Friday, August 17, 2007

ನಾಗರ ಪಂಚಮಿ...

ಬೆಳಗಾಗೆದ್ದರೆ ನಾಗರ ಪಂಚಮಿ. ಹುತ್ತದ ಸುತ್ತಲೂ ನಾಗಪ್ಪನ ಭಕ್ತರು! ಹಾವಿಗೆ ಹಾಲೆರೆಯಲು!!


ಕೆಲವು ಸಂಗತಿಗಳನ್ನು ಭಕ್ತರು ತಿಳಿದುಕೊಂಡರೆ ತಾವು ಪೂಜಿಸುವ ದೇವರಿಗೊಳಿತು.

ಹಾವು ಹಾಲು ಕುಡಿಯುವ ಪ್ರಾಣಿಯಲ್ಲ. ಗೌರವ ಕೊಡಲೇ ಬೇಕು ಅಂದರೆ ಹಾವಿನ ತಂಟೆಗೆ, ಹುತ್ತದ ತಂಟೆಗೆ ಹೋಗದಿರಿ. ಹೋದರೆ ಹಾಲನ್ನು ಮಾತ್ರ ಹುತ್ತದೊಳಕ್ಕೆ ಹಾಕಬೇಡಿ. ಹಾವು ಮಾಂಸಾಹಾರಿ ಪ್ರಾಣಿ. Carnivorous animal.

ಎರಡು, ಅರಿಶಿನ ಕುಂಕುಮಗಳನ್ನು ಹಾವಿರುವ ಹುತ್ತದೊಳಕ್ಕೆ ಸುರಿಯದಿರಿ. ಅರಿಶಿನ ಮತ್ತು ಕುಂಕುಮಗಳು ಹಾವನ್ನು ಕೊಲ್ಲಬಲ್ಲುದು.

ಮೂರನೆಯದಾಗಿ, ಹಾವುಗಳು ನಮ್ಮ ಪ್ರಕೃತಿಯ ಸಮತೋಲನತೆಯಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತವೆ. ಹಾವುಗಳನ್ನು ತನ್ನ ಚರ್ಮಕ್ಕಾಗಿ ಮಾರಿಕೊಳ್ಳುತ್ತಾರೆ. ಅದರ ನಂಜಿನಿಂದ ಔಷಧಿಯನ್ನು ತಯಾರಿಸುವುದರಿಂದ ನಂಜಿಗಾಗಿ ಹಾವುಗಳನ್ನು ಮಾರುತ್ತಾರೆ. ಇವೆಲ್ಲಾ ಸಾಲದೆಂಬಂತೆ, ಸುಮ್ಮನೆ ಹಾವು ಕಣ್ಣೆದುರು ಸುಳಿದರೆ ಸಾಕು ಹೊಡೆದು ಕೊಲ್ಲುವವರಿದ್ದಾರೆ. ಇವುಗಳಿಂದ ಹಾವನ್ನು ರಕ್ಷಿಸುವುದು ನಮ್ಮಿಂದಾಗಬೇಕಾದ ಕೆಲಸಗಳು. ನಾಗರ ಪಂಚಮಿ ಸಾರ್ಥಕವಾದೀತು ಹಾವಿಗೆ ಗೌರವ ಪೂರ್ವಕ ರಕ್ಷಣೆ ಕೊಟ್ಟರೆ!

ಮನೆಯಲ್ಲಿ ಬೆಳ್ಳಿ ನಾಗಪ್ಪನಿಗೆ ಗಂಟೆಗಟ್ಟಲೆ ಪೂಜೆ ಮಾಡಿ ತನಿಯೆರೆಯೋಣ. ಆದರೆ ಹುತ್ತಕ್ಕೆ ತನಿಯೆರೆಯುವ ಸಂಪ್ರದಾಯವನ್ನು ತೊರೆಯೋಣ. ಅದು ಹಾವಿಗೆ ತೊಂದರೆಯೇ ಹೊರೆತು ಅದರಿಂದ ಯಾರಿಗೂ ಲಾಭವಿಲ್ಲ. ಇದರೊಂದಿಗೆ ಜೂವವುಳ್ಳ ಹಾವಿಗೆ ಪ್ರಕೃತಿಯ ಸಮತೋಲನತೆಯನ್ನು ಕಾಪಾಡುತ್ತಿರಲು ಒಂದಿಷ್ಟು ಕೃತಜ್ಞತೆ ಹೇಳಿ ನಮಿಸೋಣ.


ನಾಗರ ಪಂಚಮಿಯ ಶುಭಾಶಯಗಳು.




- ಅ

17.08.2007

10.50PM

6 comments:

  1. haavu haalu kuydallva??...oh my god.... matte picchar nalli torsthaare.haav moothi adralli itkoodle haalu kammi aagutte... aa cinemaagaLigella ondhu nikrushTavaadha dhikkaaravirali :-)

    ReplyDelete
  2. hmmm houdu huthakke haalu hakaakidare uthada manninalliruva jeevamsha adralli berethu aMshavannu kaldedukondaga haavige thondareyuntaguthe......

    viparyasavenadare yaake i manushyaru thilidu thilidu yaake thappu esagutharo gothilla

    ReplyDelete
  3. hmmm... ನನಗೆ ತಿಳಿದಿರದಿದ್ದ ವಿಷಯ ಇದನ್ನೋದಿದ ಮೇಲೆ ತಿಳೀತು... ಧನ್ಯವಾದಗಳು...

    ReplyDelete
  4. Nagara Panchami ge innondu dimension ide. Ivattina dina, oDahuttidorige haaraisi, bennu hotte thaNNagirali antha thani yereeteevi. Manassininda idannu haaraisidare prapanchadalliro ellara hotte noo thaNNagirutte (i mean void of 'hotte uri' :-) ) and the world will be a better place to live in!

    ReplyDelete
  5. ಹುತ್ತಕ್ಕೆ ಹಾಲೆರೆಯುವುದು, ಅರಿಶಿಣ ಕುಂಕುಮ ಏರಿಸುವುದು ಮೂರ್ಖತನದ ಅಪರಾಧ ಎಂಬುದನ್ನು ತಿಳಿದು ಆಶ್ಚರ್ಯವಾಯಿತು. ಹಾವಿನ ಬಗ್ಗೆ ಇಂತಹ ಆಶ್ಚರ್ಯಕರ ಸಂಗತಿ ತಿಳಿಯಲು ಉತ್ಸುಕನಾಗಿರುವೆ. ಲಿಂಕ್ ಗಳಿದ್ದರೆ ದಯವಿಟ್ಟು ತಿಳಿಸಿ
    uniquesupri@yahoo.co.in

    ReplyDelete
  6. interesting... ತಿಳ್ಕೊಳೋದು ಬೇಕಾದಷ್ಟಿದೆ!

    ReplyDelete

ಒಂದಷ್ಟು ಚಿತ್ರಗಳು..