Saturday, October 25, 2008

ಬೆಳಗಲಿ

ಮನುಷ್ಯನ ಮಿದುಳಿನಷ್ಟು ಬಲಿಷ್ಠವಾಗಲೀ, ಸಮರ್ಥವಾಗಲೀ ಯಾವುದೇ ಪ್ರಾಣಿಗಳ ಪಕ್ಷಿಗಳ ಮಿದುಳುಗಳಿಲ್ಲ. ಅವುಗಳ ಮೇಲೆ ಒತ್ತಡ ಹೇರುವುದು ಬಹಳ ಸುಲಭ.

ಪಕ್ಷಿಗಳಂತೂ ಬಲುಬೇಗ ಒತ್ತಡಕ್ಕೊಳಗಾಗಿಬಿಡುತ್ತವೆ. ಎಲ್ಲೋ ದೂರದಲ್ಲಿ ನಾವು ನಡೆದುಕೊಂಡು ಹೋಗುತ್ತಿದ್ದರೆ ಸಾಕು ತನ್ನನ್ನೆಲ್ಲಿ ಕೊಂದುಬಿಡುವರೋ ಎಂಬ ಭೀತಿಯಿಂದ ಹಾರಿ ಹೋಗುವ ಗುಬ್ಬಿ ಮೈನಾಗಳನ್ನು ನಾವು ನೋಡೇ ಇದ್ದೇವೆ. ಪಕ್ಷಿಗಳ ಕಣ್ಣಿನಲ್ಲಿ ಸಾವಿನ ಭೀತಿ ನೃತ್ಯವಾಡುವುದೂ ಸಹ ಗೋಚರ. ಹದ್ದುಗಳೂ ಸಹ ಒತ್ತಡಕ್ಕೆ ಬಲುಬೇಗ ಸಿಲುಕುವ ಪಕ್ಷಿಗಳೇ.

ಮಿದುಳಿಗೆ ಒತ್ತಡ ಬೀಳಲು ಬೇಕಾದಷ್ಟು ಕಾರಣಗಳಿವೆ. ಒಂಟಿತನ, ಹಗೆತನ, ಸಾವಿನ ದವಡೆಯಲ್ಲೇ ಬದುಕುವ ರೀತಿ, ಆವಾಸ ಕೊರತೆ, ಅತಿಯಾದ ಶಬ್ದ, ಮಾಲಿನ್ಯ, ಆಹಾರದ ಕೊರತೆ, ಅತಿವೃಷ್ಟಿ, ಅನಾವೃಷ್ಟಿ, ಚಳಿ, ಶೆಖೆ, ಎಲ್ಲವೂ ಒತ್ತಡವನ್ನು ಹೇರುತ್ತವೆ. ಪ್ರಾಣಿಪಕ್ಷಿಗಳಂತೂ ಬಹಳ ಸೂಕ್ಷ್ಮ. ಯಾವ ಜೀವಿಯು ಒತ್ತಡವನ್ನು ಸಹಿಸಿಕೊಳ್ಳಬಲ್ಲದೋ ಅವು ಹೆಚ್ಚು ಹೆಚ್ಚು ಉಳಿಯುತ್ತವೆ. ಜಿರಲೆಗಳು ಅತ್ಯಂತ ಸಮರ್ಥ ಜೀವಿ.

ಗಣಿಗಾರಿಕೆಯ ಪ್ರದೇಶಗಳಲ್ಲಿ ಅನೇಕ ಪ್ರಾಣಿಗಳು ಅರಣ್ಯನಾಶದ ಪರಿಣಾಮವಾಗಿ ಸತ್ತು ಹೋಗುತ್ತಿವೆ. ಆ ಪ್ರಾಣಿಗಳು ಅರಣ್ಯವನ್ನು ಹೊರೆತು ಬೇರೆಲ್ಲೂ ಬದುಕಲು ಸಾಧ್ಯವಾಗದಿರುವುದೇ ಒತ್ತಡ. ರೈಲ್ವೇ ಇಲಾಖೆಯವರು ಮಾಡಿರುವ ಗುಹೆಗಳಲ್ಲಿ ಓಡಾಡುವ ಮಜ ನಮಗಿದ್ದರೆ, ಆ ಗುಹೆಗಳ ರಚನೆಯಾಗುವ ಸಮಯದಲ್ಲಿ ಹುಲಿಗಳೂ ಆನೆಗಳೂ ಕರಡಿಗಳೂ ಸಹಸ್ರಾರು ಪಕ್ಷಿಗಳೂ ಪ್ರಾಣ ಕಳೆದುಕೊಂಡಿರುವುದು ಸತ್ಯವಷ್ಟೆ. ಕಾರಣ, ಗುಹೆಯನ್ನು ಕೊರೆಯುವಾಗ ಉಂಟಾದ ಸದ್ದು!

ಸಮುದ್ರದ ಆಳದಲ್ಲಿ ಸೋನಾರ್ ಸಿಗ್ನಲ್ಲುಗಳಿಂದ ಉಂಟಾಗುವ ಸದ್ದಿನಿಂದ ತಿಮಿಂಗಿಲಗಳೂ ಸಾಯುತ್ತವೆ.

ಶಬ್ದ ಮಾಲಿನ್ಯವು ಅತಿ ಹೆಚ್ಚು ಉಂಟಾಗುವುದು ರೈಲ್ವೇ ಇಂಜಿನ್ನುಗಳಿಂದ. ಅದರ ಸದ್ದು ಯಾವ ಪ್ರಾಣಿಯನ್ನು ಬೇಕಾದರೂ ಕೊಲ್ಲಬಹುದು. ಇಂಜಿನ್ನಿನ ಸದ್ದು ರೈಲಿನ ವೇಗಕ್ಕಿಂತ ಅಪಾಯ.

ಪಟಾಕಿ ಸದ್ದು ಯಾವ ಪ್ರಾಣಿಗಳೂ ಇಷ್ಟ ಪಡುವುದಿಲ್ಲವೆಂಬುದು ಅವುಗಳ ವರ್ತನೆಯಿಂದಲೇ ಗೊತ್ತಾಗುತ್ತೆ. ಮನುಷ್ಯನ ಜೊತೆಯಲ್ಲಿ ಎಷ್ಟೊಂದು ವರ್ಷಗಳಿಂದಲೂ ಬಾಳಿ ಬದುಕುತ್ತಿರುವ ನಾಯಿ ಬೆಕ್ಕು ಕಾಗೆ ಗುಬ್ಬಿಗಳೂ ಕೂಡ ಪಟಾಕಿಗೆ ಹೊಂದುಕೊಂಡಿಲ್ಲ. ಹೊಂದುಕೊಳ್ಳಲು ಸಾಧ್ಯವೂ ಇಲ್ಲ. ಒಂದೊಂದು ಪಟಾಕಿ ಸಿಡಿದಾಗಲೂ ಒಂದು ಪಕ್ಷಿಯು ಹತವಾಗುತ್ತೆಂದರೆ ಅದು ಅತಿಶಯೋಕ್ತಿಯಲ್ಲ. ಆಟಂ ಬಾಂಬ್ ಸಿಡಿದರೆ ಅಸರ ಶಬ್ದದಿಂದ ನಮಗಾಗುವ ಪ್ರಯೋಜನವಾದರೂ ಏನು? ನಮ್ಮ ಮಿದುಳಿನ ಮೇಲೆ ಒಂದಷ್ಟು ಒತ್ತಡ!! ಕ್ಷಣಿಕ "ಮಜ"!!!

ಯಾವ ಯಾವ ಕಾರಣದಿಂದ ಎಷ್ಟು ಎಷ್ಟು ಶಬ್ದ ಉತ್ಪತ್ತಿಯಾಗುತ್ತೆಂಬುದನ್ನು ಈ ಪುಣ್ಯಾತ್ಮರು ಬಹಳ ಸ್ಪಷ್ಟವಾಗಿ ಕೊಟ್ಟಿದ್ದಾರೆ. ನಾವು ಎಲ್ಲಿ ಬದುಕುತ್ತಿದ್ದೇವೆಂದು ಸೂಕ್ಷ್ಮವಾಗಿ ಗಮನಿಸಿದರೆ ಭೀತಿಯಾಗುವುದು ಆಶ್ಚರ್ಯವೇನಲ್ಲ.

ಮೊದಲೆರಡು ನಿದರ್ಶನಗಳೂ ಮನುಷ್ಯನ "ಬದುಕಿಗೆ" ಸಹಾಯಕವಾಗಿದೆ. ಒಂದು ಜೀವಿ ಬದುಕಲು ಇನ್ನೊಂದು ಜೀವಿ ಸಾಯುವುದು ಪ್ರಕೃತಿನಿಯಮ. ಆದರೆ ಪಟಾಕಿಗಳಿಂದ ಗಿಡಗಳೂ ಸೇರಿದಂತೆ ಎಲ್ಲವೂ ನಾಶವೆಂಬುದು ಅರಿವಾಗಲಿ. ಮಜಕ್ಕಾಗಿ ಅನ್ಯಜೀವಿಯ ನಾಶಕ್ಕೆ ಕಾರಣರಾಗದೇ ದೀಪಾವಳಿಯು ಎಲ್ಲರ, ಎಲ್ಲ ಜೀವಿಗಳ ಬದುಕನ್ನು ಬೆಳಗಲಿ.

ದೀಪಾವಳಿಯ ಶುಭಾಶಯಗಳು.

-ಅ
26.10.2008
12.30PM

8 comments:

 1. ಉತ್ತಮವಾದ ಲೇಖನ

  ನಿಮಗೂ ದೀಪಾವಳಿ ಹಬ್ಬದ ಶುಭಾಶಯಗಳು

  ReplyDelete
 2. DeepavaLi ge paTaaki hodibaardu anta heLokoskra ondu article... environment friendly aagi habbada aacharaNe maadi anta heLtidiya,,,,:-)
  HAPPY DEEPAVALI!!

  ReplyDelete
 3. Keechu Kateena eradoo hedrirodu nodi, nanna makklige pataki hodyodrinda yeshtu thondre ide annodanna heLkododu sulbha aagide. Guru heLo haage paapa avagala kivinalli modle amplifier irutte... haagagi namge kelsokkintha shabda joraagi kelsutte mathe thondre maadutte. Maneli pets idre, makkalige educate maadodu sulbha antha nanna anisike / anubhava.

  ReplyDelete
 4. oh marte :-)...
  deepavali ellarigoo sanatasa tarali!

  ReplyDelete
 5. ಪ್ರಾಣಿಗಳು ಶಬ್ದಮಾಲಿನ್ಯದಿಂದ ಸಾಯಬಹುದೆಂದು ತಿಳಿದು ಆಘಾತವಾಯಿತು.
  ನಮ್ಮ ಪರಿಸರದಲ್ಲಿ ಈಗ ಗುಬ್ಬಿಗಳೇ ಇಲ್ಲವೆನ್ನುವದು ಎಲ್ಲರಿಗೂ ಗೊತ್ತಿರುವದೇ. ಶಬ್ದಮಾಲಿನ್ಯದ ಕೊಡುಗೆ ಇದರಲ್ಲಿ ಇರಬಹುದಲ್ಲವೆ?

  ReplyDelete
 6. [ಸುನಾಥ್] ಹೌದು, ಶಬ್ದ ಮಾಲಿನ್ಯದಿಂದ ಏನೇನೆಲ್ಲಾ ನಾಶವಾಗುತ್ತೆ ಎಂಬುದು ದೊಡ್ಡ ಅಚ್ಚರಿಯ ಹಾಗೂ ಆಘಾತಕಾರಿ ಸಂಗತಿ.

  [ವಿಜಯಾ] ಆಹಾ, ಪಾಪ, ಮನೇಲಿ ಪೆಟ್ಸ್ ಇಟ್ಕೊಂಡು, ಮಕ್ಕಳಿಗೆ ಎಜುಕೇಷನ್ ಅಂತೆ! "ನೋಡು, ಪಟಾಕಿ ಹೊಡೆದರೆ ಈ ರೀತಿ ಹಿಂಸೆ ಆಗುತ್ತೆ" ಅಂತ ತೋರ್ಸೋಕೋ ಏನೋ!! ;-)

  [ಭವ್ಯಾ, ಅಂತರ್ವಾಣಿ] ಧನ್ಯವಾದಗಳು. ನಿಮಗೂ ದೀಪಾವಳಿಯ ಶುಭಾಶಯಗಳು.

  ReplyDelete
 7. ಸಾರ್,
  ಆಹಾ! ಎಂಥ ಉತ್ತಮ ಲೇಖನ !
  ನಿಜಕ್ಕೂ ಮನಸ್ಸಿಗೆ ಮುಟ್ಟಿತು. ಬರವಣಿಗೆಯಲ್ಲಿ ಬಲು ಉಪಯುಕ್ತ ಮಾಹಿತಿಗಳಿವೆ. ಹಾಗೂ ಹೇಳುವ ಶೈಲಿಯು ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಪಟಾಕಿ ಸದ್ದಿಗೆ ಪ್ರತಿನಿತ್ತ್ಯ ಗುಟುರುಗುಡುತ್ತಿದ್ದ ನಾನು ಬ್ಲಾಗಿನಲ್ಲಿ ಬರೆದಿದ್ದ ಪಾರಿವಾಳ ಸಂಸಾರ ಮೂರು ದಿನ ಕಾಣಿಸಿರದ ಕಾರಣ ಈಗ ಗೊತ್ತಾಯಿತು. good keep it up !

  ReplyDelete
 8. Hyperlink ನ colour combination ಗುರುತಿಸಲು ಕಷ್ಟವಾಗುವಂತಿದೆ.. ಬದಲಾಯಿಸಿದರೆ ಒಳ್ಳೆಯದು.

  ಎಂದಿನಂತೆ, informative ಲೇಖನ, ಚೆನ್ನಾಗಿದೆ.

  ReplyDelete

ಒಂದಷ್ಟು ಚಿತ್ರಗಳು..