Friday, October 03, 2008

ಭಾರತ ಮತ್ತು ವನ್ಯಜೀವ - ೧

ನಮ್ಮ ದೇಶದಲ್ಲಿ ಹೇಗೆ ನೂರೆಂಟು ಜಾತಿ, ಧರ್ಮ, ಮತ, ಭಾಷೆ ಎಲ್ಲವೂ ವಿವಿಧ ಕಡೆ ಹಂಚಿಹೋಗಿದೆಯೋ ಹಾಗೆಯೇ ವನ್ಯಜೀವ ಕೂಡ ಬಹಳ ಸೊಗಸಾಗಿ ವಿಂಗಡಣೆಯಾಗಿದೆ. ದೇಶ ಸುತ್ತು - ಕೋಶ ಓದು ಎಂದು ಹಿರಿಯರು ಹೇಳಿದ್ದಾರೆ. ಸಧ್ಯಕ್ಕೆ ಕೋಶ ಓದಿರುವಷ್ಟು ದೇಶ ಸುತ್ತಿಲ್ಲ, ಸುತ್ತುವಂತಾಗಲಿ. ಮೊದಲು ಕೋಶದಲ್ಲಿ ದೇಶವನ್ನು ಸುತ್ತಿ ಬರೋಣ. ಯಾವ ರಾಜ್ಯದಲ್ಲಿ ಯಾವ "ಜಾಗ" ನೋಡಬೇಕು ಎಂಬುದನ್ನು ನಾನು ಪಟ್ಟಿ ಮಾಡಲಿಚ್ಛಿಸುವುದಿಲ್ಲ. ಅದಕ್ಕಾಗಿ ಸಹಸ್ರಾರು ತಾಣಗಳಿವೆ. ಆದರೆ, ಯಾವ ಯಾವ ರಾಜ್ಯಕ್ಕೆ ಹೋದರೆ ಯಾವ ಪ್ರಾಣಿ/ಗಿಡ/ಹೂವು - ನೋಡಲೇ ಬೇಕೋ ಅದೆಲ್ಲಾ ಒಂದು ಕಡೆ ಪಟ್ಟಿ ಮಾಡಿಕೊಳ್ಳೋಣ. ಅಲ್ಲಿಗೆ ಹೋಗುವಾಗ ಸುಲಭವಾದೀತು. ಹೋಮ್‍ವರ್ಕ್ ಸರಿಯಾಗಿ ಮಾಡಿದರೆ ತಾನೆ ಪ್ರಯಾಣವು ಯಶಸ್ವಿಯಾಗುವುದು?ಕರ್ನಾಟಕದಿಂದಲೇ ಆರಂಭಿಸೋಣ.

ಕರ್ನಾಟಕದ ವಿಶೇಷ ಪ್ರಾಣಿಯೆಂದರೆ ನನ್ನ ಪ್ರಕಾರ ಮೊದಲ ಸ್ಥಾನ ಪಡೆದುಕೊಳ್ಳುವುದು ಕಾಳಿಂಗ ಸರ್ಪ - Ophiophagus hannah. ಇಡೀ ಪಶ್ಚಿಮ ಘಟ್ಟದುದ್ದಕ್ಕೂ ಕಾಣಸಿಗುವ ಈ ಸರ್ಪವು ಈ ರಾಜ್ಯದಲ್ಲಿ ಅತ್ಯಧಿಕವಾಗಿದೆ. ಆಗುಂಬೆ ಮತ್ತು ಬಿಸಿಲೆ - ಕಾಳಿಂಗದ ಆರಾಮ. ಭಾರ್ಗವಿ ನದಿ ತೀರದಲ್ಲಿರುವ, ಜಮದಗ್ನಿಯ ಪತ್ನಿ ರೇಣುಕಾಳ ಅವತರಣವೆಂದೇ ನಂಬಲ್ಪಟ್ಟಿರುವ ದೊಡ್ಡ ಸಂಪಿಗೆಯನ್ನು ನೋಡದೆ ಕರ್ನಾಟಕದಿಂದ ಹೊರಗೆ ಹೋಗಲೇ ಬಾರದು. ಬೃಹತ್ ಮರದ ಪೊಟರೆಯೊಳಕ್ಕೇ ಪ್ರದಕ್ಷಿಣೆ ಹಾಕಿ ಬರಲು ಸೋಲಿಗರು ಅವಕಾಶ ಮಾಡಿಕೊಟ್ಟಿದ್ದಾರೆ. ಬಂಡೀಪುರದ ಹುಲಿ, ಸಿಂಗಳೀಕ, ನಾಗರಹೊಳೆಯ ಆನೆ, ಬೆಂಗಳೂರಿನ ಇನ್ನೂರಕ್ಕೂ ಹೆಚ್ಚಿನ ಪಕ್ಷಿಸಂಕುಲ - ಇವೆಲ್ಲವೂ ಕರ್ನಾಟಕದ ವೈಶಿಷ್ಟ್ಯ. ಗಂಧದ ಗುಡಿ ಎಂದೂ ಕರ್ನಾಟಕವನ್ನು ಕರೆಯುತ್ತೇವಾದ್ದರಿಂದ ಹೆಚ್ಚಾಗಿ ಗಂಧದ ಮರಗಳು ಕಾಣುವ ಬಂಡೀಪುರ ಅರಣ್ಯವನ್ನು ನೋಡಲೇ ಬೇಕು.
ಕೇರಳ

ಹನ್ನೆರಡು ವರ್ಷಕ್ಕೊಮ್ಮೆ ಅರಳುವ ನೀಲಕುರಿಂಜಿ ಹೂವು ಕೇರಳದ ಮುನ್ನಾರ್, ಕರ್ನಾಟಕದ ಬಾಬಾಬುಡನಗಿರಿ, ತಮಿಳುನಾಡಿನ ಕೊಡೈಕೆನಾಲ್‍ ಶ್ರೇಣಿಗಳಲ್ಲಿ ಮಾತ್ರ ಕಾಣಸಿಗುವುದು. ಇದನ್ನು ನೋಡುವ ಭಾಗ್ಯ ಎಲ್ಲಾ ವನ್ಯಜೀವಿ ಆಸಕ್ತರಿಗೂ ದೊರಕಲಿ. ಇಡೀ ಬೆಟ್ಟ ಶ್ರೇಣಿಯೇ ಹೂಗಳ ಪ್ರಭಾವದಿಂದ ನೀಲಿಯಾಗಿ ಕಾಣುತ್ತೆ. ಅದ್ಭುತವಾದ ದೃಶ್ಯ!ಕೇರಳದ ಕಾಡುಗಳನ್ನಲೆಯುವವರು ಲಯನ್ ಟೇಯ್ಲ್ಶ್ ಮೆಕಾಕ್ - Macaca silenus ನೋಡಲು ಹವಣಿಸುತ್ತಿರುತ್ತಾರೆ. ಕಣ್ಣು ಚುರುಕಾಗಿರಲಿ.ಪಕ್ಷಿ ವೀಕ್ಷಣಾಕಾರರು Rufous Babbler Turdoides subrufaಗಾಗಿ ತಮ್ಮ ಬೈನಾಕ್ಯುಲರುಗಳನ್ನು ತಿರುಗಿಸುತ್ತಿರುತ್ತಾರೆ. ದರ್ಶನ ಪ್ರಾಪ್ತಿರಸ್ತು.ತಮಿಳುನಾಡು

ಮೇಲೆ ಹೇಳಿದಂತೆ ತಮಿಳುನಾಡಿನ ಕೊಡೈಕೆನಾಲ್‍ನಲ್ಲೂ ನೀಲಕುರಿಂಜಿ ನೋಡಬಹುದು - ಹನ್ನೆರಡು ವರ್ಷಕ್ಕೊಮ್ಮೆ - ಮಳೆಗಾಲದಲ್ಲಿ. ಇಲ್ಲಿನ ನೀಲಗಿರಿಗೆ ಹೋದರೆಂದರೆ ಮುಗಿಯಿತು, ವನ್ಯಲೋಕವು ನಾಕವಾದಂತೆ. ನೀಲ್‍ಗಿರಿ ತಾಹ್ರ್, ನೀಲ್‍ಗಿರಿ ಪಿಪಿಟ್, ನೀಲ್‍ಗಿರಿ ಲಾಫಿಂಗ್ ಥ್ರಷ್ - ಹೀಗೆ ಹತ್ತು ಹಲವಾರು ಕೇವಲ ಇಲ್ಲಿ ಮಾತ್ರ ಕಾಣಸಿಗುವ ಪ್ರಾಣಿಪಕ್ಷಿಗಳು ವಾಸಿಸುತ್ತವೆ. ಪಯಣಿಗರು ಸುಮಾರು ಒಂದು ತಿಂಗಳು ಇಲ್ಲಿ ಬಿಡಾರ ಹೂಡಬಹುದು. ಊಟಿಯ ಜನಸಂದಣಿಯಿಂದ ಹೊರಬಂದು ಅರಣ್ಯದೊಳಕ್ಕೆ ನುಗ್ಗಿ ಮದುಮಲೈ ಶ್ರೇಣಿಯೊಡನೆ ಇವೆಲ್ಲವನ್ನೂ ನೋಡಲೇ ಬೇಕು. ಜೊತೆಗೆ ಬಂಡೀಪುರ - ಮದುಮಲೈ ಆನೆಗಳು ಅಲ್ಲಲ್ಲಿ ಕಾಣಿಸುತ್ತಲೇ ಇರುತ್ತೆ.ಮಹಾರಾಷ್ಟ್ರ

ಕರ್ನಾಟಕ, ಕೇರಳ, ತಮಿಳುನಾಡಿನಲ್ಲಿಲ್ಲದ್ದು ಮಹಾರಾಷ್ಟ್ರದಲ್ಲಿ ಅಂಥದ್ದೇನೂ ಇಲ್ಲ. ಅಲ್ಪ ಸ್ವಲ್ಪ ಕಾಡು ಉಳಿದುಕೊಂಡಿದೆ. ಆದರೆ, ಮುಂಬಯಿಯ ಬಿ.ಎನ್.ಹೆಚ್.ಎಸ್. ಗೆ ಒಮ್ಮೆ ಭೇಟಿ ಕೊಟ್ಟರೆ ಇಡೀ ದೇಶದ ವನ್ಯಜೀವದ ಬಗ್ಗೆ ಸಾಕಷ್ಟು ವಿಷಯಗಳು ದೊರಕೀತು.

ಆಂಧ್ರಪ್ರದೇಶ

ಹಿಂದಿ ಚಿತ್ರನಟನೊಬ್ಬನು ಕೊಂದು ತಿಂದ black buck ಜಿಂಕೆಯು ಆಂಧ್ರದಲ್ಲಿ ಒಂದು ಕಾಲದಲ್ಲಿ ಬಹಳ ಹೇರಳವಾಗಿತ್ತು. ಈಗ ಈ ಪ್ರಾಣಿ endangered ಆಗಿದೆ.ಇನ್ನೂ ಎರಡು ಆಂಧ್ರಪ್ರದೇಶದ ವಿಶೇಷ ವನ್ಯಜೀವಿಗಳೆಂದರೆ

--> ಈ ಕೆಳಗಿರುವ ಹಕ್ಕಿ ಜರ್ಡನ್ಸ್ ಕೋರ್ಸರ್ - Rhinoptilus bitorquatus (ಈ ಹಕ್ಕಿಯನ್ನು ಮೊದಲು ಸಂಶೋಧಿಸಿದ ವಿಜ್ಞಾನಿಯ ಹೆಸರಿನ ಆಧಾರ). ಪ್ರಪಂಚದ ಐವತ್ತು ಅತಿ ಅಪರೂಪದ ಹಕ್ಕಿಗಳಲ್ಲೊಂದು ಎಂದು World Wide Fund For Nature (WWF) ಘೋಷಿಸಿದೆ.--> ಪಿಳಪಿಳನೆ ಕಣ್ಣು ಬಿಡುತ್ತಾ ಇರುವ ಈ ಅಪರೂಪದ ಪ್ರಾಣಿ - ಸ್ಲೆಂಡರ್ ಲೋರಿಸ್ Loris lydekkerianus lydekkerianus - ದಕ್ಷಿಣ ಭಾರತದಲ್ಲಿರುವ ವಿಶೇಷ ಪ್ರಾಣಿಗಳಲ್ಲೊಂದು. ವಾಸ್ತವವಾಗಿ ಇದರ ಸಾಮಾನ್ಯ ಹೆಸರು, ಮೈಸೂರ್ ಸ್ಲೆಂಡರ್ ಲೋರಿಸ್ ಅಂತ. ಆದರೆ ಇಡೀ ಕರ್ನಾಟಕ ರಾಜ್ಯದಲ್ಲಿ ಇದು ಅಳಿದು ಹೋಗಿದೆ. ಉಳಿದಿರುವುದು ಆಂಧ್ರದಲ್ಲಿ ಮಾತ್ರ.ಒರಿಸ್ಸಾದಿಂದ ಮೇಲಿನ ರಾಜ್ಯಗಳಿಗೆ ಮುಂದಿನ ವಾರದಲ್ಲಿ ಪಯಣ ಮಾಡೋಣ. ಒಟ್ಟಿಗೇ ಆಲ್ ಇಂಡಿಯಾ ಟೂರ್ ಮಾಡಿಬಿಟ್ಟರೆ ಒಳ್ಳೇ ಐ.ಟಿ.ಡಿ.ಸಿ. ಪ್ಯಾಕೇಜ್ ಟೂರ್ ಥರ ಆಗಿಬಿಡುತ್ತೆ. ಸುಸ್ತಾಗಿಬಿಡುತ್ತೆ.

ಮೇಲೆ ಹೆಸರಿಸಿದ ಪ್ರಾಣಿ-ಪಕ್ಷಿಗಳೆಲ್ಲವೂ ಮನುಷ್ಯನಿಂದ ತೊಂದರೆಗೊಳಪಟ್ಟಿದೆ. ನಾಶದ ಅಂಚಿನಲ್ಲಿದೆ. ಲೋರಿಸ್‍ನಂಥಾ ಪ್ರಾಣಿಗಳು ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ. ಮನುಷ್ಯ ಇದನ್ನು ರಕ್ಷಿಸಿದರೆ ಸಾಲದು. ಇವುಗಳಿಗೆ ಉನ್ನತ ಜೀವಿಗಳಾದ ಮನುಷ್ಯರಿಂದ ಪ್ರೀತಿಯ ಅವಶ್ಯವಿದೆ. ವನ್ಯಜೀವಿಗಳನ್ನು ರಕ್ಷಿಸುವುದು ಮಾತ್ರ ನಮ್ಮ ಕರ್ತವ್ಯವಲ್ಲ, ಅದಕ್ಕಿಂತ ದೊಡ್ಡದು ಅವನ್ನು ಪ್ರೀತಿಸುವುದು. ಪ್ರೀತಿಯು ಕರ್ತವ್ಯವಲ್ಲ, ಅದು ಹೃದಯಕ್ಕೆ ತಿಳಿಯಬೇಕಷ್ಟೆ. ಪ್ರೀತಿಸಿದರೆ, ನಂತರ ಕರ್ತವ್ಯವು ತಾನಾಗಿ ತಾನೇ ನಡೆದುಕೊಂಡು ಹೋಗುತ್ತೆ. ವನ್ಯಜೀವಿಗಳನ್ನು ಪ್ರೀತಿಸೋಣ!-ಅ
03.10.2008
11.30PM

9 comments:

 1. ah yes... mundina varsha (july aadmele) schedule maaDbiDu.. hogi bandbiDana... ella noDkondu baroNante :)

  ReplyDelete
 2. ishtella noDidmele ondu vaara rest togoLakke oLLe camp site bagge nu maahiti koTTidre chennaagittu noDu... anyway, good work!

  ReplyDelete
 3. ಸಖತ್ ಸಾರ್,

  ಮೈಸೂರ್ ಸ್ಲೆಂಡರ್ ಲೋರಿಸ್ ಅಂದ್ರೆ ಕಾಡುಪಾಪ ಅಲ್ವಾ ಅದು? ನಂಗಿಷ್ಟ ಬಹಳ ಅದು . ಸೀರಿಯಸ್ಲಿ.

  ReplyDelete
 4. ಥ್ಯಾಂಕ್ಯೂ!:) ಬೈಬೇಡಿ,ಭಾರ್ಗವೀ ನದಿ, ದೊಡ್ಡಸಂಪಿಗೆ ಮರ ಎಲ್ಲಿದೆ?:(
  ಓಹ್ ಮತ್ತೆ ಹೊಸ ಟೆಂಪ್ಲೇಟ್ ತುಂಬಾ ಚೆನ್ನಾಗಿದೆ!:)

  ReplyDelete
 5. ಆರುಣ್ ಸಾರ್,
  ನಮ್ಮ ವನ್ಯಜೀವಿಗಳು ಹಾಗೂ ಸ್ಠಳಗಳಬಗ್ಗೆ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ. ನಾನು ನೀವು ಇಲ್ಲಿ ಹೇಳಿರುವ ಕರ್ನಾಟಕ, ಕೇರಳ, ತಮಿಳುನಾಡು ಸ್ಠಳಗಳಿಗೆ ಹೋಗಿ ಫೋಟೊಗ್ರಫಿ ಮಾಡಿದ್ದಿನಿ. ತುಂಬಾ ಚೆನ್ನಾಗಿವೆ.

  ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
  http://chaayakannadi.blogspot.com

  ಶಿವು.ಕೆ

  ReplyDelete
 6. ಅರುಣ್, ಈ ಕಾಡುಪಾಪಗಳು ಒಂದೈದು ವರ್ಷಗಳ ಹಿಂದೆ ನಮ್ಮೂರಲ್ಲೂ ಆಗಾಗ್ಗೆ ಕಾಣಸ್ತಾ ಇದ್ವು ಇತ್ತೀಚೆಗೆ ಏನಾಗಿದಾವೋ ಗೊತ್ತಿಲ್ಲ.
  ಈ ಪಾಪುಗಳಿಗೆ ಸಖತ್ ನಾಚಿಕೆ ನೋಡಿ :)ಮರೆಯಲ್ಲೆ ಓಡಾಟ! ಸಾಮಾನ್ಯವಾಗಿ ಜೋಡಿ ಇರ್ತಾವೆ.
  ನಮ್ಮಮ್ಮ ಚಿಕ್ಕವರಾಗಿದ್ದಾಗ, ಸ್ನೇಹಿತರ ಜೊತೆ ಗೇರು ಹಣ್ಣು ಕಿತ್ತು ತಿನ್ನೋಕೆ ಹೋಗಿದ್ದರಂತೆ. ಎರಡು ಕಾಡುಪಾಪ ಮರದಲ್ಲಿದ್ವಂತೆ. ಒಬ್ಬ ಸಾಹಸ ಮಾಡಿ ಒಂದನ್ನ ಹಿಡ್ಕೊಂಡ್ನಂತೆ ನೋಡಿ, ಇನ್ನೋಂದ್ ಬಂದು ಮುಖ-ಮೂತಿ ಕೈ-ಕಾಲ್ನೆಲ್ಲ ಪರ್ಚಿ, ತನ್ ಸಂಗಾತಿನ ಬಿಡೋವರ್ಗೂ ಬಿಟ್ಟಿರ್ಲಿಲ್ವಂತೆ. ಅವುಗಳ ಕೀರಾಟಕ್ಕಿಂತ ಅವನ ಚೀರಾಟಾನೇ ಜೋರಿತ್ತಂತೆ! ಅವನ ಚೀರಾಟದ ಡೈಲಾಗ್ಸ್ ಗಳನ್ನ ಒಮ್ಮೊಮ್ಮೆ ಮಾತು ಬಂದಾಗ ಹೇಳಿ ನಗುತ್ತಿರುತ್ತಾರೆ.

  ReplyDelete
 7. first chaamaraajnagara muhskoLona.. aamele india touru..:)

  ReplyDelete
 8. Present sir ನಾನು.
  Class ಚೆನ್ನಾಗಿತ್ತು. ಒಂದು Doubt ಇದೆ. ಆ ನೀಲಿ ಚಿತ್ರ ಮೇಲೆ ಕ್ಲಿಕ್ ಮಾಡಿದೆ. ಆದರೆ ತುಂಬಾ ಚಿಕ್ಕದಾಗಿ ಕಾಣ್ತಾಯಿದೆ.

  ReplyDelete
 9. [ಅಂತರ್ವಾಣಿ] ಯಾವ್ ನೀಲಿ ಚಿತ್ರ??? ಏನ್ ಮಾತಾಡ್ತಾ ಇದ್ದೀರ ನೀವು?? ಯಪ್ಪಾ....

  [ಭವ್ಯಾ] ಯಾವಾಗ ಚಾಮರಾಜನಗರ ಪ್ರಯಾಣ??

  [ರಮೇಶ್] ಹೌದು. ವಾಸ್ತವವಾಗಿ ಲೋರಿಸ್ ಕರ್ನಾಟಕದಲ್ಲಿದೆ. ಆದರೆ ನನಗೆ ದೊರಕಿರುವ ಮಾಹಿತಿಯ ಪ್ರಕಾರ wild ಅಲ್ಲಿ ಇಲ್ಲ. ಮತ್ತು, ಆಂಧ್ರದಲ್ಲೂ ತೀರ ಕಮ್ಮಿಯಾಗಿಬಿಟ್ಟಿದೆ. ನನಗೆ ದೊರೆತಿರುವ ಮಾಹಿತಿ ತಪ್ಪಿದ್ದಲ್ಲಿ ತಿದ್ದುಪಡಿಯನ್ನು ಬರೆಯುತ್ತೇನೆ.
  ಒಳ್ಳೇ ಕಾಡುಪಾಪ ಎಕ್ಸ್ಪೀರಿಯೆನ್ಸು. ಚೆನ್ನಾಗಿದೆ.

  [ಶಿವು] ಧನ್ಯವಾದಗಳು.

  [ಶ್ರೀ] ರೀ, ಇಂಥಾ ಪ್ರಶ್ನೆ ಕೇಳ್ಬಿಟ್ಟು ಬೈಬೇಡಿ ಅಂತೀರ! ಹೇಗ್ರೀ ಸಾಧ್ಯ! ಇರಲಿ. ಬಿಳಿಗಿರಿರಂಗನ ಬೆಟ್ಟದಲ್ಲಿದೆ ದೊಡ್ಡಸಂಪಿಗೆ ಮರ.

  [ವಿಕಾಸ್ ಹೆಗಡೆ] ನಂಗೂ ಇಷ್ಟ ಕಣ್ರೀ.. ಬಹಳ ಮುದ್ದಾಗಿದೆ.

  [ಶ್ರೀಕಾಂತ್] ಕ್ಯಾಂಪ್‍ಸೈಟ್ ಯಾಕೆ, ಅಲ್ಲೀಗ್ ಹೋಗೋದು, ಸ್ಲೀಪಿಂಗ್ ಬ್ಯಾಗ್ ಹಾಸೋದು, ಕ್ಯಾಂಪ್ ಮಾಡೋದಪ್ಪ.

  [ಗಂಡಭೇರುಂಡ] ರಯ್ಯ.. ನಾನು ರೆಡಿ.

  ReplyDelete

ಒಂದಷ್ಟು ಚಿತ್ರಗಳು..