Friday, January 16, 2009

ಸಸ್ಯಾಹಾರ - ೨

ಯಾವ ಯಾವ ಪ್ರಾಣಿಗಳು ಸಸ್ಯಾಹಾರಿಗಳೆಂಬ ಸತ್ಯವನ್ನು ನೆನೆಸಿಕೊಂಡೆವಷ್ಟೆ. ಈಗ ಇನ್ನೊಂದಷ್ಟು ಸಸ್ಯಾಹಾರದ ಬಗ್ಗೆ ಒಳಹೊಕ್ಕು ಪರಿಶೀಲಿಸಿ ನೋಡೋಣ.

೧. ಒಂದು ಹೆಕ್ಟೇರು ಜಮೀನಿನಲ್ಲಿ ಇಪ್ಪತ್ತೆರಡು ಸಾವಿರ ಕೆ.ಜಿ. ಆಲೂಗೆಡ್ಡೆ ಬೆಳೆಯಬಹುದಾದರೆ ಕೇವಲ ನೂರ ಎಪ್ಪತ್ತೈದು ಕೆ.ಜಿ. ಮಾಂಸವನ್ನು "ಬೆಳೆಸ"ಬಹುದು.

೨. ದೇಹ ಮತ್ತು ಮನಸ್ಸು ಆರೋಗ್ಯವಾಗಿರಬೇಕೆಂದರೆ ಆರೋಗ್ಯ ತಜ್ಞರು ತಿನ್ನಲು ಹೇಳುವುದು ಕಾರ್ಬೋಹೈಡ್ರೇಟನ್ನು. ದೇಹಕ್ಕೆ ಇಂಧನದಂತೆ ಕೆಲಸ ಮಾಡುವುದೂ ಈ ಕಾರ್ಬೋಹೈಡ್ರೇಟುಗಳೇ. ಇಂಥಾ ಕಾರ್ಬೋಹೈಡ್ರೇಟು ದೊರೆಯುವುದು ಅಧಿಕವಾಗಿ ಹಣ್ಣು, ತರಕಾರಿ, ಮತ್ತು ಧಾನ್ಯಗಳಲ್ಲಿ.

೩. ಮಾಂಸಾಹಾರ ಸೇವನೆಯಿಂದ ಆಸ್ಟಿಯೋಪೋರೋಸಿಸ್, ಮೂತ್ರಪಿಂಡ ಕಾಯಿಲೆಗಳು, ಮತ್ತು ಕೆಲವು ಬಗೆಯ ಅರ್ಬುದಗಳು ಬರುವ ಸಾಧ್ಯತೆಗಳು ಅತಿ ಹೆಚ್ಚೆಂಬುದು ಗೊತ್ತಿರುವ ಸಂಗತಿಯೇ.

೪. ಶಕ್ತಿ ಕೊಡುವ ಪ್ರೋಟೀನುಗಳು ಅಧಿಕವಾಗಿರುವುದು ಮೀನಿನಲ್ಲಾಗಲೀ, ಕೋಳಿಯಲ್ಲಾಗಲೀ ಅಲ್ಲ, ಬದಲಿಗೆ ಕಾಳುಗಳಲ್ಲಿ, ಧಾನ್ಯಗಳಲ್ಲಿ, ಹಣ್ಣುಗಳಲ್ಲಿ!

೫. ಹೃದ್ರೋಗಗಳಿಗೆ ಮುಖ್ಯಕಾರಣವು ನಮ್ಮ ಆಹಾರ ಪದ್ಧತಿ (diet). ಯಾವ ಆಹಾರದಲ್ಲಿ ಕೊಬ್ಬು ಮತ್ತು ಕೊಲೆಸ್ಟಿರಾಲ್ ಅಧಿಕವಾಗಿರುತ್ತೋ ಆ ಆಹಾರವು ಹೃದ್ರೋಗ ಪ್ರಚೋದಕವಾಗಿರುತ್ತೆ. ಮತ್ತು ಕೊಬ್ಬು ಮತ್ತು ಕೊಲೆಸ್ಟಿರಾಲ್ ಅಧಿಕವಾಗಿರುವುದು ಮಾಂಸ, ಮೊಟ್ಟೆ, ಹಾಲು ಮತ್ತು ಹಾಲಿನಿಂದ ಮಾಡಿರುವ ತಿಂಡಿಗಳಲ್ಲಿ. ಕಾಳುಗಳಲ್ಲಿ, ಧಾನ್ಯಗಳಲ್ಲಿ, ಹಣ್ಣುಗಳಲ್ಲಿ, ತರಕಾರಿಗಳಲ್ಲಿ ಕೊಲೆಸ್ಟಿರಾಲ್ ಅಂಶ ಎಳ್ಳಷ್ಟೂ ಇಲ್ಲ. ಹೃದ್ರೋಗವನ್ನು ತಡೆಗಟ್ಟಲು ಸಸ್ಯಾಹಾರ ಶ್ರೇಷ್ಠ.

೬. ಕ್ಯಾನ್ಸರ್ ರೋಗಕ್ಕೆ ಆಹಾರವೂ ಒಂದು ಕಾರಣವೆಂದು WHO ಸಂಶೋಧಿಸಿ ವರ್ಷಗಳೇ ಆದುವು. ನಾರು, ಬೀಟಾ ಕೆರೋಟೀನ್, ಜೀವಸತ್ತ್ವ (ವಿಟಮಿನ್) ಸಿ, ಜೀವಸತ್ತ್ವ ಈ - ಈ ಅಂಶಗಳುಳ್ಳ ಆಹಾರವು ಕ್ಯಾನ್ಸರ್ ವಿರೋಧಿಗಳು. ಮಾಂಸ, ಮೊಟ್ಟೆ, ಹಾಲುಗಳಲ್ಲಿ ಇವಿಷ್ಟೂ ನಾಪತ್ತೆಯಾಗಿರುವುದನ್ನು ಗಮನಿಸಬೇಕು. ಗೋಧಿ, ಅಕ್ಕಿ, ಕಾಳುಗಳು, ಹಣ್ಣುಗಳು, ಹಸಿರು ಮತ್ತು ಹಳದಿ ತರಕಾರಿಗಳಲ್ಲಿ ಈ ಅಂಶಗಳು ಅಧಿಕವಾಗಿರುತ್ತೆ.

೭. ಅಂತರ್ಜಲವನ್ನು ಉತ್ಪತ್ತಿಯಾಗುವುದಕ್ಕಿಂತ ವೇಗವಾಗಿ ಹೊರತೆಗೆಯುತ್ತಿದ್ದೇವೆ. ಪೆಟ್ರೋಲಿನಂತೆ ನೀರೂ ಕೂಡ ಖಾಲಿಯಾಗುವ ಸಂಭವವೂ ಇದೆ. ಒಂದು ಕೆ.ಜಿ. ಗೋಧಿಯನ್ನು ಬೆಳೆಯಲು ಇನ್ನೂರು ಲೀಟರು ನೀರು ಅಗತ್ಯವಿದೆ. ಆದರೆ ಒಂದು ಕೆ.ಜಿ. ಯಾವುದೇ ಬಗೆಯ ಮಾಂಸವನ್ನು "ಬೆಳೆಯಲು" ಇಪ್ಪತ್ತು ಸಾವಿರ ಲೀಟರು ನೀರಿನ ಅಗತ್ಯವಿದೆಯಷ್ಟೆ. ಒಬ್ಬ ಮಾಂಸಾಹಾರಿಯು ಸಸ್ಯಾಹಾರಿಯ ಹದಿನಾರರಷ್ಟು ಹೆಚ್ಚು ನೀರನ್ನು ಬಳಸುತ್ತಾನೆ. ಮಾಂಸವನ್ನು ಉತ್ಪತ್ತಿ ಮಾಡಲು ಸಸ್ಯಕ್ಕಿಂತ ಇಪ್ಪತ್ತರಷ್ಟು ಹೆಚ್ಚು ಜಾಗದ ಅವಶ್ಯವಿದೆ.

೮. ಮಾಂಸಾಹಾರಕ್ಕೆ ಬಳಸುವ ಪ್ರಾಣಿಗಳನ್ನು ಬೆಳೆಸುವ ಸ್ಥಳಗಳು ಕಗ್ಗತ್ತಲಾಗಿದ್ದೂ, ಕಟ್ಟಡಗಳ ಒಳಗಿದ್ದೂ, ಆ ಪ್ರಾಣಿಗಳು ಸೂರ್ಯನನ್ನು ನೋಡದೆಯೂ ಮತ್ತು ಶುಭ್ರ ಗಾಳಿಯನ್ನು ಸೇವಿಸದೇಯೂ ಇರುತ್ತವೆ.

೯. ಪ್ರಾಣಿಗಳನ್ನು ಪಂಜರದೊಳಗೆ ಹಾಕಿರುವುದೂ ಅಲ್ಲದೆ, ಆ ಪಂಜರಗಳು ಎಷ್ಟು ಚಿಕ್ಕದಾಗಿರುತ್ತವೆಂದರೆ ಯಾವ ಪ್ರಾಣಿಯೂ ಒಂದು ಹೆಜ್ಜೆ ಸಹ ಇಡಲಾಗುವುದಿಲ್ಲ. ಒಂದು ಪುಸ್ತಕವಿಡುವಷ್ಟು ಜಾಗದಲ್ಲಿ ನಾಲ್ಕು ಕೋಳಿಗಳನ್ನಿಟ್ಟಿರುವುದನ್ನು ನಾನು ಬೇಕಾದಷ್ಟು ಕಡೆ ನೋಡಿದ್ದೇನೆ.

೧೦. ವಾಹನಗಳಲ್ಲಿ ಸಾಗಿಸುವ ಪ್ರಾಣಿಗಳನ್ನು ಎಷ್ಟರ ಮಟ್ಟಿಗೆ ತುಂಬಿರುತ್ತಾರೆಂದರೆ (ಕುರಿ ದೊಂಬಿ) ಚಲಿಸುವಾಗ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ಎಷ್ಟೋ ಬಾರಿ ಕೊಂಬುಗಳನ್ನು ಮುರಿದುಕೊಳ್ಳುತ್ತವೆ, ರಸ್ತೆಗಳ ದೆಸೆಯಿಂದ ಬೆನ್ನು ಮೂಳೆಗಳು ಮುರಿದು ಹೋಗಿರುತ್ತವೆ.

೧೧. ಇನ್ನು ಪ್ರಾಣಿಗಳನ್ನು ಮಾಂಸವನ್ನಾಗಿಸುವ ಮುನ್ನ ಹೇಗೆ ಕತ್ತರಿಸುತ್ತಾರೆಂಬುದನ್ನು ವಿವರಿಸಬೇಕಾದ್ದಿಲ್ಲ.

೧೨. ಡೇವ್ ಸ್ಕಾಟ್, ಮಾರ್ಟೀನಾ ನವ್ರಾಟಿಲೋವಾ, ಸ್ಟಾಂಟನ್ ಪ್ರೈಸ್, ಅನಿಲ್ ಕುಂಬ್ಳೆ - ಇವರೆಲ್ಲರೂ ಸಸ್ಯಾಹಾರಿಗಳೇ!!!

೧೩. ಸಸ್ಯಾಹಾರಿಗಳ ಆಯುಷ್ಯ ಸರಾಸರಿ ಮಾಂಸಾಹಾರಿಗಳಿಗಿಂತ ಹತ್ತು ವರ್ಷ ಹೆಚ್ಚು!

ನಾನು ಸಸ್ಯಾಹಾರಿಯೆಂದು ಹೆಮ್ಮೆ ಪಡಲು ಮತ್ತಷ್ಟು ಕಾರಣಗಳು ಸಿಕ್ಕಿತು!!

-ಅ
16.01.2009
10.30PM

10 comments:

 1. ಪರಿಸರ ಪ್ರೇಮಿಯವರೇ...
  ಚೆಂದದ ಮಾಹಿತಿಭರಿತ ಲೇಖನ ಕೊಟ್ಟಿದ್ದೀರಿ. ಧನ್ಯವಾದ.
  ಸಸ್ಯಬೆಳೆಯಲು ಬೇಕಾದ ನೀರು ಹಾಗೂ ಮಾಂಸ ಬೆಳೆಯಲು ಬೇಕಾಗಿರುವ ನೀರಿನ ಪ್ರಮಾಣದ ಬಗ್ಗೆ ಮನಮುಟ್ಟುವಂತೆ ಮಾಹಿತಿ ಕೊಟ್ಟಿದ್ದೀರಿ.
  ಮಾಂಸಕ್ಕಾಗಿ ಬಳಸಿಕೊಳ್ಳಲಾಗುವ ಜೀವಿಗಳನ್ನು ಸಾಗಿಸುವಾಗಿನ ಅವುಗಳ ಸಂಕಷ್ಟವನ್ನು ಕಣ್ಣಲ್ಲಿ ಕಂಡಿದ್ದರೂ ಇಲ್ಲಿ ಓದಿದಾಗ ಮನಮಿಡಿಯಿತು. ಬೇಸರವಾಗುತ್ತದೆ. (ನೀವು ಬರೆದದ್ದಕ್ಕಲ್ಲ, ಅವುಗಳ ಕಷ್ಟ ಓದಿ)
  *************
  ಅಂದಹಾಗೆ ಹಿಂದಿನ ಲೇಖನಕ್ಕೆ ಪ್ರತಿಕ್ರಿಯಿಸುವಾಗ ನಾನೂ ಸಸ್ಯಹಾರಿಯೇ ಅಂತ ತಿಳಿಸಿದ್ದೆ. ಆದರೆ...ಈ ಲೇಖನದ ಪಾಯಿಂಟ್ ನಂಬರ್ ಹನ್ನೆರಡರಲ್ಲಿ ನನ್ನ ಹೆಸರೇ ಇಲ್ಲ :-)(ವಿಷಾದದ ನಗು)

  ReplyDelete
 2. ಪ್ರಿಯರೇ
  ಸಸ್ಯಹಾರದ ಮಹತ್ವ ತಿಳಿಸುವ ಈ ಎರಡನೇ ಲೇಖನವೂ ಕುತೂಹಲಭರಿತ.ನನ್ನ ಮಾಂಸಹಾರಿ ಸ್ನೇಹಿತರು ನನ್ನನ್ನು ‘ಕುಂಭ್ಳಕಾಯಿ’ ಎಂದು ರೇಗಿಸುವಾಗ ಈ ಮಾಹಿತಿ ನೀಡುತ್ತೇನೆ!
  ಜಾವಗಲ್ ಶ್ರೀನಾಥ್,ವೆಂಕಟೇಶ್ ಪ್ರಸಾದ್ ಸಹ ಸಸ್ಯಾಹಾರಿಗಳೇ.
  ಸಸ್ಯಾಹಾರದ ಬಗ್ಗೆ ಇನ್ನೊಂದು ಬರಹಕ್ಕೆ ಇದನ್ನು ನೋಡಿ.
  http://amerikadimdaravi.blogspot.com/

  ಅಶೋಕ ಉಚ್ಚಂಗಿ.
  http://mysoremallige01.blogspot.com/

  ReplyDelete
 3. ಸಸ್ಯಾಹಾರ=ಸುಂದರ ಆಹಾರ.
  ಅಮಿತಾಭ ಬಚ್ಚನನು ಹಾಲನ್ನೂ ಸಹ ಕುಡಿಯುವದಿಲ್ಲವೆಂದು ಕೇಳಿದ್ದೇನೆ.
  (ಅಲ್ಕೋಹಾಲನ್ನು ಕುಡಿಯುತ್ತಿರಬಹುದು; ಅದು ಬೇರೆ ಮಾತು!)

  ReplyDelete
 4. [ಸುನಾಥ್] ಒಳ್ಳೇ ಬಚ್ಚನ್. ಏನೇನೋ ಕುಡೀತಾನೆ ಬಿಡೀಪ್ಪಾ ಅವನಂತೂ..

  [ಅಶೋಕ್] ನೀಡ್ಬಿಡಿ ಅತ್ಲಾಗೆ!! ನೀವು ಕೊಟ್ಟಿರೋ ಲಿಂಕು ಅದ್ಭುತವಾಗಿದೆ.

  [ಶಾಂತಲಾ ಭಂಡಿ] ವಿಷಾದದ ನಗು ಬೇರೆ. ಇರಲಿ. ನೀವೂ ಸಸ್ಯಾಹಾರಿಗಳ ಪಟ್ಟಿಯಲ್ಲಿದ್ದೀರ ಎಂಬುದು ಗೊತ್ತಿರುವ ಸಂಗತಿಯೇ. ಆದರೆ ನೀವು ಕ್ರೀಡಾಪಟು ಅಲ್ಲ ಎಂದುಕೊಂಡಿದ್ದೇನೆ.. ;-)

  ReplyDelete
 5. ಅರುಣ್,
  ೧. ಹಾಲನ್ನೂ ಕುಡಿಬಾರ್ದು ಅನ್ನೋ ಲೆಕ್ಕಾಚಾರ ಇದಾಗಿದೆ!
  1 hectare ಪ್ರದೇಶದಲ್ಲಿ, poultry form ಮಾಡಿದ್ರೆ, 45 ದಿನಗಳಲ್ಲಿ ಟನ್ನುಗಟ್ಟಲೆ ಚಿಕನ್

  ಉತ್ಪಾದಿಸಬಹುದು.
  ಕುರಿ ಮೇಕೆ ಸಾಕಾಣಿಕೆ ಈ ಲೆಕ್ಕಕ್ಕೆ ಸಿಗೋಲ್ಲ, ಏಕಂದ್ರೆ ಅವೆಲ್ಲಾ ಕಾಡಲ್ಲಿ, ಕೆರೆಗಳಲ್ಲಿ ಮೇಯಿಸಿಕೊಂಡು

  ಬರ್ತಾರೆ. ಇವುಗಳ ಆಹಾರದ ಮೇಲಿನ ಇನ್ವೆಸ್ಟ್ಮೆಂಟ್ ಜೀರೋ...
  ಆ ಟನ್ನುಗಟ್ಟಲೆ ಆಲೂಗಡ್ಡೆ [90 ರಿಂದ 120 ದಿನಗಳು ಬೇಕು] ಬೆಳೆಯಬೇಕಾದರೆ ಜಮೀನು

  ಹೇಗಿರಬೇಕಿರುತ್ತೆ? ನೀರಾವರಿ ಹೇಗಿರಬೇಕಿರುತ್ತೆ? ಪೋಷಣೆ ಹೇಗಿರಬೇಕಿರುತ್ತೆ?
  ಕುರೀ ಮೇಕೆ ಸಾಕೋದು ನೋಡೀ.. ಹಳ್ಳಿಗಳಲ್ಲಿ ಯಾರ್ ಬೇಕಾದ್ರೂ ಸಾಕಬಹುದಾ.. ROI ಕುರಿ ಮೇಕೆ

  ಸಾಕಣಿಕೆಯಲ್ಲೇ ಹೆಚ್ಚಿರುತ್ತದೆ..ಅದೂ ಕೃಷಿಯ ಜೊತೆಜೊತೆಗೆ.. ಮತ್ತು ಮಾರಾಟದ ಬೆಲೆ ಯಾವತ್ತೂ ಫ್ಹೆಯ್ರ್..

  ೨. ಕಾರ್ಬೋಹೈಡ್ರೇಟ್ಸ್ ಗೆ ಏನ್ ಕೊರತೆ.. ಅಕ್ಕಿ, ಗೋಧಿ, ರಾಗಿ you name any grain.. it is

  there. ಬೇರೇ ಪೋಷಕಾಂಶಗಳಿಗೆ ಏನೆಲ್ಲಾ ತರಕಾರಿಗಳನ್ನು ತಿನ್ನಬೇಕಿರುತ್ತೆ..

  ಈ ಕೊಂಗರು, ಸ್ಲಂ ನಲ್ಲಿ ವಾಸಿಸುವಜನ ಏನು ತರಕಾರಿ ಕೊಂಡು ತಿನ್ನುತ್ತಾರೆ ಹೋಗಿ ನೋಡಿ.. ಇವರು

  ಆರೋಗ್ಯವಾಗೇನಾದರು ಇದ್ದರೆ ಅದು ಮಾಂಸಾಹಾರದಿಂದ ಮಾತ್ರ.

  ೩. ಈ ಕಾಯಿಲೆಗಳೆಲ್ಲಾ ಸಸ್ಯಾಹಾರಿಗಳಿಗೂ ಬರುತ್ವೆ.. ಹೆಚ್ಚಾದ್ರೆ ಅಮೃತಾನೂ ವಿಷ ಆಗುತ್ತಂತೆ..

  ೪. functional and tissue building elements ಆಗಿರೋ ಈ ಪ್ರೊಟೀನ್ಗಳು ಮೀನು

  ಮಾಂಸದಲ್ಲಿ ಹೇರಳವಾಗಿರುತ್ತವೆ. ಇಲ್ಲವಾದಲ್ಲಿ ಮೇಲೆ ಹೆಸರಿಸಿದ ಜನ ಎಂತಿರುತ್ತಿದ್ದರು ಊಹಿಸಿಕೊಳ್ಳಿ.

  ೫. ಒಂದಾಣಿ ತೂಕದಲ್ಲಿ ಹೆಚ್ಚಾದ್ರೂ ಸಸ್ಯಾಹಾರಿಗಳಿಗೇನೂ ಹೊರತಾಗಿಲ್ಲ.

  ೬. ಅವನ್ನೂ ತಿನ್ನಿ!

  ೭. poultry ಯಲ್ಲಿ ಈ ಲೆಕ್ಕಾಚಾರ ಉಲ್ಟಾ ಆಗಿರುತ್ತದೆ.

  ೮. ೯. ೧೦. ೧೧. ಕೋಳಿ ಸಾಗಣಿಕೆಯಲ್ಲಿ ಕಾಣುವ ಆ ಪರಿ, ಛೇ.. ಬೇಜಾರಾಗುತ್ತೆ.

  ತರಕಾರಿ ಕತ್ತರಿಸೋ ಮುಂಚೆ ಅವಕ್ಕೂ ಜೀವ ಇರುತ್ತೆ ಅನ್ಕೋಂಡು ಕತ್ತರಿಸಿ. ಪಾಪ ಬಡಪಾಯಿ ತರಕಾರಿಗಳು..

  ಎಷ್ಟು ದಯಾಹೀನರು ನಾವೆಲ್ಲಾ..

  ೧೨. ನನ್ನನ್ ನೋಡೀ , ಕುಂಬ್ಲೆಗಿಂತ ಸ್ಟ್ರಾಂಗ್ ಅಂಡ್ ಫ್ಹಿಟ್ ಈವ್ನಿ! :)

  ೧೩. ೧೦೦-೧೦=೯೦ ವರ್ಷ ಸಾಕಲ್ವಾ :)

  ನಮ್ಮಜ್ಜಿಗೆ(paternal) ೯೫ ವರ್ಷ.. ಕನ್ನಡಕ ಧರಿಸುವುದಿಲ್ಲ.. ಕೋಲನ್ನ ಎರಡುವರ್ಷದಿಂದಷ್ಟೇ

  ಹಿಡಿದಿದ್ದಾರೆ. ಹದಿನಾಲ್ಕು ಮಕ್ಕಳ ಹೆತ್ತವರು!
  ನಮ್ಮ ತಾತನಿಗೆ(maternal) ೮೫ ವರ್ಷ, ಅವರ ಸಮ ನಾ ಹುಡುಗ ನಡೆಯಲು ಸೋತಿದ್ದಿದೆ! ಇವರೂ

  ಕನ್ನಡಕ ಧರಿಸುವುದಿಲ್ಲ. ಅಜ್ಜಿ ಕನ್ನಡಕ ಧರಿಸುತ್ತೆ :p
  ನನ್ನ ತಾಯಿಯ ಅಜ್ಜಿ ೧೧೦ ವರ್ಷ ಬದುಕಿದ್ದವರು.. ಕೊನೆಯ ವರ್ಷಗಳಲ್ಲೂ ಅವರ ಹಲ್ಲುಗಳು ಗಟ್ಟಿಯಾಗಿದ್ದವು.

  ೧೩. ಯೂರೋಪಿಯನ್ಸ್ ರ ಆಹಾರ ಕ್ರಮ, ಆಯಸ್ಸು, ಆರೋಗ್ಯದ ಬಗ್ಗೆ give a thought.


  ಅಬ್ಬಾ ನನಗ್ಯಾವೂ ರಿಸ್ಟ್ರಿಕನ್ಸ್ ಇಲ್ವಲ್ಲಾ ಅನ್ನೋ ಹೆಮ್ಮೆ!! ಬೇಕು ಅಂದಾಗ ತಿನ್ನಬಹುದು.. ಬೇಡ ಅಂದಾಗ ಬೇಡ!!!


  @ಸುನಾಥ್ ಸರ್, ಸಸ್ಯಾಹಾರ=ಸುಂದರ ಆಹಾರ.. ನಿಜ.

  ಸಸ್ಯಾಹಾರ+ಮಾಂಸಾಹಾರ = ಸುಂದರವಾದ ಮತ್ತು ಶಕ್ತಿಯುತ ಆಹಾರ.

  ಹಾವೂ ಕಪ್ಪೆ ತಿನ್ನೋದು ನನಗೆ ವ್ಯಾಕ್ ಅನಿಸುತ್ತೆ.. ಕೆಲವು ಸಸ್ಯಾಹಾರಿಗಳಿಗೆ ಮಾಂಸ ಹೀಗೆ ಅನ್ಸುತ್ತೆ ಅಂದ್ಕೋಂಡಿದೀನಿ.. 'cause i'm (we are) brought up in such a environment..
  [If somebody does'nt eat meat because he/she feels empathy for birds and animals.. i've great respect for him/her.. for others and other reasons and theories, I pity!]
  ಉದ್ದಟತನ ಅನಿಸಿದರೆ ಕ್ಷಮೆ ಇರಲಿ.

  @ಅಶೋಕ್, ಕೆಲವು ಸಸ್ಯಾಹಾರಿಗಳೆಲ್ಲಾ ಕದ್ದುಮುಚ್ಚಿ ಮಾಂಸ ತಿನ್ನೋಕೆ ಶುರುಮಾಡಿರೋದಿಂದ್ರಲೇ ಮಾಂಸದ ಬೆಲೆ ದೇವೇಂದ್ರನ ಲೋಕದ್ದಾಗಿದೆ ಎನ್ನುವುದು ಕೆಲವರ ಆಂಬೋಣ!!! ನೀವೇನಂತೀರೀ? :)

  Some more trivia:
  1. Ramakrishna paramahamsa was a vegetarian but he used to offer meat to mata kaali during puja.

  ReplyDelete
 6. [ರಮೇಶ್]

  ೧. "ಕುರಿ ಮೇಕೆ ಸಾಕಾಣಿಕೆ ಈ ಲೆಕ್ಕಕ್ಕೆ ಸಿಗೋಲ್ಲ, ಏಕಂದ್ರೆ ಅವೆಲ್ಲಾ ಕಾಡಲ್ಲಿ, ಕೆರೆಗಳಲ್ಲಿ ಮೇಯಿಸಿಕೊಂಡು ಬರ್ತಾರೆ."

  ಕಾಡು ಮತ್ತು ಕೆರೆ - endangered ಎನ್ನುವುದು ನೆನಪಿರಲಿ.

  ೨. "ಸ್ಲಂ ನಲ್ಲಿ ವಾಸಿಸುವಜನ ಏನು ತರಕಾರಿ ಕೊಂಡು ತಿನ್ನುತ್ತಾರೆ ಹೋಗಿ ನೋಡಿ.. ಇವರು ಆರೋಗ್ಯವಾಗೇನಾದರು ಇದ್ದರೆ ಅದು ಮಾಂಸಾಹಾರದಿಂದ ಮಾತ್ರ. "

  ಇದು ವ್ಯಂಗ್ಯವಾದ ಮಾತಿನಂತಿದೆ. ಅನಾರೋಗ್ಯದ ಸರಾಸರಿ ಹೆಚ್ಚಿರುವುದೇ ಸ್ಲಂಗಳಲ್ಲಿ ಎಂಬುದು ತಿಳಿದಿರುವ ಸಂಗತಿಯೇ.ಸ್ಲಂ ಕಥೆಯನ್ನು ಈ ಡಾಕ್ಯುಮೆಂಟು ಸ್ವಲ್ಪ ವಿವರಿಸುತ್ತೆ ನೋಡಿ. http://www.solutionexchange-un.net.in/food/cr/cr-se-food-23030601.doc

  ೩. ಈ ಕಾಯಿಲೆಗಳೆಲ್ಲಾ ಸಸ್ಯಾಹಾರಿಗಳಿಗೂ ಬರುತ್ವೆ.. ಹೆಚ್ಚಾದ್ರೆ ಅಮೃತಾನೂ ವಿಷ ಆಗುತ್ತಂತೆ..

  ಅಕ್ಷರಶಃ ಒಪ್ಪಿಕೊಳ್ಳುತ್ತೇನೆ. ಹಿತ ಭುಕ್ ಮಿತ ಭುಕ್.. ಆದರೆ, "ಹೆಚ್ಚಾದರೆ" ಬರುತ್ತೆ ಅನ್ನೋದು ಇಲ್ಲಿ ಗಮನಿಸ ಬೇಕಾದ ಪಾಯಿಂಟು. :-)

  ೪. "ಪ್ರೊಟೀನ್ಗಳು ಮೀನು ಮಾಂಸದಲ್ಲಿ ಹೇರಳವಾಗಿರುತ್ತವೆ. ಇಲ್ಲವಾದಲ್ಲಿ ಮೇಲೆ ಹೆಸರಿಸಿದ ಜನ ಎಂತಿರುತ್ತಿದ್ದರು ಊಹಿಸಿಕೊಳ್ಳಿ."

  ಯಾವ ಜನ? ಸ್ಲಂ ಜನರೇ?? ಪ್ರೋಟೀನುಗಳು ಮೀನು ಮಾಂಸದಲ್ಲಿ ಹೇರಳ ನಿಜ. ಆದರೆ ಹೇರಳ ಪ್ರೋಟೀನಿನ ಜೊತೆಗೆ ನಿಮಗೆ ಉಚಿತ ಕೊಡುಗೆ ಕೊಲೆಸ್ಟಿರಾಲ್ ಸಿಗುತ್ತೆ.. ಯುಗಾದಿ ಆಫರ್.

  ೫. "ತರಕಾರಿ ಕತ್ತರಿಸೋ ಮುಂಚೆ ಅವಕ್ಕೂ ಜೀವ ಇರುತ್ತೆ ಅನ್ಕೋಂಡು ಕತ್ತರಿಸಿ. ಪಾಪ ಬಡಪಾಯಿ ತರಕಾರಿಗಳು.."

  ಹುಲಿಯು ಜಿಂಕೆಯನ್ನು ತಿನ್ನುತ್ತೆ. ಜಿಂಕೆಯ ಬಗ್ಗೆ ಅನುಕಂಪ ಪಡಬೇಕಾದ್ದಿಲ್ಲ. ಅಂತೆಯೇ ಜಿಂಕೆಯು ಹುಲ್ಲನ್ನು ತಿನ್ನುತ್ತೆ. ಹುಲ್ಲಿಗಾಗಿ ಅನುಕಂಪ ಪಡಬೇಕಾದ್ದಿಲ್ಲ. ಮನುಷ್ಯ ಶರೀರವು, ಆಫ್ ಕೋರ್ಸ್, ಸಹಸ್ರಾರು ವರ್ಷದ ಕೆಳಗೆ ಹಸಿ ಮಾಂಸಾಹಾರಕ್ಕಾಗಿಯೇ ರಚನೆಯಾಗಿದ್ದೂ, ನೀವು ಹೇಳಿದಂತೆ ಅದಕ್ಕೆ ಬೇಕಾದ ಹಲ್ಲುಗಳನ್ನು ಹೊಂದಿದೆ. ದೈಹಿಕವಾಗಿ, ಬೌದ್ಧಿಕವಾಗಿ, ಮಾನಸಿಕವಾಗಿ ವಿಕಾಸವಾಗುತ್ತಲೇ ಸಸ್ಯಾಹಾರಕ್ಕೆ ಸೂಕ್ತವಾಗಿ ರಚನೆಯನ್ನು ಪಡೆದಿರುವುದು ಸತ್ಯವಷ್ಟೆ. ಪ್ರಕೃತಿ ನಿಯಮದಂತೆ ಒಂದು ಜೀವಿ ಬದುಕಬೇಕಾದರೆ (ಹೊಟ್ಟೆ ತುಂಬಿಸಿಕೊಳ್ಳಲು) ಇನ್ನೊಂದು ಸಾಯಲೇ ಬೇಕು. ಕಡಿಮೆ ಜಾಗದಲ್ಲಿ ಹೆಚ್ಚು ಉತ್ಪಾದನೆ ಮಾಡುವ ಜೀವಿಯನ್ನು ಕೊಲ್ಲುವುದು ಬೌದ್ಧಿಕರ ಲಕ್ಷಣ.

  ಮತ್ತೊಂದು ಸತ್ಯವೆಂದರೆ, ಪ್ರಾಣಿಗಳನ್ನು - ತಿನ್ನುವ ಪ್ರಾಣಿಗಳನ್ನು - ಕುರಿ, ಕೋಳಿ, ಹಂದಿ, ಇತ್ಯಾದಿಗಳನ್ನು ಕಡಿಯುವಾಗ ಅವಕ್ಕೆ ನೋವಾಗುತ್ತವೆ ಎಂಬುದನ್ನು. ಯಾವುದೇ ಸಸ್ಯಗಳಿಗೆ ನೋವಾಗುವುದಿಲ್ಲ. ಇದಕ್ಕೆ ಕಾರಣ ಸಸ್ಯಗಳಲ್ಲಿ pain sensing neurons ಇರದೇ ಇರುವುದು. ಹಾಗೆಂದ ಮಾತ್ರಕ್ಕೆ ಅನೆಸ್ತೇಷಿಯಾ ಕೊಟ್ಟು ಪ್ರಾಣಿಗಳನ್ನು ಕೊಂದು ತಿನ್ನುವುದು ಅಮಾನವೀಯವೇ ಸರಿ. ಪ್ರಾಣಿಗಳನ್ನು ತಿನ್ನದೇ ಬದುಕಲು ಸಾಧ್ಯವೇ ಇಲ್ಲವೆನ್ನುವ ಅನಿವಾರ್ಯತೆ ನಮಗಿಲ್ಲ - ಹುಲಿ ಸಿಂಹ ಚಿರತೆಗಳಂತೆ. ದೇಹದ ಪೌಷ್ಠಿಕತೆಯ ಜೊತೆ ಮಾನಸಿಕ ಮತ್ತು ಬೌದ್ಧಿಕ ಬೆಳವಣಿಗೆಯೂ ಅಗತ್ಯವೆಂದು ನಂಬಿರುತ್ತೇನೆ.

  ೬. ಉದ್ಧಟತನವೆಂದು ಖಂಡಿತ ಅನ್ನಿಸುವುದಿಲ್ಲ. ವಾಸ್ತವವಾಗಿ ನಾನು ಉದ್ಧಟತನದವನು. ನಿಮ್ಮ ರೆಸ್ಪೆಕ್ಟು ಹೀಗೆ ಮುಂದುವರೆಸಿಕೊಳ್ಳಿ. ನನಗೂ ಮಾಂಸಾಹಾರಿಗಳ ಬಗ್ಗೆ ರೆಸ್ಪೆಕ್ಟಿದೆ. ಆದರೆ, ಅವರು ಅಗತ್ಯವನ್ನು ಮೀರಿದ್ದಾರಲ್ಲಾ ಎಂಬ ಬೇಸರವಷ್ಟೆ.

  Earth provides enough to satisfy every man's need, not every man's greed. - Gandhiji.

  ೭. ಒಳ್ಳೇ ರಾಮಕೃಷ್ಣ ಪರಮಹಂಸರು!! ಒಳ್ಳೇ ಟ್ರಿವಿಯಾ. ನಂದೂ ಒಂದು ಟ್ರಿವಿಯಾ ತೊಗೊಳಿ - ಖ್ಯಾತ ಗಾಯಕಿ ಮಡೋನಾ ಪ್ಯೂರ್ ವೆಜ್ಜು!!

  ೮. ಕೊನೆಯದಾಗಿ ಇಂಗ್ಲೆಂಡಿನ ಆಹಾರ ಪದ್ಧತಿ ಬಗ್ಗೆ. ಇಂಗ್ಲೆಂಡೇ ಏನು, ಇಡೀ ಯೂರೋಪು ಈಗ ಎಚ್ಚೆತ್ತುಕೊಂಡಿದೆ. ಅವರಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಿದ್ದೇವೆ. ಯೂರೋಪಿನ ಸರ್ಕಾರವೇ ಏನೇನು ಮಾಡಿದೆ ಎಂಬುದನ್ನು ಈ ತಾಣದಲ್ಲಿ ನೋಡಿ.
  http://www.foodqualitynews.com/Legislation/Europe-approves-new-vegetarian-omega-3-source

  ReplyDelete
 7. "ನಾನು ಸಸ್ಯಾಹಾರಿಯೆಂದು ಹೆಮ್ಮೆ ಪಡಲು ಮತ್ತಷ್ಟು ಕಾರಣಗಳು ಸಿಕ್ಕಿತು!!"

  ನನಗೂ!!

  ReplyDelete
 8. ರಮೇಶ್, ನೀವು ಬೆಳೆದಿರುವ environment ನಿಂದ ನೀವು ಮಾಂಸಾಹಾರ ದ್ವೇಷಿಸುವುದಿಲ್ಲ ಎಂದಿರಿ.

  ಒಬ್ಬ ಮುಸ್ಲಿಮರಾಗಿ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅಪ್ಪಟ ಸಸ್ಯಾಹಾರಿಯಾಗಿರುವುದಕ್ಕೆ ಏನಂತೀರಿ?

  ReplyDelete
 9. ಹರೀಶ್, ಕಲಾಂ ಮದುವೇನೇ ಆಗಿಲ್ಲ.. ನೀವೇನಂತೀರೀ? :)

  ReplyDelete

ಒಂದಷ್ಟು ಚಿತ್ರಗಳು..