Friday, February 22, 2008

ಪ್ರಶ್ನೋತ್ತರ

ಹಾವಿನ ದ್ವೇಷ ಹನ್ನೆರಡು ವರುಷ?
- ಶುದ್ಧ ಸುಳ್ಳು. ಹಾವಿಗೆ ನೆನಪಿನ ಶಕ್ತಿಯೇ ಇಲ್ಲ. ಅರ್ಧ ಗಂಟೆಗೆ ಮುಂಚೆ ಏನಾಯಿತೆಂಬುದೇ ಗೊತ್ತಿರುವುದಿಲ್ಲ.

ಬೆಕ್ಕು ಏಳು ಮನೆ ಚೀಲಿ?
- ಬೆಕ್ಕು ಬದಲಾವಣೆಗಳನ್ನು ಬಯಸುವುದಿಲ್ಲ. ತನ್ನ ಸ್ಥಳಮಿತಿಯಲ್ಲಿ ಆಪತ್ತು ಬಂದರೆ ಮಾತ್ರ ಹೊರಹೋಗುತ್ತೆ.

ಗೂಬೆ/ ಕಾಗೆ ಹೊಕ್ಕರೆ ಮನೆಯಲ್ಲಿ ಸಾವು ಸಂಭವಿಸುತ್ತಂತೆ?
- ಇಂಥಾ ಮೂಢನಂಬಿಕೆಗಳ ಬಗ್ಗೆ ಇಲ್ಲಿ ಬರೆಯುವ ಅವಶ್ಯಕತೆಯಿಲ್ಲ. ಆದರೂ ಇಂಥದೊಂದು ನಂಬಿಕೆ ನಮ್ಮ ಜನರಲ್ಲಿ ಇನ್ನೂ ಇದೆ.


ಊಟದಲ್ಲಿ ಹಲ್ಲಿ ಬಿದ್ದರೆ?
- ಆ ಊಟ ಮಾಡಿದರೆ ಸಾಯುವುದಿಲ್ಲ. ಸಿನಿಮಾದಲ್ಲಷ್ಟೆ ಸಾವು.

ನೆತ್ತಿ ಮೇಲೆ ಹಲ್ಲಿ ಬಿದ್ದರೆ?
- ಹಲ್ಲಿ ಅಪವಿತ್ರವಾಗುತ್ತೆ.

ಹಾವ್ರಾಣಿ ಕಚ್ಚಿದರೆ ಔಷಧಿಯೇ ಇಲ್ಲವಂತೆ?
- ಸುಮ್ಮಸುಮ್ಮನೆ ಔಷಧಿಯೇಕೆ? ಅದು ವಿಷವೇ ಅಲ್ಲ.

ಸರ್ಪಸಂಭೋಗ ನೋಡಿದ್ದೀನಲ್ಲಾ? ಏನೂ ತೊಂದರೆ ಇಲ್ವಾ?
- ಫೋಟೋ ತೆಗೆದಿಲ್ಲ ಅಂದರೆ ಚೆಲುವನ್ನು ನೀನು ಅನುಭವಿಸಲು ಗೊತ್ತಿಲ್ಲದವನು ಎಂದು.


ಹಸು ಮುಕ್ಕೋಟಿ ದೇವತೆಗಳನ್ನು ಹೊಂದಿರುವ ಪ್ರಾಣಿ ಅಲ್ಲವೇ?
- ಮನುಷ್ಯನ ಹೊರೆತು ಎಲ್ಲ ಪ್ರಾಣಿಗಳೂ ಅಷ್ಟೇ!

ಕಾಫಿಯಲ್ಲಿ ಹಾವಿನ ವಿಷ ಬೆರೆಸಿ ಕೊಂದುಬಿಟ್ಟಳಂತೆ ತನ್ನ ಗಂಡನನ್ನು?
- ಹಾವಿನ ವಿಷ ಕುಡಿದರೆ ಸಾಯುವುದಿಲ್ಲ. ಅದು ಕೇವಲ ಪ್ರೋಟೀನು. ವಿಷದ ಹಾವು ಕಚ್ಚಿದರೆ ಮಾತ್ರ ಸಾಯುವುದು. ಹಾಗಾಗಿ ಕೊಲ್ಲಲು ಬೇರೇನೋ ಸಂಚು ಹೂಡಿರಬೇಕು.

ಹಾವಿಗೆ ಹಾಲೆರದಂತೆ..
- ಹಾಲು ದಂಡವಾಗುವುದಂತೆ! ಹಾವು ಮಾಂಸಾಹಾರಿ. ಹಾಲು ಕುಡಿಯುವುದಿಲ್ಲ.

ನೀರಕ್ಷೀರವಿವೇಕೇತು ಹಂಸೋ ಹಂಸಃ ಬಕೋ ಬಕಃ!
- ಹಂಸ ಪಕ್ಷಿಯೆಂಬುದೇ ಕಾಲ್ಪನಿಕ.

ಹುಲಿ ಎಲ್ಲಾದ್ರೂ ಹುಲ್ಲು ತಿನ್ನುತ್ತಾ?
- ತಿನ್ನದೇ ಏನು, ಹೊಟ್ಟೆ ಕೆಟ್ಟಾಗ ವಾಂತಿ ಮಾಡೋಕೆ ತಿನ್ನುತ್ತೆ. ನಾಯಿಗಳು ಕೂಡ.

ನಾನು ಸಾಕಿದ ನಾಯಿ ನನಗೇ ಕಚ್ಚಿತಲ್ಲಾ?
- ನಿನ್ನನ್ನು ಯಾರು ಸಾಕು ಎಂದೋರು? ಅದನ್ನು ಸಾಕಿದೆ ನಿಜ, ಯಾರು ಕಟ್ಟು ಎಂದೋರು? ಕಟ್ಟಿದೆ ನಿಜ, ಯಾರು ಅದರ ಮನಸ್ಸನ್ನು ಅರ್ಥ ಮಾಡಿಕೊಳ್ಳದಿರು ಎಂದೋರು?

ಸಿಂಹಸ್ವಪ್ನ ಎಂದರೆ?
- ಆನೆಗೆ ಕನಸಿನಲ್ಲಿ ಸಿಂಹ ಬಂದರೂ ಸತ್ತು ಹೋಗುತ್ತೆ ಅನ್ನೋ ಮೂಢನಂಬಿಕೆ. ಉದಾಹರಣೆಗೆ, ಕೇರಳದ ಆನೆಗೆ ಸಿಂಹಸ್ವಪ್ನ ಹೇಗೆ ಬೀಳುತ್ತೆ? ಹುಲಿಸ್ವಪ್ನ ಬೀಳಬೇಕು! ಹುಲಿಗಳನ್ನು ಸೊಂಡಿಲಿನಿಂದ ಎತ್ತಿ ಎತ್ತಿ ಬಿಸಾಡುವುದು ಅಂಥಾ ಅಪರೂಪದ ವಿಷಯವೇನಿಲ್ಲ. ಗಜಸ್ವಪ್ನ ಹುಲಿಗಳಿಗೆ ಬಿದ್ದೀತು.
-ಅ
21.02.2008
5.30AM

7 comments:

 1. good info .

  ಅಂದಹಾಗೆ ಹಾವಿನ ವಿಷ ರಕ್ತಕ್ಕೆ ಸೇರಿದರೆ ಮಾತ್ರ ಅಪಾಯಕಾರಿನಾ?

  ReplyDelete
 2. [ವಿಜಯಾ] ಮಕ್ಕಳಿಗೆ ಪಾಠ ಮಾಡಿದ್ದೆ ಇದರ ಬಗ್ಗೆ ಹೋದ ತಿಂಗಳು.

  [ವಿಕಾಸ್ ಹೆಗಡೆ] haemotoxic venom ಇದ್ರೆ ರಕ್ತಕ್ಕೆ ಸಂಬಂಧಿಸಿದ್ದು. neurotoxic venom ಇದ್ರೆ ಅದು ನರಕ್ಕೆ (central nervous system)ಗೆ ಸಂಬಂಧಿಸಿದ್ದು.

  ನಾಗರ ಹಾವು (ಎಲ್ಲಾ ಥರದ cobra) neurotoxic venomನ ಹೊಂದಿರುತ್ತೆ. ಮತ್ತೆ ಎಲ್ಲಾ ರೀತಿಯ viperಗಳು haemotoxic venomನ ಹೊಂದಿರುತ್ತವೆ.

  ಯಾವುದೇ ಹಾವಾಗಲೀ ಕಚ್ಚಿದಾಗ ರಕ್ತ ನಾಳಗಳಿಗೆ venom ತಲುಪುತ್ತದೆ. ಆನಂತರವೇ ವಿಷ ಕೆಲಸ ಮಾಡುವುದು. ಅದನ್ನು ಹೊಟ್ಟೆಗೆ ತೆಗೆದುಕೊಂಡರೆ ಯಾವ ಅಪಾಯವೂ ಇಲ್ಲ. ಹಾರ್ಲಿಕ್ಸು, ಬೋರ್ನ್ವಿಟಾ - ಇದಕ್ಕಿಂತ ಏನೂ ಭಿನ್ನವಲ್ಲವೇ ಅಲ್ಲ ಈ venom.

  ಈ ಬೋರ್ನ್ವೀಟಾ ಕೂಡ ರಕ್ತಕ್ಕೆ inject ಮಾಡಿದರೆ ಸಾಯುತ್ತಾರೆ!!

  [ಸುಶ್ರುತ ದೊಡ್ಡೇರಿ] ನನಗೂ ಅಷ್ಟೇನೂ ಗೊತ್ತಿರಲಿಲ್ಲ. ಕಳೆದ ಆರು ವರ್ಷದಲ್ಲಿ ಕೆಲವು ಕಲಿತದ್ದಷ್ಟೇ ಗೆಳೆಯಾ... :-)

  ReplyDelete
 3. ಬಾಸ್,
  ನಿಮ್ಮಿಂದ ಕಲಿಯಬೇಕಾದ್ದು ಬಹಳಷ್ಟಿದೆ. ಮೇಷ್ಟ್ರ ಪಾಠ ತುಂಬಾ ಮಾಹಿತಿಕಾರಿಯಾಗಿತ್ತು. ನೀವು ಶಿಕ್ಷಣ ಮಂತ್ರಿಯಾಗಿದ್ದಿದ್ದರೆ.....

  ReplyDelete
 4. [ಶ್ರೀನಿಧಿ] ನೈಸ್ ಕಮೆಂಟು!

  [ರಾಜೇಶ್ ನಾಯ್ಕ] ಶಿಕ್ಷಣ ಮಂತ್ರಿಯಾಗಿದ್ದಿದ್ದರೆ? ಪರಿಸರ ಶಿಕ್ಷಣ ಅಂತ ಒಂದು ವಿಷಯವನ್ನು ಎಲ್ಲಾ ತರಗತಿಯವರಿಗೂ ಇಟ್ಟುಬಿಡುತ್ತಿದ್ದೆ. ;-)

  ReplyDelete

ಒಂದಷ್ಟು ಚಿತ್ರಗಳು..