Thursday, May 28, 2009

ಸಂದೇಹ

--> ಹಾವಾಡಿಗರಿಂದ ಹಾವುಗಳ ಸಂತತಿ ಕಡಿಮೆಯಾಗುತ್ತದೆಯೇ?

--> ಕರಡಿಗಳನ್ನು ಮನೆ ಮನೆಗಳಿಗೆ ಕರೆದುಕೊಂಡು ಹೋಗಿ ತಾಯತ ಮಾಡಿಕೊಡುವವರಿಂದ ಕರಡಿಗಳು ನಾಶವಾಗುತ್ತದೆಯೇ?

--> ದೇವಸ್ಥಾನದಲ್ಲಿ ಕಾಸು ಕೊಟ್ಟರೆ ಆಶೀರ್ವಾದ ಮಾಡುವ ಆನೆಗಳಿಂದ ಆನೆಗಳು endangered ಆಗುವುದೇ?

--> ಬಿದಿರು ಕಳಲೆಯ ಸಾರು ಮಾಡಿಕೊಂಡು ತಿನ್ನುವ, ಸೌದೆಗಾಗಿ ಮರದ ರೆಂಬೆಗಳನ್ನು ಕಡಿಯುವ ಕಾಡಿನ ಹಳ್ಳಿಯ ಜನರಿಂದ ಅರಣ್ಯನಾಶವಾಗುವುದೇ?

--> ಮೃಗಾಲಯಗಳಲ್ಲಿ ಆಲ್ಬೈನೋ ಹುಲಿಗಳು (ಬಿಳಿ ಹುಲಿ) ಪ್ರವಾಸಿಗರನ್ನು ಆಕರ್ಶಿಸಿ ಸುರಕ್ಷಿತವಾಗಿದೆಯೇ?

--> 'ಪರಿಸರವಾದಿ'ಗಳಿಂದ ಪರಿಸರವು ರಕ್ಷಣೆಯಾಗುತ್ತಿದೆಯೇ?

--> ಬಿಸಿಲು ಮಳೆ ಚಳಿ ಗಾಳಿಗಳು ಮೀಟಿಯರಾಲಜಿ ಇಲಾಖೆಯವರ ಮಾತುಗಳನ್ನು ಕೇಳುತ್ತಿವೆಯೇ?

--> 'ದಯೆಯೇ ಧರ್ಮದ ಮೂಲವಯ್ಯ' - ಪ್ರಾಣಿದಯಾಸಂಘದವರಿಂದ ಪ್ರಾಣಿಗಳ ಮೇಲೆ ದಯೆಯುಂಟಾಗುತ್ತಿದೆಯೇ?

--> ಅರಣ್ಯ ಇಲಾಖೆಯವರ ದೆಸೆಯಿಂದ ಅರಣ್ಯವು ಅರಣ್ಯವಾಗಿಯೇ ಉಳಿದಿದೆಯೇ?

--> ಬೀದಿ ನಾಯಿಗಳಿಂದ ಭಯೋತ್ಪಾದನೆ ಹುಟ್ಟುವುದೇ? ಅವು ನಿಜವಾಗಿಯೂ ಕೊಲೆಗಾರರೇ?

--> ಕಾಗೆಯಿಂದ ನಮಗೆ ಕೆಟ್ಟದ್ದೋ, ನಮ್ಮಿಂದ ಕಾಗೆಗೆ ಕೆಟ್ಟದ್ದೋ?

--> ಚಾರಣಿಗರೆಲ್ಲರೂ, ಛಾಯಾಚಿತ್ರಕಾರರೆಲ್ಲರೂ, ಪರಿಸರವಾದಿಗಳೆಲ್ಲರೂ, ಸಾಹಸಿಗಳೆಲ್ಲರೂ, ಜೀವಶಾಸ್ತ್ರಜ್ಞರೆಲ್ಲರೂ, ಕವಿಗಳೆಲ್ಲರೂ ಪ್ರಕೃತಿಯನ್ನು ಪ್ರೀತಿಸುವವರೇ?

--> ಮಾನವ ಜನ್ಮ ನಿಜಕ್ಕೂ ದೊಡ್ಡದೋ? ಮರಕ್ಕಿಂತಲೂ...

-ಅ
28.05.2009
7PM

6 comments:

 1. ಶಾಲಾ ಪ್ರಾಧ್ಯಾಪಕರಾಗಿದ್ದಕ್ಕೆ ಸಾರ್ಥಕವಾಯ್ತು !ಮಕ್ಕಳ spirit of enquiry ನ ನಿಮ್ಮಲ್ಲಿ ತುಂಬಿಕೊಂಡಿರಾ ? ಶಭಾಷ್ !!

  ReplyDelete
 2. ಬೇರೆ ಪ್ರಶ್ನೆಗಳಿಗೆ ಗೊತ್ತಿಲ್ಲ... ಆದರೆ ಕಡೆಯ ಪ್ರಶ್ನೆಗೆ ನಮ್ಮ ಗುರುಗಳು (ಗೊತ್ತಲ್ಲ.. ಯಾರು ಅಂತ) ಹೀಗೆ ಉತ್ತರ ಕೊಡ್ತಾರೆ:

  ಪರಹಿತದ ಮಾತಿರಲಿ; ಪರರಿನೇ ಜೀವಿಪನು
  ನರಜಂತು, ಪಶುಪಕ್ಷಿ ಕೀಟ ಮೀನ್‌ಗಳವೋಲ್ |
  ಪರರಿನೆಳಸದದೇನನುಂ ಪರರಿಗುಪಕರಿಪ
  ತರುಜನ್ಮವಲ ಪುಣ್ಯ - ಮಂಕುತಿಮ್ಮ....

  ReplyDelete
 3. Awesome!!
  idu ULTIMATE doubt-ugaLu..ellavoo oMdakkiMta oMdu valid...

  "ಕಾಗೆಯಿಂದ ನಮಗೆ ಕೆಟ್ಟದ್ದೋ, ನಮ್ಮಿಂದ ಕಾಗೆಗೆ ಕೆಟ್ಟದ್ದೋ?"
  idu dOse mElina beNNe!
  (Icing on the cake bhAvAnuvAda :P)

  ReplyDelete
 4. Interesting doubts...

  'ಪರಿಸರವಾದಿ'ಗಳಿಂದ ಪರಿಸರವು ರಕ್ಷಣೆಯಾಗುತ್ತಿದೆಯೇ?, --> ಅರಣ್ಯ ಇಲಾಖೆಯವರ ದೆಸೆಯಿಂದ ಅರಣ್ಯವು ಅರಣ್ಯವಾಗಿಯೇ ಉಳಿದಿದೆಯೇ? I have my doubts on these.

  But some of the doubts you mention does have a common phenomenon -> " Not respecting other forms of life and using it for our selfish motives"

  ReplyDelete

ಒಂದಷ್ಟು ಚಿತ್ರಗಳು..