Monday, November 17, 2008

ಗಿಡವೋ, ಪ್ರಾಣಿಯೋ?



ಏಕಕೋಶ ಜೀವಿಗಳಲ್ಲಿ ಅತಿ ಮುಖ್ಯ ಸ್ಥಾನವನ್ನು ಗಿಟ್ಟಿಸಿಕೊಂಡಿರುವ ಇದು, ಗಿಡವೋ ಪ್ರಾಣಿಯೋ ಎಂದು ಖಚಿತವಾಗಿ ಹೇಳಲಾಗುವುದೇ ಇಲ್ಲ. ಯಾಕೆಂದರೆ, ಹರಿತ್ತಿನ (chlorophyll) ಅಂಶವನ್ನು ಹೊಂದಿರುವ ಇದು ಹಗಲಲ್ಲಿ ಗಿಡದಂತೆ ದ್ಯುತಿಸಂಶ್ಲೇಷಣ ಕ್ರಿಯೆಯೂ (photosynthesis) ನಡೆಸುತ್ತೆ ಮತ್ತು ಇರುಳಲ್ಲಿ ತನಗಿಂತ ಚಿಕ್ಕದಾದ ಅಮೀಬಾ ಪ್ಯಾರಾಮೀಷಿಯಮ್‍ನಂಥಹ ಜೀವಿಗಳನ್ನು ಪ್ರಾಣಿಗಳಂತೆ ತಿನ್ನುವುದೂ ಉಂಟು! ಈ ವಿಶೇಷ ಜೀವಿಯ ಹೆಸರು ಯೂಗ್ಲೀನಾ - Euglena ಎಂದು.

ಇದರ ಇನ್ನೊಂದು ವಿಶೇಷತೆಯೆಂದರೆ ಬೆಳಕನ್ನು ಗುರುತಿಸಲು ಒಂದು ಕೆಂಪನೆಯ ಚುಕ್ಕಿಯ ಸೂಕ್ಷ್ಮಾಂಗವನ್ನೂ ಹೊಂದಿರುತ್ತೆ!

ಸಿಹಿನೀರು, ಉಪ್ಪುನೀರು ಎರಡರಲ್ಲೂ ವಾಸ ಮಾಡಬಲ್ಲ ಶಕ್ತಿಯುಳ್ಳ ಯೂಗ್ಲೀನಾ ಮೀಸೆಯಂತಿರುವ ಅಂಗವನ್ನು ಬಳಸಿ ಚಲಿಸಬಲ್ಲುದು. ಈ ಮೀಸೆಗೆ ಫ್ಲಾಜೆಲ್ಲಮ್ (flagellum) ಎನ್ನುತ್ತಾರೆ. ಇದನ್ನು ಚಾವಟಿಯಂತೆ ಬಡಿಯುತ್ತಾ ಚಲಿಸುತ್ತೆ.



ಗಿಡದಿಂದ ಪ್ರಾಣಿ ಹೇಗೆ ವಿಕಾಸವಾಯಿತೆಂಬ ಸಂಗತಿ ಮತ್ತು ಅದರ ಕೊಂಡಿ ಎಲ್ಲಿದೆ ಎಂದು ಬಹುಕಾಲ ಜನಕ್ಕೆ ಗೊತ್ತಿರಲಿಲ್ಲ. ಪ್ರಾಣಿಗಳಿಂದ ಮನುಷ್ಯ ಹೇಗೆ ಬಂದನೆಂಬುದು ನಮಗೆಲ್ಲಾ ತಿಳಿದೇ ಇದೆ! ಹೆಚ್ಚಿನ ವಿವರಕ್ಕೆ ಡಾರ್ವಿನ್ ವಿರಚಿತ ಆರಿಜಿನ್ ಆಫ್ ಸ್ಪೀಷೀಸ್ ಓದಬಹುದು. ತೇಜಸ್ವಿಯವರ ಮಿಸ್ಸಿಂಗ್ ಲಿಂಕ್ ಅಂತೂ ಅತಿಸುಲಭವಾಗಿ ಸುಲಲಿತವಾಗಿ ತಿಳಿಸಿಕೊಟ್ಟಿದೆ. ಅಂತೂ ನಿರಂತರ ವಿಕಾಸದಲ್ಲಿ ಜೀವ - ಜಗತ್ತು ಸಾಗುತ್ತಿದೆ.

-ಅ
17.11.2008
11.30PM

4 comments:

Sridhar said...

Innu swalpa bareebodittu.... hmmm eega ekakosha jeevigaLa bagge baryakke shuru maadidya... :-) goodh :-)

Ramesh BV (ಉನ್ಮುಖಿ) said...

"ಹೇ ಬ್ರಹ್ಮ ದೇವ್, ಸಸ್ಯವೂ ಅಲ್ಲದ ಪ್ರಾಣಿಯೂ ಅಲ್ಲದ ಜೀವಿಯಿಂದ ಎನಗೆ ಸಾವು ಸಂಭವಿಸಲಿ" ಅಂತ ಏನಾದ್ರೂ ಇರಣ್ಯ ಕಷ್ಯಪು ವರ ಕೇಳಿದ್ರೆ, ಈ ಯೂಗ್ಲೀನಾ ನಮ್ಮ ವಿಷ್ಣು ಅವತಾರಗಳಲ್ಲೊಂದಾಗುತ್ತಿತ್ತು!!

ಯೂಗ್ಲೀನಾ ಚಿತ್ರ, ಸ್ಪರ್ಮ್ ತರ ಕಾಣ್ಸುತ್ತೆ ಅಲ್ವ ;-)

Parisarapremi said...

[ಶ್ರೀಧರ] ಇನ್ನೂ ಸ್ವಲ್ಪ ಬರೀಬೋದಿತ್ತಾ? ಸರಿ.

[ರಮೇಶ್] ಆದರೆ ಇದು ಸಸ್ಯವೂ ಹೌದು, ಪ್ರಾಣಿಯೂ ಹೌದು!

Ramesh BV (ಉನ್ಮುಖಿ) said...

ಹ್ಮ್ಮ್ಮ್.....
ವರ ಚೇಂಜ್ ಮಾಡೋಣ :)

Post a Comment

ಒಂದಷ್ಟು ಚಿತ್ರಗಳು..