Wednesday, October 15, 2008

ಕಡಲು - ಒಡಲುಇದು ಉಪ್ಪುನೀರ ಕಡಲಲ್ಲೊ
ನಮ್ಮ ಒಡಲಲ್ಲು ಇದರ ನೆಲೆಯು
ಕಂಡವರಿಗಲ್ಲೊ ಕಂಡವರಿಗಷ್ಟೆ
ತಿಳಿದದ ಇದರ ಬೆಲೆಯು.
-ವರಕವಿ ಬೇಂದ್ರೆ

ಇದನ್ನು ಕಂಡುಕೊಳ್ಳಲು ಇಷ್ಟು ದಿನ ಬೇಕಾಯಿತು!

--> ಸಮುದ್ರದ ನೀರಿನಲ್ಲಿರುವ ಲವಣಾಂಶಗಳೂ, ಮನುಷ್ಯನ ದೇಹದಲ್ಲಿರುವ ದ್ರವಗಳ ಲವಣಾಂಶಗಳೂ ಎರಡೂ ಬಹುಪಾಲು ಸಾಮ್ಯವನ್ನು ಹೊಂದಿರುವುದೇ.

--> ಸಮುದ್ರದ ಲವಣಾಂಶದ ಪ್ರಮಾಣವೂ, ದೇಹದಲ್ಲಿರುವ ದ್ರವಗಳ ಲವಣಾಂಶದ ಪ್ರಮಾಣವೂ ಒಂದೇ.

--> ಚಂದಿರ, ಸೂರ್ಯ ಮತ್ತು ಭೂಮಿ ಒಂದೇ ಅಕ್ಷದಲ್ಲಿ ಬಂದಾಗ ಗುರುತ್ವಾಕರ್ಷಣೆಯ ಪರಿಣಾಮ ಸಮುದ್ರದಲ್ಲಿ ಎತ್ತರದ ಅಲೆಗಳು ಉಂಟಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆ - ಇಂಥಾ ಸ್ಥಿತಿಗೆ ಉದಾಹರಣೆ. ಇದೇ ದಿನಗಳಲ್ಲಿ ದೇಹದ ದ್ರವಗಳೂ ಸಹ ಉದ್ರೇಕಗೊಳ್ಳುತ್ತವೆ. ಹಾಗಾಗಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ಸಮಯದಲ್ಲಿ ಮನುಷ್ಯನ ಪರಿಸ್ಥಿತಿಯೂ ಸಹ ಎಂದಿನಂತಿರುವುದಿಲ್ಲ. ಮನಸ್‍ಶಾಸ್ತ್ರಜ್ಞರು ಹೇಳುವ ಪ್ರಕಾರ ದುರಂತಗಳಾಗಲೀ, ಜಗಳ ಕದನಗಳಾಗಲೀ, ಹೊಡೆದಾಟಗಳಾಗಲೀ, ತಪ್ಪು ನಡವಳಿಕೆಗಳಾಗಲೀ ಅಥವಾ ಎಂಥದ್ದೋ ಒಂದು ಕೆಟ್ಟದ್ದಾಗುವುದು ಅಮಾವಾಸ್ಯೆ ಹುಣ್ಣಿಮೆಗಳ ಸಮಯದಲ್ಲಿ ಹೆಚ್ಚು. ಹಿರಿಯರು ಹೇಳುತ್ತಾರಲ್ಲಾ "ಇವತ್ತು ಅಮಾವಾಸ್ಯೆ, 'ಸಾಹಸ' ಮಾಡಲು ಹೋಗಬೇಡ" ಅಂತ - ಇದನ್ನು ಮೂಢನಂಬಿಕೆಯೆಂದು ತಳ್ಳಿಹಾಕುವುದು ಉಚಿತವಲ್ಲ.

--> ಮತ್ತೊಂದು ಕುತೂಹಲಕಾರ ವಿಷಯವೆಂದರೆ ಜಗತ್ತು ಶೇ.70 ರಷ್ಟು ಕಡಲ ನೀರಿನಿಂದಾವರಿಸಿದೆ. ಮನುಷ್ಯ ದೇಹದ ದ್ರವಗಳೂ ದೇಹದ ಶೇ. 70 ರಷ್ಟು ಆವರಿಸಿದೆ.

-ಅ
15.10.2008
1PM

7 comments:

 1. ಅರುಣ್ ,

  ->ಗರ್ಭದಲ್ಲಿ ಮಗುವಿನ ಸುತ್ತ ಇರುವ ದ್ರವ, ಸಮುದ್ರದ ನೀರಿನಂತೆಯೇ ಲವಣಾ0ಶ ಪ್ರಮಾಣ ಹೊ0ದಿರುತ್ತೆ ಅಂತ ಓದಿದ್ದ ನೆನಪು. ಸಮುದ್ರದ ನೀರಿನ ಸಲುಹುವ ಗುಣದಿನ್ದಲೋ ಏನೋ, ಬಹು ಜೀವವರ್ಗದ ತಾಣ ಸಮುದ್ರವೇ ಆಗಿದೆ.

  ->ಅಮಾವಾಸ್ಯೆ ಪೌರ್ಣಿಮೆಗಳ೦ದು, ಸಮುದ್ರದಲ್ಲಿ 'ನೀರಿನ ಮಟ್ಟ/Water head/hieght' ವೇ ಏರುತ್ತದೆ ಅಲ್ಲವೇ..

  ->ಅಮಾವಾಸ್ಯೆ ಪೌರ್ಣಿಮೆಗಳ೦ದು ಆಗೋ ವ್ಯತ್ಯಾಸ ಕೆಟ್ಟದನ್ನೇ ಮಾಡುತ್ತೆ ಅಂತ ಜನ ಯಾಕೆ ನನ್ಬಿದ್ದಾರೋ ಗೊತ್ತಿಲ್ಲ ..

  ನನಗಂತೂ ಒಳ್ಳೆಯದನ್ನೇ ಮಾಡುತ್ತದೆ ಅನಿಸಿದೆ.
  ಇದು ಪ್ರಾಕೃತಿಕವಾದ periodic variation ಅಗಿರೋದ್ರಿನ್ದ, ಪ್ರಕೃತಿಯ ಬಹುಮಾತ್ರದ ಕ್ರಿಯೆಗಳು ಇದರ ಅವಲಂಬಿತವಾಗಿ ನಡಿತಾ ಇದಾವೆ ಅಂತ.
  (Just like day and night. there are lot of complimentary things happen in the dark to the day and viceversa too)

  ReplyDelete
 2. oh ! nanna maneyanna hogaLibiTTiddIri!! khushiyaaytu :-)

  nice article

  ReplyDelete
 3. ಗುರುಗಳೆ, ಒಂದು ಪ್ರಶ್ನೆ. ಈ ೭೦ ಶೇಕಡಾ ನೀರು ಬರಿ ಮನುಷ್ಯನ ಮೈಯಲ್ಲಿ ಅಷ್ಟೆ ಕಂಡು ಬರೊದಾ? ಅಥವಾ ಬೇರೆ ಬೇರೆ ಸಸ್ತನಿಗಳಲ್ಲೂ ಇದೆಯಾ?

  70% body weight in case of human antha i remember reading in middle school, but never read weight distribution of other animals.

  ReplyDelete
 4. [ಪಾಪಣ್ಣ] ಬೇರೆ ಬೇರೆ ಪ್ರಾಣಿಗಳಲ್ಲಿ ಬೇರೆ ಬೇರೆ ಪ್ರಮಾಣದಲ್ಲಿರುತ್ತೆ.

  [ಅಂತರ್ವಾಣಿ] ಪ್ರಕೃತಿಯೇ ಹಾಗೆ, ವೆರಿ ಇಂಟೆರೆಸ್ಟಿಂಗ್

  [ಲಕುಮಿ] ನಿಮ್ ಮನೇನಾ? ಎಲ್ಲಿ?

  [ವಿಜಯಾ] :-)

  [ರಮೇಶ್] ಕೆಟ್ಟದ್ದೇ ಆಗುತ್ತೆ ಅಂತ ಅಲ್ಲ. ಅಮಾವಾಸ್ಯೆ, ಹುಣ್ಣಿಮೆಗಳನ್ನು ಪರ್ವಕಾಲವೆಂದು ಕರೆಯುತ್ತಾರೆ. ಈ ಸಮಯದಲ್ಲಿ ಸಾಮಾನ್ಯವಾಗಿ ಮನುಷ್ಯನ body fluids ಏರುಪೇರಾಗುವ ಕಾರಣ, ವಿಚಿತ್ರ ರೀತಿಯಲ್ಲಿ behave ಮಾಡುವುದು ಸಾಮಾನ್ಯ. ಸರಿಯಾದ ಆಹಾರ ಪದ್ಧತಿ, ವ್ಯಾಯಾಮ ಅಭ್ಯಾಸವಿದ್ದರೆ ಇದನ್ನು ತಡೆಗಟ್ಟಬಹುದು.

  ReplyDelete
 5. ಸಾರ್,
  ಉಪ್ಪಿನ ಬಗ್ಗೆ ನೀಡಿದ ತಿಳಿವಳಿಕೆ ಚೆನ್ನಾಗಿದೆ. ಅಮಾವಾಸ್ಯೆ-ಹುಣ್ಣಿಮೆ ದಿನ ನಮ್ಮ ಮನಸ್ಸಿನ ಮೇಲೆ ಆಗುವ ಪರಿಣಾಮಗಳನ್ನು science ಮೂಖಾಂತರ ಮನದಟ್ಟಾಗುವಂತೆ ಹೇಳಿದ್ದೀರಿ Thanks.

  ReplyDelete

ಒಂದಷ್ಟು ಚಿತ್ರಗಳು..