Thursday, August 23, 2007

ಸೊಬಗಿನ ಕನ್ನಡ ನಾಡು..

"ಯಾಕಪ್ಪಾ ನೀನು ಅಷ್ಟೊಂದು ಪ್ರಯಾಣ ಮಾಡ್ತೀಯ?" ಅಂತ ಯಾರೋ ಕೇಳಿದರು ಮೊನ್ನೆ ತಾನೆ. ಆಗ ಅವರಿಗೆ ಉತ್ತರ ಕೊಡಲು ಏನೂ ಹೊಳೆಯಲೇ ಇಲ್ಲ. "ನಂಗೆ ಇಷ್ಟ ಅದಕ್ಕೆ" ಅಂದುಬಿಟ್ಟೆ. ನಾನು ಪಯಣ ಮಾಡಲು ಹಲವು ಕಾರಣಗಳಿವೆ. ಇಲ್ಲಿರದೇ ಇರುವುದನ್ನು ಅನುಭವಿಸುವ ಹಂಬಲವು ಈ ಕಾರಣಗಳಲ್ಲೊಂದು.

ಕರ್ನಾಟಕದಲ್ಲೇ ಬೆಂಗಳೂರಿಗರ ಅನುಭವಕ್ಕೆ ನಿಲುಕದ್ದು ಎಷ್ಟೊಂದು ಇದೆ. ರಾಜಧಾನಿಯಲ್ಲಿ ಇವೆಲ್ಲಾ ಇದ್ದಿದ್ದರೆ ಹೇಗಿರುತ್ತಿತ್ತು?
 • ತೀರ್ಥಹಳ್ಳಿಯ ಮಳೆ
 • ಗುಲ್ಬರ್ಗದ ಬಿಸಿಲು
 • ಕೆಮ್ಮಣ್ಣುಗುಂಡಿಯ, ಕೊಡಗಿನ ಚಳಿ
 • ಧಾರೇಶ್ವರದ ಕಡಲ ತೀರ
 • ಉತ್ತರ ಕನ್ನಡ ಜಿಲ್ಲೆಯ ಜಲಧಾರೆಗಳು
 • ಸಕಲೇಶಪುರದ ಹಸಿರು
 • ಉಡುಪಿಯ ತೇವಾಂಶ
 • ಬೇಲೂರು ಹಳೆಬೀಡು ಸೋಮನಾಥಪುರದ ಶಿಲ್ಪಕಲೆ
 • ಮೈಸೂರಿನ ಹಕ್ಕಿಗಳು
 • ಬಂಡಿಪುರದ ಹುಲಿ
 • ನಾಗರಹೊಳೆಯ ಆನೆ
 • ಆಗುಂಬೆಯ, ಬಿಸಿಲೆಯ ಕಾಳಿಂಗ ಸರ್ಪ
 • ದಕ್ಷಿಣ ಕನ್ನಡ ಜಿಲ್ಲೆಯ ಶಿಖರಗಳು
 • ಸೋಮವಾರ ಪೇಟೆಯ ನದಿತೀರದ ಕ್ಯಾಂಪು
 • ಹಂಪೆಯ ಗತವೈಭವ
 • ಮುಳ್ಳಯ್ಯನಗಿರಿಯ ನೀಲಕುರಿಂಜಿ
 • ಕನಕಪುರದ ಗುಬ್ಬಚ್ಚಿ
 • ಬಿಳಿಗಿರಿರಂಗನ ಬೆಟ್ಟದ ಇರುಳಲ್ಲಿ ಕಾಣುವ ಚುಕ್ಕಿಗಳು
 • ಸೋಲಿಗೆರೆಯ ಗುಡಿಸಲಿನೂಟ
 • ದೇವಕಾರದ ತಂಗುಸ್ಥಳ
 • ಕೊಡಚಾದ್ರಿಯ ಸೂರ್ಯೋದಯ ಸೂರ್ಯಾಸ್ತಮ
 • ಕುದುರೆಮುಖದ ಸ್ವರ್ಗ ದರ್ಶನ
 • ಬ್ರಹ್ಮಗಿರಿಯ ಜಿಗಣೆ

ಈ ಊರಲಿ ಏನುಂಟು ನೀನೇ ಹೇಳಮ್ಮಾ..

-ಅ

23.08.2007

7.30AM

6 comments:

 1. ಆಹಾ! ಎಷ್ಟು ಎಕ್ಸಾಕ್ಟಾಗಿ ಗುರ್ತಿಸಿದೀರಾ.. ಪಾಯಿಂಟಿಸಿ ಬರ್ದಿದೀರ.. ಹೌದಲ್ಲ.. ಈ ನಾಡಲಿ ಏನಿಲ್ಲ..?

  ReplyDelete
 2. ee ooralli (beglooralli) idelladara korathe ide :-). sikkapatte gaadigaLu, adrindaago pollution ide.
  Alla, ille ella idbittididre alli hogi anubhaviso suvarna avakaasha elli bartittu!!! adakkadru begloorge credit kodbeku :-)

  ReplyDelete
 3. KP ಬಿಟ್ಯಾ! ಈ ಎಲ್ಲಾ ಕಡೆ ಇರುವ common factor - ಬೆಂಗಳೂರಿಗಿಂತ ಒಳ್ಳೆ ಪರಿಸರ...

  ಬೆಂಗಳೂರಿನಲ್ಲಿ ಏನುಂಟು? - ಬೆಂಗಳೂರಿನಲ್ಲಿ ಸಾವಿರಗಟ್ಟಲೆ ರೂಪಾಯಿಗಳನ್ನು ಕೊಡುವ ಕೆಲಸಗಳುಂಟು! ಅದು ಬಿಟ್ರೆ ಏನಿಲ್ಲ!

  ReplyDelete
 4. ಸಕತ್ತಾಗಿ ಹೇಳಿದಿರ ಅರುಣ್,
  ಇದೇ ರೀತಿ ಇನ್ನು ಬೇಕಾದಷ್ಟು ಪಟ್ಟಿ ಮಾಡ್ಬೋದು.
  ವಿಪರ್ಯಾಸ ಅಂದ್ರೆ ಹೆಚ್ಚು ಜನರಿಗೆ(ಅದರಲ್ಲೂ ಬೆಂಗಳೂರಿಗರಿಗೆ) ಇಂಥ ಸ್ಥಳಗಳ ಬಗ್ಗೆ ಅದರ ಸೊಬಗಿನ ಬಗ್ಗೆ ಮಾಹಿತಿ ಇರಲ್ಲ, ಇದ್ರೂ ಆಸಕ್ತಿ ಇರಲ್ಲ, ಅದನ್ನು ಸವಿಯೋ ಮನಸ್ಸು ಇರಲ್ಲ. ಗರುಡಾ ಮಾಲ್, ಫೋರಂ, ಎಲೆಕ್ಟ್ರಾನಿಕ್ ಸಿಟಿ,ಐ.ಟಿ.ಪಿ.ಎಲ್, ಎಂ.ಜಿ.ರೋಡು ಇತ್ಯಾದಿಗಳನ್ನೇ ಜಗತ್ತೆಂದುಕೊಂಡಿರುವವರು, ಅದರಲ್ಲೇ ಸುಖ ಕಾಣುವವರು ಬಹಳ ಮಂದಿ.

  ReplyDelete
 5. ನನಗಂತು ಬೆಂಗಳೂರಿನಿಂದ ಯಾವಗ ನಿಸರ್ಗಕ್ಕೆ ಹತ್ತಿರವಾಗಿರುವ ಮಲೆನಾಡಿಗೆ ಹೋಗಿ ಅಲ್ಲೇ ಸೆಟ್ಲ್ ಹಾಗೋ ಅವಕಾಶ ಸಿಗುತ್ತೋ ಅನ್ಕೋತಿರ್ತಿನಿ ಅಷ್ಟು ಬೇಜಾರ್ ಆಗೋಗಿದೆ ಬೆಂಗಳೂರು ಅಂದ್ರೆ
  ಉದಾಹರಣೆಗೆ ಹೇಳ್ಕೊಳಕ್ಕೆ ಅಂತ ಬೆಂಗಳೂರಿನಲ್ಲಿ ಇರೋ ಬನ್ನೇರುಘಟ್ಟ ಅಭಯಾರಣ್ಯ ಕ್ಕೆ ಹೋಗುವಾಗ ಪೂರ್ತಿ ಕಾಡು ಇದ್ದ್ದಾಗೆ ಇರ್ತಿತ್ತು ಹೀಗ ಬನ್ನೇರ್ ಘಟ್ಟ್ ರೋಡ್ ನಲ್ಲಿ ಸಾಪ್ಟ್ವೇರ್ ಕಂಪನಿಗಳದ್ದೇ ದರ್ಬಾರ್

  ಈ ಊರಲ್ಲಿ ಏನಿದೆ ಅಂದ್ರೆ ಕನ್ನಡ ಗೊತ್ತಿದ್ರು ಮಾತಾಡೋಕೆ ನಾಚಿಕೆ ಪಡೋ ಯುವಪಿಳಿಗೆ ಅದನ್ನೆ ಕೆಲವರು ಸರಿ ಅಂದುಕೊಂಡು ತಮ್ಮ ಮಕ್ಕಳಿಗೆ ಅರಿವು ಮೂಡಿಸದೇ ಇರುವ ಪೋಷಕರು ಮತ್ತು ಇತ್ತಿಚೇಗೆ ಪಾಶ್ಚಾತ್ಯ ದೇಶಗಳ ಸಂಸ್ಕೃತಿ ಬೆಂಗಳೂರು ನಗರದಲ್ಲಿ ರಾರಾಜಿಸುತ್ತಿದೆ ಅಷ್ಟೆ.

  ಇನ್ನೇನು ಇಲ್ಲ ಇಲ್ಲಿ :(

  ReplyDelete

ಒಂದಷ್ಟು ಚಿತ್ರಗಳು..