Wednesday, June 24, 2009

ಶಿಸ್ತು

ಶಾಲೆಗಳಲ್ಲಿ ಮಕ್ಕಳಿಗೆ ಶಿಸ್ತಿನ ಪಾಠವೇನೋ ಹೇಳಿಕೊಡುತ್ತೇವೆ. ಎನ್.ಸಿ.ಸಿ.ಗೆ ಸೇರಿಕೊಂಡಿದ್ದರಂತೂ ಹುಡುಗರನ್ನು ಹಣ್ಣುಗಾಯಿ ನೀರುಗಾಯಿ ಮಾಡುವುದು ಸರ್ವೇ ಸಾಮಾನ್ಯ. ಶಿಸ್ತಿನ ಪಾಠವನ್ನು ಮಕ್ಕಳಿಗೆ ಹೇಳಿಕೊಡಬೇಕೆಂದರೆ "ಒದೆ" ಕೂಡ ಬೇಕೇ ಬೇಕು ಎಂದು ನಮಗೆಲ್ಲ ಅನುಭವವಾಗಿದೆಯಷ್ಟೆ?

ಇರುವೆಗಳಿಗೆ ಈ ಶಿಸ್ತಿನ ಪಾಠ ಹೇಳಿಕೊಟ್ಟವರು ಯಾರು? ಎಂದು ಪ್ರತಿಯೊಬ್ಬನಿಗೂ ಅನ್ನಿಸಿಯೇ ಇರುತ್ತೆ. ಗೀಜಗವನ್ನು (Weaver bird), ಟುವ್ವಿ ಹಕ್ಕಿಯನ್ನು (Tailor Bird) ನೋಡಿದಾಗಲೂ ಅನ್ನಿಸಿಯೇ ಇರುತ್ತೆ. ಇದಲ್ಲದೆ ಸಂಜೆಯಾಯಿತೆಂದರೆ ಮನೆಯ ಟೆರೇಸಿನ ಮೇಲೆ ನಿಂತಾಗ ಪಶ್ಚಿಮದ ಸೂರ್ಯನ ಕಡೆಗೆ ಗುಂಪಾಗಿ ಸಾಗುವ ಹಕ್ಕಿಗಳನ್ನು ನೋಡಿದಾಗ ಈ "V" ಆಕಾರದ ಶಿಸ್ತು ಪಕ್ಷಿಗಳಿಗೆ ಹೇಳಿಕೊಟ್ಟದ್ದು ಯಾರು ಎಂದು ಅನ್ನಿಸದೇ ಇರುವುದಿಲ್ಲ.



ಸಾಮಾನ್ಯವಾಗಿ ’ಹಂಸ’ವೆಂಬ ಕಾಲ್ಪನಿಕ ಹಕ್ಕಿಯಂತೆ ಕಾಣುವ ಹಕ್ಕಿಗಳು (Goose) - ಕೊಕ್ಕರೆಯೆನ್ನೋಣ - ಈ V ಆಕಾರವನ್ನು ಯಥಾವತ್ ಅನುಸರಿಸುತ್ತಾದರೂ ಬೇರೆ ಎಲ್ಲ ಹಕ್ಕಿಗಳೂ ಗುಂಪಾಗಿ ಹಾರುವಾಗ ಇದೇ ಶಿಸ್ತನ್ನು ಪರಿಪಾಲಿಸುವುದು ಗಮನಾರ್ಹ. ಹೀಗೆ ಹಾರುವಾಗ ಒಂಟಿಯಾಗಿ ಹಾರುವುದರ ಮುಕ್ಕಾಲುಪಾಲು ಹೆಚ್ಚು ಎತ್ತರ ಮತ್ತು ವೇಗವನ್ನು ಮುಟ್ಟುವ ಸಾಮರ್ಥ್ಯವನ್ನು ಪಡೆಯಬಲ್ಲದು ಪಕ್ಷಿಗಳು.

ಅಲ್ಲದೆ, ಸಾಮಾನ್ಯವಾಗಿ ಪಕ್ಷಿಗಳ ತಂಡದಲ್ಲಿ ಒಬ್ಬ ನಾಯಕ ಕೂಡ ಇರುತ್ತಾನೆ. ಗುಂಪಿನಲ್ಲಿ ದೂರ ದೂರ ಪ್ರಯಾಣ ಮಾಡುವಾಗ ಮುಂದಿರುವ ನಾಯಕನಿಗೆ ಆಯಾಸವಾಗುವುದು ಸಹಜವಾದ್ದರಿಂದ ಸರದಿಯ ಪ್ರಕಾರ ನಾಯಕನ ಬದಲಾವಣೆ ಕೂಡ ಆಗುತ್ತೆ. ಗುಂಪಿನ ಪ್ರತಿಯೊಬ್ಬನಿಗೂ ಅವಕಾಶವು ಸಿಕ್ಕೇ ಸಿಗುತ್ತೆ!

ಗುಂಪಿನಲ್ಲಿ ಕೆಲಸ ಮಾಡುವ ಶಿಸ್ತನ್ನು ನಮ್ಮ ಮಕ್ಕಳಿಗೆ ಹೇಳಿಕೊಡುವಾಗ punishment ಕೊಡುವ ಮುನ್ನ ಈ ಪಕ್ಷಿಗಳನ್ನು ತೋರಿಸುವ ಕಷ್ಟವನ್ನು ತೆಗೆದುಕೊಳ್ಳಬಾರದೇಕೆ?

-ಅ
24.06.2009
3PM

4 comments:

PaLa said...

ಹಕ್ಕಿಯಲ್ಲವದು ದೇವರ ರುಜು :)
ಪಕ್ಷಿಗಳ ಸಾಮೂಹಿಕ ನಡವಳಿಕೆಯೊಂದನ್ನು ಪರಿಚಯಿಸಿ, ಅದರ ಪರಿಣಾಮವನ್ನು ತಿಳಿಸಿ, ಕಾರಣ ಹುಡುಕಿಕೊಳ್ಳಲು ನಮ್ಮ ತಲೆಯಲ್ಲಿ ಹೆಬ್ಬಾವು (ಹುಳ ಚಿಕ್ಕದಾಯ್ತು) ಬಿಟ್ಟಿದ್ದಕ್ಕೆ ವಂದನೆಗಳು.

Vijaya said...
This post has been removed by the author.
Vijaya said...

praanigalu/pakshigalu shistina paathana hiriyarna nodi kaliyutve ... manushyaralli shistina paatha helkodoroo adanne paalsdre, makklu kalthkolutve ... aadre saamanyavaagi adu haage aagolla ... adakke ee tragedy.

Vijaya said...
This post has been removed by the author.

Post a Comment

ಒಂದಷ್ಟು ಚಿತ್ರಗಳು..