Sunday, September 23, 2007

ಬತ್ತಿಹೋದ 'ಗಂಗೆ'ಗಳು

ಮೊನ್ನೆಯ ಮಳೆಯಿಂದ ಬೆಂಗಳೂರಿನ ಅನೇಕ ಮನೆಗಳಲ್ಲಿ ನೀರು ಹೊಕ್ಕು ಎಲ್ಲರಿಗೂ ಸುಸ್ತು ಹೊಡೆಸಿದ್ದು ಬಹಳ ಸತ್ಯ. "ಇಲಿ ಹೋದರೆ ಹುಲಿ ಹೋಯಿತು" ಎನ್ನುವ TV 9 ಅವರು ಹುಲಿಯೇ ಹೋದರೆ ಡೈನಾಸರ್ ಹೋಯಿತೆನ್ನದೇ ಇರುವರೇ? ಈ ಮಳೆಯ ಸುದ್ದಿಯು ಬಹಳ ವಿಸ್ತಾರವಾಗಿ ಪ್ರಸಾರವಾಗಿತ್ತು.

ನೀರು ಹೊಕ್ಕ ಮನೆಗಳು ಇರುವ ಜಾಗಗಳ, ಮತ್ತೆ ಮಳೆ ನೀರು ನಿಂತು, ಅಥವಾ ಉಕ್ಕಿ ಹರಿದು ಜನ ತೊಂದರೆಗೀಡಾದ ಜಾಗಗಳ ಬಗ್ಗೆ ಒಂದು ಸಣ್ಣ ಪರ್ಯಟನೆ ಮಾಡಿದೆ ಈ ವಾರ. ಅವುಗಳ ಪಟ್ಟಿ ಈ ರೀತಿಯಿದೆ.

--> ಮೆಜೆಸ್ಟಿಕ್ ಬಸ್ ಸ್ಟಾಂಡ್ - ಧರ್ಮಾಂಬುಧಿ ಕೆರೆ ಇದ್ದ ಜಾಗ

--> ವಯ್ಯಾಲಿಕಾವಲ್ - ಸ್ಯಾಂಕಿ ಕೆರೆಯು ಮೆರೆದಿದ್ದ ಜಾಗ

--> ಹೊಸಕೆರೆ ಹಳ್ಳಿ - ದೊಡ್ಡ ಕೆರೆಯು ಈಗ ಬಡಾವಣೆ ಆಗಿದೆ

--> ಮಡಿವಾಳ - ಮಡಿವಾಳ ಕೆರೆ ಎಲ್ಲಿಗೆ ಹೋಗಿದೆಯೋ ಏನೋ

--> ಬಿ.ಟಿ.ಎಮ್. ಲೇ ಔಟ್ - ಕೆರೆ ಮುಚ್ಚಿ ಲೇಔಟ್ ಮಾಡು

--> ಚೆನ್ನಮ್ಮನಕೆರೆ ಅಚ್ಚುಕಟ್ಟು - ಹೆಸರೇ ಹೇಳೋದಿಲ್ವೇ ಇಲ್ಲಿ ಕೆರೆ ಇತ್ತು ಅಂತ!

--> ರಾಜರಾಜೇಶ್ವರಿ ನಗರ - ಇದು 'ನಗರ'ವಾಗಿದ್ದು ಇತ್ತೀಚೆಗಷ್ಟೇ. ಇಲ್ಲಿ ವೃಷಭಾವತಿ ಹರಿಯುತ್ತಿದ್ದಳು. ಅವಳೀಗ ದೊಡ್ಡ ಮೋರಿಯಾಗಿದ್ದಾಳೆ.

--> ಎಲೆಕ್ಟ್ರಾನಿಕ್ ಸಿಟಿ - ಇಲ್ಲಿದ್ದ ಕೆರೆಗಳೆಲ್ಲಾ ಕಾನ್‍ಕ್ರೀಟು ಕಾಡಾಗಿದೆ.

--> ಕಾಳಿದಾಸ ಲೇಔಟ್ - ಕಣಿವೆಯಂಥಾ ಜಾಗ

--> ಪ್ರಮೋದ್ ನಗರ - ಹೊಲಗದ್ದೆಗಳಿದ್ದ ಸ್ಥಳ

--> ಹೆಬ್ಬಾಳ - ಹೆಬ್ಬಾಳದ ಕೆರೆಯು ಈಗ ಟ್ಯಾಂಕ್ ಆಗೋಗಿದೆ

--> ವೆಂಕಟಾದ್ರಿ ಲೇಔಟ್ - ಭನ್ನೇರುಘಟ್ಟದ ಕಾಡು ಇದ್ದ ಜಾಗ

--> ಹೆಚ್. ಎಸ್. ಆರ್. ಲೇಔಟ್ - ಮಡಿವಾಳ ಕೆರೆ ಇಲ್ಲಿಯವರೆಗೂ ಆವರಿಸಿತ್ತು

--> ಹೊಸೂರು ರಸ್ತೆಯ ಲೇಔಟುಗಳು - ಬೊಮ್ಮನ ಹಳ್ಳಿಯ ಕೆರೆ, ಬೆಳ್ಳಂದೂರಿನ ಕೆರೆ, ಹೀಗೆ ಹಲವಾರು ಕೆರೆಗಳು ಲೇಔಟ್ ಆಗಿರುವ ಸ್ಥಳಗಳು

ಬೆಂಗಳೂರು ಹಸಿರು ನಗರ, ಕೆರೆಗಳ ನಗರ, ಸ್ಮಾರಕಗಳ ನಗರ, ಹವಾನಿಯಂತ್ರಿತ ನಗರ - ಆಗಿತ್ತು. ಇದನ್ನು ಈಗ ಎಷ್ಟು ಹದಗೆಡಿಸಿದೀವಿ ಎಂಬುದಕ್ಕೆ ಮೊನ್ನೆಯ ಮಳೆಯ ನಂತರ ಆದ ಅವಾಂತರವೇ ಸಾಕ್ಷಿ.

ಇದು ದಾಖಲೆ ಮಳೆ ಹಾಗೆ ಹೀಗೆ ಅಂತೆಲ್ಲಾ ನಾವು ನ್ಯೂಸ್ ಚಾನೆಲ್‍ಗಳಲ್ಲಿ ನೋಡಿದೆವಲ್ಲಾ, ಇವೆಲ್ಲಾ ವೈಭವೀಕರಣ ಅಷ್ಟೇ. ತಮ್ಮ ಚಾನೆಲ್‍ನಲ್ಲಿ ಬೆಂಗಳೂರು ನಶಿಸುತ್ತಿರುವ ಚಿತ್ರಣ ತೋರಿಸಿದರೆ ಸರ್ಕಾರವನ್ನು ಟೀಕಿಸಬಹುದು, ಮಸಿ ಬಳೆಯಬಹುದು ಅಂತ. ಸರ್ಕಾರದವರು ಅಷ್ಟೂ ಸುಲಭವಾಗಿ ಟೀಕೆಗೆ ಒಳಪಡುತ್ತಾರೆಯೇ? ಅವರ ಮುಖಕ್ಕೆ ಮಸಿ ಅಲ್ಲ, ಸಂಡಾಸು ಬಳಿದರೂ ಅವಮಾನ ಆಗದವರು ಮಾತ್ರ ರಾಜಕಾರಣಿಗಳಾಗುವುದು ಅಂತ ಯಾರೋ ಸಿಟ್ಟು ಮಾಡಿಕೊಂಡು ಯಾವುದೋ ಚಾನೆಲ್ಲಿನ ಸಂದರ್ಶನವೊಂದರಲ್ಲಿ ಹೇಳುತ್ತಿದ್ದರು.

ಕೆಲವರು ಮಳೆಯನ್ನೇ ಶಪಿಸುತ್ತಿದ್ದರು. ಹೀಗೆ ಮಳೆ ಬಂದ್ಬಿಟ್ರೆ ಏನು ಮಾಡೋದು ಅಂತ. ಮಳೆಯ ನಿರ್ಮಾಪಕನಿಗೆ ಕೆರೆಗಳು ಲೇಔಟ್‍ಗಳು ಆಗಿರುವುದು ಗೊತ್ತಿಲ್ಲ. ಹೇಳದೇ ಕೇಳದೇ, ತನ್ನ ಜಾಗವನ್ನು encroach ಮಾಡಿಕೊಂಡು ವಾಸಿಸತೊಡಗಿದರೆ ನಿರ್ಮಾಪಕನಿಗೆ ಏನು ಗೊತ್ತಾಗುತ್ತೆ? ತನ್ನ ದಾಖಲೆಗಳಲ್ಲಿ ಇಲ್ಲಿ ಕೆರೆಯಿದೆ, ಮಳೆ ಹುಯ್ದು ಕೆರೆ ತುಂಬಿಸಬೇಕು ಎಂಬುದು ಮಾತ್ರ ಇರುತ್ತೆ. ಅಲ್ಲಿ ಲೇಔಟ್ ಇರುವುದು ತನ್ನ ದಾಖಲೆಗಳಲ್ಲಿ update ಆಗಿರೋದಿಲ್ಲ. ಒಂದು ಭೌಗೋಳಿಕ ಸ್ಥಳ ನಿರ್ಮಾಣವಾಗುವಾಗಲೇ ಇಲ್ಲಿ ಬೆಟ್ಟ, ಇಲ್ಲಿ ಕೆರೆ, ಇಲ್ಲಿ ನದಿ, ಇಲ್ಲಿ ಕಡಲು, ಇಲ್ಲಿ ಬರಡು - ಹೀಗೆ ನಿರ್ಧಾರ ಆದ ನಂತರವೇ ಪ್ರಕೃತಿಯು ನಿರ್ಮಾಣ ಕೆಲಸ ಮಾಡಿರುವುದು. ನಾವು ಅಕ್ರಮವಾಗಿ ಕೆರೆಗಳನ್ನು ಬತ್ತಿಸಿದ್ದೇವೆ. ಮರಗಳನ್ನು ನೆಲಕ್ಕುರುಳಿಸಿದ್ದೇವೆ. ಪ್ರಾಣಿ ಪಕ್ಷಿಗಳೊಡನೆಯ ಸಹಬಾಳ್ವೆಯನ್ನು ಮರೆತಿದ್ದೇವೆ. ಒಂದು ಜಿರಲೆ ಬಂದರೂ ವಿಷ ಹಾಕಿ ಕೊಲ್ಲುತ್ತೇವೆ. "ನಮ್ಮ" ಸೈಟಿನಲ್ಲಿ ಮರವಿದೆಯಾ, ಕಡಿದು ಮನೆ ಕಟ್ಟುತ್ತೇವೆ. ಬೋರ್‍ವೆಲ್‍ಗಳಿಗೆ ಲೆಕ್ಕವೇ ಇಲ್ಲ. ತೋಡಿ ತೋಡಿ ಅಮೇರಿಕಾವರೆಗೂ ಹೋಗಿಬಿಡುತ್ತೇವೆ.ಇದ್ಯಾವುದೂ ಸಹ್ಯವಲ್ಲ.

ಎಲ್ಲರಿಗೂ ಬೆಂಗಳೂರೇ ಬೇಕು. ಮೊದಲಿನಿಂದ ಇಲ್ಲಿದ್ದವರಿಗೆ, ಭಾರಿ ಭಾರಿ ಬಹುರಾಷ್ಟ್ರೀಯ ಕಂಪೆನಿಗಳನ್ನು ಇಲ್ಲಿ ತೆಗೆದವರಿಗೆ, ಅಲ್ಲಿ ಕೆಲಸ ಮಾಡಲು ದೇಶದ ಎಲ್ಲೆಡೆಯಿಂದ ಇಲ್ಲಿಗೆ ಬರುವವರಿಗೆ, ಕೆಲಸ ಹುಡುಕುವವರಿಗೆ, ಬೀದಿ ಸುತ್ತುವವರಿಗೆ, ಜೈವಿಕ ತಂತ್ರಜ್ಞಾನದವರಿಗೆ, ಮಾಹಿತಿ ತಂತ್ರಜ್ಞಾನದವರಿಗೆ, ಬಾಹ್ಯಾಕಾಶ ತಂತ್ರಜ್ಞಾನದವರಿಗೆ, ವಿದ್ಯಾವಂತರಿಗೆ, ಅನಕ್ಷರಸ್ಥರಿಗೆ, ಪ್ಲಾಸ್ಟಿಕ್ ಮಾರುವವರಿಗೆ, ಅಡ್ವೆಂಚರ್ ಮಾಡುವವರಿಗೆ - ಒಟ್ಟಿನಲ್ಲಿ ಹಣ ಮಾಡಬೇಕೆಂಬ ಮನಸ್ಸಿದೆಯಾ ಬೆಂಗಳೂರಿಗೆ ಮೊದಲು ಹೋಗು - ಎಂಬ ಸಂದೇಶವು ಪ್ರತಿಯೊಬ್ಬನ ಮೆದುಳುಗಳೂ ಕಳಿಸುತ್ತಿವೆ! ಎಲ್ಲರಿಗೂ ಜಾಗ ಕೊಡಲು ಹೋದ ಬೆಂಗಳೂರು ತನ್ನ ಅಂಗಗಳನ್ನೇ ತ್ಯಾಗ ಮಾಡುವಂತಾಗಿ ಕೆರೆ, ಮರ, ಹಸಿರು, ಸ್ಮಾರಕ - ಎಲ್ಲವನ್ನೂ ಕಳೆದುಕೊಳ್ಳುತ್ತಾ ಬರುತ್ತಿದೆ.

ಬೆಂಗಳೂರು ಸರ್ವನಾಶದ ಬುನಾದಿ ಹಾಕಿತೆಂದು ಕೆಲವು ತಜ್ಞರು ಹೇಳಿದರು. ಸರ್ವನಾಶದ ಕಾಲ ದೂರವಿಲ್ಲ - ಸರ್ವನಾಶ ಬರೀ ಬೆಂಗಳೂರಿನದಲ್ಲ, ಬೆಂಗಳೂರಿಗರದಲ್ಲ. ಇಡೀ ಮನುಕುಲಕ್ಕೆ ಪ್ರಕೃತಿಯು ಅನೇಕ ರೀತಿಯ ಸಂದೇಶ ಕಳುಹಿಸುತ್ತಲೇ ಇದೆ, ಕಳೆದ ಐದು ವರ್ಷದಿಂದ. "ಬಡ್ಡಿಮಕ್ಳಾ, ನನಗೆ ನೀವುಗಳು ರೆಸ್ಪೆಕ್ಟ್ ಕೊಡ್ತಾ ಇಲ್ಲ, ನಿಮ್ಮನ್ನು ನಾಮಾವಶೇಷ ಮಾಡುತ್ತೇನೆ.." ಅಂತ - ಸುನಾಮಿ, ಭೂಕಂಪ, ಚಂಡಮಾರುತ, ಅತಿವೃಷ್ಟಿ, ಅನಾವೃಷ್ಟಿ ಹೀಗೆ! ಇವೆಲ್ಲಕ್ಕೂ ನಾವೇ ಕಾರಣ.

"ನಾವು" ಅಂದರೆ, ಪ್ರಕೃತಿಯ ಅಂಗವಾದ ಮನುಷ್ಯರು. ಪ್ರಕೃತಿಯ ಉಳಿದೆಲ್ಲ ಅಂಗಗಳನ್ನು ತಮ್ಮದೆಂಬ ಕಲ್ಪನೆಯಿಂದಲೇ ಕಡಿದು ಹಾಕುತ್ತಾ ಬರುತ್ತಿರುವ ರಾಕ್ಷಸರು. ಹಣವೊಂದೇ ಮನಸ್ಸಿನಲ್ಲಿ ಇಟ್ಟುಕೊಂಡು ನೀರನ್ನೂ ಹಸಿರನ್ನೂ ಬಂಡೆಗಳನ್ನೂ ಬರಿದಾಗಿಸುತ್ತಿರುವ ಅಯೋಗ್ಯ ರಾಜಕಾರಣಿಗಳು. ಅಂಥವರನ್ನು ರಾಜಕಾರಣಿಗಳನ್ನಾಗಿಸಿರುವ ಪ್ರಜೆಗಳು - ಸಕಲ ವ್ಯವಸ್ಥೆಯೇ ಹೀಗೆ. ಅಡಿಗರ ಮಾತಿನಲ್ಲಿ ಹೇಳುವುದೆಂದರೆ ಇದೊಂದು ಬತ್ತಲಾರದ ಗಂಗೆ!

"ಮಾನವ ಜನ್ಮ ದೊಡ್ಡದು.." (ಅಂತೆ)

- ಅ
24.09.2007
12PM

9 comments:

 1. BengLur nalli istond keregaLu idva?? Gotte irlilla nodi....
  ಬೆಂಗಳೂರು ಹಸಿರು ನಗರ, ಕೆರೆಗಳ ನಗರ, ಸ್ಮಾರಕಗಳ ನಗರ, ಹವಾನಿಯಂತ್ರಿತ ನಗರ - ಆಗಿತ್ತು....

  Howdu munche ivella upamegaLinda kareyalpaDuttittu "namma" bengLuru, ivaga "avakaashagaLa nagara" aagidhe... "avakaaaShavaadigaLa" nagara kooDa aagbitte.... iDee deshadina bandu illi serkothidaare jana danagaL thara ....dodd kompe aagitde nam bengLuru...ivakkella root cause andre aa boLi makLu...120+ Engineering colleges open maadidde istakkella kaaraNa antha nann abhipraaya.... ella kade inda jana bandru education nepadali...education mugdmele hodra? illa.... ille mane maTa maadkondru..nammavarige jaaga sigdiro antha paristhithi...

  so real estate vyaapara boom aaythu...taggu pradeshagaLna, keregaLna ella nungi neer kudidu mane maadidru..ivaga anubhavisthaa iddare...maLe banre..elladakku limit antha iratte... bengLur limit daati beLeetha ide..... late aaagi aadru namma ghana sarkaaradavru ecchettukondu samasyegaLa saramaalage parihaara hudukuvudu oLitu....... en hudukthaaro eno kurchi ge guddadode aagoythu ella nan makLaddu...........

  ReplyDelete
 2. ನಿನ್ನ ಕಮೆಂಟನ್ನು ಧೀರೇಂದ್ರ ಗೋಪಾಲ್ ಧ್ವನಿಯಲ್ಲಿ ಓದ್ಕೊಳೋಕೆ ಸಕ್ಕತ್ತಾಗಿದೆ...

  ReplyDelete
 3. ಹೌದು, ಬೆಂಗಳೂರಿನಲ್ಲಿ ಕೆರೆಗಳು ರಾರಾಜಿಸುತ್ತಿದ್ದವು. ಬೆಂಗಳೂರು ಅಷ್ಟೊಂದು ತಂಪಾಗಿದ್ದುದಕ್ಕೆ ಆ ಕೆರೆಗಳೇ ಕಾರಣ. ಕೆರೆಗಳು, ಮತ್ತು ಮರಗಳು. ಈಗ ಎಲ್ಲವೂ ಮಾಯ. ಎಲ್ಲವನ್ನೂ ಗುಳುಂ ಮಾಡಿಬಿಟ್ಟಿದ್ದೇವೆ. ನೀನ್ ಹೇಳ್ದ್ ಹಾಗೇ "ಅವಕಾಶ"ಕ್ಕೋಸ್ಕರ.

  ಇಂಜಿನಿಯರಿಂಗ್ ಕಾಲೇಜು ಕೇವಲ ಒಂದು ಅಂಶ ಅಷ್ಟೇ. ಶೇ. ೧೦ ಇದರಿಂದ ತೊಂದರೆಗೀಡಾಗಿರಬಹುದು. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಇಲ್ಲಿ ಬಂದು ನೆಲೆಸುತ್ತಾರೆ ಮಾತ್ರವಲ್ಲದೇ, ಇಲ್ಲಿ ಬದುಕಲೆಂದೇ ಬರುತ್ತಾರಲ್ಲಾ, ಹಣವನ್ನರಿಸಿ.. ಅವರ ಸಂಖ್ಯೆಯೇ ಜಾಸ್ತಿ.

  ಕುರ್ಚಿಗಳನ್ನು ಮಾತ್ರ ಬೈದು ಪ್ರಯೋಜನ ಇಲ್ಲ. ಅವರನ್ನು ಆ ಕುರ್ಚಿ ಮೇಲೆ ಕೂರಿಸಿರುವವರೇ ನಾವು. ನಮಗೆ ನಾವು ಮೆಟ್ಟಿನಲ್ಲಿ ಹೊಡೆದುಕೊಳ್ಳಬೇಕು.

  ReplyDelete
 4. Engineering colleges kevala ondu amsha alla...nan prakaara adondu prabhalavaada amsha... bengLur ge jana barakke adhu gateway....
  ಅವರನ್ನು ಆ ಕುರ್ಚಿ ಮೇಲೆ ಕೂರಿಸಿರುವವರೇ ನಾವು. ನಮಗೆ ನಾವು ಮೆಟ್ಟಿನಲ್ಲಿ ಹೊಡೆದುಕೊಳ್ಳಬೇಕು.
  ee melin maathna naan opalla... :-)

  ReplyDelete
 5. ಒಪ್ಪದೇ ಇರೋರು ಸಮರ್ಥನೆ ನೀಡಬೇಕು.

  ReplyDelete
 6. khanditha needtheeni.... adakkende separate aagi bareetheeni.... :-)

  ReplyDelete
 7. satya satya... yeDiyur kere idyalla adara sutta iro flat gaLella kereyinda kadda site alli... sumaar 10 acre egrOgide...

  kereya neeranu kerege chelluvudu prakrutiya niyama... idannu badalisalu huTToo illa huTTOdu illa

  ReplyDelete
 8. houdu houdu ellA keregaLanna sarvanAshana mAdthirore ee baddimakkLu developes antha board hakondiroro yAvandru rAjakiyodnu swlpa duddu duddu antha kisithidre avnge chennagi mundAistha keregalanna mucchi concrete palacegalanna nirmAna madi uddara mAdthiddare

  kere Agirli maragaLanna kadithairtharalla adeken annodhu

  otnalli manushya thanna haLLavanna thAne thodkothaiddane ashte

  ReplyDelete
 9. ಈ ಲೇಖನ ಓದಿದ ಮೇಲೆ ನನಗೆ ಹೀಗೆ ಕೇಳಬೇಕು ಅನ್ನಿಸಿತು.."ನಾವೇಕೆ ಹೀಗೆ ?"

  ReplyDelete

ಒಂದಷ್ಟು ಚಿತ್ರಗಳು..