Thursday, October 09, 2008

ಯಾಕೆ?

ಪ್ರ.೧. ಗಂಡು ನಾಯಿಗಳು ಆಗಾಗ್ಗೆ ಸಿಕ್ಕ ಸಿಕ್ಕ ಕಡೆ ಮೂತ್ರ ವಿಸರ್ಜನೆ ಮಾಡುವುದು ಏಕೆ?

ಗಂಡು ನಾಯಿಗಳು ತಮ್ಮ 'ಸಾಮ್ರಾಜ್ಯ'ವನ್ನು ನಿರ್ಮಿಸಿಕೊಂಡಿರುತ್ತೆ. ಅದರ ಪರಿಧಿಯನ್ನು ಮೂತ್ರದಿಂದ ಗುರುತು ಮಾಡುತ್ತೆ. ವಾಸನೆಯು ಬೇಗ ಹೊರಟು ಹೋಗುವುದರಿಂದ ಮತ್ತೆ ಮತ್ತೆ ಮೂತ್ರ ವಿಸರ್ಜನೆ ಮಾಡುತ್ತೆ. ಸರಹದ್ದನ್ನು ದಾಟಿ ಬೇರೆ ಗಂಡು ನಾಯಿಗಳು ಬಂದರೆ ಸಾಮ್ರಾಜ್ಯದೊಳಗಿನ ನಾಯಿಗಳು ಗುಂಪಾಗಿ ಆಕ್ರಮಿಸಿ ಓಡಿಸಿಬಿಡುತ್ತೆ.

* ಇದೇ ಪದ್ಧತಿಯನ್ನು ಬೆಕ್ಕುಗಳೂ, ಹುಲಿಗಳೂ, ಸಿಂಹಗಳೂ, ತೋಳಗಳೂ, ನರಿಗಳೂ, ಚಿರತೆಗಳೂ, ಕಿರುಬಗಳೂ ಅನುಸರಿಸುತ್ತವೆ......................................................................................

ಪ್ರ. ೨. ಹಾವುಗಳು ಪೊರೆ ಬಿಡುವುದು ಏಕೆ?

ಹಾವಿನ ದೇಹ ವಿನ್ಯಾಸ ನಮ್ಮಂತೆ ಇಲ್ಲ. ಚರ್ಮದ ಒಳಗಿರುವ ದೇಹವು ಬೆಳೆಯುತ್ತೆ, ಆದರೆ ಚರ್ಮವು ಬೆಳೆಯುವುದಿಲ್ಲ. ಹಾಗಾಗಿ ಕಾಲಕಾಲಕ್ಕೆ ಬಟ್ಟೆ ಚಿಕ್ಕದಾದ ಹಾಗೆ ಬಟ್ಟೆ ಬದಲಿಸುವಂತೆ ಹಳೆ ಚರ್ಮವನ್ನು ತೊರೆಯುತ್ತೆ. ಇದಕ್ಕೆ Ecdysis ಎಂದು ಹೆಸರು.

* ಹಾವುಗಳು ಮಾತ್ರವಲ್ಲ, ಹಾವುಗಳಂತೆ exoskeleton ಉಳ್ಳ ಎಲ್ಲಾ ಸರೀಸೃಪಗಳೂ, ಕೀಟಗಳೂ ಪೊರೆ ಬಿಡುತ್ತವೆ......................................................................................

ಪ್ರ. ೩. ಸೊಳ್ಳೆಗಳು ಗುಯ್ಗುಟ್ಟುವುದು ಏಕೆ?

ಸೊಳ್ಳೆಗಳು ಕಂಠದಿಂದ ಶಬ್ದ ಮಾಡುವುದಿಲ್ಲ. ಗುಯ್ಗುಟ್ಟುವ ಶಬ್ದ ಬರುವುದು ರೆಕ್ಕೆಗಳಿಂದ. ಸೊಳ್ಳೆಗಳ ರೆಕ್ಕೆಗಳು ಒಂದು ಕ್ಷಣಕ್ಕೆ ಆರು ನೂರು ಸಲ ಬಡಿದುಕೊಳ್ಳುತ್ತೆ. ಇದರ ಪರಿಣಾಮವೇ ಗುಯ್‍ಯ್....

* ದುಂಬಿ, ಜೇನು, ನೊಣ - ಎಲ್ಲವೂ ರೆಕ್ಕೆ ಬಡಿದು ಸದ್ದು ಮಾಡುವ ಹುಳುಗಳೇ......................................................................................

ಪ್ರ. ೪. 'ಮುಟ್ಟಿದರೆ ಮುನಿ'ಯು ಮುನಿಯುವುದೇಕೆ?

ಮುಟ್ಟಿದರೆ ಮುನಿ - Mimosa pudica ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿದ್ದು, ಕಿಂಚಿತ್ ಒತ್ತಡ ವ್ಯತ್ಯಾಸವಾದರೂ ಮಡಚಿಕೊಂಡು ಬಿಡುತ್ತೆ. ಸಸ್ಯಶಾಸ್ತ್ರಜ್ಞರು ಇದನ್ನು defence mechanism ಎಂದೂ ಶಂಕಿಸುತ್ತಾರೆ. ಹುಳು ಹುಪ್ಪಟೆಗಳಿಂದ, ಮೇಯಲು ಬಂದ ಪ್ರಾಣಿಗಳಿಂದ ತಪ್ಪಿಸಿಕೊಳ್ಳಲು ಎಲೆಗಳನ್ನು ಮಡಚಿಕೊಂಡರೆ ತನ್ನಲ್ಲಿರುವ ಮುಳ್ಳು ಆ ಪ್ರಾಣಿಗೆ ಚುಚ್ಚಿ ಪಾರಾಗಬಹುದು. ಇದೊಂದು ಸಸ್ಯಲೋಕದ ವಿಸ್ಮಯ ಜೀವಿ.......................................................................................

ಪ್ರ. ೫. ಆನೆಗಳು ವಿಪರೀತ ಲದ್ದಿ ಹಾಕುವುದು ಯಾಕೆ?

ಆನೆಗಳ ಜೀರ್ಣಶಕ್ತಿ ತೀರ ಕಡಿಮೆ. ಅದೇ ಕಾರಣಕ್ಕಾಗಿ ವಿಪರೀತ ತಿನ್ನುತ್ತೆ. ದಕ್ಕುವುದು ವಿಪರೀತ ಕಮ್ಮಿ.

* ಆನೆಯ ಜೀರ್ಣಶಕ್ತಿ ಕಡಿಮೆಯೆನ್ನುವುದಕ್ಕೆ ಸಾಕ್ಷಿ, ಅದರ ಲದ್ದಿಯಲ್ಲಿ ಹುಲ್ಲುಕಡ್ಡಿಗಳು, ಎಲೆ ಚೂರುಗಳು ಹಾಗ್‍ಹಾಗೇ ಇರುತ್ತೆ.......................................................................................

ಪ್ರ. ೬. ಅರಣ್ಯದಲ್ಲಿ ಪ್ಲಾಸ್ಟಿಕ್ ಯಾಕೆ ಬಿಸಾಡಬಾರದು?

ಗಿಡಗಳಿಗೆ ಸಾರಜನಕ ದೊರಕುವುದು ಮಣ್ಣಿನಿಂದ, ಪ್ಲಾಸ್ಟಿಕ್ ಅದನ್ನು ತಡೆಹಿಡಿದು ಬಿಡುತ್ತೆ. ಯಾವುದೇ ಪ್ರಾಣಿಯೂ, ಮನುಷ್ಯನನ್ನೂ ಸೇರಿಸಿ, ಪ್ಲಾಸ್ಟಿಕ್‍ಅನ್ನು ಜೀರ್ಣಿಸಿಕೊಳ್ಳಲು ಅಸಮರ್ಥ. ಪ್ಲಾಸ್ಟಿಕ್ ವಸ್ತುವು ಕರುಳುಗಳನ್ನು ಬ್ಲಾಕ್ ಮಾಡಿಬಿಡುತ್ತೆ. ಇಂದು ಅರಣ್ಯದಲ್ಲಿ ಬಹುತೇಕ ಪ್ರಾಣಿಗಳ ಸಾವಿಗೆ ಪ್ಲಾಸ್ಟಿಕ್ ಕಾರಣ.

* ಎಂಥಾ ಗಟ್ಟಿಯಾದ ಮರವನ್ನೇ ತಿಂದು ಮುಗಿಸುವ ಗೆದ್ದಲು ಹುಳು ಕೂಡ ಪ್ಲಾಸ್ಟಿಕ್ ಅನ್ನು ತಿನ್ನಲಾಗುವುದಿಲ್ಲ.......................................................................................

ಪ್ರ. ೭. ನದಿ ನೀರು ಸಿಹಿ, ಮಳೆ ನೀರು ಸಿಹಿ, ಅಂತರ್ಜಲ ಸಿಹಿ - ಮುನ್ನೀರು (ಈ ಮೂರೂ ಸೇರಿ ಆಗುವುದು = ಸಮುದ್ರ) ಮಾತ್ರ ಉಪ್ಪು. ಯಾಕೆ?

ಭೂಮಿ ಸೃಷ್ಟಿಯಾದಾಗ ವರ್ಷಾನುಗಟ್ಟಲೆ ಮಳೆಗರೆದಾಗ ಸಾಗರಗಳು ಸೃಷ್ಟಿಯಾದವು. ಉಲ್ಕಾಪಾತಗಳಿಂದಾದ ಬೃಹದ್ಬಾವಿಗಳಲ್ಲಿ ಅಡಗಿದ್ದ ಉಪ್ಪಿನಂಶವು (ಎಲ್ಲಾ ಬಗೆಯ ಉಪ್ಪು) ಸಾಗರದ ನೀರಿನಲ್ಲಿ ಕರಗಿ ಹೋದವು. ಹಾಗೆ ಕರಗಿ ಹೋಗಿ, ಸೂರ್ಯನ ತಾಪಕ್ಕೆ ತಳಹೊಕ್ಕವು. ಅದೇ ತಾಪಕ್ಕೆ ನೀರು ಮಾತ್ರ ಆವಿಯಾಗಿ ಮತ್ತೆ ಮೋಡವಾಗಿ ಮಳೆಗರೆಯುವುದು. ಹಾಗೆ ಮಳೆಯಾಗಿ ಸುರಿಯುವ ನೀರು, ಈ ಬೃಹದ್ಬಾವಿಗಳಲ್ಲದ ಸ್ಥಳಗಳಲ್ಲಿ ಬಿದ್ದಾಗ ಅವು ಹರಿದು ಹೋಗುವ ಝರಿ ತೊರೆ ನದಿ ಕೆರೆಗಳಾದವು. ಅಲ್ಲಿ ಉಪ್ಪಿನಂಶವಿಲ್ಲ. ಭೂಮಿಯ ಸೃಷ್ಟಿಯ ಸಮಯದಲ್ಲಿ ಉಂಟಾದ ಬಾವಿಗಳಲ್ಲಿ ಉಪ್ಪಿನಂಶವಿರುವುದು ಸುಮಾರು ಐವತ್ತು ಮಿಲಿಯನ್ ಬಿಲಿಯನ್ ಟನ್‍ಗಳು ಎನ್ನಲಾಗಿದೆ.

* ಸಮುದ್ರದ ನೀರು ಮೊದಲ ಮಳೆಯಿಂದಲೂ ಉಪ್ಪಾಗಿಯೇ ಇದೆ.......................................................................................

ಪ್ರ. ೮. ಮರಕುಟುಕ ಹಕ್ಕಿ ಯಾಕೆ ಮರವನ್ನು ಕುಟುಕುತ್ತೆ?

ಅನೇಕರು ಮರಕುಟುಕ ಪಕ್ಷಿಯು ಮರದ ಚೂರನ್ನು ತಿನ್ನುತ್ತೆ ಎಂದು ನಂಬಿದ್ದಾರೆ. ಆದರೆ, ಮರಕುಟುಕವು ಹುಳುಗಳನ್ನು ತಿನ್ನುವ ಹಕ್ಕಿ. ಸತ್ತು ಹೋದ ಮರವನ್ನು ಹೆಚ್ಚು ಬಯಸುತ್ತೆ. ಯಾಕೆಂದರೆ ಸತ್ತ ಮರದ ಮೇಲೆ ಹುಳುಗಳು ಹೆಚ್ಚಿರುತ್ತೆ. ಅಂಥಾ ಮರದಲ್ಲಿ ಗೂಡನ್ನು, ಅದರಲ್ಲೂ ಸಣ್ಣ ಸಣ್ಣ ಪೊಟರೆಗಳನ್ನು ಮಾಡುವ ಸಲುವಾಗಿ ಮರವನ್ನು ಕುಟುಕುತ್ತೆ. ಜೊತೆಗೆ, ಮರವನ್ನು ಕುಟುಕುವ ಸದ್ದು ಇವುಗಳಲ್ಲಿ ಸಂಭಾಷಣೆಯ ರೀತಿಯೂ ಕೂಡ!!......................................................................................

ಪ್ರ. ೯. ಹಲ್ಲಿಗಳು ಬಾಲಗಳನ್ನು ಕಳಚುವುದೇಕೆ?

ಇದಕ್ಕೆ ಆಟೋಟಮಿ ಎಂದು ಹೆಸರು. ಅಂದರೆ ತನ್ನ ಒಂದು ಅಂಗವನ್ನು ಸ್ವೇಚ್ಛೆಯಿಂದ ಕಳಚಿಬಿಡುವುದು. ಹಾಗೆ ಕಳಚಿಕೊಂಡ ಅಂಗವು ಮತ್ತೆ ಬೆಳೆಯುವುದು. ಇದಕ್ಕೆ regeneration ಎಂದು ಹೆಸರು. ಶತ್ರು ಪ್ರಾಣಿಯಿಂದ ತಪ್ಪಿಸಿಕೊಳ್ಳಲು, ಶತ್ರುವನ್ನು ಮೂರ್ಖಗೊಳಿಸಲು ಹಲ್ಲಿಯು ಹೂಡುವ ತಂತ್ರವು ಈ ಆಟೋಟಮಿ.

* ಹಲ್ಲಿಯು ಬಾಲ ಕಳಚುವಂತೆ ಸ್ಯಾಲಮಾಂಡರ್ ಕೂಡ ಕಳಚುತ್ತೆ. ಅನೇಕ ಏಡಿಗಳು, ಜೇಡಗಳು ತಮ್ಮ ಕಾಲನ್ನೇ ಕಳಚಿಬಿಡುತ್ತವೆ.......................................................................................

ಪ್ರ. ೧೦. ಮುಂಗುಸಿಗೆ ಹಾವಿನ ವಿಷವೇಕೆ ತಗುಲುವುದಿಲ್ಲ?

ಇದು ತಪ್ಪು ನಂಬಿಕೆ. ಹಾವಿಗಿಂತ ಮುಂಗುಸಿಯು ವೇಗವಾಗಿರುತ್ತೆ, ಮತ್ತು ಚುರುಕಾಗಿರುತ್ತೆ. ಮುಂಗುಸಿಯು ಹಾವನ್ನು ಬೇಟೆಯಾಡಲೆಂದೇ ಹುಟ್ಟಿರುವ ಪ್ರಾಣಿ. ನೇರವಾಗಿ ಹಾವಿನ ತಲೆಯ ಮೇಲೆಯೇ ಎರಗಿ, ಹಾವಿನ ತಲೆಬುರುಡೆಯನ್ನು ಮುರಿಯುವಂತೆ ಕಚ್ಚುತ್ತೆ. ಮುಂಗುಸಿಯ ಹಲ್ಲುಗಳು ಗರಗಸದಂತೆ ಹರಿತವಾಗಿದ್ದು, ಹಾವಿನ ಪ್ರಾಕೃತ ಶತ್ರುವಾಗಿರುವುದರಿಂದ ಈ ಕೆಲಸದಲ್ಲಿ ಯಶಸ್ವಿಯಾಗುತ್ತೆ. ಕೆಲವು ಸಲ ಹಾವೂ ಗೆಲ್ಲುತ್ತೆ!

* ಮುಂಗುಸಿಯದೇ ಜಾತಿಯ (Herpestes) ಎಲ್ಲಾ ಪ್ರಾಣಿಗಳೂ ಹಾವುಗಳಂತಹ ಸರೀಸೃಪಗಳನ್ನೇ ಅವಲಂಬಿಸಿ ಬದುಕುವುದು ಆಹಾರಕ್ಕೆ.......................................................................................

ಈ ಬಾರಿ "ಯಾಕೆ"ಯಾಯಿತು. ಮುಂದಿನ ಸಲ, "ಹೇಗೆ"ಗಳನ್ನು ನೋಡೋಣ.

-ಅ
09.10.2008
4AM

24 comments:

 1. >> ಪ್ರ. ೬. ಅರಣ್ಯದಲ್ಲಿ ಪ್ಲಾಸ್ಟಿಕ್ ಯಾಕೆ ಬಿಸಾಡಬಾರದು?

  very important point.. ಆಶ್ಚರ್ಯ ಅಂದ್ರೆ ತುಂಬಾಜನ ವಿದ್ಯಾವಂತರೂ ಪ್ರಕೃತಿಯ ಮಡಿಲನ್ನ ಈ ಪ್ಲಾಸ್ಟಿಕ್ ನಿಂದ ಹಾಳುಗೆಡಹುತ್ತಿದ್ದಾರಲ್ಲ ಅಂತ.

  ReplyDelete
 2. ಮಡಿಲೇನು ಪಾಪಣ್ಣೋರೇ, ಒಡಲೇ ಹಾಳಾಗುತ್ತಿದೆ.. :-(

  ReplyDelete
 3. oLLe collection ... :-)
  Mimosa Pudica madskondaaga mullaagi chuchchalla ... mullina thara kaansi praanigalige topi haakutte ashte ... alwa?

  ReplyDelete
 4. arun avre neevu thumba chennaag bareetheera.. :-) haage naanu haLeyadaagi ;-) blog shuru maadideeni...salpa oodhi comment maadbidi..
  http://karmakaanda.blogspot.com
  prothsaaha kodi...

  ReplyDelete
 5. [ಶ್ರೀಧರ] ಹಳೆಯದಾಗಿ ಶುರು ಮಾಡಿದ್ದೀರಾ? ವೆರಿ ಗುಡ್. ಕಮೆಂಟ್‍ಗಳ ಮೇಲೆ ಕಮೆಂಟ್ ಮಾಡಿ ಮಾಡಿ ಸುಸ್ತ್ ಆಗಿದೆ ಇವ್ರೇ.

  [ವಿಜಯಾ] ಇಲ್ಲ, ಮಿಮೋಸಾ ಪ್ಯೂಡಿಕಾದಲ್ಲಿ ಮುಳ್ಳಿರುತ್ತೆ.

  [ಭವ್ಯಾ] As usual, thanks.

  [ಸ್ವರೂಪ] ಥ್ಯಾಂಕ್ಸ್ ಕಣಯ್ಯಾ. ನೀನೂ ಬರೆಯಪ್ಪಾ, ಯಾಕೋ ತಟಸ್ಥ ಆಗಿ ಹೋಗಿದ್ದೀಯ ನೀನು.

  [ಸಂದೀಪ್ ಕಾಮತ್] ಥ್ಯಾಂಕ್ಸ್, ಸಂದೀಪ್ ಅವರೇ.

  ReplyDelete
 6. 100 /100 !!! Ee thara answer maadbek nodi questions na. nim ee atyadhbutha q&a paper na print tegsi school notice board mele haakstini...( video aagalla... sadyakke). maklu kalibeku inthavella. more than sakhath idu. waiting for more-u.

  ReplyDelete
 7. ಸದ್ಯ! ಪ್ರಶ್ನೆಗಳ ಜೊತೆ ಉತ್ರಾನೂ ಕೊಟ್ರಲ್ಲ! ಇಲ್ಲದಿದ್ದರೆ ನನಗೆ ಸೊನ್ನೆಯೇ ಬರುತ್ತಿತ್ತು. ತುಂಬಾ ಥ್ಯಾಂಕ್ಸು. ನಾನೂ ಕಾಪಿ ಮಾಡ್ಕೊಬೋದಾ?:)

  ReplyDelete
 8. [ಅಂತರ್ವಾಣಿ] ಪ್ರಶ್ನೆ ಕೇಳ್ತೀನಿ ಮುಂದಿನ್ ತರಗತೀಲಿ. ಉತ್ರ ಹೇಳ್ದೇ ಇದ್ರೆ ಆಚೆ ಕಳ್ಸ್ತೀನಿ.

  [ನೀಲ್‍ಗಿರ್] ಹೆ ಹೆ, ಮಾಡ್ಕೊಳಿ ಮಾಡ್ಕೊಳಿ.. ಆದ್ರೆ, ಮುಂದಿನ್ ಸಲ ಕಾಪಿ ಮಾಡದೆ ಉತ್ರ ಕೊಡಿ.. ;-)

  ReplyDelete
 9. ಅರುಣ್ , ಆನೆ ತಿಂದ ಆಹಾರನ ಇನ್ನೊಂದ್ ಸಲ ಮೆಲುಕು ಹಾಕಲ್ವಾ??
  ಮೆಲುಕು ಹಾಕೋದು ಬರೀ ಸೀಳು ಗೊರಸಿನ ಪ್ರಾಣಿಗಳೇನಾ?

  ReplyDelete
 10. ರಮೇಶ್, ಇಲ್ಲ, ಆನೆಗಳು ಮೆಲುಕು ಹಾಕುವುದಿಲ್ಲ. ಹಾಗೆ ಮೆಲುಕು ಹಾಕುವ ಪ್ರಾಣಿಗಳ ಜೀರ್ಣಾಂಗಕ್ಕೆ ಇಂಗ್ಲಿಷಿನಲ್ಲಿ ruminant digestive system ಎನ್ನುತ್ತೇವೆ. (ಕನ್ನಡದಲ್ಲಿ ಏನಂತಾರೋ ಗೊತ್ತಿಲ್ಲ. ತಿಳಿದರೆ ಹೇಳಿಪ್ಪಾ...)

  ಆಕಳು, ಒಂಟೆ ಇಂಥಾ ಪ್ರಾಣಿಗಳು ಮೆಲುಕು ಹಾಕುತ್ತೆ.

  ReplyDelete
 11. ನಂಗೂ ಸರಿಯಾಗಿ ಗೊತ್ತಿಲ್ಲ ಅರುಣ್..
  "ಮೆಲುಕು ಜೀರ್ಣಾಂಗ ವ್ಯವಸ್ಥೆ" ಅನ್ನಬಹುದೇನೋ..

  ಸಾಕು ಪ್ರಾಣಿಗಳಲ್ಲಿ, ಹಸು, ಎಮ್ಮೆ, ಮೇಕೆ, ಕುರಿ ಇವೆಲ್ಲಾ ಮೆಲುಕು ಹಾಕುತ್ವೆ..

  ಆಮೇಲೆ ಕೋತಿ ನೋಡಿದ್ದೀರಲ್ಲ, ಒಂದೇ ಸಲಕ್ಕೆ ಒಂದಷ್ಟು ಕಡ್ಲೆಕಾಯಿಗಳನ್ನ ಬಾಯಲ್ಲಿ ತುರಿಕೊಂಡು ಓಡಿಹೋಗಿ, ಸಾವಕಾಶ ಮಾಡಿಕೊಂಡು ಒಂದೊಂದನ್ನೇ ತಿನ್ನುತ್ತೆ.. ಇದನ್ನೂ ಕೂಡ ಯಾವುದಾದರೂ ವ್ಯವಸ್ಥೆಗೆ ಸೇರಿಸಿದ್ದಾರೇನೋ ಅಲ್ವಾ? ☺

  ReplyDelete
 12. ಅದ್ಭುತ ಮಾಹಿತಿಗಾಗಿ ಧನ್ಯವಾದಗಳು.

  ReplyDelete
 13. [ಸುನಾಥ್] ಧನ್ಯ ನಾನು.

  [ರಮೇಶ್] ಹೌದು, ಅದು ಜೀರ್ಣಾಂಗದ ವ್ಯವಸ್ಥೆಯೇ.

  [ಲಕುಮಿ] ಯಾವ್ ನೋಟೀಸ್ ಬೋರ್ಡು?? ನಿಮ್ ಮನೇಲಿ ಅದ್ ಬೇರೆ ಇದ್ಯಾ?

  ReplyDelete
 14. ಸಣ್ಣವನಿದ್ದಾಗ ಇಂಥದ್ರಲ್ಲೆಲ್ಲಾ ಬಹಳ ಆಸಕ್ತಿಯಿತ್ತು. "ಚಿಲ್ಡ್ರನ್ಸ್ ನಾಲೆಜ್ ಬ್ಯಾಂಕ್" ನ (ಅಂದು ಲಭ್ಯವಿದ್ದ ಎಲ್ಲಾ) ಆರು ಸಂಪುಟಗಳನ್ನು ಓದಿದ್ದೆ...

  ಈಗ ಮತ್ತೆ ಆ ಕಾಲ (ಹೆಚ್ಚೇನಿಲ್ಲ, ೧೦ ವರ್ಷ ಹಿಂದಷ್ಟೇ...) ಮೆಲುಕು ಹಾಕುವಂತಾಯಿತು.. ಅದಕ್ಕಾಗಿ ಧನ್ಯವಾದಗಳು :-)

  ReplyDelete
 15. [ಹರೀಶ] ನಾನೂ ಚಿಲ್ಡ್ರೆನ್ಸ್ ನಾಲೆಡ್ಜ್ ಬ್ಯಾಂಕ್ ಓದಿಕೊಂಡೇ ಬೆಳೆದವನು. ಒಳ್ಳೇ ಮೆಲುಕು. :-)

  [ಸುಶ್ರುತ ದೊಡ್ಡೇರಿ] ಯಾಕ್ರೀ?

  ReplyDelete
 16. ಎಲ್ಲಾ ಸಕತ್ ಮಾಹಿತಿಯಾಗಿದೆ, ಮಜವೂ ಉಂಟು. ಅದರೆ ಒಂದು ಸಂಶಯ ನಾಯಿ ಮೂತ್ರ ಮಾಡಿ ಬೌಂಡ್ರಿ ಗುರುತು ಮಾಡುವುದು ಸರಿ. ಅದರೆ ನಾನು ನನ್ನ ಟೂವೀಲರ್ ಎಲ್ಲಿ ನಿಲ್ಲಿಸಿದರೂ ಒಂದಲ್ಲ ಒಂದು ನಾಯಿ ಅದರ ಮೇಲೆ ಮೂತ್ರ ವಿಶರ್ಜನೆ ಮಾಡಿಹೋಗುವುದು ಯಾವ ಬೌಂಡರಿ ಗುರುತೊ ಗೊತ್ತಾಗಲ್ಲಿಲ್ಲ. ದಯವಿಟ್ಟು ತಿಳಿಸಿ.
  ಶಿವು.ಕೆ

  ReplyDelete
 17. [ಶ್ರೀನಿಧಿ] ಏನ್ ಫೇಮಸ್ಸೋ ಏನೋ. ಒಳ್ಳೇ ಬೈತೀರಾ ನೀವು.

  [ಶಿವು] ಟೂ ವೀಲರ್ ಅಂತ ಅಲ್ಲ, ನೀವು ಎಷ್ಟೇ ಚಕ್ರದ ವಾಹನ ತೊಗೊಂಡ್ ಹೋದ್ರೂ ಅಷ್ಟೆ, ಅದು "ಬೌಂಡರಿ"ಯನ್ನು ಗುರುತು ಮಾಡೇ ಮಾಡುತ್ತೆ. ಯಾಕೆ ಅಂದರೆ, ನೀವು ಹೊರಗಿನಿಂದ ಬರುತ್ತೀರ, ಅದರ territory ಒಳಗೆ.. ಅದರಲ್ಲಿ ಬೇರೆ ವಾಸನೆಗಳು ಇರುವುದನ್ನು ನಾಯಿಗಳು ಸಹಿಸುವುದಿಲ್ಲ.

  ಒಮ್ಮೆ ಒಂದು ನಾಯಿ ಗಾಡಿಯನ್ನು ತೊಳೆಯುತ್ತಾ ಕುಳಿತಿದ್ದ ಮನುಷ್ಯನೊಬ್ಬನ ಬೆನ್ನಿನ ಮೇಲೂ ಕಾಲೆತ್ತಿ ಮೂತ್ರ ವಿಸರ್ಜನೆ ಮಾಡಿರುವುದನ್ನೂ ನೋಡಿದ್ದೇನೆ ನಾನು.

  ReplyDelete
 18. ಚೆನ್ನಾಗಿದೆ ಚೆನ್ನಾಗಿದೆ....ತು೦ಬಾನೆ ಚೆನ್ನಾಗಿದೆ.

  ReplyDelete

ಒಂದಷ್ಟು ಚಿತ್ರಗಳು..