Friday, February 15, 2008

ಗುಬ್ಬಚ್ಚಿ

ಮನೆಯ ಪಕ್ಕದ ಬೀದಿಯತ್ತ ನಡೆದು ಹೋಗುತ್ತಿರುವಾಗ ಸೈಕಲ್ ಶಾಪ್ ಮುಂದೆ ಹತ್ತಾರು ಗುಬ್ಬಚ್ಚಿಗಳನ್ನು ನೋಡಿ ಖುಷಿ ಆಯ್ತು. ಬೆಂಗಳೂರಿನಲ್ಲಿ ಗುಬ್ಬಚ್ಚಿಗಳು ಮಾಯವಾಗಿವೆ ಎಂದು ಎಲ್ಲರಿಗೂ ಹೇಳುತ್ತಿದ್ದೆ. ಈಗ ನನ್ನ ಕಣ್ಣಿಗೆ ಕಾಣಿಸುತ್ತಿದೆ.

ನನಗೆ ಇನ್ನೂ ನೆನಪಿದೆ, ಚಿಕ್ಕವನಾಗಿದ್ದಾಗ, ಇದೇ ಹನುಮಂತನಗರದಲ್ಲಿ ನಾವು ಇರುವ ಮನೆಯ ಹಳೆಯ ಕಟ್ಟಡದಲ್ಲಿ ನಮ್ಮ ಶಾರದಾ ಅತ್ತೆ ಮತ್ತವರ ಮನೆಯವರಿದ್ದಾಗ ಇಲ್ಲಿ ಪ್ರತಿ ಭಾನುವಾರ ದೂರದರ್ಶನದಲ್ಲಿ ಬಿತ್ತರವಾಗುತ್ತಿದ್ದ ಕನ್ನಡ ಚಲನ ಚಿತ್ರವನ್ನು ನೋಡಲು ನಮ್ಮ ಮನೆಯವರೆಲ್ಲರೂ ಬರುತ್ತಿದ್ದೆವು. ಇವರ ಮನೆಯು ಶೀಟ್ ಮನೆಯಾಗಿದ್ದು, ಮನೆಯೊಳಗೇ ಎಷ್ಟೊಂದು ಗುಬ್ಬಚ್ಚಿಗಳು ಬರುತ್ತಿದ್ದವು! ಹಾಲ್‍ನಲ್ಲೊಂದು ಗೂಡು, ರೂಮಿನಲ್ಲಿನ್ನೊಂದು! ಹಕ್ಕಿಗಳ ಜೊತೆಗೇ ಹಗಲಿರುಳು ಕಳೆಯುತ್ತಿದ್ದೆವು.



ನಗರದಲ್ಲಿ ಗುಬ್ಬಚ್ಚಿಯನ್ನು ನೋಡುವುದು ಬಹಳ ಕಷ್ಟ. ಅಂಥದರಲ್ಲಿ ಹನುಮಂತನಗರದ ಗಲ್ಲಿಯೊಂದರಲ್ಲಿ ಕಂಡಿದ್ದು ನಿಜಕ್ಕೂ ಸಂತಸದ ವಿಷಯವೇ.

ಹಳ್ಳಿಯವರೇನಾದರೂ ಇದನ್ನೋದಿದರೆ, ಬೆಂಗಳೂರೇತರೇನಾದರೂ ಓದಿದರೆ ಅವರಿಗೆ ಅಷ್ಟೇನೂ ಅಚ್ಚರಿಯಾಗಲಾರದು. ನಾನು ಬೆಂಗಳೂರಿಗ. ಬೆಂಗಳೂರು 'ಬೆಳೆಯುತ್ತಾ' ಬಂದಿರುವುದನ್ನು ಕಂಡವರಿಗೆ ಮಾತ್ರ ಈ ಸಂತಸ ಅರ್ಥ ಆಗುವುದು.

ಗುಬ್ಬಚ್ಚಿಗಳು ಬೆಂಗಳೂರಿಗೆ ಮತ್ತೆ ಬರುವಂತಾಗಲಿ..

-ಅ
16.02.2008
12.20AM

10 comments:

  1. hmm houdu gubbachigaLa santhathi dinedine kadime aagthide adrallu nagarapradeshdalli gubbachhi hesaru kuda gothiralla putta makkalige:(

    e article odhi che naanu gubbachi nodi estond thingaLugale sandide dinalu gubbachi namma mane mundhe gudinalli vaasamadodanna dinalu nodthirbeku ansthide .

    ReplyDelete
  2. hey aruNa,
    naanu nanna chikki mane mundhe (nim mane mundgade road)
    , tuLasi katte hatra nodidini hubachcigaLanna...
    nim area li mathra irodu, yaako innu nam manegaLa hatra bandilla hubbachigaLu :(
    nam mane hatra nu kaLso swalpa...

    ReplyDelete
  3. nange nam sannidhi road mane nenpaaytu ... allooo sumaaru gubbachchigalu irtidvu ... ninge mostly nenpilla ansutte.... akki aarsovaaga sigo bhatta nella thogondu angaladalli haaktidvi ... gubachchi bandu tinnutte ante ... yeshtu olle memories ... baduku sundara anta ommomme ansodu nija :-)

    ReplyDelete
  4. [ವಿಜಯಾ] ಹೌದು, ನನಗೆ ಅದು ನೆನಪಿಲ್ಲ. ಕೇಳಿದ್ದು... ಕಲ್ಪನೆ ಮಾಡಿದ್ದು... ಇಷ್ಟೇ. ಆದರೂ ಬದುಕು ಸುಂದರ.

    [ಸುಶ್ಮಾ] ಆಹಾ, ನಂ ಏರಿಯಾಗೆ ಬಂದಿರೋ ಗುಬ್ಬಚ್ಚಿಗಳನ್ನ ನಿಂ ಏರಿಯಾಗೆ ಕಳ್ಸ್ಬಿಡ್ತೀನಾ?? ಲೊಟ್ಟೆ!

    [ಸಮನ್ವಯನ] ಗುಬ್ಬಚ್ಚಿ ಸಂತತಿ ಕ್ಷೀಣಿಸುತ್ತಿರುವುದು ಅತ್ಯಂತ ನೋವಿನ ಸಂಗತಿ. :-(

    ReplyDelete
  5. ಬೆಂಗಳೂರೇನು ಸ್ವಾಮೀ, ನಮ್ಮೂರಲ್ಲೇ ಇಲ್ಲ ಈಗ ಗುಬ್ಬಿಗಳು.. :(

    ReplyDelete
  6. naanu nodi tumba dinagaLu aadvu...
    gubbacchigaLa "aa dinagaLu" chennagidvu.....

    ReplyDelete
  7. [ಸುಶ್ರುತ] ಹೌದಾ, ನಿಮ್ಮೂರಲ್ಲೇ ಇಲ್ವಾ? ಛೆ! ದುರಂತ. :-(

    [ಶ್ರೀಧರ] ಹೌದು ಕಣೋ. ಏನಾದರೂ ಮಾಡಿ ಅವುಗಳನ್ನು ಪುನಃ ಬೆಂಗಳೂರಿಗೆ ಬರುವಂತೆ ಮಾಡಬೇಕು...

    ReplyDelete
  8. ಸಣ್ಣವರಿದ್ದಾಗ ಈ ಪುಟ್ಟ ಗುಬ್ಬಚ್ಚಿಗಳನ್ನು ಹಿಡಿಯಲು ಬಹಳ ಪ್ರಯತ್ನ ಪಡುತ್ತಿದ್ದೆವು. ಅದು ಕೈಗೆ ಸಿಗುತ್ತಿರಲಿಲ್ಲ ಅನ್ನೋದು ಬೇರೆ ವಿಚಾರ. ಆದರೆ ಗುಬ್ಬಚ್ಚಿ ಹಿಡಿಯುವ ಆಟದಲ್ಲೇ ಒಂದು ಪ್ರೀತಿ ಇರುತ್ತಿತ್ತು. ಈಗ ಗುಬ್ಬಚ್ಚಿಯೂ ಇಲ್ಲ. ಆಟವೂ ಇಲ್ಲ. ಇನ್ನು ಪ್ರೀತಿ ಎಲ್ಲಿಂದ ಬರಬೇಕು?

    ReplyDelete
  9. [ತನ್ ಹಾಯಿ] ಹೆಸರು ಸೊಗಸಾಗಿದೆ. ಗುಬ್ಬಿಗಳಿಲ್ಲದೆ ಒಂದ್ ಥರಾ ತನ್‍ಹಾಯಿ ಅನ್ನೋ ಥರ. ಹೌದು, ಈಗ ಆಟಗಳೇನಿದ್ದರೂ ಕಂಪ್ಯೂಟರಿನ ಮುಂದೆ ಕುಳಿತಷ್ಟೇ. ಅಲ್ಲವೇ?

    ReplyDelete
  10. ನಮ್ಮ ಹಳೆ ಶೀಟ್ ಮನೆಯಲ್ಲಿ ಗೂಡು ಕಟ್ಟುತ್ತಿದ್ದವು... ಈಗ ಎಲ್ಲೂ ಕಾಣೋದೆ ಇಲ್ಲ...

    ಎರಡು ತಿಂಗಳ ಹಿಂದೆ ಮೈಸೂರಿನ ಆಫೀಸ್ ಕ್ಯಾಂಪಸ್ ನಲ್ಲಿ ಸಾಕಷ್ಟು ಗುಬ್ಬಿಗಳಾನ್ನ ನೋಡಿದೆ... ಕ್ಯಾಂಟೀನ್ ನಲ್ಲಿ ಗುಬ್ಬಿಗಳಾದ್ದೆ ಪ್ರಪಂಚ... ಸುಮ್ಮನೆ ನೋಡೋಣ ಅಂತ ತಿಂಡಿ ತಿನ್ನೋವಾಗ ಒಂದು ಚೂರು ಇಡ್ಲಿಯನ್ನು ಟೇಬಲ್ ಮೇಲೆ ಸ್ವಲ್ಪ ದೂರದಲ್ಲಿಟ್ಟೆ ಎರಡೇ ನಿಮಿಷದಲ್ಲಿ ಒಂದು ಗುಬ್ಬಿ ಬಂದು ಕಚ್ಚಿಕೊಂದು ಹೋಯ್ತು :)

    ReplyDelete

ಒಂದಷ್ಟು ಚಿತ್ರಗಳು..