Monday, July 09, 2007

ಇನ್ ಟು ಥಿನ್ ಏರ್...

ಪತ್ರಿಕೆಯ ಮುಖಪುಟಎವೆರೆಸ್ಟ್‍ಗೆ ಹೋಗಲು ಯಾವ ಚಾರಣಿಗನಿಗೆ ತಾನೇ ಆಸೆಯಿರೋದಿಲ್ಲ? ಆ ಅವಕಾಶ ಸಿಕ್ಕರೆ ಬದುಕು ಸಾರ್ಥಕವೆಂದೆನಿಸುತ್ತೆ ಒಬ್ಬ ಸಾಮಾನ್ಯ ಮಧ್ಯಮವರ್ಗದ ಚಾರಣಿಗನಿಗೆ.

"ಔಟ್‍ಸೈಡ್" ಎಂಬ ಪತ್ರಿಕೆಯಲ್ಲಿ ಸಂಪಾದಕೀಯ ತಂಡದಲ್ಲಿದ್ದ ಜಾನ್ ಕ್ರಾಕರ್ ಎಂಬಾತನನ್ನು ತೊಂಭತ್ತಾರರಲ್ಲಿ ಆ ಪತ್ರಿಕೆಯು ಎವೆರೆಸ್ಟ್ ಬಗ್ಗೆ ಒಂದು ಅಂಕಣ ಮಾಡಲು ಕಳುಹಿಸಿತು. ಆ ಅಂಕಣವೇ ಈ ಮರಣಗಾಥೆ - ಇನ್ ಟು ಥಿನ್ ಏರ್ - ಬರೆದಿರುವುದು, ಜಾನ್ ಕ್ರಾಕರ್!


ಬಲಿ ತೆಗೆದುಕೊಂಡ ಅನಿರೀಕ್ಷಿತ ಬಿರುಗಾಳಿ


ಹಿಮದ ಬಿರುಗಾಳಿಯಲ್ಲಿ ಚಾರಣಿಗರು - ಬಹುಪಾಲು ಜನರ ಕೊನೆಯ ಚಿತ್ರ ಇದು

1996 - ಇದು ಎವೆರೆಸ್ಟ್ ಕಂಡ ಅತ್ಯಂತ ಹೆಚ್ಚು ಸಾವಿನ ವರ್ಷ. ಯಾರೂ ನಿರೀಕ್ಷಿಸಿರದ, ಹಿಂದೆಂದೂ ನೋಡರಿಯದಂಥ ಬಿರುಗಾಳಿಯನ್ನು ಮಧ್ಯಾಹ್ನ ಕಳಿಸಿದ ವಾಯುದೇವ ಆ ವರ್ಷದ ಚಾರಣಿಗರಲ್ಲಿ ಶೇ. ಎಂಭತ್ತರಷ್ಟು ಜನರನ್ನು ಬಲಿ ತೆಗೆದುಕೊಂಡುಬಿಟ್ಟ. ಕೆಲವರ ಕೈಕಾಲುಗಳು ಹಿಮದಲ್ಲಿ ಹೂತು ಹೋಗಿ ಸಕಲವೂ ಮರಗಟ್ಟಿ ಹೋಗಿತ್ತು. ಇನ್ನು ಕೆಲವರು mountain sickness ಇಂದ ಪ್ರಾಣ ಬಿಟ್ಟರು. ಮತ್ತೆ ಕೆಲವರು ಚಳಿ ತಡೆಯಲಾರದೆ ಅಸುನೀಗಿದರು. ಒಟ್ಟಿನಲ್ಲಿ ಅದು ಸಾವಿನ ಯಾತ್ರೆಯಾಗಿತ್ತು.

ಹಿಮದ ಪಾಲಾದ ಕ್ಯಾಂಪ್ ಹಾಗೂ ಚಾರಣಿಗರು

ಇದೇ ವರ್ಷದಲ್ಲಿ ಔಟ್‍ಸೈಡ್ ಪತ್ರಿಕೆಯ ಜಾನ್ ಕ್ರಾಕರ್ ಸಹ ಹೋಗಿದ್ದು. ಮೇ ಹತ್ತರಂದು ಎವೆರೆಸ್ಟನ್ನು summit ಮಾಡಿದ. ಆದರೆ, ನಾಯಕ ರಾಬ್ ಹಾಲ್‍ನೂ ಸೇರಿಸಿದಂತೆ ತನ್ನ ತಂಡದ ಉಳಿದೈದು ಮಂದಿ ಬಿರುಗಾಳಿಗೆ ಸಿಕ್ಕ ತೃಣವಾಗಿಬಿಟ್ಟರು. ಎವೆರೆಸ್ಟ್ ಎನ್ನುವುದು ಜಾನ್‍ನ ಪಾಲಿಗೆ ಕನಸಾಗಿತ್ತು. ಆದರೆ ಆ ಯಾನ ಮುಗಿಸಿ ಬಂದ ನಂತರದಿಂದ ಅವನಿಗೆ ಎವರೆಸ್ಟ್ ಎನ್ನುವ ಪ್ರಕೃತಿಯ ಮೇರು ಪ್ರವತವು ದುಃಸ್ವಪ್ನವಾಗಿ ಉಳಿದು ಹೋಯಿತು. ಪತ್ರಿಕೆಗೆ ಡಾಕ್ಯುಮೆಂಟರಿ ಮಾಡ ಹೊರಟವನು ಮರಣಗಾಥೆಯನ್ನು ಬರೆಯುವಂತಾಯಿತು.ಹತ್ತುವಾಗ ಗೆದ್ದರೆ ಇಳಿಯುವಾಗ ಸೋಲಿಸಿತು ಬಿರುಗಾಳಿದಾರಿ ಕ್ಲಿಷ್ಟವೆನಿಸಿದಾಗ ಇಳಿದ ಪರಿ
ಎವೆರೆಸ್ಟಿಗೆ ಹೊರಟ ಮೊದಲ ಮಹಿಳೆ.. ಹಿಂದಿರುಗಲಿಲ್ಲ


ಪ್ರತಿಯೊಂದು ಕ್ಷಣವೂ ಪ್ರತಿಯೊಂದು ಉಸುರಿಗೂ ಹೇಗೆ ಕಷ್ಟ ಪಟ್ಟರು ಎಂಬುದನ್ನು ಕ್ರಾಕರ್ ಹೇಳುವ ಶೈಲಿ ಮನಮುಟ್ಟುತ್ತದೆ. ಬದುಕಿನ ಬೆಲೆ ಏನೆಂಬುದನ್ನು ಪ್ರತ್ಯಕ್ಷ ಕಂಡಿರುವ ಸಾಹಸಿ ಈತ. ಬೇಸ್ ಕ್ಯಾಂಪಿನಿಂದ "ಡೆತ್ ಝೋನ್" ವರೆಗೂ ನಮ್ಮನ್ನು ಚಾರಣ ಮಾಡಿಸಿ ಪುಸ್ತಕದಲ್ಲಿ ಕರೆದೊಯ್ಯುತ್ತಾನೆ ಜಾನ್ ಕ್ರಾಕರ್. ಇಪ್ಪತ್ತೈದು ಸಾವಿರ ಅಡಿಯೆತ್ತರದ ಅನುಭವಗಳು, ಅಅ ಚಳಿ, ಆ ಭಯ, ಆ ಆತಂಕ, ಆ ಮರೆವು, ಆ ಹಂಬಲಗಳು, ಶಿಖರದಲ್ಲಿ ಹೆಂಡತಿಯ ನೆನಪು ಸರಿಯಾಗಿ ಆಗದೇ ಇರುವುದು, ಬದುಕುಳಿದ ಸಮಾಧಾನ, ಜೊತೆಗಾರರನ್ನು ಕಳೆದುಕೊಂಡ ನೋವು, ಎವೆರೆಸ್ಟಿಗೆ ಹೋಗಬೇಕೆಂದಿದ್ದ ಕನಸು - ಎಲ್ಲವೂ ನಮ್ಮದೇ ಎನ್ನುವಂತೆ ಮಾಡುತ್ತೆ "ಇನ್ ಟು ಥಿನ್ ಏರ್.."ಕುಸಿದ ಕ್ಯಾಂಪ್ ಸೈಟಿನ ಸೈಟ್ಕೃತಿಯು ಬರೀ ಓದಿ ಪಕ್ಕಕ್ಕಿಡುವಂಥದ್ದಲ್ಲ. ಓದಿದ ಅನೇಕ ದಿನಗಳು ಎದೆಯೊಳಗೆ, ಮನದೊಳಗೆ ಕಾಡುತ್ತಿರುತ್ತೆ. ಕಲಿಯುವುದು ಸಾವಿರಕ್ಕೂ ಹೆಚ್ಚಿವೆ. ಮನರಂಜನೆಯ ಪುಸ್ತಕವಲ್ಲ. ಮನ ಕಲಕುವ ಗ್ರಂಥ! ಬದುಕಿನ ಪಾಠವನ್ನು ಹೇಳಿಕೊಡುವ ಜೀವನ ಚರಿತ್ರೆ! ಎವೆರೆಸ್ಟಿಗೆ ಇದು ಯಾವುದೂ ತಿಳಿದಿಲ್ಲ. ಎತ್ತರವಾಗಿ ನಿಂತಿರುವ ಅಚಲ! ಸಾವುಗಳನ್ನು ಕಂಡ ಪರ್ವತ!!

ಚಾರಣಿಗನಾಗಿದ್ದರಿಂದಲೋ ಏನೋ ಇದು ನನಗೆ ಅತ್ಯಂತ ಹಿಡಿಸಿದ ಪುಸ್ತಕವಿರಬಹುದು. ನಿರೂಪಣಾ ಶೈಲಿ, ಅನುಭವ, ಬಳಸಿರುವ ಅತ್ಯಂತ ಸರಳ ಭಾಷೆ ಜಿಮ್ ಕ್ರಾಕರ್‍ನನ್ನು ಉನ್ನತ ಪತ್ರಕರ್ತನನ್ನಾಗಿಸಿದ್ದಲ್ಲದೆ ಒಬ್ಬ ಒಳ್ಳೇ ಕಾದಂಬರಿಕಾರನನ್ನೂ ಆಗಿಸಿದೆ.


- ಅ

15.07.2007

3.15AM

16 comments:

 1. ಈಗ ನಿನ್ನ ಬರವಣಿಗೆ ಚೆನ್ನಾಗಿದೆ ಅಂತ ಮಾತ್ರ ಹೇಳಬಲ್ಲೆ. ಪುಸ್ತಕ ಓದಿದಮೇಲೆ ಬರವಣಿಗೆಯಲ್ಲಿ ಇರುವ ಅಂಶಗಳ ಬಗ್ಗೆ ನನ್ನ ಅನಿಸಿಕೆಯನ್ನು ಹೇಳುತ್ತೇನೆ.

  ReplyDelete
 2. ನಾನೂ ಸಹ ಈ ಪುಸ್ತಕವನ್ನೋದಿಲ್ಲದ ಕಾರಣ ಅದರ ಬಗೆಗೆ ನನ್ನ ಅಭಿಪ್ರಾಯಗಳನ್ನು ಈಗಲೇ ಮಂಡಿಸುವುದು ಕಷ್ಟ! ನೀನು ಬರೆದಿರುವುದನ್ನು ನೋಡಿದರೆ ಆ ಪುಸ್ತಕವನ್ನು ಖಂಡಿತವಾಗಿ ಓದಲೇಬೇಕೆಂದು ಮನಸ್ಸಾಗಿದೆ. ಓದುವೆ :)

  ReplyDelete
 3. ಲೈಬ್ರರಿಯಲ್ಲಿ ನೋಡಿದ್ದೆ. ಇಂದೆ ತಂದು ಓದುತ್ತೇನೆ. ನಾನು ಸಹ ಚಾರಣಿಗನಾದುದರಿಂದ ನನಗೂ ಸಹ ಈ ಪುಸ್ತಕ ಹಿಡಿಸಬಹುದು.ಧನ್ಯವಾದಗಳು.

  ReplyDelete
 4. [ಶ್ರೀಕಾಂತ್] ಪುಸ್ತಕ ಖರೀದಿಸಿದ್ದೀಯೆ. ಓದಲು ಕೂರು. ಮಿಕ್ಕಿದ್ದ್ಉ ಪುಸ್ತಕ ಮತ್ತು ಹೃದಯಗಳು ನೋಡಿಕೊಳ್ಳುತ್ತವೆ.

  [ಗಂಡಭೇರುಂಡ]
  ಕಗ್ಗದಿಂ ಹೊರಬಂದು, ಸೃಷ್ಟಿ
  ಜಗ್ಗಿದಾ ಕತೆಯನೊಮ್ಮೆ ಓದು|
  ಹಿಗ್ಗುಕುಗ್ಗುಗಳುಮೆರಡುಮಿರ್ಪುದುಮೀ ಪೊತ್ತಿಗೆಯೊಳ್
  ಸುಗ್ಗಿಯಿದನೋದಿದರ್ಗೆ - ಗಂಡಭೇರುಂಡ||

  [ಅನಿಕೇತನ] ನೀವು ಚಾರಣಿಗರೆಂದು ತಿಳಿದು ಸಂತಸವಾಯಿತು. ಇದನ್ನೋದಿ. ನಿಮಗೆ ನಿರಾಸೆಯಾಗಲಾರದು.

  ReplyDelete
 5. ಕಗ್ಗದಿಂ ಹೊರಗೆರಗೆ ವೆಗ್ಗಳಂ ಬೇಸರವು,
  ಮೊಗ್ಗರಳಿ ನಗುವಂದದಗ್ಗಳದ ಕೃತಿಯು!
  ಎಗ್ಗ ತಗ್ಗಿಪುದೆಲ್ಲ ಮುಗ್ಗರಿಪ ಜೀವಗಳ,
  ಸಗ್ಗಮಂ ತೋರ್ಪುದದು ಎಂದೆ ನಾ, ಕ್ಷಿತಿಜ||

  :-) ಆದ್ದರಿಂದ ಎರಡನ್ನೂ ಒಟ್ಟಿಗೇ ಓದುವೆ. he he he

  ReplyDelete
 6. geLeyare,

  kannaDada para chintane, charche, hot discussions ella ee hosa blog alloo nadeetide. illoo bhAgavahisONa banni !

  http://enguru.blogspot.com

  - KattEvu kannaDada naaDa, kai joDisu baara !

  ReplyDelete
 7. ನಾನು ಇದುವರವಿಗೂ ಒಂದೂ ಚಾರಣದಲ್ಲಿ ಭಾಗವಹಿಸದಿದ್ದರೂ ಕೂಡ, ಹಿಮಾಲಯ ನನ್ನ passion. ಮೊಟ್ಟಮೊದಲ ಬಾರಿ ಕುಲು-ಮನಾಲಿಗೆ ಹೋದಾಗ ಮಂಜು ಮುಸುಕಿದ ಹಿಮ ಶಿಖರಗಳ ದೂರ ದರ್ಶನದ ಮಾತ್ರಕ್ಕೆ ಎಷ್ಟು ಪುಳಕಗೊಂಡಿದ್ದೇನೆ ಅನ್ನೋದು ಇವತ್ತಿಗೂ ನೆನಪಿದೆ, ಯಾವುದೋ ಜೀವಮಾನದ ಕನಸು ನನಸಾದಂತೆ.

  ಪುಸ್ತಕದ ಪರಿಚಯಕ್ಕೆ ಧನ್ಯವಾದಗಳು. ಹಾಗೇ ಎಲ್ಲಿ ಸಿಗುತ್ತದೆ ತಿಳಿಸಿದರೆ ಇನ್ನೂ ಸಂತೋಷ.

  ನಿಮ್ಮ ಗದ್ಯ ಶೈಲಿ ಮುದ ಕೊಡುತ್ತದೆ. ನಿಮ್ಮದೇ ಚಾರಣದ ಅಭಿರುಚಿ ಈ ಬರಹವನ್ನು ಇನ್ನಷ್ಟು ಜೀವಂತಗೊಳಿಸುತ್ತದೆ.

  ಒಂದು serious ಸಲಹೆ. ಈ ಪುಸ್ತಕವನ್ನು ಅನುವಾದಿಸಲು ಸಾಧ್ಯವಾ ನೋಡಿ... you will be giving a very precious gift to Kannada.

  ReplyDelete
 8. ನಿಮ್ಮ ಈ ಬರಹ ನೋಡಿ, ಆ ಪುಸ್ತಕ ಒದ್ಬೇಕು ಅಂತ ಅನ್ನಿಸ್ತಾ ಇದೆ..

  ReplyDelete
 9. [ಬನವಾಸಿ] ತಮ್ಮ ಬ್ಲಾಗನ್ನು ನೋಡಿದ್ದೀನಿ, ಚೆನ್ನಾಗಿದೆ. ಕಮೆಂಟು ಸಹ ಮಾಡಿದ್ದೇನೆ. ಪ್ರತಿ ಅಂಕಣಗಳಲ್ಲೂ ಲಿಂಕ್ ಕಳಿಸುವುದನುಚಿತವೆಂದು ನನ್ನನಿಸಿಕೆ.

  [ಮಂಜು] ಮನಾಲಿ ನಗರದಿಂದ ಕಾಡಿನೊಳಗೆ ಹೋಗಿ, ಇನ್ನೂ ಸೊಗಸಾಗಿರುತ್ತೆ. ನನ್ನ ಅನುಭವವನ್ನೂ ಬರೆದಿದ್ದೇನೆ, ಹಿಮಾಲಯದ ಚಾರಣದ ಬಗ್ಗೆ. "ಮೇಲೇರಿದಷ್ಟೂ.." ಎಂಬ ಅಂಕಣದಲ್ಲಿ. ನನ್ನ ಶೈಲಿ ಮುದ ನೀಡಿತೆಂಬ ಧನ್ಯತೆ ನನಗೆ ಕೊಟ್ಟಿರಿ. ಥ್ಯಾಂಕ್ಸ್. :-)

  ಇನ್ನು ನಿಮ್ಮ ಸಲಹೆ - ಯಾಕೋ ತುಂಬಾನೇ ಸೀರಿಯಸ್ಸಾಗಿರೋ ಹಾಗೆ ತೋರುತ್ತಿದೆಯಲ್ಲಾ? ;-)

  [ವಿಜೇಂದ್ರ] ಪುಸ್ತಕದ ಮುಂದೆ ಈ ಬರಹ ತೃಣದಂತೆ ಸರ್.. ಓದಿ ಪುಸ್ತಕವನ್ನು, ಬಹಳ ಸೊಗಸಾಗಿದೆ..

  ReplyDelete
 10. "ತುಂಬಾನೇ serious" ಅರ್ಥವಾಗಲಿಲ್ಲ. ಬರೆಯಿರಿ ಅನ್ನೋ ಒತ್ತಾಯ ಮಾತ್ರ ಅದು

  ReplyDelete
 11. ಆ ಒತ್ತಾಯವೇ ಯಾಕೋ ಸೀರಿಯಸ್ಸಾಗೋ ಥರ ಇದ್ಯಲ್ಲಾ!!!

  ReplyDelete
 12. ಇಂಟು ಥಿನ್ ಏರ್ ಓದಿ ವಾರ ಆಗ್ತಾ ಬಂತು. ಮರವಿನ ಅರಮನೆಯಾದ ನನ್ನ ಮನಸ್ಸು ಕೂಡ ಇಂದಿಗೂ ಇಪ್ಪತ್ತೈದರಿಂದ ಇಪ್ಪತ್ತೆಂಟು ಸಹಸ್ರ ಅಡಿ ಎತ್ತರದಲ್ಲೇ ಇದೆ. ರಾಬ್ ಹಾಲ್, ಸ್ಕಾಟ್ ಫಿಶರ್, ಆಂಡಿ ಹ್ಯಾರಿಸ್, ಡೂಗ್ ಹ್ಯಾನ್ಸೆನ್ ಇನ್ನಿತರ ಜೊತೆಗೆ ಹಲವಾರು ಬಾರಿ ಬಗೆಬಗೆಯ ಎತ್ತರದ ಸಾವನ್ನು ಕಂಡು ಜಾನ್ ಕ್ರಕಾರ್ ವೇಷದಲ್ಲಿ ಬದುಕಿ ಬಂದು ಅಮೆರಿಕದ ಸೀಟಲ್ ನಗರದಲ್ಲಿ ವಿರಾಜಮಾನವಾಗಿದೆ. ಸಾಗರಮಾತೆಗೆ ಹೋಗುವುದು ಆಟವಲ್ಲ ಎಂದು ತಿಳಿಸಿಕೊಡುವ ಈ ಪುಸ್ತಕ ಎವರೆಸ್ಟ್ ಬಗ್ಗೆ ತಿಳಿಸುವ ಉತ್ತಮ ವಿಧಾನದಲ್ಲಿ ಎರಡನೇ ದರ್ಜೆಗೆ ಸೇರುತ್ತದೆ. ಮೊದಲನೇ ದರ್ಜೆ ನಾವೇ ಖುದ್ದಾಗಿ ಎವರೆಸ್ಟ್ ಗೆ ಹೋಗುವುದು!

  ReplyDelete
 13. ಚಿತ್ರಗಳನ್ನು ನೋಡಿಯೇ ಮೈ ನಡುಗ್ತಾ ಇದೆ.

  ಪುಸ್ತಕ ಯಾವಾಗ ಓದಕ್ಕಾಗತ್ತೋ ನೋಡ್ಬೇಕು.

  ReplyDelete
 14. ಹೋ ಇದನ್ನ ಓದಿದಮೇಲೆ ನನಗೆ ಇನ್ನೂ ಇದರ ಬಗ್ಗೆ ಹೆಚ್ಚು ಓದಬೇಕು ಎಂದು ಅನಿಸುತ್ತಿದೆ
  ಪುಸ್ತಕ ಓದಿದ ಮೇಲೆ ಮತ್ತೊಮ್ಮೆ ಅನಿಸಿಕೆಯನ್ನ ತಿಳಿಸುತ್ತೇನೆ

  ReplyDelete

ಒಂದಷ್ಟು ಚಿತ್ರಗಳು..