Wednesday, May 21, 2008

ಜೀವನೋತ್ಸಾಹ

"ಸಾಕಪ್ಪಾ ಸಾಕು, ಜೀವನ. ಎಷ್ಟು ನೋವು ಅನುಭವಿಸಬೇಕು? ನನ್ನ ಸಾವು ಯಾವಾಗ ಬರುತ್ತೋ? ಹೀಗೆಂದು ಉತ್ಸಾಹ ಕಳೆದುಕೊಳ್ಳುವವರು ನಮ್ಮ ನಡುವೆ ಅನೇಕರಿದ್ದಾರೆ.

ನಾವು ಬೇರೆ ಜೀವಿಗಳಿಂದ ಕಲಿಯಬೇಕಾದ ಮೊದಲ ಅಂಶವೆಂದರೆ ಜೀವನೋತ್ಸಾಹ. ಕೊನೆಯ ಘಳಿಗೆಯ ವರೆಗೂ ಬದುಕುವ ಹಂಬಲ.

ಕ್ಯಾಲಿಫೋರ್ನಿಯಾದಲ್ಲಿ ಒಂದು ಮರವಿದೆ. ಸುಮಾರು ಎರಡು ಮುಕ್ಕಾಲು ಸಾವಿರಕ್ಕೂ ಹೆಚ್ಚು ವಯಸ್ಸಾಗಿದೆ!! ಆ ರಾಷ್ಟ್ರೀಯ ಉದ್ಯಾನದವರು ಆ ಮರಕ್ಕೆ ಜೆನೆರಲ್ ಶೆರ್ಮನ್ ಟ್ರೀ (Sequoia Gigantea) ಎಂದು ಹೆಸರಿಟ್ಟಿದ್ದಾರೆ. ಅದರ ಸುತ್ತಳತೆಯೇ ನೂರು ಅಡಿಗಳಿಗೂ ಮೀರಿದೆ. ಅಂದರೆ ಇಡೀ ಮರವನ್ನು ತಬ್ಬಿಕೊಳ್ಳಲು ಸುಮಾರು ಐವತ್ತಕ್ಕೂ ಹೆಚ್ಚು ಜನ ಬೇಕು! ಇದು ವಿಶ್ವದಲ್ಲೇ ಅತಿ ದೊಡ್ಡ ಮರ ಮಾತ್ರವಲ್ಲ, ಅತಿ ದೊಡ್ಡ ಜೀವಿ ಕೂಡ."
ಟಿವಿ ಕಾರ್ಯಕ್ರಮವೊಂದರಲ್ಲಿ ಮನೋವೈದ್ಯರೊಬ್ಬರು ಹೇಳುತ್ತಿದ್ದರು.

"ಇಂಥಾ ಸಿಕೊಯಿಯಾ ಮರವು ಈ ಹೆಮ್ಮರವಾಗುವುದಕ್ಕೆ ಮುಂಚೆ, ಒಂದು ಸಣ್ಣ ಸಸಿಯಾಗಿಯೇ ಇತ್ತು. ಇದು ಇಷ್ಟೆತ್ತರ ಬೆಳೆಯಲು ಅದಕ್ಕಿರುವ ಜೀವನೋತ್ಸಾಹವೇ ಕಾರಣ. ಅದು ಯಾವ ನೋವಿಗೂ ಅಳುಕದೆ ಎದುರಿಸಿ ನಿಂತಿದೆ. ಅದು ಸಾಯಲೂ ಸಿದ್ಧವಾಗಿದೆಯೇ ಹೊರೆತು, ಹಾತೊರೆದಿಲ್ಲ. ಸಾವು ಬಂದಾಗ ಬರಲಿ, ಅಲ್ಲಿಯವರೆಗೂ ಬದುಕಿರೋಣ. ಹಿಂದಿನ ಕಾಲದ ಋಷಿಗಳೆಲ್ಲಾ ತಪಸ್ಸು ಮಾಡಿ ಸಾವಿರಾರು ವರ್ಷ ಆಯುಷ್ಯ ಪಡೆದುಕೊಳ್ಳುತ್ತಿದ್ದರು. ಬದುಕುವ ಹಂಬಲವಿರಬೇಕು."
ಈ ಮರದ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ.

ನನಗೆ ಥಟ್ಟನೆ ನೆನಪಾದದ್ದು ಬಿಳಿಗಿರಿರಂಗನ ಬೆಟ್ಟದ ದೊಡ್ಡ ಸಂಪಿಗೆ ಮರ. ಇದಕ್ಕೂ ಎರಡು ಸಾವಿರ ವರ್ಷ ವಯಸ್ಸಾಗಿದೆ. ಇದರ ಬುಡದ ಬಳಿಯಿರುವ ಪೊಟರೆಯೊಳಗೆ ಪ್ರದಕ್ಷಿಣೆ ಹಾಕಿ ಬರಬಹುದು. ಒಂದು ದೇವಸ್ಥಾನವನ್ನೇ ಈ ಮರದಲ್ಲಿ ಕಟ್ಟಿದ್ದಾರೆ. ಆದರೆ ನಾನು ಕಳೆದ ಬಾರಿ ಇಲ್ಲಿಗೆ ಹೋದಾಗ, ಅರಣ್ಯ ಇಲಾಖೆಯವರು ಒಂದು ಬೋರ್ಡನ್ನು ಹಾಕಿದ್ದರು. "ಇದು ವೀರಪ್ಪನ್ ಕಾರ್ಯಾಚರಣೆಯಿರುವ ಸ್ಥಳ. ಸಾರ್ವಜನಿಕರಿಗೆ ಪ್ರವೇಶವಿಲ್ಲ." ಆದರೆ ಈಗಲೂ ಇಲ್ಲಿಗೆ ಹೋಗಲು ವಿಶೇಷ ಪರವಾನಗಿಯನ್ನು ಬೆಟ್ಟಕ್ಕೆ ಐವತ್ತು ಕಿಲೋಮೀಟರಿಗಿಂತ ದೂರವಿರುವ ಚಾಮರಾಜನಗರದಲ್ಲಿ ತೆಗೆದುಕೊಳ್ಳಬೇಕು. ಡಿ.ಸಿ.ಎಫ್.ಗೆ ಮೂಡ್ ಚೆನ್ನಾಗಿಲ್ಲದಿದ್ದರೆ ಪರವಾನಗಿ ಮರೆತುಬಿಡಬೇಕು.. ಹೇಗೋ, ಮರಕ್ಕೆ ತೊಂದರೆಯಾಗದಿದ್ದರೆ ಸರಿ.
ಜೀವಮಾನದಲ್ಲಿ ಒಮ್ಮೆಯಾದರೂ ಈ ದೊಡ್ಡಸಂಪಿಗೆ ಮರವನ್ನು ನೋಡಬೇಕು. ನಾನು ನೋಡಿಯಾಯಿತು! ಸಿಕೊಯಿಯಾ ನೋಡಬೇಕಷ್ಟೆ. ಕ್ಯಾಲಿಫೋರ್ನಿಯಾಗೆ ಎಂದು ಪಯಣವೋ ಗೊತ್ತಿಲ್ಲ!

ಜೀವನೋತ್ಸಾಹ ಮಾತ್ರ ಕುಂದುವುದಿಲ್ಲ. ಆದರ್ಶ ವೃಕ್ಷಗಳಲ್ಲವೇ?

-ಅ
21.05.2008
12.45AM

6 comments:

 1. ನಾನು ಎರಡು ಮರಗಳನ್ನೂ ನೊಡಿಲ್ಲ. ಅವಕಾಶ ಸಿಕ್ಕಾಗ ನೋಡೋದೇ.

  ReplyDelete
 2. :( naavu BR hills ge hodaaga alli hogokke aaglilla. Hopefully soon :-).

  nange ansiddu ... swabhivikavaagi jeevigalige competitive attitude iruttalva, hegaadru jeeva ulskobeku antha. Natural aagi thondare inda tappisikondu badukokke daari hudkodu ella praani pakshi ... yaake ... gida maragalalloo irutte. naavaldidru namma progeny munduvareebeku annode moola uddishya alwa?
  Neenu helo jeevanotsaaha haage sumne badkirodara badlu 'alive' aagirusutte :-)
  saasonke chalne ko to jeevan kaha nahin jaaye!!!

  ReplyDelete
 3. ಸದ್ಯೋಜಾತನಲ್ಲಿ ನನ್ನ ಪ್ರಾರ್ಥನೆ ಇಷ್ಟೆ: ನೀವು ಆದಷ್ಟು ಬೇಗ ಕ್ಯಾಲಿಫೋನಿಯಾ ಗೆ ಪಯಣಿಸಿ, ಆ ಮರವನ್ನು ನೋಡಿ ಹಿಂದೆಂದೂ ಬರೆದಿರದ ಅತ್ಯಧ್ಭುತ ಪ್ರವಾಸಕಥನ ಬರೆದು ನಮಗೆ ನೀಡಲಿ .

  ReplyDelete
 4. Amazing facts!! your blog is too informative and nice...
  thank you ;)

  ReplyDelete
 5. blog nalli bareyuva utsahavoo kundadirali :)

  Truly admire your writing stlye!

  ReplyDelete
 6. [ಶ್ರೀಕಾಂತ್] ನ್ಯೂ ರೂಟ್ಸ್ ಥ್ರೆಡ್‍ನಲ್ಲಿ ಸೇರಿಸಿಕೊಳ್ಳೋದೇ ಮತ್ತೆ!

  [ವಿಜಯಾ] ಹೌದು, ಬದುಕುವುದು ದೊಡ್ಡದಲ್ಲ, ಬಾಳಬೇಕು! ಮರದಂತೆ...

  [ಲಕುಮಿ] ನೀನ್ಯಾಕೋ Mr. ಎಸ್.ಜಾತನ ಹೆಸರಿನಲ್ಲಿ ಸೋಮಾರಿ ಆಗುತ್ತಿದ್ದೀಯ ಅನ್ಸುತ್ತೆ.

  [ಕನಸು] ಧನ್ಯವಾದಗಳು.

  [Anonymous] ಉತ್ಸಾಹ ಕುಂದಲ್ಲ ಸರ್/ಮೇಡಂ. ಬರಹವನ್ನೂ ಶೈಲಿಯನ್ನೂ ಮೆಚ್ಚಿಕೊಂಡಿದ್ದಕ್ಕೆ ಧನ್ಯವಾದಗಳು. ನಿಮ್ಮ ಕಮೆಂಟನ್ನು ಸಹ ಮೆಚ್ಚಿಕೊಂಡಿದ್ದೇನೆ..

  ReplyDelete

ಒಂದಷ್ಟು ಚಿತ್ರಗಳು..