Thursday, November 15, 2007

ನಗುವು ಸಹಜದ ಧರ್ಮ

ಕೃಪೆ:
--> ಚಿತ್ರ ಕಳುಹಿದ ರಶ್ಮಿಗೆ ಕೋಟಿ ನಮನಗಳು
--> ಗಂಡಭೇರುಂಡರಿಗೆ ವಿಶೇಷ ಥ್ಯಾಂಕ್ಸ್, ಅವರ ಬರಹದ ಟೈಟಲ್ ಒಂದನ್ನು ನಾನು ಕದಿಯಲು ಅನುಮತಿ ಕೊಟ್ಟಿದ್ದಕ್ಕೆ..

ಸಹಜ = ಸ್ವಾಭಾವಿಕ.. ಇದನ್ನು ನೈಸರ್ಗಿಕ ಅಂತಲೂ ಅನ್ನಬಹುದೇ? ಪ್ರಕೃತಿಯು ಕೋಟ್ಯಾಂತರ ರೀತಿಯಲ್ಲಿ ನಗುತ್ತೆ. ಬೆಟ್ಟಗಳಲ್ಲಿ, ನದಿಗಳಲ್ಲಿ, ಝರಿಗಳಲ್ಲಿ, ತೊರೆಗಳಲ್ಲಿ, ಹಿಮದಲ್ಲಿ, ಮಳೆಯಲ್ಲಿ, ಎಳೆಬಿಸಿಲುಗಳಲ್ಲಿ, ಹಸಿರಿನಲ್ಲಿ, ಪ್ರಾಣಿಗಳಲ್ಲಿ..

ಇಲ್ಲಿ ನಗುತ್ತಿರುವ ಪರಿಯನ್ನು ನೋಡಿ ಯಾರಿಗೆ ತಾನೆ ಮುಖದ ಮೇಲೊಂದು ಸ್ಮಿತೆ ಮೂಡುವುದಿಲ್ಲ?-ಅ
15.11.2007
11PM

14 comments:

 1. ಮೊದಲಿಗೆ, ಈ ಚಿತ್ರವನ್ನು ಸೆರೆಹಿಡಿದವರಿಗೆ ಅನಂತಾನಂತ ವಂದನೆಗಳು... ಅತ್ಯದ್ಭುತ ಕ್ಷಣವನ್ನು ಸೆರೆಹಿಡಿದಿರುವುದಕ್ಕಾಗಿ....

  ಎರಡನೆಯದಾಗಿ, ಅದನ್ನು ನಮ್ಮೊಡನೆ ಹಂಚಿಕೊಂಡ ಅರುಣನಿಗೆ ಅನಂತಾನಂತ ವಂದನೆಗಳು...

  ಈ ಚಿತ್ರ ನೋಡ್ತಿದ್ರೆ ಪ್ರಕೃತಿ ನಮಗೆ ಒಂದು ಪಾಠ ಹೇಳಿಕೊಡೋ ಥರ ಕಾಣ್ತಿದೆ... ಅದು ಹೀಗಿದೆ:

  ನಗು, ಮನದಿ ಲೋಗರ ವಿಕಾರಂಗಳನು ನೋಡಿ;
  ಬಿಗಿ ತುಟಿಯ, ದುಡಿವಂದು-ನೋವಪಡುವಂದು!
  ಪೊಗು, ವಿಶ್ವಜೀವನದ ಜೀವಾಂತರಂಗದಲಿ;
  ನಗುನಗುತ ಬಾಳ್, ತೆರಳು! - ಮಂಕುತಿಮ್ಮ.....

  ReplyDelete
 2. title na kadyakke anumathi bere kodthaara....nan prakaara sammathi kodthaare...kadyakkalla...upyogsakke.... shupper agidhe....ee photo nodi kooda yaarigaadru smile barlilla andre avnu aaykondidaane anthaane artha... :-) Bhale photo..Rashmi avrige nannodondu JAI... :-)

  ReplyDelete
 3. BEAUTIFUL!!!!! :-) :-) :-)^:-)
  'speaktonature' alli nature speaking!! :-)

  Eega naniguuu 'kadyOke' neevu 'anumathi' koDi... :D
  En kett 'oLLe' kaLruuuu naavu.. heLi, keLi kadeetivi!! kaddmele yaarinda kaddvO avr hesru bibliography li bere :D :D
  Shaaaaabhaaashhh!!! Proud to be kaLLas! :-)

  inthaaaaa blissful smile na kadidE irOke aagallaaa...!!
  anumathi granted anta ankondu wait kooda maaDde kadeetaa idini..
  Just a notification- 'naanu idanna kaditideeni' anta...
  U see Im a very dignified kaLLa ;-)

  ReplyDelete
 4. [ಡೈನಮಿಕ್] ನೀನೂ ಇದೇ ಟೈಟಲ್ ಬಳಸಿಕೋತೀಯಾ?? ಮಜ್ಜಾ ಮಾಡು...

  [ಶ್ರೀಧರ] ನಮ್ ಕಡೆ ಅನುಮತಿ ಕೊಡ್ತಾರೆ.

  [ಗಂಡಭೇರುಂಡ] ಕಗ್ಗ ಬರೆದರೆ ನಮ್ಮಂಥ ಪಾಮರರಿಗೆ ಅರ್ಥವಾಗದು ಗಭೇ! ವಿವರಿಸಿ ಪ್ಲೀಸ್..

  ReplyDelete
 5. ನಿಮ್ಮ ಕ್ಯಾಮೆರ ಫೋಟೋ ಸೆನ್ಸ್ ಚೆನ್ನಾಗಿದೆ. ಅಲ್ಲ. ಬೊಂಬಾಟ್ ಆಗಿದೆ ಎಂದರೆ, ಅದು ಇನ್ನೂ ಕಡಿಮೆ ಅನ್ಸತ್ತೆ.

  ReplyDelete
 6. @Parisarapremi ::
  barii title ondE alla, pic-u baLskoteeni :D :D :D majjjjjaaaa nuuu maaDteeni!!! \:D/ \:D/

  ಸಹಜ = ಸ್ವಾಭಾವಿಕ.. ಇದನ್ನು ನೈಸರ್ಗಿಕ ಅಂತಲೂ ಅನ್ನಬಹುದೇ? --- anni..... dhaaraaLvaag anni!!! :D

  ReplyDelete
 7. [ಡೈನಮಿಕ್] ನಾನು ಗಂಡಭೇರುಂಡರ ಹಾಗೆ ಸುಮ್ನಿರಲ್ಲ. ಸುಪ್ರೀಮ್ ಕೋರ್ಟಿಗೆ ಹೋಗ್ತೀನಿ..

  [ಸುಶ್ರುತ ದೊಡ್ಡೇರಿ] ನಿಮ್ಮ ವೋವ್ ನೋಡಿ ಸ್ವಲ್ಪ ಭಯ ಆಯ್ತು..

  [ಬಾರೋ ಓಗಾನಾ] ಸರ್, ಇದು ನನ್ನ ಕ್ಯಾಮೆರಾ ಕಣ್ಣಿಗೆ ಬಿದ್ದದ್ದಲ್ಲ. ಬೇರೆಯವರು ಕ್ಲಿಕ್ಕಿಸಿದ್ದು..

  ReplyDelete
 8. ಎಂಥಹ ರೋಮಾಂಚನ ಕ್ಷಣ ಪ್ರಕೃತಿಯ ಜೀವಚರಾಚರದ ಒಂದು ಮುಖ್ಯ ಬಂಧುಗಳಾದ ಹಕ್ಕಿಗಳು ಹಾರುತ್ತಿರುವುದು ಮತ್ತು ಒಂದು ಪುಟ್ಟ ಮುಗ್ಲನಗೆಯ ಚಿತ್ತಾರವನ ಬೀರಿರುವುದು ನಿಜಕ್ಕೂ ಅದ್ಭುತ ರಮಣೀಯವಾಗಿದೆ.ಪ್ರಕೃತಿಯ ಮೊಗದೈಸಿರಿಯು ಸದಾ ಹೀಗೆ
  ಬೆಳಗುತಿರಲಿ ...

  ಇಂತಹ ಒಂದು ಅತಿ ಅಪರೂಪವಾದ ಚಿತ್ರ್ವವನ್ನು ಸೆರೆಹಿಡಿದವರಿಗೆ ಮತ್ತು ಇಲ್ಲಿ ಆ ಚಿತ್ರವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವ ಅಭಿಲಾಷೆಯಿರುವ ನಿಮಗೆ ದನ್ಯವಾದ ಅರುಣ್.

  ReplyDelete
 9. [ಸಮನ್ವಯನ] ಸೆರೆಹಿಡಿದವರಿಗೆ ನಮ್ಮೆಲ್ಲರ ಧನ್ಯವಾದಗಳೂ ತಲುಪಿರುತ್ತೆ. ಇನ್ನು ನನಗೆ ಹೇಳಿದ ಧನ್ಯವಾದಕ್ಕೆ ನಾನು ಋಣಿ. ಹೀಗೆ ಇನ್ನೊಂದಷ್ಟು ಸಿರಿಯು 'ಕ್ಷಿತಿಜದೆಡೆಗೆ'ಯಲ್ಲಿ ಮೂಡಿ ಬರಲೆಂದು ಹರಸಿ.

  ReplyDelete
 10. ನಗುವು "ಸಹಜ" ಧರ್ಮ -na??? athva ನಗುವು "ಸಹಜದ" ಧರ್ಮ -na??? Beautiful pic sir.. Already nan desktop background pic aagidhe :-)

  Radha..

  ReplyDelete
 11. @Radha ::
  En frequency Radhaaaa.... IdE same2same question na nan gurrrr ge keLidde naanu...
  naguvu "sahajada" dharma kaNammaaa.... :-)

  ReplyDelete
 12. ಕ್ಷಿತಿಜ:: ok saar.. explaining.. sorry for the delay..

  ನಗು, ಮನದಿ ಲೋಗರ ವಿಕಾರಂಗಳನು ನೋಡಿ;
  ಬಿಗಿ ತುಟಿಯ, ದುಡಿವಂದು-ನೋವಪಡುವಂದು!
  ಪೊಗು, ವಿಶ್ವಜೀವನದ ಜೀವಾಂತರಂಗದಲಿ;
  ನಗುನಗುತ ಬಾಳ್, ತೆರಳು! - ಮಂಕುತಿಮ್ಮ.....

  ಲೋಗರು = ಲೋಕದಲ್ಲಿ ವಾಸಿಸುವವರು...

  ನಮ್ಮ ಸುತ್ತಮುತ್ತ ಇರುವವರ ಮನಸ್ಸಿನ ವಿಕಾರಗಳನ್ನು ನೋಡಿ ನಾವು ಮನಸ್ಸಿನಲ್ಲೇ ನಗಬೇಕು. ಅಂತಹವರ ವಿಕಾರಗಳ ಬಗ್ಗೆ ನಾವೇನೂ ಮಾಡಲಾಗದಾದ್ದರಿಂದ ಸುಮ್ಮನೆ ನಕ್ಕು ಮುನ್ನಡೆದುಬಿಟ್ಟರೆ ಎಲ್ಲರಿಗೂ ಒಳಿತಾದೀತು. ಇಲ್ಲಿ ಗಮನಿಸಬಹುದಾದ ವಿಷಯವೆಂದರೆ "ಮನದಿ ನಗು".. ಬಾಹ್ಯದಿಂದಲ್ಲ! ಎಂದರೆ ಇತರರ ತಪ್ಪುಗಳನ್ನು ಜಗತ್ತಿಗೆ ಎತ್ತಿ ತೋರುವುದಲ್ಲ; ಅದನ್ನು ಮೌನದಿಂದ ನೋಡಬೇಕು. ಅಂತೆಯೇ, ನಾವು ದುಡಿಯುವಾಗ-ನೋವು ಪಡುವಾಗ ಜೋರಾಗಿ ರೋದಿಸುವುದು ಸಲ್ಲದು. ನಮಗೆಷ್ಟೇ ನೋವುಗಳಿದ್ದರೂ ಅದನ್ನು ನಾವಷ್ಟೇ ತುಟಿ ಬಿಗಿದು-ಹಲ್ಲು ಕಚ್ಚಿ ಸಹಿಸಬೇಕು. ಇತರರಿಗೆ ಕೇವಲ ನಗುವೊಂದನ್ನು ಮಾತ್ರ ಕೊಡಬೇಕು. ಹೀಗೊಂದು ಮನೋಭಾವ ನಮ್ಮೆಲ್ಲರಲ್ಲಿ ಮೂಡಿದ್ದೇ ಆದರೆ ನಾವು ವಿಶ್ವೈಕ್ಯರಾಗುತ್ತೇವೆ. ವಿಶ್ವದಲ್ಲಿ ಎಲ್ಲರಲ್ಲೂ ಒಂದಾಗಿಬಿಡುತ್ತೇವೆ. ಎಲ್ಲರಿಗೂ ಬೇಕಾದವರಾಗುತ್ತೇವೆ. ಅದಾಗಬೇಕು ಎಂಬುದೇ ಕವಿಯ ಆಶಯ. ಕೊನೆಗೆ ಲೋಕಕ್ಕೊಂದು ಸಂದೇಶವನ್ನು ಕೊಡುತ್ತಾರೆ ಕವಿ: ಅದೆಂದರೆ ನಾವಿರುವಷ್ಟು ದಿನ ಸಂತೋಷದಿಂದ ನಗುನಗುತ್ತ ಇದ್ದು ಕಡೆಗೆ ಕರೆ ಬಂದಾಗ ನಗುತ್ತಲೇ ಈ ಲೋಕ ಬಿಟ್ಟು ತೆರಳಿಬಿಡಬೇಕು.. ಎಂದಿಗೂ ನಾವು ಹಿಂಸೆಪಟ್ಟು, ಪರರನ್ನೂ ಹಿಂಸಿಸುತ್ತಿರಬಾರದು. ನಗುನಗುತ್ತ ಇರುವುದೇ ಜೀವನದ ಶೈಲಿಯಾಗಿರಬೇಕು.....

  (tried to keep it as short as possible... corrections idre dayaviTTu hELi kshitijare...)

  ReplyDelete

ಒಂದಷ್ಟು ಚಿತ್ರಗಳು..