Wednesday, May 28, 2008

ಅರಸ ಕೇಳ್, ಆಯುಷ್ಯವುಳ್ಳರೆ...

ಸಿಕೊಯಿಯಾದಂತೆ ಜೀವನೋತ್ಸಾಹ ಇದ್ದರೆ ಸಾಕೇ? ಆಯುಷ್ಯ ಕೂಡ ಇರಬೇಕಲ್ಲವೇ?

ಗಿಡಮರಗಳಿಗೆ ವಿಪರೀತ ಆಯಸ್ಸು ಕೊಟ್ಟಿದೆ ಪ್ರಕೃತಿ. ಬೇಕಾದ್ದೇ. ಆದರೂ ನಗರೀಕರಣ, ಬೆಳವಣಿಗೆ ಅನ್ನೋ ಹೆಸರಲ್ಲಿ ಗಿಡಮರಗಳ ಆಯಸ್ಸು ಕಡಿಮೆ ಆಗುತ್ತಿದೆ ಎನ್ನುವುದು ದುರಂತ.ನಾವೇನೋ ಎಪ್ಪತ್ತೆಂಭತ್ತು ವರ್ಷ ಬದುಕಿ ಹೋಗುತ್ತೇವೆ. ಆದರೆ ಪ್ರಾಣಿಗಳು? ನಮ್ಮ ಮನೆಯಲ್ಲಿದ್ದ ನಾಯಿ ಹೋದ ವರ್ಷ ಸತ್ತು ಹೋಯಿತು, ಅದಕ್ಕೆ ಇಪ್ಪತ್ತು ವರ್ಷ ವಯಸ್ಸಾಗಿತ್ತೆಂದರೆ ಕೇಳಿದವರೆಲ್ಲಾ ಕಣ್ಣರಳಿಸಿ "ಇಪ್ಪತ್ತು ವರ್ಷಾನಾ, ಪೂರ್ಣಾಯಸ್ಸು ಬಿಡಿ" ಅನ್ನುತ್ತಿದ್ದರು. ಬೆಕ್ಕುಗಳೂ, ಹುಲಿಗಳೂ ಅಷ್ಟೆ, ನಾಯಿಗಳಷ್ಟೇ ಆಯಸ್ಸುಳ್ಳದ್ದು. ಕಾಡಿನಲ್ಲಿರುವಾಗ ಪ್ರಾಣಿಗಳು ಬೇಗ ಸಾಯುತ್ತವೆ, ಮೃಗಾಲಯಗಳಲ್ಲಿ sanctuaryಗಳಲ್ಲಿ ಹೆಚ್ಚು ದಿನಗಳ ಕಾಲ ಬದುಕುತ್ತವೆ. ಆಹಾರಕ್ಕೆ, ಸಂಗಾತಿಗೆ, ಮಲಗುವುದಕ್ಕೆ, ನೀರು ಕುಡಿಯುವುದಕ್ಕೆ ಎಲ್ಲಕ್ಕೂ ಜಗಳ ಕಾಡಿನಲ್ಲಿ. ಅಲ್ಲಿ ಡಾರ್ವಿನ್ ಸಿದ್ಧಾಂತವನ್ನು ನೀಯತ್ತಿನಿಂದ ಪಾಲಿಸಬೇಕಾಗುತ್ತದೆ. Survival of the fittest.ಸಿಂಹವು ಕಾಡಿನ ಅರಸನಾದರೂ ಮೂವತ್ತು ವರ್ಷವಾದ ಮೇಲೆ, ನರಿಗಳ, ಹದ್ದುಗಳ ಆಹಾರ! ಮೊಸಲೆಗಳಿಗೆ, ಆನೆಗಳಿಗೆ ಮನುಷ್ಯನ ಹೊರೆತು ಹೆಚ್ಚು ಶತ್ರುಗಳಿಲ್ಲ. ಹಾಗಾಗಿ ಎಪ್ಪತ್ತೆಂಭತ್ತು ವರ್ಷಗಳು ಉಸಿರಾಟವನ್ನಾಡುತ್ತವೆ. ಕಾಗೆ ಗುಬ್ಬಚ್ಚಿಗಳು ಇಪ್ಪತ್ತು ವರ್ಷ ಬದುಕಿದರೆ, ಹದ್ದುಗಳು ಐವತ್ತು ವರ್ಷ ಜೀವಿಸುತ್ತವೆ. ಅಚ್ಚರಿಯೆಂದರೆ ಗಿಣಿಗಳು ಬಂಧನದಲ್ಲಿಲ್ಲದಿದ್ದರೂ ಕನಿಷ್ಠಪಕ್ಷ ಎಂಭತ್ತು ವರ್ಷ ಆಯಸ್ಸು ಹೊಂದಿರುತ್ತವೆ. ಟರ್ಕಿ ಬಜರ್ಡ್ ಅನ್ನೋ ಕೋಳಿ ಜಾತಿಯ ಪಕ್ಷಿಯು ಮತ್ತು ಹಂಸವೆಂದೇ ಗುರುಸಿಕೊಳ್ಳುವ ಬಾತುಕೋಳಿಗಳು ನೂರನ್ನು ದಾಟುವ ಪಕ್ಷಿಗಳು.ಭೂಗ್ರಹದ ಅತಿದೊಡ್ಡ ಸಸ್ತನಿ ನೀಲಿ ತಿಮಿಂಗಿಲ ಐವತ್ತಕ್ಕೇ ಕೊನೆಯುಸಿರೆಳುತ್ತೆ. ದೊಡ್ಡಾಮೆ - ಇಂಗ್ಲಿಷಿನಲ್ಲಿ ಜಯಂಟ್ ಟಾರ್ಟಾಯ್ಸ್ ಮಾತ್ರ ಎಲ್ಲರನ್ನೂ ಮೀರಿಸಿ ನೂರೈವತ್ತು ದಾಟುತ್ತದೆ. ಆಮೆಯ ಜಾತಿಗೇ ಸೇರಿದ ಇನ್ನೊಂದು ಬಾಕ್ಸ್ ಟರ್ಟ್ಲ್ ಎಂಬುದು ಇದಕ್ಕೆ ಸ್ಪರ್ಧಿಯಾದರೂ ಇಷ್ಟು ದೀರ್ಘಕಾಲ ಬದುಕುವುದಿಲ್ಲ. ಡೈನಾಸರ್ ಕಾಲದಿಂದಲೂ ಭೂಮಿಯಲ್ಲಿರುವ ಈ ಆಮೆಗಳಿಗೆ ಶತ್ರುಗಳೇ ಇಲ್ಲ. ನಿಧಾನಗತಿಯಲ್ಲಿಯೇ ಬದುಕುತ್ತದೆ.ರಾಣಿಜೇನುಗಳು ಐದು ವರ್ಷಗಳಿಗೆ ಕೊನೆಯುಸಿರೆಳೆದರೆ, ಕೆಲಸಗಾರ ಜೇನುಗಳು ಸ್ವಾಭಾವಿಕವಾಗಿ ಸತ್ತರೆ, ಒಂದೇ ವರ್ಷಕ್ಕೆ ಸಾಯುತ್ತವೆ. ಇರುವೆಗಳೂ ಅಷ್ಟೆ, ಒಂದು ವರ್ಷ ಎಲ್ಲಾ ಕಾಲಗಳನ್ನೂ ನೋಡಿ ಸಾಯುತ್ತವೆ. ಸರ್ಪಗಳು ಬಂಧನದಲ್ಲಿದ್ದರೆ ಇಪ್ಪತ್ತು ವರ್ಷ ಬದುಕುತ್ತವೆ, ಆದರೆ ಕಾಡಿನಲ್ಲಿ ಐದು ವರ್ಷ ಬದುಕಿದರೆ ಹೆಚ್ಚೆಚ್ಚು. ರಾಣಿ ಇರುವೆಗಳು ಎರಡು ಮೂರು ವರ್ಷ ಬದುಕಿದರೆ, ಕೆಲಸಗಾರ ಇರುವೆಗಳಿಗೆ ಆರುತಿಂಗಳಿಗೆ ಆಯಸ್ಸು ಮುಗಿದಿರುತ್ತದೆ.

ಸಾಮಾನ್ಯವಾಗಿ ಮನುಷ್ಯನ ಹಾಗೂ ಮನುಷ್ಯನೊಡನೆ ಬದುಕುವ ಪ್ರಾಣಿಗಳ ಹೊರೆತು ಬೇರೆ ಪ್ರಾಣಿಗಳಿಗೆ ಸಹಜ ಸಾವು (Natural Death) ಬರುವುದು ಅಪರೂಪ. ವಯಸ್ಸಾಗಿ ಸತ್ತ ಪ್ರಾಣಿ ಸಿಗುವುದು ವಿರಳ. ಶತ್ರುವಿನೊಡನೆ ಹೋರಾಡಿ ಸಾಯುವುದು, ಬೇರೆ ಪ್ರಾಣಿಗಳಿಗೆ ಆಹಾರವಾಗುವುದು ಸರ್ವೇಸಾಮಾನ್ಯ. ಆಗಲೇ ಹೇಳಿದ ಹಾಗೆ ಕಾಡಿನಲ್ಲಿ ಡಾರ್ವಿನ್ ಸಿದ್ಧಾಂತ ಪಾಲಿಸಿದರೆ ಮಾತ್ರ ಬದುಕಲು ಸಾಧ್ಯ. ದುರದೃಷ್ಟವಷಾತ್ ಮನುಷ್ಯರ ನಡುವೆಯೂ ಈ ಸಿದ್ಧಾಂತ ಸತ್ಯವೆನಿಸುತ್ತೆ.ಗ್ಯಾಸ್ಟ್ರೋಥ್ರಿಕ್ಸ್ ಅಂತ ಒಂದು ಪ್ರಾಣಿ. ಎರಡು ಮಿಲಿಮೀಟರು ಉದ್ದ ಇರಬಹುದಷ್ಟೆ. ಸೂಕ್ಷ್ಮದರ್ಷಕಗಳಿಂದ ನೋಡಬೇಕು. ಇದರ ಆಯುಷ್ಯವು ಮೂರು ದಿನಗಳಷ್ಟೇ.

ಕುಮಾರವ್ಯಾಸ ಹೇಳುವಂತೆ, ಅರಸ ಕೇಳ್, ಆಯುಷ್ಯವುಳ್ಳರೆ ಹರಿಹರಬ್ರಹ್ಮಾದಿಗಳೂ ಸಂಹರಿಸಲರಿಯರು....

-ಅ
28.05.2008
1.30AM

11 comments:

 1. ಸೂಪರ್ ಪೋಸ್ಟ್ ಮಾರಾಯಾ! ಎಲ್ಲವೂ ಚೆನ್ನಾಗಿದ್ದರೂ ಗ್ಯಾಸ್ಟ್ರೋಥ್ರಿಕ್ಸ್ ಬಗ್ಗೆ ಹೆಚ್ಚಾಗಿ ಕುತೂಹಲ ಕೆರಳಿದೆ. ನೀನು ಹಾಕಿರೋ ಫೋಟೋ ಅದ್ಭುತ.

  ಮನುಷ್ಯನಿಗೆ ಆಯುಷ್ಯ ಜಾಸ್ತಿ. ಆದರೆ ಸೌಂದರ್ಯ ಕಡಿಮೆ (ಮನಸ್ಸಿನ ಸೌಂದರ್ಯವಂತೂ ಹೆಚ್ಚು-ಕಡಿಮೆ ಶೂನ್ಯ). ಹೆಚ್ಚು ಸುಂದರವಾಗಿರುವ ಪ್ರಾಣಿಗಳಿಗೆ ಆಯುಷ್ಯ ಕಡಿಮೆ. ಇದು ಒಂದು ಥರ inversely proportional!

  ಆಯುಷ್ಯ ಮುಖ್ಯವೋ ಸೌಂದರ್ಯ ಮುಖ್ಯವೋ ಎಂಬ ಪ್ರಶ್ನೆ ಬಂದಾಗ ಬೆನ್ ಜಾನ್ಸನ್ (?) ಬರೆದ ಈ ಇಂಗ್ಲೀಷ್ ಕವನದ ಸಾಲುಗಳು ನೆನಪಿಗೆ ಬರುತ್ತವೆ.

  A lily a day is fairer in May.
  Although it falls and dies that night,
  it was a plant and flower of light!
  In small proportions, we beauties see;
  and in short measures, life can perfect be!

  ReplyDelete
 2. ಒಮ್ಮೊಮ್ಮೆ ಹೆಚ್ಚು ಬದುಕಿದ್ದು ಗುಡ್ಡೆ ಹಾಕುವುದಕ್ಕಿಂತ ಹೀಗೆ ಅಲ್ಪಾಯುಷ್ಯವೇ ಸಾಕೆನಿಸುತ್ತದೆ. ಬರಹ zabardast ಗುರುಗಳೆ !!

  ReplyDelete
 3. ಒಳ್ಳೆಯ ವಿಷಯಗಳನ್ನು ಹಂಚಿಕೊಂಡಿದ್ದೀರಿ, ಧನ್ಯವಾದಗಳು.

  ReplyDelete
 4. super ... nange gini ashtondu varsha badkutte anta goththe irlilla :-) ...

  ReplyDelete
 5. praanigalige esht aayassidru prakriti niyamadante badukatte. aadre manushyar maatra duraase padtaare, prakriti virudhdhvaag baduktaare...ene aagli, nin blog inda onderd praani nodi adar bagge tilkond haag aaytu. good informatiion.
  ninninda naanu vimarshe(comment)maadoke kalitidini.....

  ReplyDelete
 6. [ಶ್ರೀಕಾಂತ್] ಬೆನ್ ಜಾನ್ಸನ್ ಕವನವೇ ಇದು? ಯಾವ ಕ್ಲಾಸಿನಲ್ಲಿ ಓದಿದ್ದೆ ಅನ್ನೋದೇ ಮರೆತುಹೋಗಿದೆ ನನಗೆ.

  [ಹರೀಶ್] :-)

  [ಲಕುಮಿ] ಪ್ರಕೃತಿಯ ಪ್ರಕಾರ ಎರಡು ಬಗೆಯ ಆಯುಷ್ಯವಿರುತ್ತೆ. ಒಂದು Sun Span, ಇನ್ನೊಂದು Biological Span. ಮೊದಲನೇದು, ನಾವು ನೋಡ್ತೀವಲ್ಲ, ಸೆಕೆಂಡು, ಗಂಟೆ, ದಿನ, ತಿಂಗಳು, ವರ್ಷ, ಶತಮಾನ.... ಹೀಗೆ. ಇದು. ಎರಡನೆಯದರ ಪ್ರಕಾರ ಒಂದು ಜೀವಿಗೆ ತಕ್ಕ ಹಾಗೆ, ಹೃದಯ ಮಿಡಿತದಿಂದ ಲೆಕ್ಕ ಹಾಕಿದಾಗ ಒಂದು ಇಲಿಯು ಆನೆಗಿಂತ ಹೆಚ್ಚು ಬದುಕುತ್ತದೆ.

  ಮತ್ತೆ ನೀನು ಇಲ್ಲಿ "ಅಲ್ಪಾಯುಷಿ" ಎಂದಿರುವುದು ಯಾರಿಗೆ? ಆಮೆಗಂತೂ ಅಲ್ಲ ಅನ್ಸುತ್ತೆ!

  [ಬಿಸ್ಕೇಟ್] ಭಾಗಿಯಾಗಿದ್ದಕ್ಕೆ ನಿಮಗೂ ಧನ್ಯವಾದಗಳು.

  [ವಿಜಯಾ] ಮನುಷ್ಯನ ಮನೆಯಲ್ಲಿ ಒಟ್ಟಿಗೆ ಹುಟ್ಟು ಒಟ್ಟಿಗೇ ಸಾಯಬಹುದು ನೋಡು.

  [ಭವ್ಯಾ] ಮನುಷ್ಯನ ದುರಾಸೆ ಹೆಚ್ಚಾಗುತ್ತಾ ಆಗುತ್ತಾ, ಪ್ರಾಣಿಗಳ ಆಯುಷ್ಯ ಕಡಿಮೆಯಾಗುತ್ತಾ ಬರುತ್ತದೆಂಬುದು ವಿಪರ್ಯಾಸವಾದರೂ ಸತ್ಯದ ಸಂಗತಿ. ಇದು ಮನುಷ್ಯನ ವಿನಾಶಕಾಲ ಅಲ್ಲವೇ, ಅದಕ್ಕೆ. ಒಳ್ಳೇ ವಿಮರ್ಶೆ.

  ReplyDelete
 7. hee hee ... jaasti ne badkiddu makklige ... hogolo ... ninnu nodideeni, nimmappannoo kandideeni antha noo anutte :-)

  ReplyDelete
 8. Registration- Seminar on the occasion of kannadasaahithya.com 8th year Celebration

  ಪ್ರೀತಿಯ ಅಂತರ್ಜಾಲ ಸ್ನೇಹಿತರೆ,

  ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
  ವಿಷಯ:
  ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

  ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

  http://saadhaara.com/events/index/english

  http://saadhaara.com/events/index/kannada
  ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

  ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ ‘ಬ್ಲಾಗೀ ಮಾತುಕತೆ’ ನಡೆಸುವ ಉದ್ದೇಶವೂ ಇದೆ.

  ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

  -ಕನ್ನಡಸಾಹಿತ್ಯ.ಕಾಂ ಬಳಗ

  ReplyDelete
 9. sakkat post-u.. tumba informative and tumba chennagi bardidya man.. keep this good work going :)

  ReplyDelete
 10. neenu baredirodu atyadbhutavaagide. aadare yaaru yaarige eshteshtu aayussu kodabeku, avaru hegirabeku, hege badukabeku, avarugalu hege saayabeku annodanna aa prakruti munchene nirdhaara maadirutte. manushyanige aagali, praanigalige aagali ellaa onde. ellaa avaravara hanebaraha.

  ReplyDelete

ಒಂದಷ್ಟು ಚಿತ್ರಗಳು..