಣ್ಮುಂದೆ ಇದ್ದೇ ಇದೆ. ನಾವು ಗಮನ ಕೊಡಬೇಕಷ್ಟೆ.

ಮಾವಿನ ಸೊಳ್ಳೆಯೆಂದು ಖ್ಯಾತವಾಗಿರುವ "ಸೊಳ್ಳೆಯು" ವಾಸ್ತವವಾಗಿ ನೊಣದ ಜಾತಿಗೆ ಸೇರಿದ್ದು. ಮಾವಿನ ಸೊಳ್ಳೆ ಎಂದು ಹೆಸರಿದ್ದರೂ ಬಾಳೇ ಹಣ್ಣಿನ ಸಿಪ್ಪೆಯ ಕಂಡರೆ ಇದಕ್ಕೆ ಆಸಕ್ತಿ ಜಾಸ್ತಿ, ಪಾಪ. ಈ ಜೀವಿಯು ಜೆನಿಟಿಕ್ಸ್-ನಲ್ಲಿ ಬಹಳ ಪರಿಣಾಮಕಾರಿ ಸಹಾಯವನ್ನೆಸಗುತ್ತಾ ಬರುತ್ತಿದೆ. ಇದನ್ನು "Cinderella of Genetics" ಎಂದೇ ಕರೆದು ಗೌರವ ಕೊಡುತ್ತಾರೆ. ಈ ಮಾವಿನ ಸೊಳ್ಳೆಯ ಒಂದು ಬಗೆಗೆ ಬಿಳಿಯ ಕಣ್ಣೂ, ಮತ್ತೊಂದು ಬಗೆಗೆ ಕೆಂಪು ಕಣ್ಣೂ ಇರುವುದೇ ಇದನ್ನು ಅಧ್ಯಯನಕ್ಕೆ ಬಳಸಿ, ಇಂದಿನ ಜೆನಿಟಿಕ್ಸ್ ಕ್ಷೇತ್ರವು ಈ ಮಟ್ಟಿಗೆ ಮುಂದುವರೆದಿರುವ ಕಾರಣ! ಇದರ ಬಗ್ಗೆ ಇನ್ನೂ ಹೆಚ್ಚಾಗಿ ಮತ್ತೆ ಯಾವಾಗಲಾದರೂ ತಿಳಿದುಕೊಳ್ಳೋಣ.ಸಮುದ್ರ ದಡದಲ್ಲಿ ಅಲ್ಲಲ್ಲಿ ಸತ್ತು ಬಿದ್ದಿರುವ, ಎರಡು ಹೋಳಾಗಿ ಕತ್ತರಿಸಿದರೆ ತಾನು ಎರಡು ಜೀವಿಯಾಗಬಲ್ಲದು ಎಂಬ ನಂಬಿಕೆಯನ್ನು ಸೃಷ್ಟಿ ಮಾಡಿರುವ ನಕ್ಷತ್ರ ಮೀನು - ಮೀನೇ ಅಲ್ಲ! ಮೀನುಗಳೆಲ್ಲವೂ "ಪೈಸಸ್" ಜಾತಿಗೆ ಸೇರಿರುವ ಪ್ರಾಣಿಗಳು. ಆದರೆ ಈ ನಕ್ಷತ್ರ ಮೀನು "ಎಖಿನೋಡರ್ಮ್" ಜಾತಿಗೆ ಸೇರಿದ್ದು. ಸಮುದ್ರ ಕುದುರೆಯೂ ಇದೇ ಜಾತಿಗೆ ಸೇರಿದ ಪ್ರಾಣಿ. ಇದರಂತೆ ಇನ್ನೊಂದು ಎಖಿನೋಡರ್ಮ್ ಹೆಸರು ಸಮುದ್ರ ಸೌತೇಕಾಯಿ! ಇದು ಸೌತೇಕಾಯಿಯೇನಲ್ಲ. ಇದೊಂದು ಪ್ರಾಣಿ!ಸೂರ‍್ಯಕಾಂತಿಯನ್ನು ಯಾವ ಕವಿಯು ಎಂಥ ಚೆಲುವಾದ ಹೂವೆಂದೇ ವರ್ಣಿಸಿರಲಿ, ಅದು ಕೇವಲ ಹೂವು ಅಲ್ಲವೇ ಅಲ್ಲ ಎಂದು ವಿಜ್ಞಾನ ಹೇಳುತ್ತೆ. ಅದೊಂದು ಪುಷ್ಪವಿನ್ಯಾಸ (inflorescence). ಅದೇ ರೀತಿ ನಾವು ಅಡುಗೆಗೆ ಬಳಸುವ ಹೂಕೋಸು ಸಹ ಹೂವಲ್ಲ. ಅನೇಕ ಪಠ್ಯಪುಸ್ತಕಗಳಲ್ಲಿ "ನಾವು ತಿನ್ನುವ ಹೂವುಗಳಲ್ಲಿ ಹೂಕೋಸು ಪ್ರಮುಖವಾದುದು" ಎಂದು ಕೊಟ್ಟಿರುತ್ತಾರೆ. ಇದು ಕೂಡ ಪುಷ್ಪವಿನ್ಯಾಸವೇ ಹೊರತು ಪುಷ್ಪವಲ್ಲ.ಯಾವುದೋ ಒಂದು ಕಾಲಘಟ್ಟದಲ್ಲಿ ಪ್ರಾಣಿ ಪಕ್ಷಿ ಗಿಡ ಮರಗಳಿಗೆ ಹೆಸರುಗಳು ಬಂದುಬಿಡುತ್ತವೆ - ಅವು ಹಾಗೇ ಉಳಿದುಕೊಂಡುಬಿಡುತ್ತವೆ. ಅದನ್ನು ಬದಲಾಯಿಸುವುದರಲ್ಲೇನೂ ಅರ್ಥವಿಲ್ಲ.

ಚಿಟ್ಟೆಗಳಿಗೆ butterfly ಎಂದು ಹೆಸರು ಬರುವ ಮುನ್ನ Flutter-by ಎಂದಿತ್ತಂತೆ. ಯಾರೋ ಮಾಲಪ್ರೋಪಿಸಂ ಇಂದ ಅದನ್ನು butterfly ಮಾಡಿದರಂತೆ.

ಸರ್ ಜೋಸೆಫ್ ಬ್ಯಾಂಕ್ಸ್ ಅನ್ನುವ ವಿಜ್ಞಾನಿ ಆವಿಷ್ಕಾರದಲ್ಲಿ ತೊಡಗಿದ್ದಾಗ ಒಂದು ವಿಶೇಷ ಪ್ರಾಣಿಯನ್ನು ಕಂಡು, ಅಲ್ಲಿನ ಸ್ಥಳೀಯರನ್ನು "ಇದು ಯಾವ ಪ್ರಾಣಿ?" ಎಂದು ಕೇಳಿದನಂತೆ. ಆ ಸ್ಥಳೀಯ ಕಾಡು ಮನುಷ್ಯ ಇವನನ್ನೇ ದುರುಗುಟ್ಟಿ ನೋಡುತ್ತ "ನೀನು ಏನು ಹೇಳ್ತಾ ಇದ್ದೀಯೋ ನನಗೆ ಗೊತ್ತಾಗುತ್ತಿಲ್ಲ" ಎಂದು ಅವರ ಭಾಷೆಯಲ್ಲಿ ಹೇಳಿದನಂತೆ. ಆ ಪ್ರಾಣಿಯ ಹೆಸರು ಅಂದಿನಿಂದ ಅದೇ ಆಯಿತು! ಆ ಕಾಡುಮನುಷ್ಯರ ಭಾಷೆಯಲ್ಲಿ "ನಿನ್ನ ಮಾತು ನನಗೆ ಅರ್ಥವಾಗುತ್ತಿಲ್ಲ" ಎನ್ನುವುದಕ್ಕೆ "ಕಾಂಗರೂ" ಎನ್ನುತ್ತಾರೆ!

ಹೆಸರುಗಳಿಗೆ ಹೀಗೆ ಏನೇನೋ ಕಾರಣಗಳಿರುತ್ತವೆ. ಕೆಲವಕ್ಕೆ ಹೇಗೆ ಹೇಗೋ ಯಾವ ಯಾವುದೋ ಹೆಸರುಗಳು ಬಂದು ಅಂಟಿಕೊಂಡು ಬಿಟ್ಟಿರುತ್ತವೆ. ಹೆಸರಿನೊಳೇನಿದೆ..? Whats in a name..?

-ಅ
22.06.2010
9.20PM

7 comments:

 1. ರಾಜೇಶ್ ನಾಯ್ಕTuesday, June 22, 2010 at 10:02:00 PM GMT+5:30

  ಮಾಹಿತಿ ತಾಣ ಇದು.

  ReplyDelete
 2. ಉತ್ತಮ ಮಾಹಿತಿಗಾಗಿ ಧನ್ಯವಾದಗಳು..

  ReplyDelete
 3. That which we call a rose
  By any other name would smell as sweet!!!

  ReplyDelete
 4. [ವಿಜಯಾ] ಹೌದು. ಸಿಹಿಯಾದ ವಾಸನೆ ಅಂದರೆ ಏನೋ ಗೊತ್ತಾಗಲಿಲ್ಲ!

  [ದಿಲೀಪ್] ಧನ್ಯವಾದಗಳು ಸರ್!

  [ಶ್ರೀನಿಧಿ] ಹೌದೇ? ತುಂಬಾ ದಿನ ಆಯ್ತು, ಎಲ್ಲೂ ಹೊರಗೆ ಹೋಗಿಲ್ಲ, ಏನೂ ಬರೆಯೋಕೆ ತೋಚೋದೇ ಇಲ್ಲ ನೋಡು. :-(

  [ರಾಜೇಶ್ ನಾಯ್ಕ] :-) ಥ್ಯಾಂಕ್ಯೂ ಸರ್.

  ReplyDelete
 5. ತೆರಿಯಾದಪ್ಪೋ ಅನ್ನುವ ಊರಿದೆ ಅಂತ ವಿದೇಶಿ ಪ್ರವಾಸಿಗೆ ಬರೆದ್ಕೊಂಡು ಹೋದ್ನಂತೆ(ಕಾಂಗರೂ ತರಹದ್ದೇ ಕತೆ). ಹೆಸರಿನಿಂದ ಉಂಟಾಗುವ ಗೋಜಲು ಆಸಕ್ತಿಕರವಾಗಿತ್ತು ಜೊತೆಗೆ informative ಕೂಡ.

  ReplyDelete
 6. ನಾನೂ ಹೂವು ಅಂತ್ಲೇ ಅಂದ್ಕೊಂಡಿದ್ದೆ ಸೂರ್ಯಕಾಂತೀನ, ಈ ಪೋಸ್ಟ್ ಓದ್ಲಿಕ್ಕೂ ಮುಂಚೆ.. informative..

  ಇದನ್ನೋದಿ ಅರೆ ಹೌದಲ್ವ, sunflower ಒಣಗಿದ ಮೇಲೆ ಅದ್ರಲ್ಲಿ ಎಷ್ಟ್ ಬೀಜ ಇರುತ್ತೆ ಅಂತ. ಆಮೇಲೆ ಇನ್ನೊಂದ್ ಡೌಟ್ ಬಂತು.. ಇದೇ ತರ ಪೇರಳೆ, ಹಲಸು ಮುಂತಾದ ಮರದ ಹಣ್ಣುಗಳೂ ಕೂಡ inflorescence ಇಂದ ತಯಾರಾಗತ್ತಾ ಅಂತ, ಯಾಕಂದ್ರೆ ಅದ್ರಲ್ಲಿ ತುಂಬಾ ಬೀಜ ಇರುತ್ತಲ್ವ.. ಮತ್ತೆ ಗುಂಬಳ, ಸೌತೆಯಂತಹ ತರಕಾರಿ ಕೂಡ.. ಗುಂಬಳದ ಫರ್ಟೈಲ್ ಆಗದ ಹೂವನ್ನು (?) ಖಾದ್ಯಕ್ಕೆ ಬಳಸ್ತಾ ಇದ್ವಿ, ಅದು ನಿಜವಾಗಿಯೂ inflorescence ಏನೋ ಅಂತ ಈಗ ಸಂದೇಹ, ನೀವೇನಂತೀರ...

  ReplyDelete

ಒಂದಷ್ಟು ಚಿತ್ರಗಳು..