Wednesday, November 26, 2008

ಶವ ಸಂಸ್ಕಾರ

ಒಂದು ಯಃಕಶ್ಚಿತ್ ಇಲಿಸುಂಡ ಸತ್ತು ಬಿದ್ದರೆ ಎಷ್ಟು ವಾಸನೆ, ಅದರಿಂದ ಎಷ್ಟು ರೋಗ ಹರಡುತ್ತೆ, ಇನ್ನು ಮನುಷ್ಯನ ಹೆಣದಿಂದ ಇನ್ನೆಷ್ಟು ರೋಗ ಬರಬಹುದು?! ಸತ್ತ ಮೇಲೆ ಆದಷ್ಟು ಬೇಗ ಹೆಣವನ್ನು ನಾಶಗೊಳಿಸಿಬಿಡಬೇಕು ಎಂಬುದನ್ನು ಎಲ್ಲರೂ ಬಲ್ಲರು. ನಾವು ಪ್ರಕೃತಿಯ ಅಂಶವೇ ಆದರೂ "ಸಂಸ್ಕೃತಿ"ಯನ್ನು ರೂಢಿಸಿಕೊಂಡು ಉಳಿದ ಜೀವಿಗಳಿಂದ ಭಿನ್ನವಾಗಿರುವುದರಿಂದ ಸತ್ತವರನ್ನು ಸಂಸ್ಕರಿಸುವುದನ್ನು ಪಾಲಿಸುತ್ತೇವೆ. ನಾವು "ಹೆಣ" ಎಂದು ಹೇಳುವುದಿಲ್ಲ, "ಪಾರ್ಥಿವ ಶರೀರ" ಎಂದು ಗೌರವಿಸುತ್ತೇವೆ. ಪ್ರಾಣಿಗಳದಾದರೆ "ಹೆಣ" ಎನ್ನುತ್ತೇವೆ. ಸತ್ತವರ ಮನೆಗೆ ಹೋದರೆ "ಎಲ್ಲಿ ಮಲಗಿಸಿದ್ದೀರ?" ಎಂದು ಶವಕ್ಕೆ ಗೌರವ ಕೊಟ್ಟು ಕೇಳುತ್ತೇವೆ. ಯಾರೂ ಏನು ಮಲಗಿಸ ಬೇಕಾಗಿಲ್ಲ ನಿರ್ಜೀವ ದೇಹವನ್ನು! ಜೀವ ಹೋದ ಮೇಲೆ, ನಾವೆಲ್ಲರೂ ಕೊಳೆತು ಹೋಗಬಲ್ಲ (bio-degradable), ನಾಶಹೊಂದಲ್ಪಡುವ(disposable), ಸಾವಯವ(organic) ವಸ್ತುಗಳಷ್ಟೆ. ಆದರೂ ನಮ್ಮ ಸಂಸ್ಕೃತಿಯು "ಎಲ್ಲಿ ಮಲಗಿಸಿದ್ದೀರ?" ಎಂದೇ ಕೇಳಿಸುತ್ತೆ!

ಪ್ರಾಚೀನ ಈಜಿಪ್ತರು ಗುವಾಯಕಾಲ್ ಎಂಬ ದ್ರವವನ್ನು ಬಳಸಿ ಶವಗಳನ್ನು ಮಮ್ಮಿಗಳಲ್ಲಿ ಸಹಸ್ರಾರು ವರ್ಷಗಳ ಕಾಲ ಕಾಪಾಡಿದ್ದರು. ಅನೇಕ ಹಳೆಯ ಇಸ್ಲಾಮ್ ಅರಸರುಗಳು ಹೆಣಗಳನ್ನು ಊರಿಂದ ಊರಿಗೆ ಸಾಗಿಸುವಾಗ ಜೇನುತುಪ್ಪವನ್ನೂ ಬಳಸುತ್ತಿದ್ದರಂತೆ.

ಇರಲಿ.

"ಮಲಗಿಸಿದ್ದ" ಹೆಣವನ್ನು - ಕೆಲವರು ಕೂರಿಸುವುದೂ ಉಂಟು (ನನಗೆ ತಿಳಿದ ಮಟ್ಟಿಗೆ ಯಾವ ಮತದವರೂ ಹೆಣವನ್ನು ನಿಲ್ಲಿಸುವುದಿಲ್ಲ ಅನ್ನಿಸುತ್ತೆ) - ಸಂಸ್ಕಾರಕ್ಕೆ ತೆಗೆದುಕೊಂಡು ಹೋಗುವುದು ಮುಂದಿನ ಕೆಲಸ.

ನಾನು ಹುಟ್ಟಿ ಬೆಳೆದು ಬಂದ ಮನೆಯ "ಜಾತಿ"ಯವರ ಜನಗಳಲ್ಲಿ ಶವಸಂಸ್ಕಾರ, ನಂತರದ ಕರ್ಮಗಳು ಅನೇಕವಿದೆ. ಹೆಣವನ್ನು ಸುಡುತ್ತಾರೆಂಬ ಒಂದು ಅಂಶವನ್ನು ಇಲ್ಲಿ ತೆಗೆದುಕೊಂಡು ಸದ್ಯಕ್ಕೆ ಮಿಕ್ಕ ಆಚರಣೆಗಳನ್ನೆಲ್ಲಾ ಬದಿಗಿಡೋಣ. ಅವರವರ ನಂಬಿಕೆಯದು. ಅದನ್ನು ಆಚರಿಸಲೀ ಬಿಡಲಿ ಏನೂ ನಷ್ಟವಿಲ್ಲ. ಹೆಣವನ್ನು ಸೌದೆಯ ಮೇಲಿಟ್ಟು, ಬೆರಣಿ ಜೋಡಿಸಿ, ದಿನವೆಲ್ಲಾ ಅದರ ಮುಂದೆ ನಿಂತು, ತಲೆ ಬುರುಡೆಯು "ಫಟ್" ಎನ್ನುವವರೆಗೂ ನೋಡುತ್ತಾ ಸುಡುವುದು ಒಂದು ಬಗೆಯ ಸಂಸ್ಕಾರವಾದರೆ ನಗರವಾಸಿಗಳಿಗೆ ಅಷ್ಟೊಂದು ಸಮಯವಿಲ್ಲದೆ ವಿದ್ಯುತ್ ಸ್ಪರ್ಶದಿಂದ ನಿಮಿಷಮಾತ್ರದಲ್ಲೇ ಹೆಣವನ್ನು ಬೂದಿಗೈದು ತಲೆತೊಳೆದುಕೊಂಡುಬಿಡುತ್ತಾರೆ. ಏನೇ ಆಗಲಿ, ನಾವು ಹೋದಮೇಲೆ ಅಗ್ನಿಯ ಸಹಾಯದಿಂದ ನಮ್ಮನ್ನು ಬೂದಿಗೊಳಿಸುವುದು ಈ ಎರಡೂ ಸಂಸ್ಕಾರದ ಕೆಲಸ.ಕೆಲವು ಜನರು ಶವದ ಪೆಟ್ಟಿಗೆಯಲ್ಲಿ ಹಾಕಿ ಹೂಳುತ್ತಾರೆ, ಇನ್ನು ಕೆಲವರು ಬಟ್ಟೆಯಲ್ಲಿ ಸುತ್ತಿ ಹೂಳುತ್ತಾರೆ, ಮತ್ತೆ ಕೆಲವರು ಬೆತ್ತಲೆ ಹೆಣವನ್ನು ಹಾಗೇ ಹೂಳುತ್ತಾರೆ - ಸಾರಾಂಶವಿಷ್ಟೆ - ಶವವನ್ನು ಮಣ್ಣಿನ ವಶ ಮಾಡುತ್ತಾರೆ. ಮೇಲೆ ಗೋರಿ ಕಲ್ಲು ಕಟ್ಟುವುದು ಒಂದು ಆಚರಣೆ, ಗಿಡ ನೆಡುವುದು ಇನ್ನೊಂದು! ಶವವನ್ನು ಹೂತು ಗಿಡ ನೆಡುವ ಆಚರಣೆ ಬಹಳ ಸಾತ್ವಿಕವೆಂದು ನನ್ನ ಅನಿಸಿಕೆ. ದೇಹದಲ್ಲಿರುವ ಸತ್ತ್ವವು ಅದರಲ್ಲೂ ರಂಜಕ (Phosphorus) ಮತ್ತು ಸಾರಜನಕ (Nitrogen) ಎರಡೂ ಗಿಡಗಳಿಗೆ ಬಹಳ ಮುಖ್ಯ. ನಾವು ಅಳಿದ ಮೇಲೆ ಗಿಡವೊಂದಕ್ಕೆ ಗೊಬ್ಬರವಾಗುವುದಕ್ಕಿಂತ ಭಾಗ್ಯ ಬೇರೇನಿದೆ!?! ಆದರೆ ಈ ಪದ್ಧತಿಯ ಸಮಸ್ಯೆಯೆಂದರೆ ಜಾಗದ ಕೊರತೆ. ಎಲ್ಲರನ್ನೂ (ಸತ್ತ ಮೇಲೆ) ಹೂಳಲು ಜಾಗವೆಲ್ಲಿದೆ? ಜೊತೆಗೆ ಹೂತ ನಂತರ ಗಿಡವನ್ನು ನೆಟ್ಟರೆ ಆ ಶವವು ಸಂಪೂರ್ಣವಾಗಿ decompose ಆಗುವವರೆಗೂ ಆ ಜಾಗದಲ್ಲಿ ಸುರಕ್ಷಿತವೇನಲ್ಲ.ಕೆಲವು ಜನಾಂಗದವರು ಶವಗಳನ್ನು ಪುಣ್ಯನದಿಗಳಲ್ಲಿ ತೇಲಿಬಿಡುತ್ತಿದ್ದರು. ನದಿಯೆಂದರೆ ಸಾಕು, "ಪುಣ್ಯ" ನದಿಯೆನ್ನುವ ಅವಶ್ಯವಿಲ್ಲ. ಆದರೆ, ಈ ಆಚರಣೆ ಮಾಡುತ್ತಿದ್ದವರು ಕೆಲವು ನದಿಗಳನ್ನು ಮಾತ್ರವೇ ಆಯ್ಕೆ ಮಾಡಿಕೊಂಡಿದ್ದರು. ನಮ್ಮ ದೇಶದಲ್ಲಿ ಬಹುಮುಖ್ಯವಾಗಿ ಗಂಗೆ. ನದಿಯಲ್ಲಿ ಬೂದಿ ಕದಡುವಂತೆ (ಅಸ್ಥಿ ಸಂಚಯನ) ಶವವನ್ನೇ ತೇಲಿಬಿಡುವ ಆಚರಣೆಯನ್ನು ಸರ್ಕಾರವು ಪರಿಸರವಾದಿಗಳ ಅನೇಕ ವರ್ಷಗಳ ಹೋರಾಟದ ನಂತರ ನಿಷೇಧಿಸಿತು. ಗಂಗೆಯ ಮೊಸಲೆಗಳು ಹೆಣಗಳನ್ನು ತಿಂದು ನರಭಕ್ಷಕಗಳಾಗಿದ್ದುದೂ ಅಲ್ಲದೆ ವಿಪರೀತ aggressive ಆಗಿದ್ದವು. ಅಲ್ಲದೆ ಕುಡಿಯಲು ಬಳಸುವ ಗಂಗೆಯ ನೀರನ್ನು ಅತಿ ಸುಲಭವಾಗಿ ಮನುಷ್ಯಶವವು ಕೆಡಿಸಿಬಿಡುತ್ತಿತ್ತು. (ಈಗೇನೂ ಶುಚಿಯಾಗಿಲ್ಲ ಗಂಗಾನದಿಯ ನೀರು. ಆದರೆ something is better than nothing).

"ಝೋರೋಸ್ಟ್ರಿಯಾನರು" ಎಂಬ ಧರ್ಮದವರ (religion) ಶವಸಂಸ್ಕಾರದ ಆಚರಣೆ ಬಹಳ interesting ಆಗಿದೆ.ನೆನ್ನೆ ಶ್ರೀಕಾಂತ್ ಜೊತೆ ಮಾತನಾಡುತ್ತಿದ್ದಾಗ ಉತ್ತರಾಂಚಲದ ಒಂದು ಅನುಭವವನ್ನು ಹೇಳಿದೆ. ಅಲ್ಲಿ ಒಂದು ಘಟ್ಟ ಪ್ರದೇಶದಲ್ಲಿ ನಾವು ಟ್ಯಾಕ್ಸಿಯಲ್ಲಿ ಹೋಗುತ್ತಿದ್ದಾಗ ಬಸ್ಸೊಂದು ಪ್ರಪಾತಕ್ಕೆ ಉರುಳಿ ಬಿದ್ದುದನ್ನು ನೋಡಿದೆವು. ಟ್ಯಾಕ್ಸಿಯಿಂದ ಇಳಿದು ಎಂಟು ಸಾವಿರ ಅಡಿ ಕೆಳಗೆ ಬೆಂಕಿ ಪೊಟ್ಟಣದಂತೆ ಕಾಣುತ್ತಿದ್ದ ಬಸ್ಸನ್ನು ನೋಡುತ್ತಾ "ಅಯ್ಯೋ, ಛೆ!" ಎಂದುಕೊಳ್ಳುತ್ತಿದ್ದ ನಮ್ಮನ್ನು ಕರೆದ ನಮ್ಮ ಡ್ರೈವರು "ಚಲೋ ಸಾಬ್, ಆಜ್ ಏ, ಔರ್ ಕಲ್ ಹಮ್.." ಎಂದು ಸಲೀಸಾಗಿ ಹೇಳಿಬಿಟ್ಟ. ಶ್ರೀಕಾಂತ "ಇಲ್ಲಿ ಉರುಳಿ ಬೀಳುವ ಗಾಡಿಗಳು, ಹೆಣಗಳನ್ನು ಎಷ್ಟೋ ಸಲ ತೆಗೆಯುವುದೂ ಇಲ್ಲ, ಅನಾಥ ಹೆಣಗಳಾಗುತ್ತವೆ, ಅಲ್ಲವೇ?" ಎಂದು ಕೇಳಿದ. ನನಗೆ ಆ ಕ್ಷಣ ಹೌದೆನಿಸಿದರೂ ಈ ಝೋರೋಸ್ಟ್ರಿಯಾನರ ಬಗ್ಗೆ ನೆನಪಾಗದೇ ಇರಲಿಲ್ಲ. ಈ ಧರ್ಮದವರು ಹೆಣಗಳನ್ನು ಸುಡುವುದಾಗಲೀ, ಹೂಳುವುದಾಗಲೀ ಮಾಡುವುದಿಲ್ಲ. ಅವರ ನಂಬಿಕೆಯೆಂದರೆ ಸಾವು ಎಂಬುದು "ದೆವ್ವಗಳ ಆಟ". ಹಾಗಾಗಿ ಹೆಣವನ್ನು ದೂರದ ಬರಡು ಭೂಮಿಗೆ ತೆಗೆದುಕೊಂಡು ಹೋಗಿ, ಯಾರೂ ಅದರ ಹತ್ತಿರ ಸುಳಿಯದಂತಿರುವ ನಿರ್ಜನ ಜಾಗದಲ್ಲಿ ಬಿಸಾಡಿಬಿಡುತ್ತಾರೆ! ಹೆಣವು ಹದ್ದು ಗಿಡುಗಗಳಿಗೋ ನಾಯಿ ನರಿಗಳಿಗೋ ಆಹಾರವಾಗುತ್ತೆ!! ಒಂದು ಥರಾ ವಿಭಿನ್ನವಾದ ಆಚರಣೆ!!! ವಿಭಿನ್ನವಾದ "ಸಂಸ್ಕಾರ"!!!!ಹೇಗೋ ಒಂದು, ಒಟ್ಟಿನಲ್ಲಿ ಶವಕ್ಕೊಂದು ಸಂಸ್ಕಾರ ಬೇಕು. ಬದುಕಿರುವವರ ಒಳಿತಿಗಾಗಿ, ಆರೋಗ್ಯಕ್ಕಾಗಿ!

ಆರೋಗ್ಯವೇ ಭಾಗ್ಯ.

-ಅ
26.11.2008
9PM

17 comments:

 1. neenu ananthamoorthyavara "samskaara" oodhu ;-)

  ReplyDelete
 2. ನೀನು ರನ್ನನ ಗದಾಯುದ್ಧ ಓದು. ಹಾಗೇ ರವಿ ಬೆಳಗೆರೆಯವರ ಮಾಂಡೋವಿಯನ್ನೂ ಓದು.. ಜೊತೆಗೆ ಈಗ ಬ್ಲಾಗಿನಲ್ಲಿ ಬರೆಯದೇ ದಟ್ಸ್ ಕನ್ನಡದಲ್ಲಿ ಬರೆಯು್ತ್ತಿರುವ ಶ್ರೀನಿಧಿಯ "ಪರಿಸರದ ನಾಲ್ಕು ಚಿತ್ರಗಳು" ಓದು. ಅದಾದ ಮೇಲೆ ರಾಷ್ಟ್ರಕವಿ ಕುವೆಂಪು ಅವರ "ಪ್ರೇಮ ಕಾಶ್ಮೀರ" ಓದು.

  ReplyDelete
 3. ಅಮೆರಿಕಾ ಮುಂತಾದ 'ಮುಂದುವರೆದ' ದೇಶಗಳಲ್ಲಿ 'ಪಾರ್ಥಿವ ಶರೀರ' ಕೊಳೆತು ವಾಸನೆ ಬೀರದೇ ನೋಡಲು ಬಂದವರ ವೀಕ್ಷಣೆಗೆ ಸುಗಮವಾಗಲೆಂದು embalming ಎಂದು ಮಾಡುವುದುಂಟು. ಇದು ಸರ್ವೇಸಾಮಾನ್ಯ ಕೂಡ. ಮರಣೋತ್ತರ ತಪಾಸಣೆ (ಪೋಸ್ಟ್ ಮಾರ್ಟೆಮ್) ಇತ್ಯಾದಿ ಕ್ರಿಯೆಗಳನ್ನು ಹೆಣವನ್ನು ಬಳಸಿಕೊಂಡು ಮಾಡಬೇಕಾದರೆ ಮಾತ್ರ ನಮ್ಮಲ್ಲೂ ಇದನ್ನು ಮಾಡುತ್ತಾರೆ. ಇಲ್ಲದಿದ್ದರೆ, ಭಾರತ ಇನ್ನೂ ಅಷ್ಟೊಂದು ಮುಂದುವರೆದಿಲ್ಲ.

  ಹೆಣ ಕೊಳೆತು ವಾಸನೆಯೇನೋ ಬರುವುದಿಲ್ಲ, ಆದರೆ ರೋಗ ಹರಡದೇ ಇರುವುದೇ ಎಂದು ಮಾತ್ರ ನನಗೆ ಗೊತ್ತಿಲ್ಲ. ಎಷ್ಟು ಮುಂದುವರೆದ ದೇಶವಾದರೂ ವೈಜ್ಞಾನಿಕವಾಗಿ ಏನೆಲ್ಲಾ ಸಮರ್ಥನೆ ಒದಗಿಸಿ ಹೀಗೆ ಮಾಡುವುದರಿಂದ ಏನೂ ಆಗುವುದಿಲ್ಲ ಎಂದರೂ ಶರೀರವನ್ನು ರಚಿಸಿದ ಅಂಶಗಳಾದ ಪಂಚ-ಮಹಾಭೂತಗಳು ಬೇರ್ಪಟ್ಟು ಹೊರ-ಪ್ರಪಂಚದಲ್ಲಿನ ಪಂಚ-ಮಹಾಭೂತಗಳೊಡನೆ ಸೇರಲು ಅನುಕೂಲ ಮಾಡಿಕೊಡುವ ನಮ್ಮ ಸಂಪ್ರದಾಯವೇ ಶ್ರೇಷ್ಠ ಎಂದು ನನ್ನ ಮತ.

  ReplyDelete
 4. "samskaara" oodhu?

  ಏನೋ ಶ್ರೀಧರ, "ಸಂಸ್ಕಾರ" ಊದಬೇಕಾ? ಹಂಗಂದರೆ? ನಿನ್ನ ನವ-ನಿಘಂಟಿನಲ್ಲಿ ನೋಡಿ ಅರ್ಥ ಹೇಳ್ತೀಯಾ?

  ReplyDelete
 5. [ಶ್ರೀಧರ] ಅದೂ ಅನಂತ ಮೂರ್ತಿಯವರ ಸಂಸ್ಕಾರವನ್ನು ಊದಬೇಕಾ? ಅವರ ಸಂಸ್ಕಾರವೇನು ಕೊಳವೆಯೋ? ಅಥವಾ ಸನಾದಿಯೋ??

  ReplyDelete
 6. ಅವರವರ ಧರ್ಮಾನುಸಾರ ಶವ ಸಂಸ್ಕಾರ ಮಾಡುತ್ತಾರೆ.
  ಝೋರೋಸ್ಟ್ರಿಯಾನರ ಸಂಸ್ಕಾರ ವಿಧಿ ನನಗೆ ಗೊತ್ತಿರಲಿಲ್ಲ. ಈಗ ತಿಳಿಯಿತು.

  ReplyDelete
 7. ಅರುಣ,

  ಬರೆದಿರೋದು ಶವಸಂಸ್ಕಾರದ ಬಗ್ಗೆ .. ನನ್ ಬಗ್ಗೆ ಹೀಂಗೇ ಅಪಪ್ರಚಾರ ಮಾಡ್ತಾ ಇದ್ರೆ!!!!....

  ಬರಹ ಚನಾಗಿದೆ. ಆದ್ರೆ ಯಾಕೋ ಅರ್ಧಂಬರ್ಧ ಅನ್ನಿಸ್ತು. ಇನ್ನೂ ನಾಲ್ಕಾರು ಧರ್ಮಗಳ ಬಗ್ಗೆ ಬರೀಬೋದಿತ್ತು.

  ReplyDelete
 8. [ಅಂತರ್ವಾಣಿ] ಹೌದು. ಅವರವರ "ಕರ್ಮಾನುಸಾರ"ವೂ ಹೌದು.

  [ಶ್ರೀನಿಧಿ] ನಾನೆಲ್ಲಿ ನಿನ್ನ ಬಗ್ಗೆ ಅಪಪ್ರಚಾರ ಮಾಡಿದೆ?

  ಅರ್ಧಂಬರ್ಧ ಅನ್ನಿಸಿತೇ? ಹ್ಮ್.. ಅಲ್ಲಾ, ಇನ್ನೂ ನಾಲ್ಕಾರು ಧರ್ಮಗಳ ಬಗ್ಗೆ ಏನು ಬರೆಯೋದು? ಹೂಳುವುದು, ಸುಡುವುದು, ನದಿಗೆ ತೇಲಿ ಬಿಡುವುದು, ಮತ್ತು ಪ್ರಾಣಿಗಳಿಗೆ ಆಹಾರವಾಗಿ ನೀಡುವುದು - ಇದನ್ನು ಹೇಳುವುದಷ್ಟೆ ನನ್ನ ಉದ್ದಿಶ್ಯವಿತ್ತು. ಬೇರೆ ಧರ್ಮಗಳ ಬಗ್ಗೆ ನನಗೆ ಗೊತ್ತಿಲ್ಲ, ಇವುಗಳನ್ನು ಹೊರೆತುಪಡಿಸಿ ಹೇಗೆ ಸಂಸ್ಕಾರ ಮಾಡುತ್ತಾರೆಂದು. ನಿನ್ನ ಬಗ್ಗೆ ಹೇಳಿದರೇನೇ ಹೀಗಂತೀಯ ಇನ್ನು ತಪ್ಪು ಬರೆದರೆ ಆಮೇಲೆ ಧರ್ಮದ ಬಗ್ಗೆ ಅಪಪ್ರಚಾರ ಮಾಡಿದೆನೆಂದು ನನ್ನ ಸಂಸ್ಕಾರ ಮಾಡಿಬಿಡುತ್ತಾರೆ!

  [ಶ್ರೀಕಾಂತ್] ಯಾವುದೇ ದೇಶದಲ್ಲಾದರೂ ಪಂಚಭೂತಗಳಿಂದ ಮಾಡಲ್ಪಟ್ಟಿರುವ ನಾವು ಅಳಿದ ಮೇಲೆ ಪಂಚಭೂತಗಳನ್ನೇ ಸೇರಬೇಕು ಅಲ್ಲವೇ? ಹಾಗಾಗಿ ಎಲ್ಲಾ ಸಂಸ್ಕಾರಗಳೂ ಶ್ರೇಷ್ಠವೇ. ಆದರೆ, ಶವದರ್ಶನಕ್ಕೆಂದು preserve ಮಾಡುವಾಗ ಅದರಿಂದ ಯಾವ ರೋಗವೂ ಹರಡದ ಹಾಗೆ ನೋಡಿಕೊಳ್ಳುವುದು ಉತ್ತಮ.

  ReplyDelete
 9. ಇನ್ಯಾವ್ದಾರೂ ಮೆತಡ್ ಇರ್ಬೋದಾ ಅಂತ ಯೋಚಿಸ್ತಾ ಇದ್ದೆ.
  thanx for info. :)

  ReplyDelete
 10. ನನಗೆ ಯಾವುದೇ ಶವಸಂಸ್ಕಾರದ ವಿಷಯ ಗೊತ್ತಿಲ್ಲ. ನಾನು ಯಾವುದೇ ಶವಸಂಸ್ಕಾರ ಮಾಡಿಲ್ಲ. ನಮ್ಮ ಆಚಾರವಂತರು ಏನು ಹೇಳುವರೋ ಅದನ್ನೆ ನಿಜವೆಂದು ನಂಬಿರುವವನು. ಕಾರಣ ನಾನು ಅದಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ಓದಿಲ್ಲ. ಇದರ ಬಗ್ಗೆ ನಾನು ಅಷ್ಟಾಗಿ ತಲೆ ಕೆಡಿಸಿಕೊಂದಿಲ್ಲ. ಅರುಣ್ ಹೇಳಿರುವುದು, ಬರೆದಿರುವುದು ಸರಿಯಾಗಿಯೇ ಇದೆ. ಒಬ್ಬಬ್ಬರ ಯೋಚನೆ ಒಂದೊಂದು ತರಹ ಇರುತ್ತದೆ.

  ReplyDelete
 11. [ಸತ್ಯಪ್ರಕಾಶ್] ಯೋಚನೆ ಏನಾದರೂ ಆಗಲಿ, ಕೆರೆಯ ನೀರನು ಕೆರೆಗೆ ಚೆಲ್ಲಿ ಎನ್ನುವ ಹಾಗೆ ಪ್ರಕೃತಿಯಿಂದ ಬಂದ ನಾವು ಮತ್ತೆ ಪ್ರಕೃತಿಯಲ್ಲೇ ಕರಗಿ ಹೋಗುತ್ತೇವೆ ಎನ್ನುವುದಷ್ಟೇ ತಾತ್ಪರ್ಯ.

  [ವಿಕಾಸ್] ಇನ್ಯಾವುದಾದರೂ ಗೊತ್ತಾದರೆ "ಝಟ್ ಅಂತ ಹೇಳಿ"

  [ಸುಶ್ರುತ] ಹೌದು. ;-)

  ReplyDelete
 12. ನಮ್ಮ ಲ್ಯಾಬ್ ಹತ್ತಿರ ಇರುವ ಪಾರ್ಸಿಗಳ ರುದ್ರಭೂಮಿ(ಟವರ್ ಆಫ್ ಸೈಲೆನ್ಸ್) ಗೆ ಹೋಗಿ ರಣಹದ್ದುಗಳು ದೇಹವನ್ನು ತಿನ್ನುವುದನ್ನು ಫೋಟೋ ತೆಗೆಯೋ ಆಸೆ ಇದೆ ನನಗೆ...ಈ ಪೋಸ್ಟಿಗೆ ಅದೇ ಸಮರ್ಥ ಕಮೆಂಟಾಗತ್ತೆ. ಕಳಿಸುತ್ತೇನೆ ಫೋಟೊ...ಇನ್ನು ಒಂದು ವರ್ಷ ಟೈಂ ಕೊಡಿ...ನಾನು ಲ್ಯಾಬ್ ನಲ್ಲಿ ಸೆಟ್ಟಲ್ ಆದ ತಕ್ಷಣ ಇದೇ ಕೆಲ್ಸ.

  ReplyDelete
 13. ಆಸೆಗಳು ಹೀಗೂ ಉಂಟಾ?!


  ಡಿಫೆರೆಂಟ್ ಟಾಪಿಕ್ಕು..

  ಹೂಳುವುದಕ್ಕೆ ನನ್ನ ಓಟು! (ಯಾಕಪ್ಪ ಅಂದ್ರೆ, ನಮ್ಮ ಜಾತಿಯಲ್ಲಿ[ಗೌಡ->ಗಂಗಟಗಾರ->ದೇಶ ಭಾಗ->ವೆಂಕಿ ಮನೆದೇವ್ರು]ಹೀಗೇನೆ ಮಾಡೋದೂ!!)

  www.dhee-deepa.blogspot.com

  ReplyDelete
 14. ondu pangadadavaru deha na ulta malgsi (mukha kelage maadi - nam bhaashe li, board haakkolodu) hooltaarante ... recent aagi kelde ... kaarana gothilla!!!

  ReplyDelete
 15. Arun, i have read about one more way of disposing body which is very intresting in India with Parsi community, they leave the dead bodies on a tower called "Tower of Silence" and bodies will be eaten by birds and they are doing it for centuries.

  ReplyDelete

ಒಂದಷ್ಟು ಚಿತ್ರಗಳು..