Thursday, May 28, 2009

ಸಂದೇಹ

--> ಹಾವಾಡಿಗರಿಂದ ಹಾವುಗಳ ಸಂತತಿ ಕಡಿಮೆಯಾಗುತ್ತದೆಯೇ?

--> ಕರಡಿಗಳನ್ನು ಮನೆ ಮನೆಗಳಿಗೆ ಕರೆದುಕೊಂಡು ಹೋಗಿ ತಾಯತ ಮಾಡಿಕೊಡುವವರಿಂದ ಕರಡಿಗಳು ನಾಶವಾಗುತ್ತದೆಯೇ?

--> ದೇವಸ್ಥಾನದಲ್ಲಿ ಕಾಸು ಕೊಟ್ಟರೆ ಆಶೀರ್ವಾದ ಮಾಡುವ ಆನೆಗಳಿಂದ ಆನೆಗಳು endangered ಆಗುವುದೇ?

--> ಬಿದಿರು ಕಳಲೆಯ ಸಾರು ಮಾಡಿಕೊಂಡು ತಿನ್ನುವ, ಸೌದೆಗಾಗಿ ಮರದ ರೆಂಬೆಗಳನ್ನು ಕಡಿಯುವ ಕಾಡಿನ ಹಳ್ಳಿಯ ಜನರಿಂದ ಅರಣ್ಯನಾಶವಾಗುವುದೇ?

--> ಮೃಗಾಲಯಗಳಲ್ಲಿ ಆಲ್ಬೈನೋ ಹುಲಿಗಳು (ಬಿಳಿ ಹುಲಿ) ಪ್ರವಾಸಿಗರನ್ನು ಆಕರ್ಶಿಸಿ ಸುರಕ್ಷಿತವಾಗಿದೆಯೇ?

--> 'ಪರಿಸರವಾದಿ'ಗಳಿಂದ ಪರಿಸರವು ರಕ್ಷಣೆಯಾಗುತ್ತಿದೆಯೇ?

--> ಬಿಸಿಲು ಮಳೆ ಚಳಿ ಗಾಳಿಗಳು ಮೀಟಿಯರಾಲಜಿ ಇಲಾಖೆಯವರ ಮಾತುಗಳನ್ನು ಕೇಳುತ್ತಿವೆಯೇ?

--> 'ದಯೆಯೇ ಧರ್ಮದ ಮೂಲವಯ್ಯ' - ಪ್ರಾಣಿದಯಾಸಂಘದವರಿಂದ ಪ್ರಾಣಿಗಳ ಮೇಲೆ ದಯೆಯುಂಟಾಗುತ್ತಿದೆಯೇ?

--> ಅರಣ್ಯ ಇಲಾಖೆಯವರ ದೆಸೆಯಿಂದ ಅರಣ್ಯವು ಅರಣ್ಯವಾಗಿಯೇ ಉಳಿದಿದೆಯೇ?

--> ಬೀದಿ ನಾಯಿಗಳಿಂದ ಭಯೋತ್ಪಾದನೆ ಹುಟ್ಟುವುದೇ? ಅವು ನಿಜವಾಗಿಯೂ ಕೊಲೆಗಾರರೇ?

--> ಕಾಗೆಯಿಂದ ನಮಗೆ ಕೆಟ್ಟದ್ದೋ, ನಮ್ಮಿಂದ ಕಾಗೆಗೆ ಕೆಟ್ಟದ್ದೋ?

--> ಚಾರಣಿಗರೆಲ್ಲರೂ, ಛಾಯಾಚಿತ್ರಕಾರರೆಲ್ಲರೂ, ಪರಿಸರವಾದಿಗಳೆಲ್ಲರೂ, ಸಾಹಸಿಗಳೆಲ್ಲರೂ, ಜೀವಶಾಸ್ತ್ರಜ್ಞರೆಲ್ಲರೂ, ಕವಿಗಳೆಲ್ಲರೂ ಪ್ರಕೃತಿಯನ್ನು ಪ್ರೀತಿಸುವವರೇ?

--> ಮಾನವ ಜನ್ಮ ನಿಜಕ್ಕೂ ದೊಡ್ಡದೋ? ಮರಕ್ಕಿಂತಲೂ...

-ಅ
28.05.2009
7PM

Thursday, May 07, 2009

ಅಪ್ಪನ ಕಥೆ - ಭಾಗ ೭

ಈವರೆಗಿನ ಅಪ್ಪನ ಕಥೆಗಳು ಇಂತಿವೆ.

ಅಪ್ಪನ ಕಥೆ - ಭಾಗ ೬
ಅಪ್ಪನ ಕಥೆ - ಭಾಗ ೫
ಅಪ್ಪನ ಕಥೆ - ಭಾಗ ೪

.......................................................................................ಇದು ಕರ್ನಾಟಕ. ಹುಲಿಗಳಿರುವ (?) ಕಾಡುಗಳಿವೆ ಇಲ್ಲಿ. ಹಾಗಾಗಿ ನಾನು ಇಲ್ಲಿ ಇಲ್ಲ. ಈಗ ನಾನು ಇಲ್ಲಿಗೆ ಎಲ್ಲಿಂದ ಬಂದೆನೆಂಬುದು ಮುಖ್ಯವಾದ ವಿಷಯವಲ್ಲ. ಎಲ್ಲಿಂದಲೋ ವಲಸೆ ಬಂದೆನೆಂದೇ ಇಟ್ಟುಕೊಳ್ಳೋಣ.

ನಮ್ಮಪ್ಪ ಹೋಗ್ಬಿಟ್ಟ. :-(

ಭಾರಿ ಜಗಳವಾಯಿತು. ಬೇರೆ ಗುಂಪಿನ ಒಡೆಯ ನಮ್ಮ ಗುಂಪಿಗೆ ಬಂದದ್ದೇ ಬಂದದ್ದು! ದೊಡ್ಡ ಕದನ..

ನನಗೆ ಇಬ್ಬರು ತಂಗಿಯರು ಒಬ್ಬ ಅಣ್ಣ! ನಾಲ್ವರೂ ಅಪ್ಪನ ಮುಖದ ಬಳಿ ಹೋಗಿ ಮುದ್ದಿಸುತ್ತ ಇದ್ದಾಗ ಅಪ್ಪ "ಪುರ್... ಪುರ್..." ಎನ್ನುತ್ತ ನಮ್ಮ ಮುಖವನ್ನು ತನ್ನ ಮುಖದಿಂದ ಸವರುತ್ತಿದ್ದ. ಆ ಸ್ಪರ್ಶ ಮರೆಯಾಲುಗುವುದೇ? ಅಪ್ಪನ ಧ್ವನಿ ಎಷ್ಟು ಮೃದು!! ಆದರೆ, ಅಂದು ಜಗಳದ ದಿನ? ಅಬ್ಬಾಹ್!! ಆ ಕೂಗು!! ಕೇಳಿಯೇ ಇರಲಿಲ್ಲ ಅಷ್ಟು ಜೋರು ಧ್ವನಿಯನ್ನು!! ಅದಕ್ಕೆ "ಸಿಂಹ ಗರ್ಜನೆ" ಎನ್ನುತ್ತಾರಂತೆ!!!ಏನು ಗರ್ಜಿಸಿದರೇನು? ಈಗ ಅಪ್ಪ ತೀರಿಕೊಂಡುಬಿಟ್ಟಿದ್ದಾನೆ. ನನ್ನ ಕಣ್ಣೆದುರೇ!!

ಆ ರಾಜ, ಪಕ್ಕದ ಊರಿನ ರಾಜ ನಮ್ಮೂರಿಗೆ ಅಪ್ಪನನ್ನು ಕೊಲ್ಲಲೇ ಬಂದನೆನಿಸುತ್ತೆ. ಬರೀ ಅಪ್ಪನನ್ನು ಕೊಲ್ಲಲು ಅಲ್ಲ. ನನ್ನ ಒಡಹುಟ್ಟಿದವರನ್ನೆಲ್ಲ ಕಚ್ಚಿ ಕಚ್ಚಿ ಕುತ್ತಿಗೆಯನ್ನು ಬಗೆದು ಕೊಲ್ಲಲು!! ಎಂಥಾ ಕ್ರೂರಿ!!!! ಕ್ರೂರ ಮೃಗನು ಅವನು!!!!!!

ನಮ್ಮ ಊರಿನ ಐದೂ ತಾಯಂದಿರನ್ನು ತನ್ನ ಸ್ವತ್ತು ಮಾಡಿಕೊಂಡ. ನಾವೆಲ್ಲರೂ ಒಟ್ಟಿಗೆ ನಲಿಯುತ್ತಿದ್ದೆವು. ಈಗ ಆ ನಲಿವೆಲ್ಲಿ? ಬೇರೆ ಒಡೆಯನು ಬಂದಾಕ್ಷಣದಿಂದ ನಮ್ಮ ತಾಯಂದಿರೆಲ್ಲರೂ ಅವನ ಅಡಿಯಾಳಾಗಿದ್ದಾರೆನ್ನಿಸುತ್ತೆ. ಸ್ವಲ್ಪ ದಿನ, ಅವನ ಜೊತೆ ಸಂಸಾರವನ್ನೂ ಮಾಡಿಯಾರು. ಆದರೆ ನಾನು ಮಾತ್ರ ಮತ್ತೆ ಅಲ್ಲಿಗೆ ಹೋಗುವಂತಿಲ್ಲ.ಇಲ್ಲೂ ಇರುವಂತಿಲ್ಲ. ಹೇಳಿ ಕೇಳಿ ಇದು ಹುಲಿಗಳ ನಾಡು. ನಾನು ಪೂರ್ತಿಯಾಗಿ ಬೆಳೆದು ನಿಂತ ಮೇಲೂ ನನಗಿಂತ ಕಡೆ ಪಕ್ಷ ನೂರೈವತ್ತು ಕೆ.ಜಿ. ಹೆಚ್ಚು ತೂಕವುಳ್ಳ ಹುಲಿಗಳು ನನ್ನನ್ನು ಜೀವಂತವಾಗಿ ಉಳಿಸಲು ಸಾಧ್ಯವಿಲ್ಲ. ಉತ್ತರಕ್ಕೆ ಹೊರಟಿದ್ದೇನೆ. ದಾರಿಯಲ್ಲಿ ಸಿಕ್ಕವರಿಗೆಲ್ಲ ನನ್ನ ಕಥೆಯನ್ನು, ನನ್ನಪ್ಪನ ಕಥೆಯನ್ನು ಹೇಳುತ್ತ ಹೊರಟಿದ್ದೇನೆ.. ಯಾರಿಗೆ ಗೊತ್ತು, ನಾಳೆ ನಾನೂ ಹೀಗೆ ಕೊಲೆಪಾತಕನ ಹೆಸರನ್ನು ಸಂಪಾದಿಸಿಕೊಳ್ಳಬೇಕೇನೋ!!!! ನಾನೂ ಅಪ್ಪನಾಗಿ, ನನ್ನ ಮಕ್ಕಳನ್ನು, ನನ್ನ ರಾಣಿಯರನ್ನು ರಕ್ಷಿಸಲೇ ಬೇಕಲ್ಲವೆ?

.......................................................................................

ಬಹಳ ಹಿಂದೆ, ಇದರ ವಿಡಿಯೋ ಹಾಕಿದ್ದೆ. ಈಗ ಅದೇ 'ಅಪ್ಪನ ಕಥೆ'ಯಾಗಿದೆ. ಸಾಮಾನ್ಯವಾಗಿ ಗಂಡು ಸಿಂಹಗಳು (ಕೇಸರಿಗಳು) ತಮ್ಮ "ರಾಜ್ಯ" ವಿಸ್ತಾರಕ್ಕೋಸ್ಕರವಾಗಿ ಬೇರೆ ಗುಂಪಿನ ಮೇಲೆ ದಾಳಿ ಮಾಡಿ, ಆ ಗುಂಪಿನ ಒಡೆಯನ ಜೊತೆ ಆಮರಣಾಂತ ಯುದ್ಧ ಗೈದು, ಯುದ್ಧದಲ್ಲಿ ಗೆದ್ದ ನಂತರ ಆ ರಾಜನಿಗೆ ಹುಟ್ಟಿದ ಮರಿಗಳನ್ನು ಕೊಂದುಬಿಡುತ್ತವೆ. ಇದಕ್ಕೆ ಕಾರಣ ತಾನು ಆಕ್ರಮಿಸಿದ ಸಿಂಹದ ಗುಂಪಿನ ಹೆಣ್ಣು ಸಿಂಹಗಳಿಗೆ (ಸಿಂಹಿಣಿ ಎಂಬ ಪದ ಬಳಸುವುದುಂಟು) ತನ್ನದೇ progeny ಬೆಳೆಯಬೇಕು ಎಂಬ 'ಸಿಂಹ ಧೋರಣೆ'.ಹುಲಿಗಳಿರುವ ಕಾಡುಗಳಲ್ಲಿ ಸಿಂಹಗಳಿರುವುದಿಲ್ಲವೆಂಬುದನ್ನು ನಾನು ಬಹಳ ಹಿಂದೆ ಲೀ ಫಾಕ್ ಬರೆದಿರುವುದನ್ನು ಓದಿದ್ದೇನೆ. ನಾನು ಕಂಡ ಹಾಗೆ ಅದು ಸತ್ಯವೂ ಹೌದು.

-ಅ
10.05.2009
12AM

ಒಂದಷ್ಟು ಚಿತ್ರಗಳು..