Thursday, December 11, 2008

ಚಂದ್ರ ಪುರಾಣಇಂದು ನನಗೆ ಬಂದ ಒಂದು ಎಸ್ಸೆಮ್ಮೆಸ್ಸು ಈ ಪೋಸ್ಟ್-ಗೆ ಕಾರಣ. ಸಂದೇಶ ಹೀಗಿದೆ.

Tonight by 10:53 all the 7 moons of Venus will be visible in the sky. This will happen only once in 7,306,428 years. Dont miss it.

ಇಂಥಾ ಮೆಸೇಜುಗಳ ಕರ್ತೃಗಳು ಎಲ್ಲಿರುತ್ತಾರೋ ಹುಡುಕಬೇಕು.

ಸರಿ ಈಗ ಗ್ರಹಗಳ ಚಂದಿರಗಳ ಬಗ್ಗೆ ತಿಳಿದುಕೊಳ್ಳೋಣ. ಯಾಕೆಂದರೆ ವೀನಸ್ (ಶುಕ್ರ) ಗ್ರಹದ ಏಳು ಚಂದಿರಗಳೆಂದಾಗ ನನಗೆ ಆದ ಅಚ್ಚರಿ ಅಷ್ಟಿಷ್ಟಲ್ಲ.

ಭೂಮಿ ಗ್ರಹಕ್ಕೆ ಒಂದು ಚಂದ್ರ. ಇದನ್ನು ಉಪಗ್ರಹವೆಂದೂ ಕರೆಯುತ್ತೇವೆ. ಸ್ವಾಭಾವಿಕ ಉಪಗ್ರಹಗಳನ್ನು ಚಂದ್ರ ಎಂದು ಕರೆಯುವುದು ವಾಡಿಕೆ. ಭೂಮಿಗೆ ಒಂದೇ ಸ್ವಾಭಾವಿಕ ಉಪಗ್ರಹವಿರುವುದು. ನಮ್ಮ ಚಂದ್ರ!!

ಗುರು (Jupiter) ಮತ್ತು ಶನಿ (Saturn) ಎರಡೂ ಗ್ರಹಗಳು ಸ್ಪರ್ಧೆಯ ಮೇಲೆ ಉಪಗ್ರಹಗಳನ್ನು ಹೊಂದಿವೆ. ಗೆಲುವು ಶನಿಗೇ. ಐವತ್ತೆರಡು ಚಂದ್ರಗಳು ಶನಿಯಲ್ಲಿದೆ. ಹಗಿನ್ಸ್ ಎಂಬಾತ ಶನಿಯ ಚಂದ್ರ ಟೈಟನ್‍ನನ್ನು ಪ್ರಥಮ ಬಾರಿಗೆ ಕಂಡುಹಿಡಿದದ್ದು ಹದಿನೇಳನೆಯ ಶತಮಾನದಲ್ಲಿ. ನಂತರ ಕ್ಯಾಸಿನಿ ಎಂಬಾತ ಶನಿಯ ಇನ್ನೂ ನಾಲ್ಕು ಚಂದ್ರಗಳನ್ನು ಲ್ಯಾಪಿಟಸ್, ರಿಯಾ, ಡಿಯೋನೆ, ಮತ್ತು ತೆಥಿಸ್ ಎಂಬುದನ್ನು ಕಂಡುಹಿಡಿದರು. ಶನಿ ಗ್ರಹವನ್ನು ಸುತ್ತುವರಿದ ಉಂಗುರಗಳ ನಡುವೆ ಇರುವ ಅಂತರವನ್ನು ಕ್ಯಾಸಿನಿ ವಿಭಜಕಗಳು ಎಂದು ಈ ವಿಜ್ಞಾನಿಯ ಹೆಸರನ್ನೇ ಇಟ್ಟಿದ್ದಾರೆ. ಗುರು ಗ್ರಹವು ನಲವತ್ತೊಂಭತ್ತು ಚಂದ್ರಗಳನ್ನು ಹೊಂದಿದೆ. ಅದರಲ್ಲಿ ಬಹು ಮುಖ್ಯವಾದುವು ಐಯೋ, ಯೂರೋಪಾ, ಗ್ಯಾನಿಮೀಡ್ ಮತ್ತು ಕ್ಯಾಲಿಸ್ಟೋ. ಯೂರೋಪಾ ಉಪಗ್ರಹವು ಬುಧಗ್ರಹಕ್ಕಿಂತ ದೊಡ್ಡದಾಗಿರುವುದು ವಿಶೇಷ.

ಸೂರ್ಯನಿಗೆ ಅತಿ ಹತ್ತಿರವಾದ ಬುಧ ಗ್ರಹಕ್ಕೆ ಒಂದು ಚಂದಿರದ ದಿಕ್ಕೂ ಇಲ್ಲ! (ಸುಮ್ಮನೆ ಮಾಹಿತಿಗಾಗಿ: ಬುಧ ಗ್ರಹವು ಸೂರ್ಯನಿಗೆ ಅತಿ ಹೆಚ್ಚು ಹತ್ತಿರವಾದರೂ ಅತ್ಯಂತ ತಾಪಮಾನ ಇರುವುದು ಬುಧದಲ್ಲಲ್ಲ. ಶುಕ್ರನಲ್ಲಿ!!)

ಭೂಮಿಯ ಅತಿ ಹತ್ತಿರದ ಗೆಳೆಯ, ಮನುಷ್ಯನ ಆಕರ್ಷಣೆಯನ್ನು ಪಡೆದ ಕುಜ (Mars) ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ಎರಡು ಸುಂದರ ಚಂದ್ರಗಳಿವೆ. ಮೂರು ಸಾವಿರ ಚದುರ ಕಿ.ಮೀ. ಅಡಿಗಳಷ್ಟು ಸುತ್ತಳತೆಯನ್ನು ಹೊಂದಿರುವ ಈ ಉಪಗ್ರಹಗಳು ಇಡೀ ಸೌರಮಂಡಲದಲ್ಲಿ ಅತ್ಯಂತ ಚಿಕ್ಕವು.ಆಧುನಿಕ ಗ್ರಹಗಳು ಯುರೇನಸ್ ಮತ್ತು ನೆಪ್ಚೂನ್ ಕ್ರಮವಾಗಿ ಇಪ್ಪತ್ತೇಳು ಮತ್ತು ಹದಿಮೂರು ಚಂದ್ರಗಳನ್ನು ಹೊಂದಿವೆ.

ಉಳಿದಿರುವುದು ಶುಕ್ರ - ಅಥವಾ Venus. ಇದಕ್ಕೆ ಒಂದು ಉಪಗ್ರಹವೂ ಇಲ್ಲ!! ಚಂದಿರಗಳೇ ಇಲ್ಲದ ಗ್ರಹದ ಏಳು ಚಂದ್ರಗಳು ಎಲ್ಲಿಂದ ತಾನೇ ಕಂಡೀತು?[ಪ್ಲೂಟೋ ತನ್ನ ಗ್ರಹದ ಸ್ಥಾನಮಾನವನ್ನು ಆಗಸ್ಟ್ 2006-ರಲ್ಲಿ ಕಳೆದುಕೊಂಡಿತಾದರೂ ಸೂರ್ಯನ ಕಕ್ಷೆಯಲ್ಲೇ ಇರುವ ಇದರಂತಹ ಸಣ್ಣ ಗ್ರಹದಂತಹ ವಸ್ತುಗಳಿಗೆ ಪ್ಲೂಟಾಯ್ಡ್-ಗಳು ಎನ್ನುತ್ತಾರೆ. ಹಳೆಯ ಪ್ಲೂಟೋ ಚರಾನ್ ಎಂಬ ಉಪಗ್ರಹವನ್ನು ಹೊಂದಿತ್ತೆಂದು ಹೇಳುತ್ತಾರೆ]

-ಅ
11.12.2008
1AM

14 comments:

 1. ಅರುಣ್ ಅವರೇ,
  ಬರಹ ಚೆನ್ನಾಗಿದೆ.
  ಮೊನ್ನೆ ನನಗೂ ಇದೇ ಮೆಸೇಜ್ ಬಂದಿತ್ತು. ನಮ್ಮ ಮಿತ್ರನೊಬ್ಬ ನಮ್ಮೆಲ್ಲರಿಗೂ ಕಳುಹಿಸಿದ್ದ..! ಶುಕ್ರಗ್ರಹಕ್ಕೆ ಉಪಗ್ರಹಗಳಿಲ್ಲದ ಸಂಗತಿ ಆಮೇಲೆ ಫ್ಯಾಷ್(!) ಆಯಿತು. ನಂತರ ಆ ಮಿತ್ರನಿಗೆ ನಮ್ಮಿಂದ ನಾಲ್ಕಾರು ಪ್ರೀತಿಯ ಒದೆಗಳೂ ಬಿದ್ದವು. ಆದರೆ ಅಷ್ಟರಲ್ಲಾಗಲೆ ನಾನು ನನ್ನ ಕೆಲ ಸ್ನೇಹಿತರಿಗೆ ಇದನ್ನು ಫಾರ್ವರ್ಡ್ ಮಾಡಿಬಿಟ್ಟದ್ದೆ(ನನ್ನ ಪುಣ್ಯ ಅವರ್ಯಾರೂ ಹತ್ತಿರದಲ್ಲಿರಲಿಲ್ಲ..!)
  www.enchara.blogspot. com ಇದು ನನ್ನ ಬ್ಲಾಗ್. ಒಮ್ಮೆ ಭೇಟಿಕೊಡಿ.
  - ರಾಘವೇಂದ್ರ ಕೆಸವಿನಮನೆ

  ReplyDelete
 2. [ರಾಘವೇಂದ್ರ] ಹೆ ಹ್ಹೆ ಹ್ಹೆ.. ನಿಮ್ ಪುಣ್ಯ ಚೆನ್ನಾಗಿದೆ!! ಅಲ್ಲಾ, ಹೀಗೇ ಇನ್ನೊಂದು ಸಂದೇಶ ಬಂದಿತ್ತು, "ನಾನು ಫೆಬ್ರುವರಿ 30ರಂದು ವಿವಾಹ ಆಗ್ತಿದ್ದೀನಿ, ಬಂದು ಆಶೀರ್ವದಿಸಿ" ಅಂತ. ನನ್ನ ಗೆಳೆಯ ಶ್ರೀಕಾಂತನು ಶ್ರೀಧರನಿಗೆ ಹೀಗೇ ಭಗವದ್ಗೀತೆಯ "ಹತ್ತೊಂಭತ್ತನೆಯ" ಅಧ್ಯಾಯದ ಶ್ಲೋಕಗಳನ್ನು ಕಳಿಸಿದ್ದ. ಅದೇ ಥರ ಬಕರ ಮಾಡುವ ಸಂದೇಶ ಇದು!

  [ಮಲೆನಾಡಿಗ] ಧನ್ಯಂ.

  [ವಿಜಯಾ] ಹೌದು. ನಮ್ ಭಾಗ್ಯ, ಭೂಮಿಗೆ ಶನಿಯಂತೆಯೋ ಗುರುವಿನಂತೆಯೋ ಚಂದ್ರಗಳಿಲ್ಲ. ಇಲ್ಲವಾದರೆ ದಿನಕ್ಕೆರಡು ಹುಣ್ಣಿಮೆಗಳು ಇರುತ್ತಿದ್ದವು!!

  ReplyDelete
 3. He he... Modalane line nodi nija andkoMbitte! Namma hindina rushigaLu idannella kaNNindale nodi heLidrante ad yaavdo kaaldalli. Adenoppa. Venus / Shurkranige upagraha illadiruvudu nange tiLde irlilla. ShokaacharaNe.

  ReplyDelete
 4. oLLe chennaagi research maadi bareetya kaNaiyya neenu. Information and broadcasting minister aagbodu neenu.

  ReplyDelete
 5. [ಸ್ವರೂಪ] ನಮ್ಮ ಋಷಿಗಳು ಎಲ್ಲವನ್ನೂ ಏನು ನೋಡಿರಲಿಲ್ಲ. ಆದರೆ ಬುನಾದಿಯನ್ನು ಹಾಕಿಕೊಟ್ಟಿದ್ದಾರೆ.. ಖಗೋಳ ವಿಜ್ಞಾನದಲ್ಲಿ ಪ್ರಾಚೀನ ಭಾರತ ಸಾಧಿಸಿರುವಷ್ಟು ಇನ್ಯಾವ ದೇಶವೂ ಸಾಧಿಸಿಲ್ಲ..

  ಅಂದ ಹಾಗೆ, ಆ ಮಿನಿಸ್ಟರ್ ಆಗ್ಬೇಕಂದ್ರೆ ಇವೆಲ್ಲಾ ತಿಳ್ಕೋಬೇಕಾ? ದುಡ್ ಮಾಡೋದು (ಅನ್ಯಾಯದಲ್ಲಿ) ಹೇಗೆ ಎಂದು ತಿಳಿದುಕೊಂಡ್ರೆ ಸಾಕು ಅಲ್ವಾ?

  ReplyDelete
 6. ಅರುಣ್,
  ನವಗ್ರಹ, ಹಾಗು ಚಂದ್ರ ಪ್ರದಕ್ಷಿಣೆ ಮಾಡಿಸಿದ್ದಕ್ಕೆ ವಂದನೆಗಳು

  ReplyDelete
 7. >>ಭೂಮಿಯ ಅತಿ ಹತ್ತಿರದ ಗೆಳೆಯ, ಮನುಷ್ಯನ ಆಕರ್ಷಣೆಯನ್ನು ಪಡೆದ ಕುಜ >>(Mars) ಗ್ರಹಕ್ಕೆ ಫೋಬೋಸ್ ಮತ್ತು ಡೀಮೋಸ್ ಎಂಬ ಎರಡು ಸುಂದರ >>ಚಂದ್ರಗಳಿವೆ.

  ಫೋಬೋಸ್, ಮತ್ತು ಡಿಮೊಸ್ ಅದು ಹೇಗೆ ಸುಂದರ ಅಂತೀರ್ರೀ ಒಳ್ಳೇ ಕೊಳೆತ ಆಲೂಗೆಡ್ಡೆ ತರಹ ಇವೆಯಲ್ಲ :) ಎರಡೂ!

  ಅಲ್ಲದೆ, ಅವು ಬೆಳಕು ಪ್ರತಿಫಲನ ಮಾಡೋದೂ ಬಹಳ ಕಡಿಮೆ. ಹಾಗಾಗಿ ಮಂಗಳನಿಗೆ ಎರಡು ಚಂದ್ರ ಇದೆ ಅಂತ ಲೆಕ್ಕ - ಆದ್ರೆ ನಮ್ಮ ಒಂದು ಚಂದ್ರನ ಕಾಲಲ್ಲ, ಬಾಲವಲ್ಲ!

  ReplyDelete
 8. ಆರುಣ್ ಸಾರ್,
  ನಾನು ಧನುರ್ಮಾಸದಲ್ಲಿ ನವಗ್ರಹ ಸುತ್ತುತ್ತೇನೆ[ನನ್ನಾಕೆಯ ಒತ್ತಾಯಕ್ಕೆ]. ಆದರೆ ನೀವಿಲ್ಲಿ ನಿಜವಾದ ನವಗ್ರಹ ಮತ್ತು ಅದಕ್ಕೆ ಸೂಕ್ತ ಮಾಹಿತಿ ನೀಡಿದ್ದೀರಿ..
  keep it up !

  ReplyDelete
 9. [ಶಿವು] ನೀವು ಸುತ್ತುವ ನವಗ್ರಹಗಳೇ ಬೇರೆ, ಈ ಅಷ್ಟ ಗ್ರಹಗಳೇ ಬೇರೆ!! ಅಲ್ಲಿ ಸೂರ್ಯ, ಚಂದ್ರ, ರಾಹು, ಕೇತುಗಳು ಇವೆ. ಇಲ್ಲಿ ಯುರೇನಸ್, ನೆಪ್ಚೂನ್ ಇವೆ. ಪ್ಲೂಟೋ ಇತ್ತು, ಈಗಿಲ್ಲ.

  [ಹಂಸಾನಂದಿ] ಒಳ್ಳೇ ಕೊಳೆತೆ ಆಲೂಗೆಡ್ಡೆ!! ನಮ್ಮ ಚಂದ್ರನ ಮುಂದೆ ಇವು ಏನೂ ಇಲ್ಲ ಬಿಡಿ!! ಆದರೂ ನನಗೇನೋ ಸುಂದರವಾಗಿ ಕಾಣ್ಸುತ್ತಪ್ಪ!

  [ಅಂತರ್ವಾಣಿ] ನವಗ್ರಹವೇ? ಎಣಿಸಿ ಒಂದು ಸಲ!!

  ReplyDelete
 10. ಅರುಣ್, ಪ್ಲೂಟೋ ಗೆ ಏನಾಯ್ತಂತೆ? ಸಂಯುಕ್ತ ಸಂಸ್ಥಾನ ಆಫ್ ಸನ್ ನ ಬಿಟ್ಟು ಹೋಗಿದ್ಯಲ್ಲ.. ಕುಯ್ಪರ್ ಬೆಲ್ಟ್ ಲಂಚ ಕೊಟ್ಟಿರಬೇಕು.. :)  ಒಂದು ಸಣ್ಣ ಕರೆಕ್ಷನ್.. ಸುತ್ತಳತೆಯನ್ನು ಚದರ ಕಿ.ಮೀ. ಗಳಲ್ಲಿ ನಮೂದಿಸಲಾಗಿದೆ.. ಅದು ಬರೀ ಕಿ.ಮೀ. ಯಲ್ಲಿ ಇರಬೇಕಾದುದು.

  ReplyDelete
 11. ಹಂಸಾನಂದಿಯವರ ಅನಿಸಿಕೆಯೇ ನನ್ನದೂ... ನಿಮಗೆ ಅವು ಸುಂದರವಾಗಿ ಕಾಣುತ್ತೆ ಅನ್ನೋದಾದ್ರೆ ಇನ್ಮುಂದೆ ನಿಮಗೆ ಕೊಳೆತ ಆಲೂಗಡ್ಡೆಯೇ ಸಿಗಲಿ! ;-)

  ಅಂದ ಹಾಗೆ.. ಇನ್ನೋನು ವಿಷಯ.. ಸುಮ್ನೆ ಇರ್ಲಿ ಅಂತ.. ಶುಕ್ರಗ್ರಹದ ಸೂರ್ಯಪರಿಭ್ರಮಣೆ ಹಾಗೂ ಸ್ವಪರಿಭ್ರಮಣೆ ಎರಡೂ ಸುಮಾರು ಒಂದೇ ಇರುತ್ತೆ..

  ReplyDelete

ಒಂದಷ್ಟು ಚಿತ್ರಗಳು..