Friday, August 10, 2007

ಉರಗೋಪಚಾರ
ಉರ = ಎದೆ
ಗ = ಗಮಿಸುವುದು
ಉರಗ = ಎದೆಯಿಂದ ಗಮಿಸುವುದು = ಹಾವು


ನಾನು ಮೃಗಾಲಯಗಳ ದ್ವೇಷಿ. ಪ್ರಾಣಿಗಳನ್ನು ಮನರಂಜನೆಗಾಗಿ ಬಳಸುವ ಮೃಗಾಲಯಗಳಿಗೆ ನನ್ನ ಧಿಕ್ಕಾರ ಸದಾ ಇದ್ದೇ ಇರುತ್ತೆ. ಮೃಗಾಲಯಗಳಿರುವುದು ಪ್ರಾಣಿ ರಕ್ಷಣೆಗಾಗಿಯೇ ಹೊರೆತು ಮನರಂಜನೆಗಲ್ಲ ಎಂಬುದನ್ನು ಜನ ಅರಿತಿಲ್ಲ.

ಮೊನ್ನೆ ಟಿವಿಯಲ್ಲಿ ಸ್ಟೀವ್ ಇರ್ವಿನ್ ಕಾರ್ಯಕ್ರಮವೊಂದು ಬರುತ್ತಿತ್ತು. ಮನಮುಟ್ಟುವಂತಿತ್ತು ಎಂದು ನಾನು ಬರೆಯಲು ಕಾರಣವಿದೆ.ಒಂದು ಹೆಬ್ಬಾವು (Australian Water Python - Katrinus fuscus) ಸ್ವಲ್ಪ ತೊಂದರೆಗೀಡಾಗಿತ್ತು. ಅದರ ಹೊಟ್ಟೆಯ ಬಳಿ ಊತ ಕಾಣಿಸಿಕೊಂಡಿತ್ತು. ಹಾವಿಗೆ ಇರುವ ಕಾಯಿಲೆಯನ್ನು ಗುರುತು ಹಿಡಿಯುವುದು ಮೊದಲನೇ ಕಷ್ಟದ ಕೆಲಸ. ಕಷ್ಟದ ಕೆಲಸ ಹಾಗಿರಲಿ, ಮೃಗಾಲಯ ಅಂತ ಇದ್ದ ಮೇಲೆ, ಅದು ಅವರ ಕೆಲಸ.

ಆದರೆ ಹಾವಿಗಾಗಿ ತಲೆ ಕೆಡಿಸಿಕೊಳ್ಳುವ ಅಧಿಕಾರಿಗಳು ನಮ್ಮಲ್ಲಿ ವಿರಳವೆಂಬುವುದು ಎಲ್ಲರಿಗೂ ಗೊತ್ತಿರೋ ಸಂಗತಿಯೇ. ಭನ್ನೇರುಗಟ್ಟದ ಹುಲಿಸಿಂಹಗಳೇ ಬೀದಿನಾಯಿಗಳಿಗಿಂತ ಕಡೆಯಾಗಿರುವುದನ್ನು ನಾನು ಕಂಡಿದ್ದೇನೆ. ಮೈಸೂರು ಮೃಗಾಲಯದಲ್ಲಿ ಶೀತವಲಯಗಳಿಂದೆಲ್ಲಾ ಪ್ರಾಣಿ ಪಕ್ಷಿಗಳನ್ನು ತಂದು ಮನರಂಜನೆಗಾಗಿ ಸಾಯಿಸುವುದನ್ನು ನೋಡುತ್ತಲೇ ಇದ್ದೇವೆ.

ಪ್ರಾಣಿಗಳು ಒಟ್ಟಿನಲ್ಲಿ ನಮ್ಮಲ್ಲಿ ಕೇವಲ ಮನರಂಜನೆಯ ವಸ್ತುಗಳಾಗಿಹೋಗಿವೆ.

ಆ ಹೆಬ್ಬಾವನ್ನು ಸ್ಟೀವ್ ಆಸ್ಪತ್ರೆಗೆ ಕರೆದೊಯ್ದು, ಅದಕ್ಕೆ ಆಪರೇಷನ್ ಮಾಡಿದಾಗ ತಿಳಿಯಿತು, ಅದರ ಮೂತ್ರಪಿಂಡದಲ್ಲಿ ಟ್ಯೂಮರ್. ಇನ್ನೂ ಅರ್ಬುದಕ್ಕೆ ತಿರುಗಿರಲಿಲ್ಲ. ಆದಕಾರಣ ಒಂದು ಮೂತ್ರಪಿಂಡವನ್ನು ತೆಗೆದುಬಿಟ್ಟರು. ತೆಗೆದು, ಟ್ಯೂಮರ್‍ನ ತೋರಿಸಿದರು. ರಾಗಿ ಮುದ್ದೆಗಾತ್ರವಿತ್ತು. "ಮನುಷ್ಯ್ತರಂತೆಯೇ ಹಾವುಗಳೂ ಸಹ ಒಂದು ಮೂತ್ರಪಿಂಡದಲ್ಲಿ ಬದುಕಬಹುದು" ಎಂದು ಸ್ಟೀವ್ ಹೇಳಿದ. ಆ ಹಾವಿಗೆ ಆಪರೇಶನ್ ಮಾಡುವ ಸಂದರ್ಭದಲ್ಲಿ ಅನೆಸ್ತೇಷಿಯಾ ಕೊಡಲಾಗಿತ್ತು. ಉಸಿರಾಡಲು ಅದೇನೋ ಉಪಕರಣವನ್ನು ಬಾಯಿಂದ ಅಳವಡಿಸಲಾಗಿತ್ತು. ಅಬ್ಬಾಹ್! ಆಪರೇಷನ್ ಮುಗಿದ ಮೇಲೆ ಕುಯ್ದ ಉದರವನ್ನು ಹೊಲಿಗೆ ಹಾಕಿದ ದೃಶ್ಯ ಮನಮುಟ್ಟುವಂತಿತ್ತು. ಹಾವನ್ನು ಬಹುಶಃ ನಮ್ಮ ದೇಶದಲ್ಲಿ ಬಹಳ ಕೀಳುಮಟ್ಟದಲ್ಲಿ ನೋಡುತ್ತಾರೆ. ಆದರೆ ನಾಗನನ್ನು ಮಾತ್ರ ದೇವರೆಂದು ಪೂಜಿಸುತ್ತಾರೆ - ಕಲ್ಲಿಗೆ ಮಾತ್ರ. ನಿಜವಾಗಿಯೂ ಹಾವು ಬಂದರೆ ಹೊಡೆದು ಸಾಯಿಸುವುದು ಸಾಮಾನ್ಯ.ನಮ್ಮ ದೇಶ ಅವರ ದೇಶ ಎಂದು ಹೇಳುತ್ತಿಲ್ಲ. ಎಲ್ಲಾ ದೇಶದ ಹಣೆಬರಹವೂ ಅಷ್ಟೆ. ಸಕಲ ಚರಾಚರ ಸೃಷ್ಟಿಯೂ ಸಹ ಒಂದು ಬಗೆಯ ಗೌರವಾರ್ಹತೆಯನ್ನು ಪಡೆದಿರುತ್ತೆ. ಆ ಅರ್ಹತೆಗೆ ಬೆಲೆ ಮನುಷ್ಯ ಕೊಡುತ್ತಿಲ್ಲ. ಸರಿಸೃಪಗಳಂತೂ ಬಹಳ ಶೋಷಣೆಗೊಳಪಡುತ್ತಿದೆ. ಕಾರ್ಯಕ್ರಮದ ಕೊನೆಯಲ್ಲಿ ಸ್ಟೀವ್ ಒಂದು ಮಾತು ಹೇಳಿದ, ಬಹಳ ಸೊಗಸಾಗಿತ್ತು. "ಪ್ರಾಣಿಗಳಿಗೆ ಬೇಕಾಗಿರೋದು ದಯೆಯಲ್ಲ, ಕರುಣೆಯಲ್ಲ. ಪ್ರೀತಿ ಮತ್ತು ಗೌರವ. ಅದನ್ನು ಸಲ್ಲಿಸಬೇಕು ನಾವು." ಎಂದು.

ಹೌದು. ಪ್ರಾಣಿಗಳಿಗೆ ದಯೆ ತೋರಿಸುವ ಅವಶ್ಯವಿಲ್ಲ, ಬದಲಿಗೆ ಗೌರವ ಪ್ರೀತಿ ತೋರಿಸಬೇಕಾಗಿದೆ. ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಬಸವಣ್ಣ ಹೇಳಿದ್ದಾರೆ ನಿಜ, ಆದರೆ ಪ್ರಾಣಿಗಳು ಅಬಲಜೀವಗಳಲ್ಲ. ಪ್ರತಿಯೊಂದು ಜೀವಿಯೂ ಪ್ರಕೃತಿಯ ದೃಷ್ಟಿಯಲ್ಲಿ ತನ್ನದೇ ಆದ ಪಾತ್ರವನ್ನು ಜಗದ್ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಆದರೆ ಮನುಷ್ಯನೆಂಬ ಜೀವಿಯು ತಾನೊಬ್ಬನೇ ಇರಬೇಕೆಂಬ ಸ್ವಾರ್ಥದಿಂದ ಸಕಲವನ್ನೂ ನಾಶವೆಸಗುತ್ತಾ ಬಂದಿದ್ದಾನೆ. ಬೇರೆ ಜೀವಿಗಳಿಗಿಂತ ಮಾನಸಿಕವಾಗಿ ಶಕ್ತಿವಂತನಾಗಿರೋದರಿಂದ ನಾಶ ಮಾಡುವ ಹಾದಿಯನ್ನು ಹಿಡಿದಿರುವುದು ಶೋಚನೀಯ. ಪ್ರಕೃತಿಯು ಪಾಠ ಕಲಿಸದೇ ಇರದು. ಇರುವೆಗೂ ಗೌರವ ಸಲ್ಲಿಸಬೇಕಿದೆ. ಆನೆಗೂ ಅದೇ ರೀತಿಯ ಗೌರವ ಸಲ್ಲಿಸಬೇಕಿದೆ. ಅದನ್ನು ಸಲ್ಲಿಸದೇ ಹೊರೆತು ಕೊನೆಗಾಲ ದೂರವಿಲ್ಲ ಮನುಕುಲಕ್ಕೆ.

ಇದು ಸ್ಟೀವ್‍ನ ಸಂದೇಶದ ತಾತ್ಪರ್ಯ.

- ಅ
12.08.2007
1AM

11 comments:

 1. "ಪ್ರಾಣಿಗಳಿಗೆ ಬೇಕಾಗಿರೋದು ದಯೆಯಲ್ಲ, ಕರುಣೆಯಲ್ಲ. ಪ್ರೀತಿ ಮತ್ತು ಗೌರವ. ಅದನ್ನು ಸಲ್ಲಿಸಬೇಕು ನಾವು."
  Steve Irwin ravara ee melina sandesha bahaLa manamuttuvanthide... :-) houdu kallige haavige poojege maadutteve..adhe nijavaada haavu bandare hodedu saayisutteve...entha viparyaasa...hmmmm

  ReplyDelete
 2. ದಯವೇ ಬೇಕು ಸಕಲ ಪ್ರಾಣಿಗಳಲ್ಲಿ ಎಂದು ಬಸವಣ್ಣ ಹೇಳಿದ್ದಾರೆ ನಿಜ
  Adare Ee manushyarige idu yaake arthavaguthilla?
  athva arthavagiyu saha bejavabadri bhavane thorisuthare yAke?

  praanigalu namminda enannu apkeshisuvudilla. navathu kelavu pranigala mele avlambitharagiddivi

  manushyara mele thoruva alpa swlpa preethiyannadaru pranigalamele thoridare olithu untaguthhade embudu nanna anisike.....

  ReplyDelete
 3. [ಶ್ರೀಧರ] ಕಲ್ಲ ನಾಗರ ಕಂಡರೆ ಹಾಲೆರೆಯುವರು ನಮ್ಮ ಜನ!!

  [ಸಮನ್ವಯನ] ಪ್ರೀತಿ ಮನುಷ್ಯನ ಮೇಲೂ ತೋರಬೇಕು, ಅಷ್ಟೇ ಪ್ರೀತಿ ಸಕಲ ಜೀವಿಗಳ ಮೇಲೂ ತೋರಬೇಕು ಎಂಬುದು ನನ್ನ ನಿಲುವು.

  ReplyDelete
 4. ಲೇಖನ ತುಂಬ ಚೆನ್ನಾಗಿದೆ. ನೀನು ಹೇಳಿದ ಎಲ್ಲಾ ವಿಚಾರಗಳನ್ನೂ ಒಪ್ಪುತ್ತೇನೆ. ಆದರೆ ನಿನ್ನ ಕಮೆಂಟಿದಿಯಲ್ಲ - ಕಲ್ಲ ನಾಗರ ಕಂಡರೆ ಹಾಲೆರೆಯುವರು ನಮ್ಮ ಜನ - ಅದು ಯಾವ ಅರ್ಥದಲ್ಲಿ ಬರೆದೆಯೋ ನಾನರಿಯೆ. ಕಲ್ಲು ನಾಗರ ಕಂಡರೆ ಹಾಲೆರೆಯುವುದು ಸಂಪ್ರದಾಯವಾದರೂ ನಾನು ಅದನ್ನು ಗೌರವದ ಸಂಕೇತ ಎಂದು ಕಾಣುತ್ತೇನೆ. ಆದರೆ ನಿಜವಾದ ಹಾವನ್ನು ನೋಡಿದಾಗ ಹಾಲೆರೆಯದಿದ್ದರೂ ಕಲ್ಲು ನಾಗಕ್ಕೆ ಕೊಡುವ ಗೌರವದ ಕಾಲು ಭಾಗ ಗೌರವ ತೋರಿಸಿದರೂ ಸಾಕು ಹಾವುಗಳು ನೆಮ್ಮದಿಯಾಗಿ ಬದುಕಲಿಕ್ಕೆ. ಗೌರವ ತೋರಿಸದಿದ್ದರೂ ಕನಿಷ್ಟ ಪಕ್ಷ ಕಾರಣವಿಲ್ಲದ ಹಿಂಸೆ ನೀಡಬಾರದು.

  ಮೊದಲ ಮೂರು ಸಾಲುಗಳು ಕೆಂಪು ಬಣ್ಣದಲ್ಲಿ ಸರಿಯಾಗಿ ಕಾಣುತ್ತಿಲ್ಲ. ಬಣ್ಣ ಬದಲಿಸುವೆಯಾ?

  ReplyDelete
 5. ಲೇಖನ ಬಹಳ ಚೆನ್ನಾಗಿದೆ. ಇದರಿಂದ ಅನೇಕರು ತಿಳಿದುಕೊಳ್ಳುವುದಿದೆ. ಶ್ರೀಕಾಂತ್ ಹೇಳಿದ ಹಾಗೆ ಗೌರವ ತೋರಿಸಲು ತಿಳಿಯದಿದ್ದರೂ ಚಿಂತೆ ಇಲ್ಲ. ಆದರೆ ಹಿಂಸಿಸದಿದ್ದರೆ ಅದೇ ಮಹದುಪಕಾರವಾದೀತು!

  ReplyDelete
 6. Super message by Steve. Ishtakku 'daye', 'karune' thorsokke manushya yaaru. Nature is a leveller annodanna manushya artha maadkolde iroashtu ahankaariyaagorodu shochaneeya.

  ReplyDelete
 7. [ಶ್ರೀಕಾಂತ್] ಕಲ್ಲು ಹಾವಿಗೆ ತೋರಿಸುವ ಗೌರವನ್ನು ಜೀವಿಗೆ ತೋರಿಸದಿದ್ದರೆ ಗೌರವವೆಲ್ಲಿಂದ ಬಂತು?

  [ಗಂಡಭೇರುಂಡ]ನಿಜ. ನಾವು ಒಳ್ಳೇದ್ ಮಾಡದೇ ಇದ್ರೂ ಕೆಟ್ಟದ್ ಮಾಡಬಾರ್ದು. ಅಲ್ವಾ?

  [ವಿಜಯಾ] ತಾನು ಅತ್ಯುನ್ನತ ಅಂತ ತಿಳಿದಿರುವ ಮನುಜ ಕೇಳದೇ ದಯೆ ತೋರಲು ಹೋಗುತ್ತಾನೆ. ಅವನ ಕೆಲಸ ಅದಲ್ಲ.

  ReplyDelete
 8. nanagadu gouravada sanketa. sariyaagi gottilla, aadre gouravada sanketa antalE shuru aagirabahudu ee sampradaaya. aamele anEkaralli gourava maaya aaytu sampradaaya haage uLitu. alle bandiddu tondre.

  ReplyDelete
 9. ಅದು ಸತ್ಯವಲ್ಲವೆಂದು ನಾನು ಹೇಳಲೇ ಇಲ್ಲ. ಕಲ್ಲಿಗೆ ತೋರಿಸುವ ಗೌರವವನ್ನು ಜೀವಕ್ಕೆ ತೋರಿಸುತ್ತಿಲ್ಲ ಜನ ಎಂಬುದು ಶೋಚನೀಯ ಸ್ಥಿತಿಯೆಂದು ನನ್ನ ಅನಿಸಿಕೆ.

  ReplyDelete
 10. ನಿಮ್ಮ ಅನಿಸಿಕೆ ನಿಜ ಅರುಣ್.

  ಆದರೆ ಇಲ್ಲಿ ಮನುಷ್ಯ ಜೀವಕ್ಕೇ ಬೆಲೆಯಿಲ್ಲ, ಇನ್ನೆಂಲ್ಲಿಂದ ಬರಬೇಕು ಪ್ರಾಣಿಗಳ ಮೇಲೆ ಗೌರವ, ಪ್ರೀತಿ. :(

  ReplyDelete

ಒಂದಷ್ಟು ಚಿತ್ರಗಳು..