ಕೆನೆತ್ ಆಂಡರ್ಸನ್ ಹೆಸರು ಕೇಳಿದರೇನೇ ಮನಸ್ಸಿನಲ್ಲಿ ಹುಮ್ಮಸ್ಸು. ಪರಿಸರ, ಪ್ರಕೃತಿ, ಚಾರಣ, ಅರಣ್ಯ, ಓದುವಿಕೆ - ಇವುಗಳ ಬಗ್ಗೆ ಆಸಕ್ತಿ ಮೂಡಿಸಿದ್ದು ಕನ್ನಡದ ತೇಜಸ್ವಿಯಾದರೆ, ಇಂಗ್ಲಿಷಿನ ಬರಹಗಳಲ್ಲಿ ಕೆನೆತ್ ಮತ್ತು ಜಿಮ್ ಕಾರ್ಬೆಟ್. ಕೆನೆತ್ ಬಗ್ಗೆ ಮತ್ತೆಂದಾದರೂ ಓದಿಕೊಳ್ಳೋಣ, ತಿಳಿದುಕೊಳ್ಳೋಣ. ಈಗ ಪ್ರಕಟಣೆ ವಿಷಯ ಇಂತಿದೆ.
ಕಾಡಿನ ಮಧ್ಯೆ ವಾಹನ ಚಲಾಯಿಸುವವರು ಅನುಸರಿಸಬೇಕಾದ ನೀತಿ ನಿಯಮಗಳು, ಅವರಿಗಿರಬೇಕಾದ ತಿಳಿವಳಿಕೆ ಮತ್ತು ಪ್ರಜ್ಞೆ - ಇವುಗಳ ಅರಿವು ಮೂಡಿಸಲು ಒಂದು ಕಾರ್ಯಕ್ರಮವನ್ನು ಕೆನೆತ್ ಸಂಸ್ಥೆ ಹಮ್ಮಿಕೊಂಡಿದೆ. ಬಂಡಿಪುರ ಚೆಕ್ ಪೋಸ್ಟ್‍ನ ಎದುರು ಕರಪತ್ರಗಳೊಡನೆ ನಿಂತು, ಆ ದಾರಿಯಲ್ಲಿ ಓಡಾಡುವ ಚಾಲಕರುಗಳಿಗೆ ವನ್ಯಜೀವಿಗಳ ಬಗ್ಗೆ, ವಾಹನವನ್ನು ಅರಣ್ಯದಲ್ಲಿ ಹೇಗೆ ಚಲಾಯಿಸಬೇಕು, ಏನೇನು ಮಾಡಬೇಕು, ಏನೇನು ಮಾಡಬಾರದು - ಹೀಗೆ ಎಲ್ಲ ವಿಷಯಗಳನ್ನೂ ತಿಳಿಸಿಕೊಡುವ ಸ್ವಯಂಸೇವಕರನ್ನು ಆಹ್ವಾನಿಸುತ್ತಿದೆ.
ಕಾರ್ಯಕ್ರಮವು ನವೆಂಬರ್ ಒಂದು ಮತ್ತು ಎರಡರಂದು ನಡೆಯುತ್ತಿದೆ.
ಇದೇ ಪ್ರಕಟಣೆಯನ್ನು ಇಂಗ್ಲಿಷಿನಲ್ಲೂ ಓದಿಕೊಳ್ಳಬಹುದು.
ಕಾರ್ಯಕ್ರಮದ ಹೆಸರು - ರೋಡ್ ಕಿಲ್ಸ್!
ಆಸಕ್ತರು ಗೆಳೆಯ ಜಯರಾಮನ್‍ರವರೊಡನೆ ಮಾತನಾಡಬಹುದು. ಅವರ ಈಮೇಲ್ ವಿಳಾಸ jaykakarla@yahoo.co.in
ಮತ್ತು KANS (Kenneth Anderson Nature Society) ಸಂಸ್ಥೆಯ ನಿರ್ದೇಶಕರ ವಿವರ ಹೀಗಿದೆ:
ಹರಿ. ಎ.ಎಸ್. - 9886623950 hari.omniscient@ gmail.com
ನನಗಂತೂ ಆಸಕ್ತಿಯಿದೆ. ಸಮಯ ಸಂದರ್ಭದ ಚರ್ಚೆ ನಡೆಸಿ ಇಲ್ಲಿಗೊಂದು ಪಯಣ ಬೆಳೆಸುವ ಯೋಜನೆಯೂ ಇದೆ. ಶಾಲೆಯ ಮೇಲೆ ಅವಲಂಬಿತವಾಗಿದೆ ಕೂಡ.
ನನ್ನಂತೆ ಇನ್ಯಾರಿಗಾದರೂ ಆಸಕ್ತಿಯಿದ್ದರೆ ಅರಣ್ಯಕ್ಕಾಗಿ, ಪರಿಸರಕ್ಕಾಗಿ, ವನ್ಯಜೀವಕ್ಕಾಗಿ, ನಮ್ಮೆಲ್ಲರಿಗಾಗಿ, ಪ್ರಕೃತಿಗಾಗಿ - ಈ ಸತ್ಕಾರ್ಯವನ್ನು ಮಾಡಬಹುದು.
-ಅ
12.10.2008
1.30PM
You gotta read this thread...
1 day ago
0 comments:
Post a Comment