Thursday, October 30, 2008

ಬಣ್ಣ ಬದಲಿಸುವ..."ಗೋಸುಂಬೆಯಂತೆ ಹಿನ್ನೆಲೆಗೆ ತಕ್ಕಂತೆ ಬಣ್ಣ ಬದಲಿಸುವವನು" ಎಂದು ನಾವು ಹೇಳುತ್ತೇವಲ್ಲವೇ?

ಗೋಸುಂಬೆ ನಿಜವಾಗಲೂ ತನ್ನ ಹಿನ್ನೆಲೆಯ ಬಣ್ಣಕ್ಕೆ ತಕ್ಕ ಹಾಗೆ ಬಣ್ಣ ಬದಲಿಸುವ ಸಾಮರ್ಥ್ಯ ಉಳ್ಳದ್ದೇ? ಹೌದಾದರೆ, ಅದಕ್ಕೆ ಹೇಗೆ ಗೊತ್ತಾಗುತ್ತೆ ಯಾವ ಬಣ್ಣದ ಎಲೆಯ ಮೇಲೋ, ಹೂ ಮೇಲೋ, ಬಂಡೆಯ ಮೇಲೋ ತಾನು ಇರುವುದು? ಅದು ಹೇಗೋ ಗೊತ್ತಾದರೂ ಮೈ ಬಣ್ಣವನ್ನೇ ಬದಲಿಸುವುದಾದರೂ ಹೇಗೆ? ಮತ್ತು ಯಾಕೆ?ಎಷ್ಟೊಂದು ಪ್ರಶ್ನೆಗಳು ಕೇವಲ ಒಂದು ಸರಿಸೃಪ (reptile) ನಮ್ಮಲ್ಲಿ ಸೃಷ್ಟಿಸಿದೆ!ಉತ್ತರಗಳನ್ನು ಕಂಡುಕೊಳ್ಳೋಣ. Reverse orderನಲ್ಲಿ.

೧. ಗೋಸುಂಬೆಗಳು ಬಹಳ ನಿಧಾನವಾಗಿ ಚಲಿಸುವ ಸರೀಸೃಪಗಳು. ಬೇರೆ ಹಲ್ಲಿಯಂತೆ ವೇಗವಾಗಿ ಬಂಡೆಯೊಳಕ್ಕೆ ನುಸುಳಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹಾವುಗಳು, ಹದ್ದುಗಳು, ನವಿಲುಗಳು, ದೊಡ್ಡ ಬೆಕ್ಕುಗಳು, ಗೂಬೆಗಳು ಸದಾ ಹೊಂಚು ಹಾಕುತ್ತಲೇ ಇರುತ್ತವೆ. ಇವುಗಳ ಕೈಗೆ ಸಲೀಸಾಗಿ ಸಿಲುಕಿ ಆಹಾರವಾಗಬಲ್ಲುದು ಗೋಸುಂಬೆಗಳು - ಬಣ್ಣ ಬದಲಿಸದಿದ್ದರೆ! ಎಲೆಯ ಮರೆಯಲ್ಲಿ ಹಸಿರು ಬಣ್ಣ, ಒಣಗಿದ ಎಲೆಗಳ ನಡುವೆ ಕಂದು ಬಣ್ಣ, ಹೂಗಳ ಮಧ್ಯೆ ನೀಲಿ ಹೀಗೆ ವಿವಿಧ ವರ್ಣಗಳನ್ನು ಬಟ್ಟೆ ಧರಿಸಿದ ಹಾಗೆ ಧರಿಸುವುದರಿಂದ ಮರೆಮಾಚಬಹುದು. ಇದಕ್ಕೆ ಇಂಗ್ಲಿಷಿನಲ್ಲಿ camouflage ಎಂದು ಕರೆಯುತ್ತೇವೆ. ಗೋಸುಂಬೆಗಳು ಈ ಮರೆಮಾಚುವ ವಿದ್ಯಾಪಾರಂಗತವಾದರೂ ಇವುಗಳ ಸಂಖ್ಯೆ ತೀರ ಕಡಿಮೆಯಾಗುತ್ತಿದೆ.೨. ನಮಗೂ ಇರುವಂತೆ, ಚರ್ಮದ ಬಣ್ಣಕ್ಕೆ ಒಂದು ಪಿಗ್ಮೆಂಟು (ಕನ್ನಡದಲ್ಲಿ pigmentಗೆ ಏನೆನ್ನುತ್ತಾರೆಂದು ಗೊತ್ತಿಲ್ಲ), ಗೋಸುಂಬೆಗೂ ಇರುತ್ತೆ. ಕಪ್ಪು ಬಣ್ಣದ ಪಿಗ್ಮೆಂಟಿಗೆ ಮೆಲನಿನ್ ಎನ್ನುತ್ತೇವೆ. ನಮ್ಮಲ್ಲಿ ಈ ಮೆಲನಿನ್ ಪ್ರಮಾಣ ಕಡಿಮೆಯಾದಂತೆ ನಾವು "ಬೆಳ್ಳಗಾಗುತ್ತೇವೆ". ಆದರೆ ಗೋಸುಂಬೆಗಳಿಗೆ ಇನ್ನೊಂದು ಪಿಗ್ಮೆಂಟ್ ಇರುತ್ತೆ, ಬೇರೆ ಬಣ್ಣಗಳಿಗೋಸ್ಕರ. ಇದಕ್ಕೆ ಕ್ರೊಮ್ಯಾಟೋಫೋರ್ (chromatophores) ಎನ್ನುತ್ತೇವೆ. ಬಣ್ಣ ಬದಲಿಕೆಗೆ ಕಾರಣ ಈ ಕ್ರೊಮ್ಯಾಟೋಫೋರುಗಳೇ. ಅದು ಹೇಗೆ??
ಎಲ್ಲಾ ಪ್ರಾಣಿಗಳಂತೆ, ಚಲನವಲನಗಳ ಹಿಡಿತವಿರುವುದು ನರಗಳ ಕೈಯ್ಯಲ್ಲಿ. ಮತ್ತು ಮೂತ್ರಪಿಂಡದಲ್ಲಿ ಉತ್ಪತ್ತಿಯಾಗುವ ಅಡ್ರಿನಲಿನ್ ಎಂಬ ಹಾರ್ಮೋನುಗಳೂ ಸಹ ಚಲನೆಯನ್ನು ನಿಯಂತ್ರಿಸುತ್ತೆ. ಈ ಅಡ್ರಿನಲಿನ್ ಹಾರ್ಮೋನು ಹೊರಗಿನ ಜಗತ್ತಿನ ಕ್ರಿಯೆಗಳಿಗೆ ದೇಹ ಸ್ಪಂದಿಸಲು ಸಹಾಯ ಮಾಡುತ್ತೆ. ಸಂದೇಶವು ಮಿದುಳಿಗೆ ತಲುಪುವ ಮೊದಲೇ ಅಡ್ರಿನಲಿನ್ ಸಹಾಯದಿಂದ ಪ್ರತಿಸ್ಪಂದನೆ ನಡೆದು ಹೋಗಿರುತ್ತೆ. ನಮ್ಮದೇ ಉದಾಹರಣೆ ಕೊಡಬೇಕೆಂದರೆ, ಇದ್ದಕ್ಕಿದ್ದ ಹಾಗೆ ಮೇಜಿನ ಕೆಳಗೆ ಹಾವೊಂದನ್ನು ಕಂಡರೆ ನಮಗೇ ಅರಿವಿಲ್ಲದೇ ಸೂರು ಹಾರಿ ಹೋಗುವ ಹಾಗೆ ಕಿರುಚಬಹುದು, ಅಥವಾ ಸುಸ್ತಾಗಿ ನಡೆದು ಹೋಗುತ್ತಿದ್ದಾಗ ನಾಯಿಯೊಂದು ಬೊಗಳಿಕೊಂಡು ಅಟ್ಟಿಸಿಕೊಂಡು ಬಂದರೆ ಪಿ.ಟಿ.ಉಷಾಳಂತೆ ನಾವೂ ಓಡಬಹುದು. ಇದಕ್ಕೆ ಕಾರಣ ಅಡ್ರಿನಲಿನ್. ಅಂತೆಯೇ ಗೋಸುಂಬೆಯ ಸ್ಥಿತಿಗಳಿಗೆ (ಅದು ನಿಂತಿರುವ ಜಾಗದ ಬಣ್ಣಗಳಿಗಲ್ಲ) ಪ್ರತಿಸ್ಪಂದಿಸಲು ಸಹಾಯ ಮಾಡುವುದು ಅಡ್ರಿನಲಿನ್ನೇ.

ಕಪ್ಪು, ಕಂದು, ಬೂದಿ, ಹಸಿರು, ನೀಲಿ, ನೇರಳೆ, ಹಳದಿ ಮತ್ತು ಬಿಳಿ - ಇಷ್ಟು ವರ್ಣಗಳನ್ನು ಒಂದು ಗೋಸುಂಬೆ ತಾಳಬಹುದು.೩. ಗೋಸುಂಬೆಗಳು ಯಾವ ಬಣ್ಣದ ಹಿನ್ನೆಲೆಯಲ್ಲಿರುತ್ತೋ ಆ ಬಣ್ಣಕ್ಕೆ ತನ್ನ ಮೈ ಬಣ್ಣ ಬದಲಿಸಿಕೊಳ್ಳಬಲ್ಲುದು ಎಂಬ ನಂಬಿಕೆ ತಪ್ಪು. ಹಾಗೆ ಮಾಡಲು ಸಾಧ್ಯವಿಲ್ಲ. ಮೇಲೆ ಹೇಳಿದ ಬಣ್ಣಗಳಷ್ಟನ್ನೇ ಗೋಸುಂಬೆಗಳು ಸದಾ ಕಾಲ ಬದಲಿಸುತ್ತಲೇ ಇರುತ್ತೆ. ಆರಂಭದಿಂದ ಮುಕ್ತಾಯವೆಂಬಂತೆ, ಒಂದು ವರ್ಣ ಚಕ್ರವನ್ನೇ ನಿರ್ಮಿಸುತ್ತೆ! ತಾನು ಆ ಕ್ಷಣದಲ್ಲಿರುವ ಪರಿಸರಕ್ಕೆ ತಕ್ಕ ಬಣ್ಣವನ್ನು ಧರಿಸಬಹುದೇ ವಿನಃ ಹಿನ್ನೆಲೆಯ ಬಣ್ಣ ಧರಿಸಲು ಅಸಾಧ್ಯ.
ಒಂದು ಆಸಕ್ತಿದಾಯಕ ಮಾಹಿತಿಪೂರ್ಣ ತಾಣ ಇಲ್ಲಿದೆ, ಗೋಸುಂಬೆಯ ಬಗ್ಗೆ. http://www.medicalnewstoday.com/articles/94886.php

-ಅ
30.10.2008
11AM

15 comments:

 1. innu jaasthi bareebodittu neenu...
  aashaabhanga maadbitte neenu... :-|

  ReplyDelete
 2. ಗೋಸುಂಬೆಯ ಬಗ್ಗೆ ಅತ್ಯುತ್ತಮ ಮಾಹಿತಿ. ಬರವಣಿಗೆ ಕುತೂಹಲಕಾರಿಯಾಗಿದ್ದು, ಅದಕ್ಕೆ ತಕ್ಕಂತೆ ಫೋಟೊಗಳೂ ಕೂಡ ತುಂಬಾ ಚೆನ್ನಾಗಿವೆ. ಈ ಕಾಯಕವನ್ನು ಮುಂದುವರಿಸಿ..
  ಶಿವು.ಕೆ

  ReplyDelete
 3. ನಾನ್ ಚಿಕ್ಕವ್ನಿದ್ದಾಗಾ..

  ಸ್ಕೂಲ್ ಗೆ ಹೋಗೋ ದಾರೀಲೇನಾದ್ರು ಉಸುರುವಳ್ಳಿ ಕಂಡುಬಂದರೆ, ಹುಡುಗರು ಕಡ್ಡೀಲಿ ತಿವಿಯೋದು, ಕಲ್ಲಲ್ಲಿ ಹೊಡೆಯೋದು ಹಿಂಗೆಲ್ಲಾ ಮಾಡ್ತಿದ್ರೂ... ಆಗಾ ಅದು ಕಲರ್ ಕಲರ್ ಆಗಿ ಕಾಣ್ಸೋದು..

  ಪಿಗ್ಮೆಂಟಿಗೆ ಅಂಜನ ಅಥವಾ ವರ್ಣಜನಕ ಅನ್ನಬಹುದಾ...

  ReplyDelete
 4. ಗೋಸುಂಬೆಯ ಬಗ್ಗೆ ಒಳ್ಳೆಯ(ಸಾಕಷ್ಟು) ಮಾಹಿತಿಯಿದೆ , ಮತ್ತು ಯೋಚಿತವಾದ ಚಿತ್ರಗಳನ್ನು ಕೂಡ ಸೇರಿಸಿದ್ದೀರಿ.. ಬರಹ ಬಹಳ ಚೆನ್ನಾಗಿದೆ.

  ReplyDelete
 5. halli na nodidre ondtara asahya agi hedarke aagtte nange.. adar bagge odidre, mai yella jummm ansatte... you know the feeling!
  am not giving any neagtive comments on this post. but just nann feelings ashte

  ReplyDelete
 6. [ಸ್ನೇಹ] ಪಾಪ, ಹಲ್ಲಿ.. ನಿಮ್ಮನ್ನ ನೋಡಿದ್ರೆ ಅದಕ್ಕೆ ನಿಮಗಿಂತ ಸಾವಿರದಷ್ಟು ಹೆದರಿಕೆ, ಮೈ ಜುಂ, ಅಸಹ್ಯ, ಮುಂತಾದ ಫೀಲಿಂಗುಗಳು ಆಗುತ್ತವೆ. ;-)

  ನಮ್ಮಲ್ಲಿ ಬಹುಪಾಲು ಜನರು ಹಲ್ಲಿ, ಸರ್ಪಗಳಂತಹ ಸುಂದರ ಸರಿಸೃಪಗಳ ಬಗ್ಗೆ ಹುಟ್ಟಿದಾಗಿನಿಂದಲೂ ಅಸಹನೀಯ ಭಾವನೆಯನ್ನು ಕಲ್ಪಿಸಿಕೊಂಡಿರುತ್ತಾರೆ. ನಮ್ಮನ್ನು ಬೆಳೆಸುವುದೂ ಹಾಗೇನೇ. ಹಾವೆಂದರೆ ವಿಷ. ಹಲ್ಲಿ ವಿಷ. ಚೇಳು ವಿಷ. ಹೀಗೆ ತಲೆಗೆ ತುಂಬಿರುತ್ತಾರೆ.

  ಹೆ ಹೆ, ನೆಗಟಿವ್ ಕಾಮೆಂಟು ಹೇಳಿದರೂ ಚಿಂತೆಯಿಲ್ಲ, ಇವ್ರೇ.. ಖುಷಿಯೇ!! ಅಂತೂ ಹಲ್ಲಿಯ ಬಗೆಗಿನ ನಿಮ್ಮ ಫೀಲಿಂಗ್ಸ್ ಅನ್ನು ಹಂಚಿಕೊಂಡಿರಲ್ಲಾ.. ;-)

  [ಹಸನ್ಮುಕಿ] ನಿಮ್ಮ ಹೆಸರಿನ "ಮುಕ" - ಮುಖ ಆದರೆ ಒಳ್ಳೆಯದೆಂದು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತಮ್ಮಲ್ಲಿ ಪ್ರಾರ್ಥಿಸುತ್ತೇನೆ. ಅನ್ಯಥಾ ಭಾವಿಸದಿರಿ. ಕಮೆಂಟಿಸಿದ್ದಕ್ಕೆ ಧನ್ಯವಾದಗಳು.

  [ರಮೇಶ್] ವರ್ಣಜನಕ - ಹೌದಾ? ಗ್ಯಾರೆಂಟೀನಾ?

  [ಶಿವು] ಧನ್ಯವಾದಗಳು ಶಿವು ಅವರೇ. ಗೋಸುಂಬೆಗಳೆಂದರೆ ನನಗೆ ಅತ್ಯಂತ ಪ್ರಿಯ.

  [ಶ್ರೀಧರ] ಆಶಾಭಂಗವೋ ಮಾನಭಂಗವೋ ಏನೋ ಒಂದು.

  [ಅಂತರ್ವಾಣಿ] ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳದಿದ್ದರೆ ಪೇರೆಂಟ್ಸ್ ನ ಕರ್ಕೊಂಡ್ ಬರ್ಬೇಕು.

  ReplyDelete
 7. wow ... interesting ... naanu adara hinnele bannakke change aagutte antha ne andkondidde :-)

  ReplyDelete
 8. ???

  "ವರ್ಣಕಾರಕ" ಅಂತ ಕೂಡಾ ಸಜೆಸ್ಟ್ ಮಾಡಬಹುದು.

  ReplyDelete
 9. ನಾನು ಮೊದಲ ಬಾರಿ ಗೋಸುಂಬೆಯನ್ನು ನೋಡಿದಾಗ ಸೈಕಲ್ ಕಲೀತಿದ್ದೆ. ಒಳಪೆಡ್ಲು.. ಕಾಡ ಮಧ್ಯದ ನಮ್ಮೂರ ನಿರ್ಜನ ಹಾದಿ.. ಈ ಗೋಸುಂಬೆ ಪಾಪ ಉರಿಬಿಸಿಲಲ್ಲಿ ರಸ್ತೆ ದಾಟುತ್ತಿತ್ತು. ತನ್ನ ನಿಧಾನ ಗತಿಗೆ ಗತ್ತನ್ನೂ ಸೇರಿಸಿ ಹೆಜ್ಜೆಯಿಡುತ್ತಿದ್ದ ಈ ವಿಚಿತ್ರ ಹಸಿರು ಜೀವಿಯನ್ನು ಕಂಡವನಿಗೆ ಮೈ ನಡುಗುವಷ್ಟು ಹೆದರಿಕೆಯಾಗಿ ಸೈಕಲ್ಲನ್ನು ಅಲ್ಲೇ ರಸ್ತೆ ಮೇಲೇ ಬಿಟ್ಟು ವಾಪಸು ಓಡಿ ಹೋಗಿದ್ದೆ! ಮನೆಗೆ ಹೋಗಿ ಹೇಳಿ, ಅಪ್ಪನನ್ನು ಅಲ್ಲಿಗೆ ಕರೆತಂದರೆ ಎಲ್ಲಿದೆ ಗೋಸುಂಬೆ?! ರಸ್ತೆ ದಾಟಿದ ಅದು ಹಾಗೇ ಮುಂದುವರೆದು ಕಾಡೊಳಗೆಲ್ಲೋ ಮಾಯವಾಗಿತ್ತು.

  ವಾಪಸು ಬರುವ ಹಾದಿಯಲ್ಲಿ ಅಪ್ಪ ’ಅದು ಗೋಸುಂಬೆ ಅಂತ, ಬಣ್ಣ ಬದಲಿಸುತ್ತೆ, ಏನೂ ಮಾಡಲ್ಲ, ನಾವೆಲ್ಲಾ ಹುಲ್ಲು ಕೊಯ್ಲಿಕ್ಕೆ ಹೋದಾಗ ಅಥವಾ ಜೇನು ಹಿಡೀಲಿಕ್ಕೆ ಕಾಡಿಗೆ ಹೋದಾಗ ಬೇಕಾದಷ್ಟು ಬಾರಿ ಕಾಣಿಸ್ತಿರ್ತದೆ’ ಅಂತ ಹೇಳಿ ನನ್ನ ಭಯ ಕಮ್ಮಿ ಮಾಡಿದ್ರು. :-)

  ReplyDelete
 10. [ಸುಶ್ರುತ] ಅಂತೂ ಚಿಕ್ಕ ವಯಸ್ಸಿನಲ್ಲೇ ದರ್ಶನ ಪ್ರಾಪ್ತಿಯಾಗಿದೆ ಅನ್ನಿ!!

  [ರಮೇಶ್] ವರ್ಣಕಾರಕ - ಸೊಗಸಾದ ಸಲಹೆ.

  [ವಿಜಯಾ] ಪ್ರಕೃತಿಯ ಬಗ್ಗೆ ಹೀಗೆ ಎಷ್ಟೊಂದು ತಪ್ಪು ತಿಳುವಳಿಕೆಗಳು ಇವೆ!! :-(

  ReplyDelete
 11. ಕಪ್ಪು, ಕಂದು, ಬೂದಿ, ಹಸಿರು, ನೀಲಿ, ನೇರಳೆ, ಹಳದಿ ಮತ್ತು ಬಿಳಿ - ಇಷ್ಟು ವರ್ಣಗಳನ್ನು ಒಂದು ಗೋಸುಂಬೆ ತಾಳಬಹುದು.. idna bittu bere background color mele idre yaav color kaansatte????

  ReplyDelete
 12. nice info! neenu prayasha, benglooralli huttidke namge istella mahiti sigtide! :)

  ReplyDelete
 13. ಪೀಪಿ!! (ಪರಿಸರ ಪ್ರೇಮಿ short form)

  ಪ್ರತಿ ಬಾರಿ ಕನ್ನಡಕ್ಕೆ ಅನುವಾದ ಮಾಡೋದಿಕ್ಕೆ ಯಾರಾದರೂ ಓದುಗರೇ ಆಗ್ಬೇಕಾ? ಇಲ್ಲಿ ಒಂದು ಸಲ ನೋಡಿ ಹಾಕಬಹುದಲ್ವಾ?

  pigment (ನಾ) 1) ವರ್ಣದ್ರವ್ಯ 2) (ಪ್ರಾಣಿಯ ಯಾ ಸಸ್ಯಗಳ ಅಂಗಾಂಶದ) ಸ್ವಾಭಾವಿಕ ವರ್ಣದ್ರವ್ಯ-ಕ್ಲೋರೋಫಿಲ್

  ReplyDelete
 14. Good info Arun...
  ಗೋಸುಂಬೆಯ ಇನ್ನೊಂದು ಪವಾಡ ಇಲ್ಲಿ ನೋಡಿ
  http://kalyan.livejournal.com/235024.html

  ReplyDelete

ಒಂದಷ್ಟು ಚಿತ್ರಗಳು..