Thursday, February 07, 2008

ಚಿತ್ರಚಾಪ - ಪ್ರಕೃತಿಗೊಂದು ಕೃತಿ

ಎಲ್ಲದರಲ್ಲೂ ಲೇಟ್ ನಾನು ಯಾವಗಲೂ... ಕ್ಷಿತಿಜದೆಡೆಗೆ ಹೊರಡುವುದರಲ್ಲೂ!!

ಈಗಾಗಲೇ ಶ್ರೀನಿಧಿ, ಸುಶ್ರುತ, ಗಂಡಭೇರುಂಡ, ಶ್ರೀಧರ, ಹರ್ಷ ಎಲ್ಲರೂ ಬರೆದಾಗಿದೆ..

"ಪರಿಸರದ ಬಗ್ಗೆ ನಾವು ಬರೆಯೋದು ಹೇಗೆ?" ಎಂದು ಹೆಚ್ಚಿಗೆ ತಲೆಕೆಡಿಸಿಕೊಳ್ಳಲಿಲ್ಲ. ನಮಗ್ಯಾರಿಗೂ ಪಠ್ಯಪುಸ್ತಕದ ರೀತಿ ಇರುವ ಲೇಖನಗಳಲ್ಲಿ ಆಸಕ್ತಿಯಂತೂ ಇಲ್ಲ. ಆದರೆ, ಚಿತ್ರಚಾಪದಲ್ಲಿ ಪ್ರಕೃತಿಯ ಚೆಲುವನ್ನು ನಾವು ಕಂಡಂತೆ ಬರೆದರೆ ಅದರಿಂದ ಪರಿಸರ ಸಂರಕ್ಷಣೆಗೆ ಪ್ರೇರೇಪಣೆಯಾದಂತೆ ಎಂಬ ಯೋಚನೆ ಮಾಡಿ ಹೊಸ ಯತ್ನವನ್ನು ಕೈಗೊಂಡಿದ್ದೇವೆ.

ಅನ್ನಪೂರ್ಣ, ಗಂಡಭೇರುಂಡ, ಶ್ರೀನಿಧಿ, ಸುಶ್ರುತ, ರಾಘವೇಂದ್ರ ಹೆಗಡೆ ಮತ್ತು ನಾನು ಎಂಬ ಅರುಣ ಈ ಚಿತ್ರಚಾಪದ ಕರ್ತೃಗಳಾಗಿ ಸಾಹಿತ್ಯದ ಹಸಿರನ್ನು ಹೊಕ್ಕಲು ಯತ್ನಿಸಿದ್ದೇವೆ.

ಪ್ರಣತಿಯು ಚಿತ್ರಚಾಪದೊಂದಿಗೆ ಜನ್ಮ ತಾಳುತ್ತಿರುವುದು ಇನ್ನೊಂದು ವಿಶೇಷ ಸಂಗತಿ. ಚಿತ್ರಚಾಪವೆಂಬ ಗಜಪ್ರಸವಕ್ಕೆ ಪ್ರಣತಿಯು ಸಕಾರಣವಾಗಬೇಕೆಂಬುದು ವಿಧಿಪ್ರೇರಿತವಾಗಿತ್ತೆನಿಸುತ್ತೆ. ವಿಶ್ವ ಪರಿಸರದಿನಕ್ಕೇ ಚಿತ್ರಚಾಪ ಹೊರಬರಬೇಕಿತ್ತು. ಆದರೆ ಈಗ ಫೆಬ್ರುವರಿಯಲ್ಲಿ ಬರುತ್ತಿದೆ. ಯಾವಾಗ ಏನ್ ಆಗಬೇಕೋ ಆಗಲೇ ಆಗೋದು! ಸಂಗೀತ, ಕಲೆ, ಸಾಹಿತ್ಯ ಇವೆಲ್ಲವನ್ನೂ ಪೋಷಿಸ ಹೊರಟಿರುವ ಪ್ರಣತಿಯು ಸದಾ ಬೆಳಗುತಿರಲಿ.



ಚಿತ್ರಚಾಪಕ್ಕೆ ಗಿರೀಶ ಚೆಂದದ ಮುಖಪುಟವನ್ನು ಮಾಡಿಕೊಟ್ಟಿದ್ದಾನೆ. ಅವನಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು. ಹಂತ ಹಂತದಲ್ಲೂ ಗೆಳೆಯ ವಸುಧೇಂದ್ರ ದಾರಿ ತೋರಿದ್ದಾರೆ. ಅದ್ಭುತವಾದ ಮುನ್ನುಡಿಯನ್ನು ನಮಗಾಗಿ ಕೊಟ್ಟು ಆನಂದಬಾಷ್ಪ ತರಿಸುವಂತೆ ಮಾಡಿದ್ದಾರೆ. ಪ್ರೊ. ವೆಂಕಟಸುಬ್ಬಯ್ಯ ಅಂತು "I like your group" ಅಂತ ಹೇಳಿದಾಗ ಮನದೊಳಗಾದ ಆನಂದ ಹೇಳತೀರದು.

ಬಸವನಗುಡಿಯ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‍ನಲ್ಲಿ ನಮ್ಮ ಚಿತ್ರಚಾಪ ಮತ್ತು ಪ್ರಣತಿಯ ಬಿಡುಗಡೆ ಮತ್ತು ಉದ್ಘಾಟನೆಯನ್ನು ಹಮ್ಮಿಕೊಂಡಿದ್ದೇವೆ. ಅಮ್ಮ ವೀಣೆ ನುಡಿಸಲಿದ್ದಾರೆ. ಮೊದಲ ಕೃತಿಯಲ್ಲವೇ, ಏನು ಹೇಳಬೇಕು, ಅದರ ಬಗ್ಗೆ ಏನು ಬರೆಯಬೇಕು, ಏನೂ ತೋಚುತ್ತಿಲ್ಲ. ಒಟ್ಟಿನಲ್ಲಿ ಸಾಹಿತ್ಯ ಬಾಂದಳದ ಏಣಿಯ ಮೊದಲ ಮೆಟ್ಟಿಲನ್ನು ಕಾಣುತ್ತಿದ್ದೇವೆ. ಏರಲು ಇನ್ನೂ ಕೋಟ್ಯಾಂತರ ಮೆಟ್ಟಿಲುಗಳಿವೆ. ಎಲ್ಲರ ಆಶೀರ್ವಾದ, ಪ್ರೋತ್ಸಾಹದಿಂದ ಅದು ಸಾಧ್ಯ.

ಇದೇ ಭಾನುವಾರ.. ಪ್ರಕೃತಿಗೊಂದು ಕೃತಿ ಚಿತ್ರಚಾಪದ ಬಿಡುಗಡೆಗೆ ಬರುವ ನಿಮ್ಮೆಲ್ಲರನ್ನೂ ಕಾಯುತ್ತಿದ್ದೇವೆ. ಆಹ್ವಾನ ಪತ್ರಿಕೆಯು ನಿಮಗಾಗಿ ಇಲ್ಲಿದೆ. ಭಾನುವಾರ ಭೇಟಿ ಆಗೋಣ.



- ಅ
07.02.2008
12AM

4 comments:

  1. Wish you all people all the best... :-) nimme prayatnakke shubhaashayagaLu... :-) praNatiyu sadaa beLaguttirali.... nimminda innu hecchu hecchu krutigaLannu apeskshisuvava geLeya... :-) once again all the best....

    ReplyDelete
  2. ನಿಮ್ಮೆಲ್ಲರ ಪ್ರಯತ್ನಕ್ಕೆ ನನ್ನ ಅಭಿನಂದನೆಗಳು

    ReplyDelete
  3. All the best nim elrigu...
    Ide sandharbhadalli neenu tejaswi avranna kuuda nenskoLteeya anta anage gottu. :-) Correct taane? :-)

    ReplyDelete

ಒಂದಷ್ಟು ಚಿತ್ರಗಳು..