Thursday, May 07, 2009

ಅಪ್ಪನ ಕಥೆ - ಭಾಗ ೭

ಈವರೆಗಿನ ಅಪ್ಪನ ಕಥೆಗಳು ಇಂತಿವೆ.

ಅಪ್ಪನ ಕಥೆ - ಭಾಗ ೬
ಅಪ್ಪನ ಕಥೆ - ಭಾಗ ೫
ಅಪ್ಪನ ಕಥೆ - ಭಾಗ ೪

.......................................................................................ಇದು ಕರ್ನಾಟಕ. ಹುಲಿಗಳಿರುವ (?) ಕಾಡುಗಳಿವೆ ಇಲ್ಲಿ. ಹಾಗಾಗಿ ನಾನು ಇಲ್ಲಿ ಇಲ್ಲ. ಈಗ ನಾನು ಇಲ್ಲಿಗೆ ಎಲ್ಲಿಂದ ಬಂದೆನೆಂಬುದು ಮುಖ್ಯವಾದ ವಿಷಯವಲ್ಲ. ಎಲ್ಲಿಂದಲೋ ವಲಸೆ ಬಂದೆನೆಂದೇ ಇಟ್ಟುಕೊಳ್ಳೋಣ.

ನಮ್ಮಪ್ಪ ಹೋಗ್ಬಿಟ್ಟ. :-(

ಭಾರಿ ಜಗಳವಾಯಿತು. ಬೇರೆ ಗುಂಪಿನ ಒಡೆಯ ನಮ್ಮ ಗುಂಪಿಗೆ ಬಂದದ್ದೇ ಬಂದದ್ದು! ದೊಡ್ಡ ಕದನ..

ನನಗೆ ಇಬ್ಬರು ತಂಗಿಯರು ಒಬ್ಬ ಅಣ್ಣ! ನಾಲ್ವರೂ ಅಪ್ಪನ ಮುಖದ ಬಳಿ ಹೋಗಿ ಮುದ್ದಿಸುತ್ತ ಇದ್ದಾಗ ಅಪ್ಪ "ಪುರ್... ಪುರ್..." ಎನ್ನುತ್ತ ನಮ್ಮ ಮುಖವನ್ನು ತನ್ನ ಮುಖದಿಂದ ಸವರುತ್ತಿದ್ದ. ಆ ಸ್ಪರ್ಶ ಮರೆಯಾಲುಗುವುದೇ? ಅಪ್ಪನ ಧ್ವನಿ ಎಷ್ಟು ಮೃದು!! ಆದರೆ, ಅಂದು ಜಗಳದ ದಿನ? ಅಬ್ಬಾಹ್!! ಆ ಕೂಗು!! ಕೇಳಿಯೇ ಇರಲಿಲ್ಲ ಅಷ್ಟು ಜೋರು ಧ್ವನಿಯನ್ನು!! ಅದಕ್ಕೆ "ಸಿಂಹ ಗರ್ಜನೆ" ಎನ್ನುತ್ತಾರಂತೆ!!!ಏನು ಗರ್ಜಿಸಿದರೇನು? ಈಗ ಅಪ್ಪ ತೀರಿಕೊಂಡುಬಿಟ್ಟಿದ್ದಾನೆ. ನನ್ನ ಕಣ್ಣೆದುರೇ!!

ಆ ರಾಜ, ಪಕ್ಕದ ಊರಿನ ರಾಜ ನಮ್ಮೂರಿಗೆ ಅಪ್ಪನನ್ನು ಕೊಲ್ಲಲೇ ಬಂದನೆನಿಸುತ್ತೆ. ಬರೀ ಅಪ್ಪನನ್ನು ಕೊಲ್ಲಲು ಅಲ್ಲ. ನನ್ನ ಒಡಹುಟ್ಟಿದವರನ್ನೆಲ್ಲ ಕಚ್ಚಿ ಕಚ್ಚಿ ಕುತ್ತಿಗೆಯನ್ನು ಬಗೆದು ಕೊಲ್ಲಲು!! ಎಂಥಾ ಕ್ರೂರಿ!!!! ಕ್ರೂರ ಮೃಗನು ಅವನು!!!!!!

ನಮ್ಮ ಊರಿನ ಐದೂ ತಾಯಂದಿರನ್ನು ತನ್ನ ಸ್ವತ್ತು ಮಾಡಿಕೊಂಡ. ನಾವೆಲ್ಲರೂ ಒಟ್ಟಿಗೆ ನಲಿಯುತ್ತಿದ್ದೆವು. ಈಗ ಆ ನಲಿವೆಲ್ಲಿ? ಬೇರೆ ಒಡೆಯನು ಬಂದಾಕ್ಷಣದಿಂದ ನಮ್ಮ ತಾಯಂದಿರೆಲ್ಲರೂ ಅವನ ಅಡಿಯಾಳಾಗಿದ್ದಾರೆನ್ನಿಸುತ್ತೆ. ಸ್ವಲ್ಪ ದಿನ, ಅವನ ಜೊತೆ ಸಂಸಾರವನ್ನೂ ಮಾಡಿಯಾರು. ಆದರೆ ನಾನು ಮಾತ್ರ ಮತ್ತೆ ಅಲ್ಲಿಗೆ ಹೋಗುವಂತಿಲ್ಲ.ಇಲ್ಲೂ ಇರುವಂತಿಲ್ಲ. ಹೇಳಿ ಕೇಳಿ ಇದು ಹುಲಿಗಳ ನಾಡು. ನಾನು ಪೂರ್ತಿಯಾಗಿ ಬೆಳೆದು ನಿಂತ ಮೇಲೂ ನನಗಿಂತ ಕಡೆ ಪಕ್ಷ ನೂರೈವತ್ತು ಕೆ.ಜಿ. ಹೆಚ್ಚು ತೂಕವುಳ್ಳ ಹುಲಿಗಳು ನನ್ನನ್ನು ಜೀವಂತವಾಗಿ ಉಳಿಸಲು ಸಾಧ್ಯವಿಲ್ಲ. ಉತ್ತರಕ್ಕೆ ಹೊರಟಿದ್ದೇನೆ. ದಾರಿಯಲ್ಲಿ ಸಿಕ್ಕವರಿಗೆಲ್ಲ ನನ್ನ ಕಥೆಯನ್ನು, ನನ್ನಪ್ಪನ ಕಥೆಯನ್ನು ಹೇಳುತ್ತ ಹೊರಟಿದ್ದೇನೆ.. ಯಾರಿಗೆ ಗೊತ್ತು, ನಾಳೆ ನಾನೂ ಹೀಗೆ ಕೊಲೆಪಾತಕನ ಹೆಸರನ್ನು ಸಂಪಾದಿಸಿಕೊಳ್ಳಬೇಕೇನೋ!!!! ನಾನೂ ಅಪ್ಪನಾಗಿ, ನನ್ನ ಮಕ್ಕಳನ್ನು, ನನ್ನ ರಾಣಿಯರನ್ನು ರಕ್ಷಿಸಲೇ ಬೇಕಲ್ಲವೆ?

.......................................................................................

ಬಹಳ ಹಿಂದೆ, ಇದರ ವಿಡಿಯೋ ಹಾಕಿದ್ದೆ. ಈಗ ಅದೇ 'ಅಪ್ಪನ ಕಥೆ'ಯಾಗಿದೆ. ಸಾಮಾನ್ಯವಾಗಿ ಗಂಡು ಸಿಂಹಗಳು (ಕೇಸರಿಗಳು) ತಮ್ಮ "ರಾಜ್ಯ" ವಿಸ್ತಾರಕ್ಕೋಸ್ಕರವಾಗಿ ಬೇರೆ ಗುಂಪಿನ ಮೇಲೆ ದಾಳಿ ಮಾಡಿ, ಆ ಗುಂಪಿನ ಒಡೆಯನ ಜೊತೆ ಆಮರಣಾಂತ ಯುದ್ಧ ಗೈದು, ಯುದ್ಧದಲ್ಲಿ ಗೆದ್ದ ನಂತರ ಆ ರಾಜನಿಗೆ ಹುಟ್ಟಿದ ಮರಿಗಳನ್ನು ಕೊಂದುಬಿಡುತ್ತವೆ. ಇದಕ್ಕೆ ಕಾರಣ ತಾನು ಆಕ್ರಮಿಸಿದ ಸಿಂಹದ ಗುಂಪಿನ ಹೆಣ್ಣು ಸಿಂಹಗಳಿಗೆ (ಸಿಂಹಿಣಿ ಎಂಬ ಪದ ಬಳಸುವುದುಂಟು) ತನ್ನದೇ progeny ಬೆಳೆಯಬೇಕು ಎಂಬ 'ಸಿಂಹ ಧೋರಣೆ'.ಹುಲಿಗಳಿರುವ ಕಾಡುಗಳಲ್ಲಿ ಸಿಂಹಗಳಿರುವುದಿಲ್ಲವೆಂಬುದನ್ನು ನಾನು ಬಹಳ ಹಿಂದೆ ಲೀ ಫಾಕ್ ಬರೆದಿರುವುದನ್ನು ಓದಿದ್ದೇನೆ. ನಾನು ಕಂಡ ಹಾಗೆ ಅದು ಸತ್ಯವೂ ಹೌದು.

-ಅ
10.05.2009
12AM

15 comments:

 1. ಸಿಂಹಗಳ ರಾಜ್ಯಸ್ಥಾಪನೆಯ ಬಗೆಗೆ ನನಗೆ ಗೊತ್ತಿರಲಿಲ್ಲ. ಇದೀಗ ಹೊಸ ಮಾಹಿತಿ!

  ReplyDelete
 2. ವೈಜ್ಞಾನಿಕ ಲೇಖನ ಬರೆಯುವಾಗ ಅದರ ಆಕರ/ಆಧಾರಗಳನ್ನು ನಮೂದಿಸಬೇಕಲ್ಲವೇ? ಒಂದು ವೇಳೆ ಈ ಮೇಲೆ ತಿಳಿಸಿದ ವಿಷಯ ನೀವೆ ಅನುಭವದಿಂದ ಕಂಡುಕೊಂಡಿದ್ದಾದರೆ ಆಕರಗಳ ಅಗತ್ಯವಿಲ್ಲ. ಆ ರೀತಿ ಮಾಡದೇ ಇದ್ದ ಪಕ್ಷದಲ್ಲಿ ನೀವು ಹೇಳಿದ್ದೇ ವಿಜ್ಞಾನವಾಗುವ ಸಂಭವ ಇದೆಯಲ್ಲ!

  ಈ ಪೋಸ್ಟಿಗೆ ಸೇರಿಸಿದ ಚಿತ್ರಗಳನ್ನು ನೀವು ತೆಗೆದದ್ದೇ?

  ReplyDelete
 3. [ಸುನಾಥ್] ನನಗೂ ಖಚಿತವಾಗಿ ಗೊತ್ತಿಲ್ಲ. ಆದರೆ ಹೀಗಿದೆಯೆಂದು ವನ್ಯಜೀವಿತಜ್ಞರು ಹೇಳುತ್ತಾರೆ. ನನ್ನ ವಲಯದ 'ತಜ್ಞರಿಂದ' ಕಲಿತದ್ದು, ಪುಸ್ತಕ ಓದಿದ್ದು, ಅಂತರ್ಜಾಲದಲ್ಲಿ ಅಷ್ಟಿಷ್ಟು ತಿಣುಕಾಡಿದ್ದು - ಇವಷ್ಟೇ ಈ ಮಾಹಿತಿಗೆ ಸ್ಫೂರ್ತಿ. ಯಾಕೆಂದರೆ ಸಿಂಹಗಳ ರಾಜ್ಯಕ್ಕೆ ನಾನಿನ್ನೂ ಕಾಲಿಟ್ಟಿಲ್ಲ.

  [ಸಿಂಚನ] ಆಕರ/ಆಧಾರಗಳನ್ನು ನಮೂದಿಸಬೇಕೆಂದು ನನಗನ್ನಿಸಿಲ್ಲ. ಹಾಗೆ ನಮೂದಿಸದಿದ್ದಲ್ಲಿ ನಾನು ಹೇಳಿದ್ದೇ ವಿಜ್ಞಾನವಾದೀತೆಂಬ ಭ್ರಮೆಯೂ ನನಗಿಲ್ಲ.

  ವಿ.ಸೂ.: ನನ್ನ ವಯಕ್ತಿಕ ಅನುಭವವೋ, ನನ್ನ ಗೆಳೆಯರ ಅನುಭವವೋ, ಅಥವಾ ನಾವು ನಂಬುವ ವಿಜ್ಞಾನಿಯ ಅನುಭವವೋ - ಅದೇ ಆಕರವಷ್ಟೆ. ಅದೇ ಆಧಾರವೂ ಸಹ. ಚಿತ್ರಗಳನ್ನು ತೆಗೆದದ್ದು ನಾನಲ್ಲ.

  ReplyDelete
 4. [ಆಕರ/ಆಧಾರಗಳನ್ನು ನಮೂದಿಸಬೇಕೆಂದು ನನಗನ್ನಿಸಿಲ್ಲ.]
  ಒಳ್ಳೇದು
  [ಚಿತ್ರಗಳನ್ನು ತೆಗೆದದ್ದು ನಾನಲ್ಲ.]
  ಚಿತ್ರ ತೆಗೆಯೋದು ಬಹಳ ಸುಲಭ ಅದಕ್ಕೂ ಆಕರ/ಆಧಾರ ಹಾಕಬೇಕಾಗಿಲ್ಲ.

  ಅಪ್ಪನ ಕಥೆ - ಭಾಗ ೪, ಚೆನ್ನಾಗಿದೆ

  ReplyDelete
 5. [ಸಿಂಚನ] ಧನ್ಯವಾದಗಳು... ಗೂಗಲ್ ಇಮೇಜ್ ಸರ್ಚ್ ಅಲ್ಲಿ ಅನೇಕ ಸಲ (ಶೇ ೯೯ ಸಲ) ದೊರಕಿದ್ದ ಚಿತ್ರಗಳೇ ಆಕರವಾಗಿರುತ್ತೆ. ಚಿತ್ರಗಳನ್ನು ಪೋಸ್ಟ್ ಮಾಡಿದ ಪುಣ್ಯಾತ್ಮರೆಲ್ಲರಿಗೂ ನಾನು ವಂದನೆ ಸಲ್ಲಿಸುತ್ತೇನೆ. ಈ ಕೃತಜ್ಞತೆಯನ್ನು ಇದುವರೆಗೂ ಸಲ್ಲಿಸದಿದ್ದ ನನ್ನ ಅಚಾತುರ್ಯವನ್ನು ನೆನಪು ಮಾಡಿಕೊಟ್ಟಿದ್ದಕ್ಕೆ ನಿಮಗೆ ಇನ್ನೊಮ್ಮೆ ಧನ್ಯವಾದಗಳು.

  ReplyDelete
 6. ಅರುಣ್,
  ನಾನು ಮೊದಲು ಕೇಳಿದ ಪ್ರಶ್ನೆಗೆ ನನ್ನದೇ ಆದ ಕಾರಣಗಳಿವೆ. ಸಾಮಾನ್ಯವಾಗಿ ಕನ್ನಡದಲ್ಲಿ ವೈಜ್ಞಾನಿಕ ಬರಹ ಬರೆಯುವವರು, ತಮ್ಮ ಅನುಭವದಿಂದ ಬಾರದೇ ಇದ್ದ ಸಂಗತಿಗಳಾಗಿದ್ದಲ್ಲಿ ಅದರ ಆಕರ/ಆಧಾರ ತಿಳಿಸುವುದು ಕ್ರಮ. ಇದನ್ನು ನಾನು ತೇಜಸ್ವಿಯವರ ಹೊತ್ತಿಗೆಗಳಲ್ಲೂ ಗಮನಿಸಿರುವೆ. ನೀವು ತಿಳಿಸ ಹೊರಟಿರುವ ವಿಷಯದ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳಲೋ, ವಿಷಯವನ್ನು ಖಚಿತ ಪಡಿಸಿಕೊಳ್ಳುವುದಕ್ಕೋ (ನನ್ನ ನಂಬಿಕೆ ಅರುಣ್ ಬ್ಲಾಗಲ್ಲಿ ಬರೆದಿದ್ದಾರೆ ಆದ್ದರಿಂದ ನಾನು ತಿಳಿದುಕೊಂಡುದ್ದು ಸತ್ಯ ಎಂದಿರಬಾರದು.) ಸಹಾಯಕವಾಗುತ್ತದೆ. ನೀವು ಬರೆದದ್ದೆಲ್ಲಾ ವೈಜ್ಞಾನಿಕ ಹೌದೋ ಅಲ್ಲವೋ ಎಂಬ ಭ್ರಮೆ ನಿಮಗಿಲ್ಲದಿರಬಹುದು, ಓದುಗರಿಗೆ ಆ ಭಾವನೆ ಮೂಡದಿದ್ದರೆ ಒಳಿತು!

  ಗೂಗಲ್ ಇಮೇಜ್ ಸರ್ಚ್ ಚಿತ್ರಗಳಿಗೆ ಸೋರ್ಸ್ ಆಗೋದು ದುರ್ಲಭ. ಗೂಗಲ್ ಒಂದು ಸರ್ಚ್ ಎಂಜಿನ್ ಅಷ್ಟೆ. ಹಲವು ತಾಣಗಳಿಂದ, ಆಲ್ಬಮ್ ಗಳಿಂದ ತಾನು ಇಂಡೆಕ್ಸ್ ಮಾಡಿಟ್ಟುಕೊಂಡ ಚಿತ್ರಗಳನ್ನು ನಿಮಗೆ ಸರ್ಚಿನಲ್ಲಿ ತೋರಿಸುತ್ತದೆಯೇ ಹೊರತು ಅದಾಗಿಯೇ ಚಿತ್ರ ಅಪ್ಲೋಡ್ ಮಾಡಿಕೊಳ್ಳೋದಿಲ್ಲ. ಯಾವ ತಾಣದಿಂದ ಚಿತ್ರ ಆಯ್ದುಕೊಂಡಿದ್ದೇವೆಂದು ನಮೂದಿಸುವುದು ಅವರು ಪಟ್ಟ ಶ್ರಮಕ್ಕೆ ಕಿಂಚಿತ್ತಾದರೂ ಬೆಲೆ ಕೊಡುವ ಕ್ರಮ. ಬ್ಲಾಗ್ ಬಿಡಿ ಸ್ಥಳೀಯ ಪೇಪರಿನಲ್ಲೇ ಮೂಲ ತಿಳಿಸದೆ ಚಿತ್ರ ಪ್ರಕಟಿಸುವವರೂ ಇದ್ದಾರೆ.

  ನೀವು ವಿಷಯವನ್ನು ಪ್ರೆಸೆಂಟ್ ಮಾಡುವ ವಿಧಾನ ಚೆನ್ನಾಗಿದೆ. ಪೂರಕ ಮಾಹಿತಿ ಒದಗಿಸಿದರೆ ಇನ್ನೂ ಚೆನ್ನಾಗಿರುತ್ತದೆ. ಇವಿಷ್ಟು ನಿಮ್ಮ ಅನೇಕ ಬರಹಗಳನ್ನೋದಿದ ಮೇಲೆ ನನಗನಿಸಿದ್ದು. ಪ್ರತಿಯೊಂದು ಪೋಸ್ಟಿಗೂ ಚೆನ್ನಾಗಿದೆ, ಸುಂದರವಾಗಿದೆ ಅನ್ನೋ ಅಭ್ಯಾಸ ನನಗಿಲ್ಲವಾದ್ದರಿಂದ ವಿಷಯವನ್ನು ಇಲ್ಲಿಗೇ ನಿಲ್ಲಿಸುತ್ತೇನೆ. ನನ್ನ ಪ್ರತಿಕ್ರಿಯೆಯಿಂದ ನಿಮಗೆ ಬೇಸರವಾಗಿದ್ದಲ್ಲಿ ಕ್ಷಮೆಯಿರಲಿ.

  ReplyDelete
 7. [ಸಿಂಚನ] ಹೆ ಹ್ಹೆ.. ಖಂಡಿತ ಬೇಸರವಿಲ್ಲ, ನೋಡಿ. ನಾನು ಎಷ್ಟೇ ಆದ್ರೂ ಚಿಕ್ಕ ಮಕ್ಕಳಿಗೆ ಪಾಠ ಹೇಳುವ ಸ್ಕೂಲ್ ಮೇಷ್ಟ್ರು. ಎಲ್ ಹೋಗುತ್ತೆ ಮಕ್ಕಳಿಗೆ ಪಾಠ ಹೇಳೋ ಬುದ್ಧಿ. ಎಲ್ಲ ಕಡೆ ಆ ಧೋರಣೆಯೇ ತುಂಬಿಕೊಂಡಿರುತ್ತೆ, ಕರ್ಮಕಾಂಡ.

  ಆಕರಗಳ ವಸ್ತುವಿಗೆ ಕೃತಜ್ಞತೆಯನ್ನು ಸಲ್ಲಿಸಲು ಅಭ್ಯಸಿಸುತ್ತೇನೆ.

  ಕಮೆಂಟಿಸಿದ್ದಕ್ಕೆ ಬಹಳ ಧನ್ಯವಾದಗಳು.

  ReplyDelete
 8. ಬಂದಿದ್ದಿನಿ ಸಾರ್,

  ಚಿತ್ರ ನೋಡೋಕೆ ಚೆನ್ನಾಗಿತ್ತು. ವಿಡಿಯೋ ಕಷ್ಟ ಆಯ್ತು ನೋಡೋಕೆ.

  ಹುಲಿ - ಸಿಂಹ ವೈರಿಗಳಾ?
  ನಿಮ್ಮ ಮಾತು "ಲಕ್ಷ್ಮಿ ಇದ್ದ ಕಡೆ ಸರಸ್ವತಿ ಇರೋದಿಲ್ಲ" ತರ ಇದೆ.

  ReplyDelete
 9. eden park nalli huli simha ottige jinkegala kote friends aagi meenu tindkondu irutte :-)

  ReplyDelete
 10. [ವಿಜಯಾ] ಹೌದು. ಅದೂ ಅಲ್ಲದೆ ಹೆಣ್ಣು ಹುಲಿಯು ಗಂಡು ಸಿಂಹದ ಜೊತೆಗೂಡಿ ಮರಿಯನ್ನೂ ಹಾಕುತ್ತೆ. ಆ ಹೊಸ ಸ್ಪೀಷೀಸ್‍ಗೆ Tigons ಎನ್ನಬಹುದು ನೋಡು. ಸ್ಟ್ರೈಪ್ಸ್ ಮಕ್ಕಳೇ ಉದಾಹರಣೆ.

  [ಅಂತರ್ವಾಣಿ] ಹಾಗೆ ಹೇಳುತ್ತಾರೆ ನೋಡಿ. ಇದರ ಬಗ್ಗೆ ಖಚಿತವಾಗಿ ಗೊತ್ತಿಲ್ಲ. ಯಾಕೆಂದರೆ ನಮ್ಮ ಯಾವ ಕಾಡಲ್ಲೂ ಸಿಂಹಗಳಿಲ್ಲ. ಉತ್ತರ ಭಾರತದಲ್ಲಿವೆಯಷ್ಟೆ. ವಿಪರ್ಯಾಸವೆಂದರೆ ನಮ್ಮ ಕಾಡುಗಳಲ್ಲಿ ಹುಲಿಗಳೂ ಹೆಚ್ಚಿಲ್ಲ. ದುರಂತ ವಾಸ್ತವವೆಂದರೆ ನಮ್ಮ ಕಾಡುಗಳೇ ಇಲ್ಲ!

  ReplyDelete
 11. ಅರುಣ್,
  [ದುರಂತ ವಾಸ್ತವವೆಂದರೆ ನಮ್ಮಲ್ಲಿ ಕಾಡುಗಳೇ ಇಲ್ಲ!]
  ಬೇಜಾರಾದ್ರೂ ನಿಮ್ಮ ಈ ಕಾಮೆಂಟಿಗೆ ನಗಬೇಕೆನಿಸುತ್ತದೆ :)

  [ಅದೂ ಅಲ್ಲದೆ ಹೆಣ್ಣು ಹುಲಿಯು ಗಂಡು ಸಿಂಹದ ಜೊತೆಗೂಡಿ ಮರಿಯನ್ನೂ ಹಾಕುತ್ತೆ.]
  ಇದರ ಬಗ್ಗೆ ತಿಳಿದಿರಲಿಲ್ಲ. ಆ ಮರಿ ಮುನ್ದೆ ಸಂತತಿ ಬೆಳೆಸಲು ಶಕ್ತವಾಗಿರುತ್ತದೆಯೇ? (ತೇಜಸ್ವಿಯವರ ಮಿಸ್ಸಿಂಗ್ ಲಿಂಕಿನಲ್ಲಿ ಉದಾಹರಿಸಿದ ಕತ್ತೆ, ಕುದುರೆಯ ಮರಿಯ ಬಗ್ಗೆ ನೆನಪಿಗೆ ಬಂದು ಕೇಳಿದ್ದು)

  ReplyDelete
 12. [ಸಿಂಚನ] ಮೊದಲನೆಯ ಕಮೆಂಟು ಅಂತರ್ವಾಣಿಯವರಿಗೆ - ಕಾಡುಗಳೇ ಇಲ್ಲವೆಂದರೆ ಅದರರ್ಥ ಕಾಡುಗಳು ನಶಿಸುತ್ತಿವೆಯೆಂದು. ನಗುವು ಸಹಜದ ಧರ್ಮ. ಎರಡನೆಯ ಕಮೆಂಟು ವಿಜಯಾ ಅವರಿಗೆ - ಅವರು ಹೇಳಿರುವ ಕಥೆಯು "ಈಡೆನ್" ಗೆ ಸಂಬಂಧಿಸಿದ್ದು. ಆ ಈಡೆನ್ನು ಫ್ಯಾಂಟಮ್ ಕಥೆಯಲ್ಲಿ ಬರುತ್ತೆ. ಅಲ್ಲಿ ಹುಲಿ-ಸಿಂಹ ಜೋಡಿಯಾಗಿ ಮರಿಯಾಗಿರುತ್ತೆ. ಇದು ಕಥೆಯಷ್ಟೆ. ಹಾಗಾಗಿ ಆ ಕಾಮೆಂಟು ವೈಜ್ಞಾನಿಕವಾದದ್ದಲ್ಲ.. :-)

  ReplyDelete
 13. [ಕಾಡುಗಳೇ ಇಲ್ಲವೆಂದರೆ ಅದರರ್ಥ ಕಾಡುಗಳು ನಶಿಸುತ್ತಿವೆಯೆಂದು]
  ಗೊತ್ತಾಯ್ತು, ನೀವು ಹೇಳಿದ ರೀತಿ ಚೆನ್ನಾಗಿತ್ತು ಅಷ್ಟೆ.
  [ಇದು ಕಥೆಯಷ್ಟೆ]
  ಹಾಗೆ :)
  ಬೇರೆಯವರಿಗೆ ಹಾಕಿದ ಕಾಮೆಂಟು ನೋಡದೇ ಇರೋಕೆ ಆಗಲ್ಲ, ಅದೂ ನನ್ನಂಥ ಅಧಿಕ ಪ್ರಸಂಗಿಗೆ ತುಂಬಾನೇ ಕಷ್ಟ

  ReplyDelete
 14. :-) ಒಳ್ಳೆ ಅಪ್ಪನ ಕಥೆ...
  ಅಂದಹಾಗೆ, ಹುಲಿ-ಸಿಂಹಗಳು ಒಟ್ಟಿಗೇ ಇರುವ (actually ಅಕ್ಕ-ಪಕ್ಕ ಇರುವ) ದೃಶ್ಯ ನಾನು ನೋಡಿದ್ದೀನಿ.. ನೀನೂ ನೋಡಿರ್ತೀಯ... zoo ಅಲ್ಲಿ ;-) 'ವಿಪರ್ಯಾಸ'ವಾದರೂ, "ಸತ್ಯ"! ಈ ಕೇಸಲ್ಲಿ ಎರಡೂ ರಾಜ್ಯಗಳೂ ಅಕ್ಕ-ಪಕ್ಕ.. "ಮೃಗಾಲಯ" ಅನ್ನೋ ರಾಷ್ಟ್ರದ ಎರಡು ರಾಜ್ಯಗಳ ಥರ!

  he he he.. ಇರಲಿ... ನನ್ನ ಹೋಲಿಕೆಗಳನ್ನ ನೋಡಿ ನನಗೇ ನಗು ಬಂತು.. ಆದ್ರೂ ಇರಲಿ..

  ReplyDelete

ಒಂದಷ್ಟು ಚಿತ್ರಗಳು..