Friday, November 21, 2008

ಗೂಬೆಗೊಂದು ಹಬ್ಬಬಡಪಾಯಿ ಗೂಬೆಯು ನಮ್ಮ ದೇಶದಲ್ಲಿ ಬಹಳ ಕೆಟ್ಟ ಹೆಸರನ್ನು ಸಂಪಾದಿಸಿಬಿಟ್ಟಿದೆ. ಸುತ್ತಲೂ ಕತ್ತನ್ನು ತಿರುಗಿಸಬಲ್ಲ, ಸ್ಮಶಾನಗಳಲ್ಲೇ ವಾಸಿಸುವ, ಭಯಂಕರ ರೂಪವುಳ್ಳ, ಗೂ ಗೂ ಎಂದು ಹೆದರಿಕೆಯಾಗುವಂತೆ ಮಂದ್ರಸ್ವರದಲ್ಲಿ ಕೂಗಬಲ್ಲ, ಕಣ್ಣುಗಳನ್ನು ಮಿಟುಕಿಸದೇ ದಿಟ್ಟಿಸಿ ಒಂದೇ ಕಡೆ ನೋಡಬಲ್ಲ, "ಗೂಬೆಯಂತೆ" ಕುಳಿತಲ್ಲೇ ಗಂಟೆಗಟ್ಟಲೆ ಕುಳಿತುಕೊಳ್ಳಬಲ್ಲ ಈ ಗೂಬೆಯು ಇಲಿಗಳನ್ನೂ, ಅಳಿಲುಗಳನ್ನೂ, ಹಾವುಗಳನ್ನೂ, ಹಾಗೂ ಮನುಷ್ಯರನ್ನೂ ಹೆದರಿಸುವ ಸಾಮರ್ಥ್ಯ ಉಳ್ಳದ್ದು. ಈ ಪಕ್ಷಿಯೇನಾದರೂ ಮನೆಯ ಮೇಲೆ ಬಂದು ಕುಳಿತುಬಿಟ್ಟರೆಂದರೆ ಮುಗಿಯಿತು - ಪೂಜೆಯೋ ಪೂಜೆ, ಹೋಮವೋ ಹೋಮ. ಮನೆಗೆ ಲತ್ತೆ ಹೊಡೆಯುವುದಂತೂ ಖಚಿತ!! ಆ ಮನೆಯಲ್ಲಿ ಸಾವು ಸಂಭವಿಸಿಬಿಡುತ್ತೆ ಶೀಘ್ರದಲ್ಲೇ.. ಗೂಬೆಯು ಯಮರಾಜನ ಅವತಾರವೇ ಸರಿ!

ಗೂಬೆಯ ಬಗ್ಗೆ ನನಗೆ ವಿಶೇಷವಾದ ಒಲವಿದೆ. ನಾನು ಆಚಾರ್ಯ ಪಾಠಶಾಲೆಯಲ್ಲಿದ್ದಾಗ ಶಾಲೆಯ ಆವರಣದೊಳಗೊಮ್ಮೆ ಬಂದು ಮೂರು ದಿನ ಝಾಂಡಾ ಹೂಡಿತ್ತು. ಆ ಮೂರೂ ದಿನವೂ ನನ್ನ ಪಕ್ಷಿವೀಕ್ಷಣಾ ಕಾರ್ಯವು ಗೂಬೆಗೆ ಸೀಮಿತವಾಗಿತ್ತು. ಒಂದೇ ಕಡೆ ನೋಡುತ್ತಾ ತಾನು ಈ ಪ್ರಪಂಚಕ್ಕೆ ಸಂಬಂಧ ಪಟ್ಟವನಲ್ಲನೆಂಬಂತೆ ಕುಳಿತಿದ್ದ ಗೂಬೆಯೊಡನೆ ಮಾತನಾಡಲು ಆರಂಭಿಸಿಬಿಟ್ಟಿದ್ದೆ! ನನ್ನ ಗೆಳೆಯನಾಗಿಬಿಟ್ಟಿದ್ದ. ಅದು ಶಾಲೆಯನ್ನು ಬಿಟ್ಟು ಹೊರಟಾಗ ವಿಪರೀತ ಸಂಕಟವೂ ಆಗಿತ್ತು.

ಇತ್ತೀಚೆಗೆ ಸತ್ಯಪ್ರಕಾಶರ ಮನೆಗೆ ಅತಿಥಿಯಾಗಿ ಬಂದ ಗೂಬೆಯನ್ನು ನೋಡಲು ನನಗೆ ಸಾಧ್ಯವಾಗಲಿಲ್ಲವೆಂಬ ಅಳಲು ಸಹ ನನ್ನಲ್ಲಿದೆ. ಅದು ಎರಡು ದಿನ ಅವರ ಮನೆಯಲ್ಲೇ ಕ್ಯಾಂಪ್ ಮಾಡಿತ್ತು. (ಚಿತ್ರಚಾಪದಲ್ಲಿ ಇದರ ಬಗ್ಗೆ ಬರೆದಿದ್ದೇನೆ.)

ನಮ್ಮ ಕೆಲವು (ಹಲವು) ಮೂಢ ಜನಗಳ ಮನಸ್ಸಿನಲ್ಲಿ ಎಲ್ಲಾ ಪಕ್ಷಿಗಳದೊಂದು ಗುಂಪಾದರೆ ಈ ಕಾಗೆ ಗೂಬೆಗಳದು ಬೇರಯದೇ ಗುಂಪು. ಇವು ಅಪಶಕುನದ ಪಕ್ಷಿಗಳೆಂದು. ಆದರೆ ಹೊಲದಲ್ಲಿ ಇಲಿಗಳ ಬೇಟೆ ಹಾವುಗಳಿಗಿಂತ ಚೆನ್ನಾಗಿ ಗೂಬೆಗಳು ಆಡುವುದು ಎಂಬ ಸತ್ಯವನ್ನು ಹೇಗೆ ಮರೆಯುವರೋ ಗೊತ್ತಿಲ್ಲ.ಹೊರದೇಶಗಳಲ್ಲಿ ಗೂಬೆಗಳ ಬಗ್ಗೆ ನಮ್ಮಲ್ಲಿರುವ ನಂಬಿಕೆಗಳಂತಿಲ್ಲ. (ಅವರುಗಳಲ್ಲೂ ಮೂಢನಂಬಿಕೆಗಳಿವೆ, ಅನೇಕ ಸಲ ನಮಗಿಂತ ಹೆಚ್ಚು). ವಿಶ್ವ ಗೂಬೆಯುತ್ಸವವನ್ನು ಪ್ರತಿ ವರ್ಷ ಫೆಬ್ರುವರಿ - ಮಾರ್ಚಿನಲ್ಲಿ ಆಚರಿಸುತ್ತಾರೆ.

http://www.festivalofowls.com/

ನಮ್ಮ ದೇಶದವರೂ ಇದರಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದು ನನ್ನ ಹಾರೈಕೆ. ಕಾಲ್ಪನಿಕ ಗರುಡಕ್ಕೆ ಸಲ್ಲುವ ಪೂಜೆಯು ಉಪಕಾರಿ ಗೂಬೆಗೆ ಗೌರವ ರೂಪದಲ್ಲಿ ಸಂದರೆ ನಾಶವಾಗುತ್ತಿರುವ ಗೂಬೆಯ ಸಂತತಿಯನ್ನು ಉಳಿಸಬಹುದು. ಅನೇಕ ಗೂಬೆ ಸಂಕುಲಗಳು ಇಂದು endangered ಆಗಿವೆ. ಇವನ್ನು ರಕ್ಷಿಸುವ ಹೊಣೆ ನಮ್ಮದು. ಅದಕ್ಕೋಸ್ಕರವಾಗಿಯೇ ಗೂಬೆಯ ಅಭಿಮಾನಿ ಸಂಘವು ಗ್ಲೋಬಲ್ ಔಲ್ ಪ್ರಾಜೆಕ್ಟ್ ಅನ್ನೂ ಹಮ್ಮಿಕೊಂಡಿದೆ. ಡಿ.ಎನ್.ಎ. ವಿಶ್ಲೇಷಣೆಯಿಂದ ಗೂಬೆಗಳ ರಕ್ಷಣೆಗೆ ಸಹಾಯವಾಗುವಂತಹ ಈ ಕಾರ್ಯಕ್ರಮವು ಯಶಸ್ವಿಯಾಗಲೆಂದು ಬಯಸುತ್ತೇನೆ.

http://www.globalowlproject.com/

-ಅ
21.11.2008
11.45AM

9 comments:

 1. ಗೂಬೆ ಯಾಕೆ endangered ಆಗ್ತಾ ಇದೆ.. ಜನ ಅವನ್ನೂ ಕೊಲ್ತಾರಂತಾ?

  ನನ್ನ ಜಾಪನೀಸ್ ಮಿತ್ರರೊಬ್ಬರು ಹೇಳಿದ್ದರು, ಅವರಲ್ಲಿ ಗೂಬೆ "ಪೆಟ್ ಬರ್ಡ್" ಅಂತೆ :)

  ReplyDelete
 2. nin article nalli haakiro modalne photonalli iro goobe cute cute aagide ... nange Harry Potter odid mele goobe mele olavu jaasti aagide :-)
  Btw ... nammane pakkad site nalliro maragalannella (baree eucalyptus idvu) kadyokke munche sumaaru goobegalu idvu alli. Marakadida mele sumaaru dina nammane mele, adurugade apt mele goobegalu koothkotidvu. They are quite cute actually :-)

  ReplyDelete
 3. [ವಿಜಯಾ] ಹ್ಯಾರಿ ಪಾಟರ್ ಇಂದ ಗೂಬೆಯ ಮೇಲೆ ಒಲವು ಹೆಚ್ಚಾಗಿರುವುದು ಒಳ್ಳೇದು.. ಬಹುಶಃ ಹ್ಯಾರಿ ಪಾಟರ್ ಮಾಡಿರುವ ಏಕೈಕ ಒಳಿತು ಇದು.

  ಒಳ್ಳೇ ಕ್ಯೂಟ್ ಗೂಬೆ!!

  [ರಮೇಶ್] ಗೂಬೆಯನ್ನು ಸಾಕುವವರು ಅಮೆರಿಕಾ, ಜಪಾನ್ ಅನೇಕ ದೇಶಗಳಲ್ಲಿದ್ದಾರೆ. ಗೂಬೆಗಳನ್ನು ಕೊಲ್ಲುವುದರಿಂದ ಅದು endangered ಆಗ್ತಿಲ್ಲ, ಬದಲಿಗೆ ಅದು ತನ್ನ ಆಹಾರವನ್ನು ಕಳೆದುಕೊಳ್ಳುತ್ತಿದೆ.

  ReplyDelete
 4. garuDa kaalpanika alla man.. eagle anta english alli kariyodanna samskrutadalli garuda antaare.. kannaDadalli haddu antaare.. bhaashe vyatyaasa ashte.. vaastava alla :)
  oLLe goobe...

  ReplyDelete
 5. gambhe, haage kareetaare sari, aadre, "garuDa" annO pakshi idyalla, idu vaastavadalli irO pakshi alla, like hamsa.. idu pouraaNika pakshi.. eega irO haddige samskrutadalli "garuDa" antha kareebOdu.. aadre "garuDa" antha describe maadirO garuDa, is kaalpanika.

  ReplyDelete
 6. ಗೂಬೆಯ ಬಗ್ಗೆ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ. ಫೋಟೊಗಳು ತುಂಬಾ ಚೆನ್ನಾಗಿವೆ.
  ಆಹಾಂ! ನನ್ನ ಬ್ಲಾಗಿನಲ್ಲಿ ಒಂದಷ್ಟು ಹೊಸ ವಿಚಾರಗಳನ್ನು ಹಾಕಿದ್ದೇನೆ ಬಿಡುವು ಮಾಡಿಕೊಂಡು ಬನ್ನಿ.

  ReplyDelete
 7. ನನ್ನ ಇಷ್ಟದ ಪಕ್ಷಿಗಳಲ್ಲಿ ಗೂಬೆಯೂ ಒಂದು. i like goobes.

  ReplyDelete

ಒಂದಷ್ಟು ಚಿತ್ರಗಳು..