Saturday, June 28, 2008

ಅಪ್ಪನ ಕಥೆ ಭಾಗ - ೫

ಶಾಲೆಯಲ್ಲಿ ಒಬ್ಬ ಹುಡುಗನ ತಂದೆ ಬಂದು ಇಂಗ್ಲೀಷ್ ಟೀಚರ್ ಮೇಲೆ ರೇಗಾಡುತ್ತಿದ್ದರು.

"ಇದೇನು, disk ಅಂತ ಬರೆಯೋ ಕಡೆ dick ಅಂತ ಬರೆದಿದ್ದಾನೆ ನನ್ನ ಮಗ, ಇದನ್ನು correct ಅಂತ ಹಾಕಿದ್ದೀರ, ನೀವೆಂಥಾ ಇಂಗ್ಲೀಷ್ ಟೀಚರ್ರು ರೀ??"

ಆ ಪೋಷಕರನ್ನು ಸಮಾಧಾನ ಮಾಡಲು ಪಾಪ ಸ್ತ್ರೀ ವರ್ಗದ ಟೀಚರುಗಳು ಹೈರಾಣಾಗಿ ಹೋಗಿದ್ದರು. ಆಮೇಲೆ ನಾವು ನಾಲ್ಕೈದು ಜನ ಪುರುಷವರ್ಗದವರು ಹೇಗೋ ಅವರ ಕೋಪ ಶಮನ ಮಾಡಿ ಮನೆಗೆ ಕಳಿಸಿದೆವು. ನಂತರ ಚಳಿಯಲ್ಲೂ ಬೆವತ ನಾನು ಮುಖವನ್ನೊರೆಸಿಕೊಂಡು ಕಂಪ್ಯೂಟರ್ ಲ್ಯಾಬಿನ ಪಕ್ಕದಲ್ಲೇ ಇರುವ "ರಿಸೋರ್ಸ್ ರೂಮ್"ಗೆ ಹೋದೆ. ಅಲ್ಲಿ ಶಾಲೆಯ ಕೌನ್ಸೆಲರ್ ಒಬ್ಬರೇ ಕೂತು ಪ್ಲಾಸ್ಟಿಕ್ ಆಟಿಕೆಗಳಿಂದ ಏನೋ ಆಟವಾಡುತ್ತಿದ್ದರು. ಈ ನಮ್ಮ ಶಾಲೆಯಲ್ಲಿ ಕೌನ್ಸೆಲರ್ ಅಂತ ಒಬ್ಬ ಮಕ್ಕಳ ಮನಶ್ಶಾಸ್ತ್ರಜ್ಞರನ್ನೂ ಕೆಲಸಕ್ಕಿಟ್ಟುಕೊಂಡಿರುವುದು ಹೆಮ್ಮೆಯ ವಿಷಯ. Education field-ಉ ಬೆಳೆಯುತ್ತಿದೆ ಎಂದು ಖುಷಿಯಾಗುತ್ತಿರುತ್ತೆ.

ಅವರ ಮುಂದೆ ಗೊಣಗಿದೆ. "ಎಂಥಾ ದರಿದ್ರ ಪೇರೆಂಟು! ಹೆಂಗಸರ ಹತ್ತಿರ ಹೇಗೆ ಮಾತಾಡ್ಬೇಕು ಅಂತಾನೂ ಗೊತ್ತಿಲ್ಲ. ಹೋಪ್‍ಲೆಸ್ ಫೆಲೋಸ್".

ಅವರು ಆಟಿಕೆಯನ್ನು ಕೈಯಲ್ಲಿ ಹಿಡಿದುಕೊಂಡೇ ನನ್ನೆಡೆಗೆ ಬಂದರು.

"ಮಿಸ್ಟರ್ ಅರುಣ್, ನೀವು ಬರೋಕೆ ಮುಂಚೆ ಇನ್ನೊಬ್ಬ ಪೇರೆಂಟು ಪಿ.ಟಿ. ಮೇಷ್ಟ್ರ ಮೇಲೆ ಕೆಂಡ ಕಾರ್ತಾ ಇದ್ರು. 'ನಾವೇ ನಮ್ ಮಕ್ಕಳನ್ನ ಹೊಡೆಯಲ್ಲ, ನೀವ್ ಯಾರ್ರೀ ಹೊಡೆಯೋಕೆ?' ಅಂತ. ಪುಣ್ಯಕ್ಕೆ ಹೆಡ್ ಮೇಡಮ್ಮು ಮಧ್ಯೆ ಬರದಿದ್ದರೆ ಪಿ.ಟಿ. ಮೇಷ್ಟ್ರ ಹೆಣ ಬಿದ್ದಿರ್ತಿತ್ತು ಅನ್ಸುತ್ತೆ!" ಅಂದು ಸ್ವಲ್ಪ ಹೊತ್ತು ಸುಮ್ಮನಾಗಿ, "ಅಲ್ಲಾ ಸಾರ್ ನೀವೇ ನೋಡಿ, ಅಮ್ಮಂದಿರು ಮಕ್ಕಳನ್ನು ಮುದ್ದಿಸ್ತಾರೆ, ಅಪ್ಪಂದಿರು ರಕ್ಷಿಸ್ತಾರೆ! ಇದು ನ್ಯಾಚುರಲ್ ಅರುಣ್.. ಮಕ್ಕಳಿಗೆ ತೊಂದರೆ ಆಗಿದೆ ಅಂದ್ರೆ ತಂದೆಯರು ರಾಕ್ಷಸ ಬೇಕಾದ್ರೂ ಆಗ್ತಾರೆ, ದೇವರು ಬೇಕಾದ್ರೂ ಆಗ್ತಾರೆ" ಎಂದರು..

"ಇವೆಲ್ಲಾ ಬರೀ ಮನುಷ್ಯರಲ್ಲಿ ಅಲ್ವಾ? ಬೇರೆ ಪ್ರಾಣಿಗಳಲ್ಲಿ ಹೀಗಿಲ್ವಲ್ಲಾ.. ಎಲ್ಲಾ ಮರಿಗಳೂ ತಾಯಿಯ ಮೊರೆ ಹೋಗುತ್ತವಲ್ಲಾ?"

"ಹೌದು. ಆದರೆ ಕೇವಲ ಮನುಷ್ಯರಲ್ಲಿ ಅಲ್ಲ. ಮನುಷ್ಯರಿಗೆ ಈ ಗುಣ ಎಲ್ಲಿಂದ ಬಂತು ಅಂತ ಗೊತ್ತಾ?"

"ಮಂಗನಿಂದ ಬಂತೇ? ಆದ್ರೆ ಮಂಗಗಳೂ ಸಹ ತನ್ನ ತಾಯಿಯನ್ನೇ ತಬ್ಬಿಕೊಂಡಿರುತ್ತವಲ್ಲಾ? ಅಪ್ಪನ ಜೊತೆ ಎಲ್ಲಿರುತ್ತೆ?"

ಪುರುಷರು

"ನೀವು ತಪ್ ತಿಳಿದಿದ್ದೀರ. ಬಹುಶಃ ಎಲ್ಲರಂತೆ ನೀವೂ ಕೋತಿಗಳಿಂದಲೇ ಮನುಷ್ಯ ವಿಕಾಸಗೊಂಡಿರುವುದು ಎಂದು ನಂಬಿದ್ದೀರೆನಿಸುತ್ತೆ"

"ಅದು ತಪ್ಪೇ?"

"ಹೌದು. ಕೋತಿ ಮತ್ತು ಮನುಷ್ಯ ಎರಡು ಸ್ಪೀಷೀಸುಗಳೂ ಒಂದೇ ಪ್ರೈಮೇಟ್ ಜಾತಿಯಿಂದ ಬಂದಿರುವುದು. ಅದಕ್ಕೇ ಕೋತಿಯ ಕೆಲವು (ಕೆಲವೇನು, ಹಲವು) ಗುಣಗಳು ಮನುಷ್ಯನಿಗೆ, ಮನುಷ್ಯನ ಕೆಲವು ಗುಣಗಳು ಕೋತಿಗಳಿಗೆ ಇರುವುದು. ಅಂಥಾ ಒಂದು ವಿಶೇಷವನ್ನು ನಿಮಗೆ ತೋರ್ಸ್ತೀನಿ ಬನ್ನಿ" ಎಂದು ಕುರ್ಚಿ ತೋರಿಸಿ ಕುಳಿತುಕೊಳ್ಳಲು ಹೇಳಿ ತಮ್ಮ ಕೈಯಲ್ಲಿದ್ದ ಆಟಿಕೆಯನ್ನು ಮೇಜಿನ ಮೇಲಿಟ್ಟರು. ಅದು ಒಂದು puzzle ಆಟವಾಗಿತ್ತು. ನನ್ನ ಜೊತೆ ಮಾತನಾಡುತ್ತ ಆಡುತ್ತಾ ಆ ಪ್ಲಾಸ್ಟಿಕ್ ಕಡ್ಡಿಗಳನ್ನೆಲ್ಲಾ ಜೋಡಿಸಿ ಒಂದು ಇಲಿ ಮಾಡಿದ್ದರು.

"ಇಲ್ಲಿ ನೋಡಿ, ಈ ಮರಿಗಳು ತಾಯಿಯ ಬಳಿ ಇರುತ್ತವೆ ನಿಜ. ಹಾಲುಣಿಸೋದು ತಾಯಿಯಲ್ಲವೇ, ಅದಕ್ಕೆ. ಆದರೆ ಭಯವಾದಾಗ, ನಿಸ್ಸಹಾಯಕ ಎನ್ನಿಸಿದಾಗ, ರಕ್ಷಣೆ ಬೇಕಾದಾಗ ತಂದೆಯನ್ನು ತಬ್ಬಿಕೊಂಡುಬಿಡುತ್ತೆ. ಯಾರಾದರೂ ಅದರ ಹತ್ತಿರ ಹೋದರೆ ಸಾಕು ಕೊಲೆ, ಕೊಲೆ!!! ನೋಡಿದ್ದೀರಾ ಅದರ ಹಲ್ಲುಗಳು ಹೇಗೆ ಕತ್ತಿಯ ಹಾಗಿರುತ್ತೆ ಅಂತ?"

"ನೋಡಿ ಈ ಚಿತ್ರ."

"ಅಯ್ಯೋ, ಇದು ಕೋತಿ ಅಲ್ವಾ?"


ಅಪ್ಪ - ಮಗ(ಳು)

"ನಾವು ಇಲ್ಲಿ ನೋಡುವ ಸಾಧಾರಣ ಕೋತಿಗಳಲ್ಲ ಇವು. ಇದು ಬಬೂನ್ ಅಂತ. ನಾನು ಹೋದ ವರ್ಷ ಆಫ್ರಿಕಾದ ಒಂದು ಕಾಡಿನ ಶಾಲೆಯ ಮಕ್ಕಳನ್ನು ಸ್ಟಡಿ ಮಾಡೋಕೆ ಹೋಗಿದ್ದೆ. ನಿಮ್ಮ ಹಾಗೇ ನಾನೂ ಟ್ರೆಕ್ಕರ್ರು. ಮೌಂಟ್ ಕಿಲಿಮಂಜಾರೋ ಪರ್ವತಾರೋಹಣ ಮಾಡುವ ಸಮಯದಲ್ಲಿ ಅಲ್ಲಿ ನನಗೆ ಬಿದ್ದ ದೃಶ್ಯಗಳಿವು."

"ಅದ್ಭುತ!"

"ಹೌದು. ಇಲ್ಲಿ ನೋಡಿ, ಬೇರೆ ಬಬೂನ್ ಬರ್ತಿದೆ, ಆಗ ತಂದೆ ರಕ್ಷಣೆ ಕೊಡ್ತಿದೆ. ತಾಯಿಯೆಲ್ಲೋ ನಾಪತ್ತೆ. Actually, ಈ ಬಬೂನ್‍ಗಳು ಎಲ್ಲಾ ವಾನರಗಳಂತೆ ಬಹುಸಂಗಾತಿಗಳುಳ್ಳ ಪ್ರಾಣಿಗಳು. ಒಂದೇ ವಾರದಲ್ಲಿ ಹತ್ತು ಹೆಣ್ಣು ಬಬೂನುಗಳ ಸಂಗಾತಿಯಾಗಿರುವ ಸಾಧ್ಯತೆಯಿದೆ. ಅಂತೆಯೇ ಹೆಣ್ಣು ಬಬೂನುಗಳು ಕೂಡ. ಒಂದೇ ವಾರದಲ್ಲಿ ಹತ್ತು ಗಂಡು ಬಬೂನುಗಳ ಮಿಲನ ಮಾಡಿಕೊಂಡಿರುತ್ತೆ. ಅಷ್ಟಿಲ್ಲದೆ ಹಿರಿಯರು ಹೇಳ್ತಾರಾ, ಮನುಷ್ಯನ ಮನಸ್ಸು ಮಂಗನಂತೆ ಅಂತ?? ಇಷ್ಟೆಲ್ಲಾ ಇದ್ರೂ ತಮ್ಮ ಮರಿಗಳು ತಮಗೆ ಗೊತ್ತಿರುತ್ತವೆ. ತಾಯಿಗೆ ಅದು ಸಹಜ. ಇಲ್ಲಿ ವಿಶೇಷ ಎಂದರೆ ತಂದೆಗೂ ಗೊತ್ತಿರುತ್ತೆ. ಒಂದು ಗುಂಪಿನಲ್ಲಿ ಅರವತ್ತು ಬಬೂನುಗಳಿದ್ದರೆ ತಮ್ಮ ತಮ್ಮ ಸಂಗಾತಿಗಳು ಯಾರು ಯಾರು ಮತ್ತು ಮರಿಗಳು ಯಾರು ಅಂತ!"

ಹೊರಗಿನವರಿಂದ ರಕ್ಷಣೆ ನೀಡುತ್ತಿರುವ ಅಪ್ಪ


ಹಲ್ಲೋ ಇದು ಕತ್ತಿಯೋ?

"ಅಚ್ಚರಿ, ಆದರೆ ಒಂದೇ ಹೆಣ್ಣು ಬಬೂನು ನಾಲ್ಕು ಗಂಡಿನೊಂದಿಗೆ ಮಿಲನವಾಗಿದ್ದರೆ? ಆ ಮರಿಗಳ ತಂದೆ ಯಾರು ಎಂದು ಹೇಗೆ ತೀರ್ಮಾನ ಆಗುತ್ತೆ?" ಒಳ್ಳೇ ಉದಯಾ ಟಿ.ವಿ. ಸೀರಿಯಲ್ಲಿನವರ ಥರ ಪ್ರಶ್ನೆ ಹಾಕಿದೆ.

"ಮರಿಗಳನ್ನು ಹಡೆಯುವ ಸಮಯದಲ್ಲಿ ಜೊತೆಗೆ ಯಾವ ಗಂಡು ಇರುತ್ತೋ ಅದೇ ಮರಿಗಳ ಅಧಿಕೃತ ತಂದೆ. ಬೇರೆ ಗಂಡು ಹತ್ತಿರ ಬಂದರೆ ಯುದ್ಧ, ಜಗಳ, ಕದನ!!"

"ಓಹ್ ಹಾಗೆ!"

"ಮರಿಗಳು ದೊಡ್ಡದಾದ ಮೇಲೆ ಹೆಣ್ಣಿಗೆ ಮತ್ತು ಮರಿಗಳಿಗೆ ಆಹಾರ ತಂದುಕೊಡುವ ಜವಾಬ್ದಾರಿ ಕೂಡ ತಂದೆಯದೇ ಅನೇಕ ಬಾರಿ!"

"ಅಪ್ಪಾ, ನಂಗೆ ಭಯ ಆಗುತ್ತೆ ಅವನನ್ನು ನೋಡಿದರೆ..."

"ಈಗ ಗೊತ್ತಾಯ್ತಾ, ತಂದೆಗಳಿಗೆ ಮಕ್ಕಳನ್ನು ರಕ್ಷಣೆ ಮಾಡುವ ಬುದ್ಧಿ ಎಲ್ಲಿಂದ ಬಂದಿದೆ ಅಂತ?"

"ಹೆ ಹ್ಹೆ ಹ್ಹೆ.. ಹ್ಞೂಂ. ಆದರೆ....??"

"ಆದ್ರೆ ಗೀದ್ರೆ ಏನೂ ಇಲ್ಲ. ಪೋಷಕರನ್ನು ಬೈಬೇಡಿ. ಟೀಚರುಗಳು ಮಕ್ಕಳನ್ನು ಸರಿಯಾದ ದಾರಿಗೆ ತರಬೇಕು. ತಿದ್ದುವಾಗ ಸರಿಯಾಗಿ ತಿದ್ದಬೇಕು. ಹೊಡೆಯದೇ ಪಾಠ ಹೇಳಬೇಕು. At least, ಹಣ ಕೊಟ್ಟು ಮಕ್ಕಳನ್ನು ಸ್ಕೂಲಿಗೆ ಸೇರಿಸಿರುವ ಪೋಷಕರಿಗೋಸ್ಕರ!!"

ಬಬೂನ್ ಸೈನ್ಯ

"ನೀವು ಕೋತಿ ಸೈಕಾಲಜಿಯನ್ನೂ ಸ್ಟಡಿ ಮಾಡ್ತೀರಾ?"

"ಹೌದು. ನಿಮ್ಮ ಸೈಕಾಲಜಿ ಕೂಡ!!"

"ನಂಗೆ ಟೈಮ್ ಆಯ್ತು ಸಾರ್, ನಾನ್ ಹೊರಡುತ್ತೇನೆ." ಎಂದು ಕಾಲ್ಕಿತ್ತೆ.

......................................................................................

ಬಬೂನ್ (Papio hamadryas) - ಇದು ಒಂದು ಬಗೆಯ ಬಬೂನ್ ಅಷ್ಟೆ - ಎಂಬ ವಾನರವು ಮನುಷ್ಯನ ಪೂರ್ವಜರಿಗೆ ಬಹಳ ಹತ್ತಿರದ ಸಂಬಂಧಿ. ಸಾಮಾನ್ಯವಾಗಿ ವಾನರಗಳಲ್ಲಿ ಪಾಲಿಗಮಿ (ಬಹುಸಂಗಾತಿಗುಣ) ಕಂಡುಬಂದರೂ ಮರಿಗಳ ವಿಷಯಕ್ಕೆ ಬಂದಾಗ ವಿಪರೀತ ರಕ್ಷಣಾಗುಣಗಳನ್ನುಳ್ಳವಾಗಿರುತ್ತವೆ. ಮನುಷ್ಯನಲ್ಲಿ ಪಾಲಿಗಮಿಯಿಲ್ಲದಿರಲು ಕಾರಣ ಸಂಸ್ಕೃತಿಯಷ್ಟೆ. (ಅನಧಿಕೃತವಾಗಿ ಮನುಷ್ಯನ ಮನಸ್ಸು ಮಂಗನಂತೆ ಎಂದು ನಿರೂಪಣೆಯಾಗಿರುವುದು ಇಲ್ಲಿ ಅಪ್ರಸ್ತುತ).

ಕದನಕ್ಕೆ ಸಿದ್ಧ

ತಂದೆ ಬಬೂನ್‍ಗಳು ಮಕ್ಕಳನ್ನು ರಕ್ಷಣೆ ಮಾಡಿಕೊಳ್ಳುವ ಬಗೆಯನ್ನು ಮೇಲೆ ವಿವರಿಸಲಾಗಿದೆಯಾದರೂ ಅದು ಒಂದು ಸಂಗಾತಿಯನ್ನು ಹೊಂದಲು ಪಡುವ ಕಷ್ಟಗಳು ಅಷ್ಟಿಷ್ಟಲ್ಲ. ಹೆಣ್ಣುಗಳನ್ನು ಇಂಪ್ರೆಸ್ ಮಾಡಬೇಕು (ಸಾಧಾರಣವಾಗಿ ಕೋತಿಗಳಲ್ಲಿ ಹೆಣ್ಣನ್ನು ಗಂಡು ಒಪ್ಪಿಕೊಳ್ಳಬೇಕು ಇಂಪ್ರೆಸ್ ಆಗಿ, ಮತ್ತು ಗಂಡನ್ನು ಹೆಣ್ಣು ಒಪ್ಪಬೇಕು), ನಂತರ ಗುಂಪಿನ ದೊಡ್ಡ ಬಬೂನ್‍ಗಳೊಡನೆ ಕಾದಾಡಿ ಸ್ವಯಂವರದಲ್ಲಿ ಗೆಲ್ಲಬೇಕು, ನಂತರ ಬೇರೆ ಹೆಣ್ಣನ್ನು ಇಂಪ್ರೆಸ್ ಮಾಡಬೇಕು, ಮತ್ತೆ ಬೇರೆ ಕಡೆ ಜಗಳ.. ಹಾಗಾಗಿ ಜೀವಕ್ಕೆ ಎಂದೆಂದಿಗೂ ಕುತ್ತೇ! ಜಯವಿರುವವರೆಗೂ ಭಯವಿಲ್ಲ.

ನಮ್ಮ ಸಂಸಾರ...

ಇತರ ಬಬೂನ್ ಸ್ಪೀಷೀಗಳು ಇಂತಿವೆ. ಗುಣಲಕ್ಷಣಗಳಲ್ಲಿ ಅಷ್ಟೇನು ಭಿನ್ನತೆಯಿಲ್ಲ.

1. ದಕ್ಷಿಣ ಆಫ್ರಿಕಾದ ಬಬೂನ್ - Papio hamadryas
2. ಇಥಿಯೋಪಿಯಾದ ಬಬೂನ್ - Papio anubis
3. ಗಿನಿಯಾದ ಬಬೂನ್ - Papio papio
4. ಪೂರ್ವ ಆಫ್ರಿಕಾದ ಬಬೂನ್ - Papio cynocephalus
5. ಚಕ್ಮಾದ ಬಬೂನ್ - Papio ursinus


ಮುಂದಿನ ಭಾಗದಲ್ಲಿ ಬೇರೊಂದು ಅಪ್ಪನ ಕಥೆಯ ಪುಟಗಳನ್ನು ತೆರೆದಿಡುವ ಪ್ರಯತ್ನ ಮಾಡುತ್ತೇನೆ.

-ಅ
28.06.2008
7.20PM

16 comments:

 1. class !!! ನನಗೆ ಅನ್ನಿಸಿದ್ದೇನು ಗೊತ್ತಾ ? "my daddy strongest" ಅಂತ ಹೇಳ್ಬೇಕು ಅಂತ !!

  ReplyDelete
 2. nam bhashel helodadre as usual Chindi Chitraanna! :)

  barli barli ee tharaddu innashtu

  ReplyDelete
 3. ಮೊದಲ ಲೈನ್ ಓದಿಯೇ ಅರ್ಧ ನಿಮಿಷ ನಗು ಬಂದಿತು. ಬಬೂನ್ ಅಪ್ಪನ ಕಥೆ ಗುಡ್!

  ReplyDelete
 4. he he he first line chennagidhe... ;-)
  heege "appana" "ammana" "makkaLa" "thaatha" na saraNigaLu barabekaagi nanna korike...enantheeya??

  ReplyDelete
 5. ಈ ಸರಣಿ ಚೆನ್ನಾಗಿ ಮೂಡಿಬರುತ್ತಿದೆ ಅರುಣ್... ಸರಳವಾಗಿ ಎಲ್ಲರಿಗೂ ಮನದಲ್ಲಿ ಉಳಿಯುವ ಹಾಗಿದೆ... ನೀವು ಇದನ್ನು ಪುಸ್ತಕ ರೂಪದಲ್ಲಿ ಯಾವಾಗ ಪ್ರಕಟಿಸುತ್ತೀರಿ?

  ReplyDelete
 6. ಸಕತ್!
  ಮರಿ ತೇಜಸ್ವಿಯವರೇ, ಇನ್ನೂ ಜಾಸ್ತಿ ಬರೆಯಿರಿ, ಇನ್ನೂ ಹದವಾಗಿ ಬರೆಯಿರಿ.
  ಕೇಶವ

  ReplyDelete
 7. ಹಂ ಎಲ್ಲಾ ಭಾಗಗಳನ್ನ ಓದಿದ ತರುವಾಯ ನಿಮಗೆ google talk ನಲ್ಲೇ ಹೇಳಿರಿತಿದ್ದೆ ನನ್ನ ಅನಿಸಿಕೆಯನ್ನೆಲ್ಲಾ..
  ಆದರೆ ಈ ಭಾಗ-೫ ಓದಿದ ನಂತರ ಪದಗಳೇ ಹೊರಡ್ತಿಲ್ಲ ಮನಸಿನ ಅಂಗಳದಿಂದ ಯಾಕೋ ಗೊತ್ತಿಲ್ಲ.

  ಇಲ್ಲಿ ಮನುಷ್ಯರ ಮತ್ತು ಪ್ರಾಣಿಗಳ ಕಂಪ್ಯಾರಿಸನ ಚೆನ್ನಾಗಿ ಮೂಡಿಬಂದಿದೆ. ಈ ಭಾಗದಲ್ಲಿ ಮೊದಲ ನಾಲ್ಕು ಭಾಗಗಳಿಗಿಂತ ವಿಭಿನ್ನತೆಯ ಶೈಲಿಯು ನನಗೆ ಕಂಡುಬಂದಿತು..

  ಮುಂದಿನ ಭಾಗ ಆದಷ್ಟು ಬೇಗ ಬರಲಿ ಅದನ್ನು ಓದಲು ಕಾತುರದಿಂದಿರುವೆ...

  ReplyDelete
 8. ಆರುಣ್,
  ಹತ್ತಿರ ಅ೦ದ್ರೆ ಎಷ್ಟು ಹತ್ತಿರ? ಚಿ೦ಪಾ೦ಜಿಗಿ೦ತಲೂನಾ?

  ReplyDelete
 9. very interesting ... aadre heeg andre adu cliche aagutte nin blog nalli :-)
  aarushi tande thara exception case galoo irtaare ... ildiddre rule prove aagolvalla :-)

  ReplyDelete
 10. [ವಿಜಯಾ] ಬಬೂನುಗಳಲ್ಲೂ ಸಹ ಹಿರಣ್ಯಕಶ್ಯಪರು, ದಶರಥರು ಇರುತ್ತವೆ.

  [ಅನ್ನಪೂರ್ಣ] ಬಹಳ ಧನ್ಯವಾದಗಳು Ana... :-)

  [ಶಶಾಂಕ] ಅಪ್ಪನ ವಿಷಯದಲ್ಲಿ ಮಾತ್ರ ಹೌದು.

  [ಪುಷ್ಪಲತಾ] ವಿಮರ್ಶೆಗೆ ಕೃತಜ್ಞ.

  [ಕೇಶವ್] ಪ್ರಯತ್ನ ಮಾಡ್ತೀನಿ ಸರ್. 'ಮರಿ' ತೇಜಸ್ವಿಯೆಂದಿದ್ದನ್ನು ನಾನು 'ಕಾಂಪ್ಲಿಮೆಂಟ್' ಎಂದುಕೊಳ್ಳುತ್ತೇನೆ ಸಧ್ಯಕ್ಕೆ.. ;-)

  [ಶ್ರೀ] ಪುಸ್ತಕ ರೂಪದಲ್ಲಿ ತರುವ ಐಡಿಯಾ ಅಂತೂ ಅಷ್ಟು ಗಾಢವಾಗಿಲ್ಲ ಬಿಡಿ.. ಆದ್ರೆ ಈ ಕಾನ್ಸೆಪ್ಟು ಚೆನ್ನಾಗಿದೆ, ಇದರ ಬಗ್ಗೆ ಪುಸ್ತಕ ಮಾಡೋದು. ಅದಕ್ಕೆ ಇನ್ನಷ್ಟು ಕೆಲಸ ಅಗತ್ಯ. ಅದನ್ನು ಮಾಡಲು ಪ್ರಯತ್ನ ಮಾಡ್ತೀನಿ ಮೊದಲು.. ಎಲ್ಲಾ ಪ್ರಾಣಿಗಳನ್ನೂ ಸ್ವತಃ ನಾನೇ ಸ್ಟಡಿ ಮಾಡಿ ಬರೆಯುವಂತಾಗುವ ಕಾಲ ಬಂದಾಗ ಪುಸ್ತಕರೂಪ ಬಂದೀತು. ಒಳ್ಳೇ ಪ್ರೋತ್ಸಾಹ, ತುಂಬ ಧನ್ಯವಾದಗಳು.. :-)

  [ಶ್ರೀಧರ] ಅಪ್ಪನ, ಅಮ್ಮನ,ಅಕ್ಕನ - ಅಂತ ಹುಬ್ಳಿ ಭಾಷೆಯಲ್ಲಿ ಬೈತಾ ಇದೀಯ ಅಂದ್ಕೊಂಡೆ.

  [ರಾಜೇಶ್ ನಾಯ್ಕ] ಹೆ ಹ್ಹೆ ಹ್ಹೆ.. ನಂಗೂ ಅಷ್ಟೆ ಸರ್, ಆ ಸಮಯದಲ್ಲಿ ನಗು ಬಂದಿತ್ತು.

  [ಸುಶೀಲ್ ಸಂದೀಪ್] ಚಿಂಚಿ!!

  [ಲಕುಮಿ] ಅಪ್ಪ ಹಾಕಿದ ತುಳಸಿ ಮರಕ್ಕೆ ನೇಣು ಹಾಕ್ಕೊ. ;-)

  [ಶ್ರೀಕಾಂತ್] ಥ್ಯಾಂಕ್ಸ್ ಕಣಪ್ಪ.

  ReplyDelete
 11. blogal waste aagtide!! yavdaaroo website li baryoke aagidre suoeraagirodu!

  ReplyDelete
 12. waste enoo illa bidO... mane li paper mele barkondu naanobba Odhkotaa idde.. eega ondu hattu jana Odtidaare. beLavaNige alva? :-)

  ReplyDelete
 13. Superb post! baravaNige shyli tumba chennagide...

  ReplyDelete

ಒಂದಷ್ಟು ಚಿತ್ರಗಳು..