Friday, May 11, 2007

ಎನಗೆಂದು ಕರುಣಿಪುದು ವಿಧಿಯುಮೀ ಸಗ್ಗವಂ?ಮಿತ್ರ ಜಯಣ್ಣ ಸ್ಯಾನ್ ಡಿಯೆಗೋಗೆ ಹೋಗಿ ವರ್ಷದ ಮೇಲಾಯಿತು. ಆಗಾಗ್ಗೆ ಚಾಟಿಂಗ್‍ಗೆ ಸಿಗುತ್ತಿರುತ್ತಾನೆ. ಇವತ್ತಿನ ಚಾಟಿಂಗ್‍ ಅಲ್ಲಿ ಅವನು ಹೇಳಿದ ವಿಷಯಗಳು ನನಗೆ ಬಹಳ ರೋಮಾಂಚಕಾರಿಯಾಗಿತ್ತು.


ಒಂದು ವರ್ಷದಿಂದ ಕತ್ತುನೋವಿನಿಂದ ಒದ್ದಾಡುತ್ತಿರುವ ನನಗೆ ಚಾರಣವನ್ನೂ ನಿಲ್ಲಿಸಿಬಿಡಿ ಎಂದು ವೈದ್ಯರೊಬ್ಬರು ಹೇಳಿದಾಗ ಆದ ನೋವು ಅಷ್ಟಿಷ್ಟಲ್ಲ. ಆದರೆ ತೀರ extreme adventureನ ಮಾಡಲೆತ್ನಿಸದಿರಿ ಎಂದಾಗ ಸ್ವಲ್ಪ ಸಮಾಧಾನವಾದರೂ ಒಳಗೆ ಬೇಸರ ಹಾಗೆಯೇ ಇದೆ. But something is better than nothing..


ಜಯಣ್ಣ ನನ್ನ ಜೊತೆ ಒಂದೇ ಒಂದು ಟ್ರೆಕ್ಕು ಮಾಡಿದ್ದಲ್ಲದೆ ಬೇರಾವ ಸಾಹಸವನ್ನೂ ಮಾಡಿದ್ದು ನಾನು ಕಂಡಿಲ್ಲ. "ಏನೋ, ಅಮೆರಿಕೆಗೆ ಹೋಗಿ ಹೊಟ್ಟೆಯನ್ನು ಸಾಕುತ್ತಿದ್ದೀಯ" ಎಂದು ರೇಗಿಸುತ್ತಿದ್ದೆ. ಇಂದು "ಸ್ಕೈ ಡೈವಿಂಗ್ ಮಾಡಿದೆ ಗುರೂ..." ಎಂದು ಅವನು ಹೇಳಿದ ಮಾತಿನಲ್ಲಿ ಅಡ್ರಿನಲಿನ್ ತುಂಬಿ ತುಳುಕಾಡುತ್ತಿತ್ತು. ನನಗೆ ಎಲ್ಲಿಲ್ಲದ ಸಂತಸವಾಯಿತು. ಓಹ್, ಜಯಣ್ಣ ಸ್ಕೈ ಡೈವಿಂಗ್ ಮಾಡಿದನೇ? Super!! ಎಂದು ಮನಸ್ಸಿನಲ್ಲಿ ಸಾವಿರ ಬಾರಿ ಹೇಳಿಕೊಂಡೆ. ಹದಿಮೂರು ಸಾವಿರ ಅಡಿಯೆತ್ತರದಿಂದ ಧುಮುಕುವ ಮಜವೇ ಬೇರೆ.. ( ಅದೂ ಅಲ್ಲದೆ, ಚೆಲುವೆಯೊಬ್ಬಳು ಇವನ ಇನ್ಸ್ಟ್ರಕ್ಟರ್ ಆಗಿ ಅವಳನ್ನು ತಬ್ಬಿಕೊಂಡು ಬೀಳುವ ಮಜವೇ ಬೇರೆ ಬಿಡಿ ;-) ) ನಾನು ಮಾಡುವುದು ಯಾವಾಗಪ್ಪಾ ವಿಧಿಯೇ?? (ಶ್ರೀನಿಧಿಯನ್ನು ನಾನು ಚಾರಣದ ಕಥೆ ಹೇಳಿ ಹೊಟ್ಟೆ ಉರಿಸುತ್ತಿದ್ದೆ ಬೆಳಿಗ್ಗೆಯೆಲ್ಲಾ.. ಈಗ ನನ್ನನ್ನು ಇವನು.. :-) )


ನಮ್ಮ ದೇಶದಲ್ಲಿ ಸಾಹಸ ಕ್ರೀಡೆಗಳಿಗೆ ಹೆಣ್ಣುಮಕ್ಕಳನ್ನು ಧೈರ್ಯವಾಗಿ ಕಳಿಸುವುದಿಲ್ಲವೆಂಬುದು ವಿಪರ್ಯಾಸ! ಅದು ಇರುವುದೇ ಗಂಡಸರಿಗೆ ಎಂಬ ಭೇದಭಾವದ ಕೀಳರಿಮೆಯ ಜನ ಇನ್ನೂ ನಮ್ಮಲ್ಲಿ ಬಹಳ ಇದ್ದಾರೆ. ಹೆಣ್ಣುಮಕ್ಕಳಿರಲಿ, ಗಂಡಸರಿಗೂ ಪ್ರೋತ್ಸಾಹವಿಲ್ಲದ್ದನ್ನು ನಾನು ಕಂಡಿದ್ದೇನೆ. ನಮ್ಮ ಜನಕ್ಕೆ ಇಂಜಿನಿಯರ್ ಆಗ್ಬಿಡಬೇಕು ಎಲ್ಲರೂ.. ಕಂಪ್ಯೂಟರ್ ಮುಂದೆ ಏಸಿ ರೂಮಿನಲ್ಲಿ ಕೂತು ಕೈಗೆ ಲಕ್ಷ ಲಕ್ಷ ಇಳಿಸಿಕೊಳ್ಳುತ್ತಿರಬೇಕು. ಬೇರೆ ಕೆಲಸ ಮಾಡುವವರೆಲ್ಲಾ ಅಪ್ರಯೋಜಕರು ಎಂಬ ಭಾವನೆ ಇನ್ನೂ ಕೋಟ್ಯಾನುಕೋಟಿ ಮನೆಗಳಲ್ಲಿ ಇದೆ. ನಮ್ಮ ಮನೆಯವರ ಮನದಲ್ಲಿಯೂ ಇಂಥ ಮಾರಿಯು ವಾಸ ಮಾಡುತ್ತಿದೆ. ಅದು ನಮ್ಮ ಹಣೆಬರಹ ಬಿಡಿ. ಎಲ್ಲೋ ಒಬ್ಬಳು ಕಲ್ಪನಾ ಚಾವ್ಲಾ, ಎಲ್ಲೋ ಒಬ್ಬಳು ಕಿರಣ್ ಬೇಡಿ.. ಮನೆಮನಗಳಲ್ಲಿ ಪ್ರೋತ್ಸಾಹ ಧೈರ್ಯ ಸ್ಥೈರ್ಯಗಳೆಂದು ಬರುವುದೋ ಸ್ತ್ರೀಗೆ.


ಆ ವಿಷಯ ಬದಿಗಿರಲಿ. ಟಾಪಿಕ್ ಎಲ್ಲೆಲ್ಲೋ ಡ್ರಿಫ್ಟ್ ಆಗೋದು ಬೇಡ. ಅದು ಬೇರಯದೇ ಚರ್ಚೆ. ಇನ್ನೊಮ್ಮೆ ಇರಲಿ. ಈಗ ಮೂಡ್ ಇಲ್ಲ.

"ಜಯಣ್ಣ, ನಂಗೆ ನಿನ್ನ ಬಗ್ಗೆ ನಿಜವಾಗಿಯೂ ಹೊಟ್ಟೆವುರಿ ಆಗ್ತಾ ಇದೆ ಕಣೋ" ಎಂದೆ. ಒಂದು ಬಗೆಯ ಸಾತ್ವಿಕ ಅಸೂಯೆ ಮೂಡುವುದು ಸಹಜವಲ್ಲವೇ? ಸಂತಸದ ಅಸೂಯೆ!! ನಮ್ಮಲ್ಲಿ ಅಷ್ಟೆತ್ತರದ ಸ್ಕೈ ಡೈವಿಂಗ್ ಇನ್ನೂ ಬಂದಿಲ್ಲ. ಮತ್ತು ತುಂಬಾ ತುಂಬಾ ತುಟ್ಟಿ. ಹದಿನೈದರಿಂದ ಇಪ್ಪತ್ತು ಸಾವಿರ ಕೊಟ್ಟು ಸ್ಕೈ ಡೈವಿಂಗ್ ಮಾಡಲು ಬರೀ ಆಸೆ, ಧೈರ್ಯಗಳಿದ್ದರೆ ಸಾಲದು. ಅಂತೂ ದೂರದ ದೇಶದಲ್ಲಿ ಉನ್ನತ ಸಾಹಸ ಮಾಡುತ್ತಿರುವ ಜಯಣ್ಣ ಸಂತಸದಿಂದಿರಲಿ. "ನನಗೆ ಈಗ ಧೈರ್ಯ ಹೆಚ್ಚಾಗಿದೆ, ನಾನು ಎಲ್ಲಾ ಅಡ್ವೆಂಚರ್‍ನೂ ಮಾಡಬೇಕೆನಿಸಿದೆ" ಎಂದು ಅವನು ಹೇಳಿದಾಗ ಬಹಳ ಖುಷಿಯಾಯಿತು. ಸಾಹಸ ಕ್ರೀಡೆಗಳೇ ಹಾಗೆ, ಧೈರ್ಯ, ಕಾನ್ಫಿಡೆನ್ಸು, ತಾಳ್ಮೆ ಎಲ್ಲವನ್ನೂ ವೃದ್ಧಿಸುತ್ತೆ!


ಒಂದು ಚಿಕ್ಕ ವಿಮಾನದಲ್ಲಿ ಡೈವ್ ಮಾಡುವವರನ್ನು ಮೇಲಕ್ಕೆ, ಹದಿಮೂರು ಸಾವಿರ ಅಡಿಯೆತ್ತರಕ್ಕೆ ಕರೆದೊಯ್ದು, ಒಬ್ಬ ಡೈವರ್ ಜೊತೆಗೊಬ್ಬ(ಳು) ಇನ್ಸ್ಟ್ರಕ್ಟರು ಧುಮುಕಿ, ಧುಮುಕಿಸಿ, ಪ್ಯಾರಾಶೂಟಿನಿಂದ ಸುರಕ್ಷಿತವಾಗಿ ಕೆಳಗಿಳಿಸಿ, ಬದುಕಿನ ಅಮೃತ ಕ್ಷಣಗಳನ್ನು ದಯಪಾಲಿಸುವ ಸಂಘಗಳೇ ಧನ್ಯ. ಅಂತ ಅಮೃತಘಳಿಗೆಯನ್ನನುಭವಿಸಿದ ಜಯಣ್ಣನೇ ಧನ್ಯ! ಜಯಣ್ಣನ ಬಗ್ಗೆ ನಂಗೆ ಬಹಳ ಸಂತಸವಾಗುತ್ತಿದೆ. ನನ್ನ ಸ್ನೇಹಿತನು ಸ್ಕೈಡೈವಿಂಗ್ ಮಾಡಿದ್ದಾನೆ. ಬದುಕಿನ ಪ್ರತಿಯೊಂದು ಕ್ಷಣದಲ್ಲೂ ನೆನಪಿನಲ್ಲುಳಿಯುವಂಥ ಪ್ರಸಂಗವೊಂದು ಇವನ ಪಾಲಾಗಿದ್ದು ಇವನ ಯಾವ ಜನ್ಮದ ಪುಣ್ಯವೋ! ಕೆಲವು ಅನುಭವಗಳನ್ನು ಬಣ್ಣಿಸಲು ಸಾಧ್ಯವಿಲ್ಲ. ಅನುಭವಿಸಬೇಕಷ್ಟೇ!
ಹೀಗೆ ಸಾಹಸಗಳನ್ನು ಮಾಡುತ್ತಿರು ಜಯಣ್ಣ... ಆಲ್ ದಿ ಬೆಸ್ಟ್.. (ಹುಡುಗಿ ಇನ್ಸ್ಟ್ರಕ್ಟರ್ ಅಂತ ಹೆಚ್ಚು ಕಮ್ಮಿ ಮಾಡ್ಕೊಂಡೀಯೆ.. ಜೋಕೆ)
ಸಂಪೂರ್ಣ ಚಲನಚಿತ್ರ ಇಲ್ಲಿದೆ, ವೀಕ್ಷಿಸಿ..
ಓದುಗ ಮಿತ್ರರೇ, ನನಗೂ ಇಂಥ ಸುದಿನ ಒದಗಲೆಂದು ಪ್ರಾರ್ಥಿಸಿ! ;-)
ಎನಗೆಂದು ಕರುಣಿಪುದು ವಿಧಿಯುಮೀ ಸಗ್ಗವಂ??
-ಅ
11.07.2007
11PM

19 comments:

 1. wowwwww!!!!!!!!1sakkath aagidhe...
  but avru dive haakidaaga video yaar tegiddu.....??

  ReplyDelete
 2. Actually, ಆ ಚಿತ್ರಕಾರನೂ ಡೈವ್ ಮಾಡ್ತಾನಂತೆ..

  ReplyDelete
 3. avnu chitrakaar..alla nijakku kalaakaar....mansha...

  aakashadali video thegeethaane andre!!!!!!!!!

  ReplyDelete
 4. ಆತನ ಗ್ಲೈಡರ್ ವೇಗ ಅಡ್ಜಸ್ಟಬಲ್... ಇವರು ಯಾವ ವೇಗದಲ್ಲಿ ಬೀಳ್ತಾರೋ ಆ ವೇಗಕ್ಕೆ ಅಡ್ಜಸ್ಟ್ ಮಾಡ್ಕೋತಾನೆ.. ಜೊತೆಗೆ ವಿಡಿಯೋ ಬೇರೆ ತೆಗೀತಾನೆ.. ನಿಜಕ್ಕೂ ಆತ ಕಲಾಕಾರನೇ..

  ReplyDelete
 5. hmmmmm.... bari ivange maatra tegididaare..... obbobrige obbru kalaakaargaLa?????

  ReplyDelete
 6. ಹೌದು.. ಐದು ಜನ ಡೈವ್ ಮಾಡಿದರೆ ಜೊತೆಗೈದು ಚಿತ್ರಕಾರರು..

  ReplyDelete
 7. obba kalaakaar.... gu innobba kalaakaar dive maadakke est time difference iratte.. ;-)
  coz bere avru kaaNislilla
  this is getting in to much details..
  naavnu gnanapipaasugaLu :-)....
  samanjasavaada uthra kodi ;-)plsssss

  ReplyDelete
 8. ಇವರು ಧುಮುಕಿದ ನಂತರ ಕಲಾಕಾರ ಧುಮುಕುವನು.. ಆಗಲೇ ಹೇಳಿದ ಹಾಗೆ ಅವನ ಗ್ಲೈಡರ್ರು ವೇಗಕ್ಕೆ ಅಡ್ಜಸ್ಟ್ ಮಾಡಿಕೊಳ್ಳುವಂಥದ್ದು..

  ReplyDelete
 9. ವಾವ್!!!!!!!!!!

  ಏನ್ರಿ ಅರುಣ್ ಇದೂ!!!!

  ನಾವು ಯಾವಾಗ ಮಾಡೋದ್ರೀ ಈ ಸಾಹಸಾನ! ಥೋ, ಈ ಪಾರಾ ಸೈಲಿಂಗು ಏನೂ ಅಲ್ಲ ಬಿಡ್ರಿ!
  ಭಾರತದಲ್ ಎಲ್ಲೂ ಇಲ್ವಾ ಇದು?:(

  ReplyDelete
 10. Super Aruna!!!! idanna odi, santosha double aithu.
  one small thing i wanted to add. AA photothegyo skydiver, camerana helmet nalli fix maadkondu irthane. Ondu sanna display avana kannu hathra barathe. adanna nodkondu, he adjusts himself and shoots us. (you can adjust your speed during freefall, even when parachute is open.)

  ReplyDelete
 11. jothege.. whoever opts for video, obba obba skydiver ge, obba chitrakaara irthare. thats why they do in batches when they dont have enough instructor/ cameramen.

  ReplyDelete
 12. one more thing.. ninna kathu novu, skydiving maadade irokke nepa aagabaaradu.. yaake andre, there is no pressure on neck when you do skydiving. :))

  ReplyDelete
 13. naan idanella blognalli barithidno ilvo gothilla.. neenu baradu, u made it memorable for ever. thnx :)

  ReplyDelete
 14. [ಶ್ರೀನಿಧಿ] ಮಾಡೋಣ ಶ್ರೀನಿಧಿ.. ನಮ್ಮಲ್ಲಿ ಇದು ಇನ್ನೂ ಬಂದಿಲ್ಲ.. ಬರ್ಸೋಣ.. ಏನಂತೀಯ? ಒಂದು ವೇಳೆ, ನಮ್ಮ ಸರ್ಕಾರದವರು ಮನಸ್ಸು ಮಾಡಿ, ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟರೆ, ಜೈ ಅನ್ನೋದೇ!

  [ಜಯಣ್ಣ] ಕತ್ತು ನೋವು ಇರಲಿ ಬಿಡಲಿ, ಡೈವಿಂಗ್ ಮಾಡೋದೇ.. ಮುಂದಿನದು ಆಮೇಲೆ ನೋಡ್ಕೋಳೋಣ! ಏನಾದರಾಗಲಿ. ಅದೇ ನನ್ನ ಕೊನೆಯ ಘಳಿಗೆ ಆದರೂ ಚಿಂತೆಯಿಲ್ಲ..

  ಫೋಟೋಗ್ರಾಫರ್‍ನ ಅದ್ಭುತ ಸಾಧನೆಗಳನ್ನು ವಿವರಿಸಿದ್ದಕ್ಕೆ ಶ್ರೀಧರನ ಪರವಾಗಿ ಥ್ಯಾಂಕ್ಸ್. ಅವನಿಗೂ ಇದನ್ನು ನೋಡಲು ಹೇಳ್ತೀನಿ..

  ReplyDelete
 15. [ಜಯ್] ಬರೆಯೋದು ನನ್ನ ಕೆಲಸ.. :-)
  ನೀನೇ ಬರೆದರೆ ಇನ್ನೂ ಚೆನ್ನಾಗಿರುತ್ತೆ..

  ReplyDelete
 16. India nalli skydiving ilva aruna??
  ildidre RHM inda start maadsu guru.. equipments na illinda tharsko bahudu. nam deshdallu idu popular aagli.

  ReplyDelete
 17. ಇಲ್ಲಿ ಅಷ್ಟು ಪ್ರಸಿದ್ಧವಲ್ಲ. ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯ ಸಂಸ್ಥೆಯು ಮಾಡುತ್ತೆ. ಆದರೆ ಇನ್ನೂ ಸಾರ್ವಜನಿಕರನ್ನು ತಲುಪಿಲ್ಲ. ಮಿಲಿಟರಿಯವರಿಗಾದ್ಯತೆ.

  ReplyDelete
 18. wowwwwwwwwww entha experience alva?
  romaAnchanaVAgthide imagine madkothidre
  nange intha avakAsha sigli ansthide
  avakashana hudkondu hOgbeku yAvaglu kelavomme avakAshakke kAibeku.
  super vidio

  PP neevu Adastu bega idanna mAduvanthAgali eMdu prArthisuthene.

  ReplyDelete

ಒಂದಷ್ಟು ಚಿತ್ರಗಳು..