Wednesday, September 17, 2008

ಗಿಡ - ಹುಳು

ಕೀಟಗಳು ಸಸ್ಯಾಹಾರಿಗಳಾಗಿರುವುದು ಸರ್ವೇಸಾಮಾನ್ಯ ಸಂಗತಿ. ಆದರೆ ಕೆಲವು ಸಸ್ಯಗಳು ಕೀಟಾಹಾರಿಯೆಂಬುದು ಬಹಳ ದೊಡ್ಡ ವಿಶೇಷ. ಈ ಕೀಟಾಹಾರಿ ಗಿಡಗಳ ಬಗ್ಗೆ ಒಂದು ಸಣ್ಣ ಪಕ್ಷಿನೋಟವೇ ಈ ಲೇಖನದ ಪ್ರಯತ್ನ.ವಾಸ್ತವದಲ್ಲಿ ಈ ಗಿಡಗಳು ಕೀಟಗಳನ್ನು ತಿನ್ನುವುದಿಲ್ಲ, ಬದಲಿಗೆ ಅವುಗಳ ದೇಹದಲ್ಲಿನ ಸತ್ವಗಳನ್ನು (nutrients) ಹೀರಿಕೊಂಡು ದೇಹವನ್ನು ಹೊರಗೆ ಹಾಕಿ ಗೊಬ್ಬರವನ್ನಾಗಿಸಿಕೊಂಡುಬಿಡುತ್ತವೆ. ಅನೇಕ ಬಗೆಯ ಕೀಟಾಹಾರಿ ಗಿಡಗಳ ಸಂಕುಲಗಳು ಇವೆಯಾದರೂ ಡ್ರೋಸೆರಾ, ಪಿಚರ್ ಪ್ಲಾಂಟ್ ಮತ್ತು ವೀನಸ್ ಫ್ಲೈ ಟ್ರ್ಯಾಪ್ ಬಹಳ ಪ್ರಮುಖವಾದುವು. ಎಲ್ಲಾ ಪಠ್ಯಪುಸ್ತಕಗಳಲ್ಲೂ ಈ ಮೂರು ಗಿಡಗಳ ಬಗ್ಗೆ ಉಲ್ಲೇಖವಿದ್ದೇ ಇರುತ್ತೆ.

ಇವುಗಳ ಕಿರುಪರಿಚಯ ಮಾಡಿಕೊಳ್ಳೋಣ. ನಂತರ ಇನ್ನೊಂದು ವಿಶೇಷ ಕೀಟಾಹಾರಿ ಗಿಡವನ್ನು ಭೇಟಿಯಾಗೋಣ.ಡ್ರಾಸೆರಾ - Drosera rotundifolia - ಬೆಳೆಯುವ ಪ್ರದೇಶಗಳಲ್ಲಿ ಮಣ್ಣಿನ ನೈಟ್ರೇಟ್ ಸತ್ವವು ತೀರಾ ಕಡಿಮೆಯಿರುತ್ತೆ, ಹಾಗಾಗಿ, ಅವು ಹುಳುಗಳನ್ನು ಅವಲಂಬಿಸುತ್ತವೆ. ಹುಳುಗಳಲ್ಲಿನ ನೈಟ್ರೇಟುಗಳನ್ನು ಹೀರಿಕೊಳ್ಳಲು ಅವುಗಳ ಸಂಹಾರ ಮಾಡುತ್ತವೆ. ಡ್ರಾಸೆರಾ ಗಿಡವು ಬಣ್ಣಬಣ್ಣದಿಂದ ಕೂಡಿದ್ದು, ಗಿಡದಿಂದ ಹೊರಹೊಮ್ಮುವ ದ್ರವವು ಬಹಳ ಸಿಹಿಯಾಗಿರುತ್ತೆ. ಹುಳುವೊಂದು ಇದರ ಬಲೆಗೆ ಬೀಳುವುದು ಅಷ್ಟು ಕಷ್ಟದ ವಿಷಯವೇನಲ್ಲ.ಪಿಚರ್ ಪ್ಲಾಂಟ್ - Nepenthes distillatoria - ಅಷ್ಟೇನು ಭಿನ್ನವಲ್ಲ. ಸಾರಜನಕಕ್ಕಾಗಿಯೇ ಇಲ್ಲೂ ಹೋರಾಟ, ಇಲ್ಲೂ ಹುಳುವಧೆ. ಆದರೆ, ಇದು ಡ್ರಾಸೆರಾಗಿಂತ ಸ್ವಲ್ಪ ಬುದ್ಧಿವಂತ. ಇದರ ಎಲೆಗಳು ಬಟ್ಟಲಿನ ಹಾಗಿದ್ದು, ಮಳೆಯ ನೀರನ್ನು ಶೇಖರಿಸಿಕೊಳ್ಳುತ್ತೆ. ನಂತರ ಡ್ರಾಸೆರಾದಂತೆಯೇ ಸಿಹಿದ್ರವವೊಂದನ್ನು ಉತ್ಪತ್ತಿ ಮಾಡುತ್ತೆ. ಇದರ ಘಮವು ಹುಳುಗಳನ್ನು ಆಕರ್ಶಿಸುತ್ತೆ. ಗುಳುಂ ಸ್ವಾಹಾ!!ವೀನಸ್ ಫ್ಲೈ ಟ್ರ್ಯಾಪ್ - Dionaea muscipula - ಇದು ಸ್ವಲ್ಪ ಹೆಚ್ಚು ಹೊಟ್ಟೆಬಾಕ ಗಿಡವೆಂದೇ ಹೇಳಬಹುದು. ಬರೀ ಹುಳುಗಳು ಮಾತ್ರವಲ್ಲ, ಸಣ್ಣ ಸಣ್ಣ ಚೇಳುಗಳನ್ನೂ ನುಂಗಿಬಿಡಬಲ್ಲ ಸಾಮರ್ಥ್ಯ ಹೊಂದಿದೆ. ಕಾರಣವು ಅದೇ ಹಳೆಯದೇ, ಸಾರಜನಕದ ಕೊರತೆ! ಆದರೆ ಇದರ ವಿಶೇಷತೆಯೆಂದರೆ, ಹುಳು ಬಂದು ಕುಳಿತ ತಕ್ಷಣವೇ ತೆರೆದ ತಟ್ಟೆಗಳು ಮುಚ್ಚಿಕೊಂಡುಬಿಡುತ್ತೆ. ಇದಕ್ಕೆ ಮಿದುಳಾಗಲೀ, ನರಗಳಾಗಲೀ ಇಲ್ಲವಾದರೂ ಇದಕ್ಕೆ ಈ 'ಬುದ್ಧಿವಂತಿಕೆ' ಹೇಗೆ ಬಂದಿದೆಯೆಂಬುದು ಇನ್ನೂ ಬಗೆಹರಿಯದ ಪ್ರಶ್ನೆ.

ಪ್ರಕೃತಿಯು ತನ್ನ ಎಲ್ಲ ರಚನೆಗಳನ್ನೂ ಮನುಷ್ಯನಿಗೆ ಅಷ್ಟು ಸುಲಭವಾಗಿ ತಿಳಿಸುವುದಿಲ್ಲ. ಮನುಷ್ಯ ಪ್ರಕೃತಿಯ ಒಂದು ಅಂಗವಷ್ಟೆ. ಅಂತೆಯೇ ಉಳಿದ ಜೀವಿಗಳೂ ಕೂಡ. ಪ್ರಕೃತಿಯು ಸರ್ವೋಚ್ಚ. Nature is the boss!

ಪಿಂಗ್ವಿಕ್ಯೂಲ - Pinguicula primuliflora - ಎಂಬ ಇನ್ನೊಂದು ಕುತೂಹಲಕಾರಿ ಕೀಟಾಹಾರಿಯ ಬೇಟೆಯ ಸ್ಲೈಡ್ ಶೋ ಈ ಕೆಳಗೆ ಇದೆ!-ಅ
19.09.2008
2AM

9 comments:

 1. ಗುರುಗಳೇ ಏನ್ ಗೊತ್ತಾ...ನಮ್ಮ ಸ್ಕೂಲಲ್ಲಿ multimedia presentation ಅಂತ ಇರ್ತಿತ್ತು...ಸ್ಲೈಡ್ ಗಳು ಮತ್ತು ಮೂವೀಗಳನ್ನು ತೋರ್ಸ್ಕೊಂಡು ಫಿಸಿಕ್ಸು, ಕೆಮಿಸ್ಟ್ರಿ ಪಾಠಗಳನ್ನೆಲ್ಲಾ ಹೇಳಿಕೊಡುತ್ತಿದ್ದರು.ಇವತ್ತು ಬಯಾಲಜಿ ನೂ ನೋಡಿದ ಹಾಗಾಯ್ತು. ನೀವು ಅದ್ಭುತ ಟೀಚರ್ರು ಗುರುಗಳೆ..ನಿಜ್ವಾಗ್ಲು !

  ಸೂಪರ್ ಪೋಸ್ಟು...actually ಸೂಪರ್ ಅನ್ನೋದು ಕಡಿಮೇನೆ...ಅದಕ್ಕಿಂತ ಚೆನ್ನಾಗಿರೋ ಗುಣವಾಚಕ ಶಬ್ದನ ನೀವೆ ಹುಡುಕಿಕೊಂಡು, ಅದನ್ನ ನಾನೇ ನಿಮಗೆ ಹೆಳಿದೆ ಅಂತ ಅಂದುಕೊಂಡುಬಿಡಿ !

  ReplyDelete
 2. super slide show ... scary alwa? nam karulalli aago absorption thara .... :-)

  ReplyDelete
 3. ishtu bEga sasyashaashtrada taragati mugidE hoytalla!

  continue maadi sir :)

  ReplyDelete
 4. ಅರುಣ್, ಸಸ್ಯಗಳಿಗೂ ಜೀವ ಇದೆ ಅಲ್ವಾ!..

  -www.dhee-deepa.blogspot.com

  ReplyDelete
 5. [ಶ್ರೀಧರ] ಆದಾಗ.

  [ರಮೇಶ್] ಯಾಕೆ ಈ ಪ್ರಶ್ನೆ???? :-೦

  [ಅಂತರ್ವಾಣಿ] ಮುಂದಿನ ತರಗತಿಯಲ್ಲಿ ನೋಡೋಣ.. ;-)

  [ವಿಜಯಾ] ಕರುಳಲ್ಲಿ ಆಗುವ aborption ಕ್ರಿಯೆ scary ನಾ??????????

  [ಲಕುಮಿ] ಬಯಾಲಜಿ ಓದ್ಬೇಕು ಅಂತ ಅದಕ್ಕೇ ಹೇಳೋದು!! ;-)

  ReplyDelete
 6. ನಿಮ್ಮ ಬರಹಗಳನ್ನೋದಿ ತುಂಬಾ ಸಂತೋಷವಾಗುತ್ತದೆ.. ನಿಮ್ಮ ಶಾಲೆಯ ವಿದ್ಯಾರ್ಥಿಗಳಿಗೋರ್ವ ಉತ್ತಮ ಶಿಕ್ಷಕ ಸಿಕ್ಕಿರುವುದು ಅವರ ಅದೃಷ್ಟ :)

  ReplyDelete
 7. [ತೇಜಸ್ವಿನಿ ಹೆಗಡೆ] ನಾನು ಪರಿಸರ ಶಿಕ್ಷ್ಣಣ ಮೇಷ್ಟ್ರಾಗಬೇಕೆಂಬ ಆಸೆ. :-)

  ReplyDelete

ಒಂದಷ್ಟು ಚಿತ್ರಗಳು..