Monday, November 10, 2008

ಸರ್ವರೋಗ ನಿವಾರಿಣೀ

ತುಳಸಿ - Ocimum sanctum ಗಿಡವನ್ನು ಆಯುರ್ವೇದದಲ್ಲಿ ಸರ್ವರೋಗ ನಿವಾರಿಣೀ ಎಂದು ಕೊಂಡಾಡಿದ್ದಾರೆ. ಅದರಲ್ಲಿರುವ ಔಷಧೀಯ ಗುಣಗಳಿಗೆ ಬೇವು, ನಿಂಬೆ, ಹೆರಳೆ - ಇಂಥಾ ಘಟಾನುಘಟಿ ಗಿಡಗಳೇ ನಾಚುತ್ತವೆ. ಅಲ್ಲದೆ ದೇಹವನ್ನು ಸುತ್ತಮುತ್ತಲಿನ ಪರಿಸರದೊಂದಿಗೆ ಸಾತ್ವಿಕವಾಗಿ ಸ್ಪಂದಿಸುವಂತೆ ಮಾಡಲು ತುಳಸಿಯು ಬಹಳ ಉಪಯುಕ್ತವಾಗಿರುತ್ತೆಂದು ಸಂಶೋಧನೆಗಳು ತಿಳಿಸಿವೆ.

ನಮ್ಮಲ್ಲಿ ಎಲ್ಲ ಗಿಡ ಮರ ಪಶು ಪಕ್ಷಿ ಮೃಗಗಳಿಗೆ ದಿವ್ಯ ಸ್ಥಾನ ಕೊಟ್ಟಿರುವುದು ಎಂಥಾ ಅದ್ಭುತ ಚಿಂತನೆ. ಗರುಡ ಪಕ್ಷಿಯು ವಿಷ್ಣುವಿನ ವಾಹನವಾದರೆ, ಸರ್ಪವು ಹಾಸಿಗೆ. ತುಳಸಿಯು ವಿಷ್ಣುವಿನ ಹೆಂಡತಿ! ಆ ಕಥೆ ಬದಿಗಿರಲಿ. ಒಟ್ಟಿನಲ್ಲಿ ನಮ್ಮಲ್ಲಿ ತುಳಸಿಯು ಯಾವ ಮಟ್ಟದಲ್ಲಿ ಗೌರವಿಸಲ್ಪಡುತ್ತದೆಂಬುದಕ್ಕೆ ನಮ್ಮ ಪುರಾಣ ಕಥೆಗಳೇ ಸಾಕ್ಷಿ.ಹೀಗೆ ಸುಮ್ಮಸುಮ್ಮನೆ ಉನ್ನತಮಟ್ಟದಲ್ಲಿ ಯಾವುದೇ ಗಿಡವನ್ನು ಕೂರಿಸಿಲ್ಲ. ತುಳಸಿಗೆ ಆ ಮಟ್ಟದ ಗೌರವಕ್ಕೆ ಎಲ್ಲಾ ಅರ್ಹತೆ ಅಧಿಕಾರವೂ ಇದೆ. ಮೂರು ಬಗೆಯ ತುಳಸಿ ಗಿಡಗಳಿವೆ. ಮೂರೂ ಸಹ ಔಷಧೀಯ ಗುಣಗಳುಳ್ಳದ್ದೇ!

--> ಕೃಷ್ಣ ತುಳಸಿ ಅಥವಾ ಕಪ್ಪು ತುಳಸಿ
--> ರಾಮ ತುಳಸಿ ಅಥವಾ ಶ್ರೀ ತುಳಸಿ
--> ವನ ತುಳಸಿ ಅಥವಾ ಕಾಡು ತುಳಸಿ
೧. ಹಸಿವು - ನಿದ್ದೆ ಹೆಚ್ಚಾಗಲೀ ಕಡಿಮೆಯಾಗಲೀ ಆದರೆ ತುಳಸಿಯ ಕಷಾಯವನ್ನು ಸೇವಿಸಿದರೆ ಸಾಕು - ಸಮವಾಗುತ್ತೆ.

೨. ಹೊಟ್ಟೆ ತೊಳೆಸು, ವಾಂತಿ, ಬೇಧಿ, ಕ್ಷಯ - ಇವುಗಳನ್ನು ಗುಣಪಡಿಸುವ ಸಾಮರ್ಥ್ಯವುಳ್ಳದ್ದು ತುಳಸಿ. ಬ್ಯಾಕ್ಟೀರಿಯಾ, ಫಂಗಸ್, ಮತ್ತು ವೈರಸ್ - ಮೂರನ್ನೂ ಸರ್ವನಾಶಮಾಡಬಲ್ಲುದು!

೩. ಮನೆಯಲ್ಲಿ ಸೊಳ್ಳೆ ಹೆಚ್ಚಾಗಿದ್ದರೆ, ನೀರಿನಲ್ಲಿ ತುಳಸಿ ಎಲೆಗಳನ್ನು ಕುದಿಸಿ ಸಿಂಪಡಿಸಬೇಕು. ಡಿ.ಡಿ.ಟಿ. ಸಿಂಪಡಿಸಿ ಬಯೋ-ಮ್ಯಾಗ್ನಿಫಿಕೇಷನ್‍ಗೆ ಗುರಿಯಾಗುವುದು ಅನುಚಿತ.

೪. ಚರ್ಮರೋಗಗಳಿಗೆ, ಅದರಲ್ಲೂ ಅಲರ್ಜಿಗಳ ವಿರುದ್ಧ ಹೋರಾಡಬೇಕೆಂದರೆ ತುಳಸಿಗಿಂತ ಒಳ್ಳೆಯ ಔಷಧ ಸಿಗದು.

೫. ತುಳಸಿ ಕಷಾಯವನ್ನು ನಿತ್ಯವೂ ಕುಡಿಯುವುದರಿಂದ ಮಾನಸಿಕ ಒತ್ತಡಗಳನ್ನು ತಡೆಗಟ್ಟಬಹುದು.

೬. ಸಕ್ಕರೆ ಕಾಯಿಲೆಯನ್ನು ಗುಣ ಪಡಿಸಲು ತುಳಸಿಯನ್ನು ಬಳಸುತ್ತಾರೆ. ರಕ್ತ - ಸಕ್ಕರೆ ಪ್ರಮಾಣವು ಹತೋಟೆಗೆ ಬರಲು ತುಳಸಿಯು ಬಹಳ ಉಪಯುಕ್ತ.೭. ರಕ್ತದೊತ್ತಡವನ್ನು (BP) ಸಮವಾಗಿಸಲೂ ಹೃದ್ರೋಗಗಳನ್ನು ತಡೆಗಟ್ಟಲೂ ಸಹ ತುಳಸಿಯನ್ನು ಬಳಸಬಹುದು.

೮. ಕೆಮ್ಮು ನೆಗಡಿ ಮುಂತಾದ ಶೀತಪ್ರವೃತ್ತ ಕಾಯಿಲೆಗಳಿಗೆ ತುಳಸಿಯೇ ಮೊದಲ ಮದ್ದು.

೯. ತುಳಸಿ ಕಷಾಯವು ಉತ್ತೇಜಕಕಾರಿ ಪೇಯ ಕೂಡ!

೧೦. ಹಲ್ಲು ನೋವಿದ್ದು, ಹಲ್ಲು ಹುಳುಕಿದ್ದಾಗ ತುಳಸಿ ನೀರಿನಲ್ಲಿ ಬಾಯಿ ಮುಕ್ಕಳಿಸುವುದನ್ನು ವೈದ್ಯರು ಸೂಚಿಸುತ್ತಾರೆ.ಇಷ್ಟೆಲ್ಲಾ ಪ್ರಯೋಜನಕಾರಿಯಾಗರುವ ತುಳಸಿಯು ದೇವರಲ್ಲದೆ ಇನ್ನೇನು! ಅದನ್ನು ಪೂಜಿಸುವುದು, ಗೌರವಿಸುವುದು, ವರ್ಷದಲೊಮ್ಮೆಯಾದರೂ ಅದನ್ನು ನೆನೆಸಿಕೊಂಡು ಥ್ಯಾಂಕ್ಸ್ ಹೇಳುವುದು ನಮ್ಮೆಲ್ಲರ ಕರ್ತವ್ಯವೇ ಸರಿ.

ಉತ್ಥಾನದ ದ್ವಾದಶಿಯ (ತುಳಸಿ ಹಬ್ಬದ) ಶುಭಾಶಯಗಳು.

-ಅ
10.11.2008
2.20PM

18 comments:

 1. ಸಾರ್,
  ತುಳಸಿ ಹಬ್ಬ ಹತ್ತಿರ ಬರುತ್ತಿದ್ದ ಹಾಗೆ ತುಳಸಿ ಬಗ್ಗೆ ಅತ್ಯುತ್ತಮ ಮಾಹಿತಿ ನೀಡಿದ್ದೀರಿ! ಮುಂದುವರಿಯಲಿ ನಿಮ್ಮ ಪರಿಸರ ಪ್ರೇಮ !!

  ReplyDelete
 2. Mathuranalli kaadu tulasigalanella thorsi aa guide-u ivella raatre gopikastreeyaraagi bandu dance maadutve andiddu yaako nenpaaytu :-)

  ReplyDelete
 3. ಉತ್ತೇಜಕಕಾರಿ ಪೇಯ andre?

  ReplyDelete
 4. ಅರುಣ್, ಉಪಯುಕ್ತ ಮಾಹಿತಿ ಸಂಗ್ರಹ :)
  ಈ ಕಾಡು ತುಳಸಿನೇನೋಪಾ ನಮ್ಮಲ್ಲಿ ನಾಯಿ ತುಳಸಿ ಅಂತೇವೆ..
  ಕಣ್ಣಿಗೆ ಏನಾದ್ರೂ ಧೂಳು ಇಲ್ಲಾ ಕಸಕಡ್ಡಿ ಬಿದ್ದಾಗ, ಈ ನಾಯಿ ತುಳಸಿ ಬೀಜಗಳನ್ನ ಹಸನು ಮಾಡಿ ಕಣ್ಣಿಗೆ ಹಾಕೊಂಡ್ರೆ.., ಆ ಧೂಳನೆಲ್ಲಾ ಬೀಜಗಳು ತಮ್ಮ ಸುತ್ತಾ ಮುದ್ದೆ ಮಾಡ್ಕೊಂಡು ಈಚೆ ಬರ್ತವೆ.

  ReplyDelete
 5. ಉತ್ತಮ ಮಾಹಿತಿ

  (ಸ್ವಗತ: ಹೀಗಂತ ಒಂದು ಟೆಂಪ್ಲೇಟ್ ಮಾಡಿಟ್ಗೊಳ್ಬಹುದೇನೋ...)

  ReplyDelete
 6. idralli iro eshtondu gotte irlilla nange :(.. gottu maadsiddakkagi dhanyavaada..ಉತ್ಥಾನದ ದ್ವಾದಶಿಯ (ತುಳಸಿ ಹಬ್ಬದ) ಶುಭಾಶಯಗಳು.
  :)

  ReplyDelete
 7. [ಭವ್ಯಾ] ತುಳಸಿ ಗಿಡ ಇದೆ ಅಲ್ವಾ ಮನೇಲಿ? ನೀರು ಹಾಕಿ ನಮಸ್ಕಾರ ಮಾಡುವಾಗ ಏನೇನೋ ಮಂತ್ರ ಹೇಳಿಕೊಳ್ಳುವುದರ ಬದಲು ಆ ಅದ್ಭುತ ಶಕ್ತಿಯುಳ್ಳ ಗಿಡದ ಶಕ್ತಿಯನ್ನು ಸ್ಮರಿಸಿ ವಂದಿಸು.

  [ಹರೀಶ್] ಹ ಹ್ಹ ಹ್ಹಾ.. ಒಳ್ಳೇ ಟೆಂಪ್ಲೇಟು! ನೇಮ್ ಪ್ಲೇಟ್ ಥರ!!

  [ರಮೇಶ್] ಓಹ್, ನಾಯಿ ತುಳಸಿಯೇ? ಅದ್ಯಾಕೆ ಆ ಹೆಸರು??

  [ಅನಾನಿಮಸ್] ಕ್ಷಮಿಸಿ, ಕನ್ನಡ ಪದ ಬಳಕೆ ಕೆಟ್ಟದಾಗಿದ್ದರೆ!! ಉತ್ತೇಜನಾಕಾರಿ ಎಂಬುದನ್ನು ನಾನು ಹೇಳ ಹೊರಟಿದ್ದು - stimulant ಅನ್ನೋ ಪದಕ್ಕೆ ಪರ್ಯಾಯವಾಗಿ. ಇದು ತಪ್ಪಿದ್ದರೆ ತಿದ್ದಬೇಕಾಗಿ ಕೋರಿಕೆ. ತಿದ್ಬಿಡ್ರೀ.. :-)

  [ವಿಜಯಾ] ಎಂಥಾ ಸೊಗಸಾದ ಕಲ್ಪನೆ ಅಲ್ಲವೇ? ನಮ್ಮಲ್ಲಿ ಪ್ರತಿಯೊಂದು ಜೀವಿಯನ್ನೂ, ಗಿಡವಾಗಲೀ ಪ್ರಾಣಿಯಾಗಲೀ ಪಕ್ಷಿಯಾಗಲೀ - ಇದಕ್ಕೆ ಮನುಷ್ಯ ರೂಪ ಕೊಟ್ಟು ದೈವತ್ವಕ್ಕೇರಿಸುವ ಸ್ವಭಾವ ನಿಜಕ್ಕೂ ಅದ್ಭುತ. ತುಳಸಿಯನ್ನು ವಿಷ್ಣುವಿನ ಹೆಂಡತಿಯನ್ನಾಗಿಸಿರುವುದಕ್ಕಿಂತ ಬೇರೆ ಉದಾಹರಣೆ ಬೇಕೇ??

  ನಮ್ಮ ಪುರಾಣ ಕಥೆಗಳಲ್ಲಿ ಬರುವ fantasy ಅನ್ನು ಬಿಟ್ಟು ನೀನು Harry Potter ಅಲ್ಲಿ ಹುಡುಕುತ್ತೀಯ. ನೀನು ಹೊರದೇಶವ್ಯಾಮೋಹಿ ಅಂತ ಇದರಲ್ಲೇ ಸಾಬೀತಾಗುತ್ತೆ! ಆಗ್ಲಿ.

  [ಶಿವು] ತುಳಸಿ ಬಗ್ಗೆ ವಿಶೇಷ ಪ್ರೇಮ ಇದೆ ಸಾರ್.. ;-) ಧನ್ಯವಾದಗಳು..

  ReplyDelete
 8. ಗೊತ್ತಿಲ್ಲ :-(

  ಬಹುಶಃ ರಾಮ ತುಳ್ಸಿ.. ಕೃಷ್ಣ ತುಳ್ಸಿ.. ಇದೇ ತರಹ ನಾಯಿ ತುಳ್ಸಿ ಇರಬೇಕೇನೋ..!

  [ಕಥೆಯಾಗಿರುವ ರಾಮಕೃಷ್ಣರಿಗಿಂತ, ಮುದ್ದು ನಾಯಿಮರಿಗಳು ಇಷ್ಟ ನನಗೆ ;-) ]

  ReplyDelete
 9. ಹಾಗಾದ್ರೆ ನಾಯಿಮರಿ ಬಗ್ಗೇನೂ ಕಥೆ ಕಟ್ಟೋಣ ಬಿಡಿ!!

  ReplyDelete
 10. Ade problem-u ... idbaddornella vishnu hendtiyarannagi maadirodu!

  Harry potter na illi madhydalli eleyodu anavashyaka... i object.

  ReplyDelete
 11. ವಿಷ್ಣುವನ್ನು ಸೃಷ್ಟಿ ಮಾಡಿದವರು ತಮಗೆ ತೃಪ್ತಿಯಾಗುವಷ್ಟು ಮದುವೆ ಮಾಡದೇ ಇರಲು ಸಾಧ್ಯವೇ?? ;-)

  ಹ್ಯಾರಿ ಪಾಟರ್ ಇಂದಾನೇ ಇಷ್ಟೆಲ್ಲಾ ಗಲಾಟೆ ಆಗಿರೋದು!!

  ReplyDelete
 12. thulasi belyiva bagge heli hege beleyuvudendu

  ReplyDelete
 13. thulasi belyiva bagge heli hege beleyuvudendu

  ReplyDelete
 14. thulasi belyiva bagge heli hege beleyuvudendu

  ReplyDelete

ಒಂದಷ್ಟು ಚಿತ್ರಗಳು..