Monday, August 03, 2009

ಪರಾವಲಂಬಿ ಟಾಪ್ ೧೦

'ಪರಾವಲಂಬಿ' ಎನ್ನುವ ಪದದ ವಿಸ್ತಾರವು ಹೆಚ್ಚಾಯಿತೇನೋ. ಇಂಗ್ಲೀಷಿನಲ್ಲಿ ಸುಲಭವಾಗಿ Parasites ಎನ್ನಬಹುದು. ನಮ್ಮ ಶತ್ರುಗಳು! ನಮಗೆ ಅವುಗಳ ಕಂಡರೆ ಎಷ್ಟು ದ್ವೇಷವೋ ನಮ್ಮನ್ನು ಕಂಡರೆ ಅದರ ಹತ್ತರಷ್ಟು ಪ್ರೀತಿ. ಹೇಗಿದೆ ವಿಪರ್ಯಾಸ!

ಒಂದಿಷ್ಟು ಪ್ಯಾರಾಸೈಟುಗಳ ಪರಿಚಯ ಮಾಡಿಕೊಳ್ಳೋಣ. ಹಾಗೇ ನನ್ನ ಪ್ರಕಾರದ "ಕೌಂಟ್ ಡೌನ್" ಇಲ್ಲಿದೆ.

ವಿ.ಸೂ. - ಮನುಷ್ಯನ ಮೇಲೆ ’ಅವಲಂಬಿ’ಯಾಗಿರುವ ಜೀವಿಗಳಿಗೆ ಹೆಚ್ಚು ಪ್ರಾಶಸ್ತ್ಯ ಈ ’ಕೌಂಟ್ ಡೌನ್’ನಲ್ಲಿ!

.....................................................................................

--> ಟಾಪ್ ೧೦ - ತಿಗಣೆ

ನಾನೂ ನನ್ನ ಹೆಂಡತಿಯೂ ಮಡಿಕೇರಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾಗ ರಾತ್ರಿಯಿಡೀ ಬಸ್ಸಿನಲ್ಲಿ ನಮ್ಮ ನಿದ್ದೆ ಕೆಡಿಸಿದ್ದವು. ನನಗೆ ಮಾತ್ರವೇ ಕೈ ಕಾಲು ನವೆಯೆಂದು ಭಾವಿಸಿದ್ದೆ ಮೊದಮೊದಲು. ನಂತರ ಅವಳೂ ಕೆರೆದುಕೊಳ್ಳುತ್ತಿದ್ದುದನ್ನು ನೋಡಿ, "mostly ಇಬ್ಬರಿಗೂ ಆಹಾರ ಏನೋ ಅಲರ್ಜಿ ಆಗಿರಬೇಕು" ಎಂದು ದೊಡ್ಡ ಆಲೋಪತಿ ಡಾಕ್ಟರಂತೆ ಹೇಳಿಕೆ ಕೊಟ್ಟೆ. ಮತ್ತೆ ಸ್ವಲ್ಪ ಹೊತ್ತಾದ ಮೇಲೆ ನವೆ ತಡೆಯಲು ಸಾಧ್ಯವೇ ಆಗದೇ ಇದ್ದಾಗ ಅಕ್ಕ ಪಕ್ಕ ಎಲ್ಲ ತಿರುಗಿದಾಗ ಗೊತ್ತಾಯಿತು ಇರುವವರೆಲ್ಲರೂ ಕೆರೆದುಕೊಂಡು ಆನಂದ ಅನುಭವಿಸುತ್ತಿದ್ದರು. ಅಷ್ಟರಲ್ಲಿ ರಾಜಹಂಸವು ಹುಣಸೂರಿನ ಬಳಿ "ಹತ್ ನಿಮಿಷ ಟೈಮಿದೆ ನೋಡಿ" ಎಂದು ನಿಲ್ಲಿಸಿತು. ಕೆಳಗಿಳಿದು ಬೆಳಕಿನಲ್ಲಿ ನೋಡಿಕೊಂಡರೆ ಮುಖದ ಮೇಲೆ, ಕುತ್ತಿಗೆ ಮೇಲೆ, ಕೈ ಕಾಲುಗಳಲ್ಲಿ ಗಂಧೆಗಳು! ನನ್ನ ಅಂಗಿಯ ಮೇಲೆ ಜಿರಲೆಯ ಮರಿಯಂತೆ ಕಂಡ ತಿಗಣೆಯನ್ನು ಕೈಯಲ್ಲಿ ಹಿಡಿದು ಹೊಸಕಿ ಹಾಕಿದೆ. ರಕ್ತವು ಚಿಮ್ಮಿತು. ಎಳನೀರು ಮಾರುವವನು ತಿಗಣೆಯ ಬಗ್ಗೆ ಆಮೂಲಾಗ್ರ ಮಾಹಿತಿಯನ್ನು ದಯಪಾಲಿಸಿದ. ರೇಖಾಳ ಬಟ್ಟೆಯ ಮೇಲಿದ್ದ ತಿಗಣೆಗಳ ಬೇಟೆಯನ್ನು ನಾನಾಡಿದೆ, ನನ್ನ ಅಂಗಿಯ ಮೇಲಿನ ತಿಗಣೆಗಳ ಬೇಟೆಯನ್ನು ಅವಳು ಆಡಿದಳು. ಸುಮಾರು ಹತ್ತು ತಿಗಣೆಗಳು ನನ್ನ ಅಂಗಿಯ ಮೇಲೆ ಅವಳಿಗೆ ಸಿಕ್ಕಿತು.

ನಿಶಾಚಾರಿ ಜೀವಿಯಾದ ತಿಗಣೆಯು ಸಾಮಾನ್ಯವಾಗಿ ಹಾಸಿಗೆಯನ್ನು ಬಯಸುತ್ತೆ. ರಾಜಹಂಸವನ್ನೂ ಬಯಸುತ್ತೆಂದು ನಮಗೆ ಗೊತ್ತಿರಲಿಲ್ಲ. ಸೀಮೆಯೆಣ್ಣೆಯನ್ನು ತಿಗಣೆ ಬಾರದಂತೆ ಸಿಂಪಡಿಸುತ್ತಾರೆಂದು ಕಂಡಕ್ಟರು ಹೇಳಿದ್ದ. "ದೀಪ ಹಾಕ್ಬಿಡ್ತೀವಿ, ಮೇಲೆ ಬರಲ್ಲ ತಿಗಣೆಗಳು, ಸೀಟಿನ ಒಳಗೆ ಸೇರಿಕೊಂಡು ಬಿಡುತ್ತವೆ" ಎಂದು ಕಂಡಕ್ಟರು ಹೇಳಿದರೂ ನಮಗೆ ನಮ್ಮ ಸೀಟಿಗೆ ಹೋಗಲು ಧೈರ್ಯವಾಗಲಿಲ್ಲ. ಹುಣಸೂರಿನಿಂದ ಬೆಂಗಳೂರಿನವರೆಗೂ ಡ್ರೈವರ್ ಪಕ್ಕದ ಕ್ಯಾಬಿನ್ ಸೀಟಿನಲ್ಲಿ ಕುಳಿತು ಪಯಣಿಸಿದ್ದೆವು. ತಿಗಣೆಗಳು ಕಚ್ಚಿದಾಗ ಆಗುವ ಗಂಧೆಗಳೂ ಹೆಚ್ಚೂಕಮ್ಮಿ ಜೇಡಗಳು ಕಚ್ಚುವಾಗ (ಕೆಲವು ಜೇಡಗಳು ಕಚ್ಚುತ್ತವೆ, ಮತ್ತು ಅದರಿಂದ ಅಲರ್ಜಿಯಾಗುತ್ತವೆ) ಆಗುವಂತೆಯೇ ಆಗುತ್ತೆ. ಆದರೆ ತಿಗಣೆಗಳಿಂದ ರೋಗ ಹರಡುವ ಪುರಾವೆ ಸಿಕ್ಕಿಲ್ಲ. ತಿಗಣೆ ತನ್ನ ಪಾಡಿಗೆ ಒಂದಷ್ಟು ರಕ್ತ ಕುಡಿದು ಹೋಗುತ್ತೆ. Of course, ನವೆಯುಂಟು ಮಾಡುವುದು. ಇನ್ನೂ ಹೆಚ್ಚು ತೊಂದರೆಯೆಂದರೆ ನಮ್ಮ ಮೈ ಮೇಲೆ ತಿಗಣೆಯೊಂದು ಕಂಡು ಬಂದರೇ ಸಾಕು, ಎಲ್ಲಿಲ್ಲದ ಆತಂಕ ಕಿರಿಕಿರಿ! ಆದರೆ ಬಹು ದೊಡ್ಡ ಸಮಸ್ಯೆಯೆಂದರೆ ಒಂದು ತಿಗಣೆಯು ತನ್ನ ಜೀವಮಾನದಲ್ಲಿ ಐನೂರಕ್ಕೂ ಹೆಚ್ಚು ಮೊಟ್ಟೆಯಿಡಬಲ್ಲುದು.

ಸಾಮಾನ್ಯವಾಗಿ ತಿಗಣೆಗಳು ತೇವಾಂಶವಿರುವ ಹಾಸಿಗೆಯ, ಹೊದಿಕೆಗಳ, ಬಟ್ಟೆಗಳಲ್ಲಲ್ಲದೆ ತನ್ನ ಸುತ್ತಮುತ್ತ ರಕ್ತವುಳ್ಳ ಪ್ರಾಣಿಯಿರುವ ಯಾವುದೇ ಸಂದಿಗೊಂದಿಗಳಲ್ಲಿ ಬೇಕಾದರೂ ವಾಸಿಸಬಹುದು. ಡಿ.ಡಿ.ಟಿ. ಸಿಂಪಡಿಸುವುದರಿಂದ ತಿಗಣೆಗಳು ನಾಶವಾಗುತ್ತವೆ. (ಡಿ.ಡಿ.ಟಿ.ಯು ನಿಧಾನವಾಗಿ ನಮ್ಮ ನಾಶಕ್ಕೂ ಕಾರಣವಾದೀತು).....................................................................................

ಮುಂದಿನ ಸಲ ನನ್ನ ಪ್ರಕಾರದ ಟಾಪ್ ೯ ನ್ನು ನೋಡೋಣ.

-ಅ
03.08.2009
8.30PM

7 comments:

 1. aruN,

  tigaNe Top 1 aMdukoMDidde.. aadare ide Top 10 sthaana naa?

  Interesting topic..

  ReplyDelete
 2. ತಿಗ್ಣೆಯನ್ನು ಕೊಲ್ಲಲಾರೆನು
  ದುರ್ವಾಸನೆ
  ಅದ್ರಿಂದ ಕಡಿಸಿಕೊಳ್ಳಲಾರೆನು
  ನವೆ, ಧಡಿ

  ಆದರೂನು ತಿಗಣೆ ಕಾಟ
  ತಡೆಯಲಾರೆನು..

  ReplyDelete
 3. [ಪಾಲ] ಒಳ್ಳೇ ಕಾಟ! ನಾನು ಗಾಳಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ತಾಯತ ಕಟ್ಟಿಸಿಕೊಳ್ಳುವಂತೆ ಮಾಡಿವೆ.

  [ಅಂತರ್ವಾಣಿ] ಅಯ್ಯೋ, ಪಾಪ ತಿಗಣೆ!

  [ಸುಶ್ರುತ] ಮಾಡಿ.

  ReplyDelete
 4. Ayyo, ee tigane kaatadinda VRL bus hattode beda ansbidatte.:)))

  Tumba informative blog nimdu. Thanks for sharing all the info.

  ReplyDelete
 5. sumne bus nalli nidde maadi time waste maado badlu bete aadi time waste maadodu ontharaa olledu bidu.
  tigane na maneg thandu, adu mane ella hardidre innoo time waste aagitittu ... chennagi :-)

  ReplyDelete
 6. [ವಿಜಯಾ] ಬೇಟೆಯೇನೋ ಆಡಬಹುದು, ಆದರೆ ತುರಿಸಿಕೊಂಡು ಬೇಟೆಯಾಡುವುದು ನರಕ.

  [ಮಧೂ]ವಿ.ಆರ್.ಎಲ್.ಗಿಂತ ಸುಗಮದಲ್ಲಿ ಹೆಚ್ಚೆಂದು ಕೇಳಿದ್ದೇನೆ ನಾನು. ಒಳ್ಳೇ ದುರ್ಗಮ ಆಗ್ಬಿಡುತ್ತೆ ಅಂತ. ನಿಮ್ಮ ಕಮೆಂಟಿಗೆ ಧನ್ಯವಾದಗಳು!

  ReplyDelete

ಒಂದಷ್ಟು ಚಿತ್ರಗಳು..