Thursday, April 26, 2007

'ದೇವರು'ಗಳು.." ನಾಸ್ತಿಕರೆಲ್ಲರೂ ಪಾಪಿಗಳೆಂದು ಹೇಳಲಾಗದು. ಅವರಲ್ಲಿ ನೀತಿಯಿಲ್ಲವೆಂದೂ ಹೇಳಲಾಗದು. ಬುದ್ಧಿಶಕ್ತಿಯಲ್ಲಿಯೂ ವಿಚಾರಗಾಢತೆಯಲ್ಲಿಯೂ ಅವರು ಇತರರಿಗಿಂತ ಕಡಿಮೆಯಿಲ್ಲ. ವಿಜ್ಞಾನದಲ್ಲಂತೂ ಅವರು ಪ್ರಸಿದ್ಧರು. ಆದರೆ ಅವರಲ್ಲಿ ಬುದ್ಧಿಪ್ರಮಾದವುಂಟು. ಯಾವ ಒಬ್ಬ ಮನುಷ್ಯನ ಚಿಂತನೆಗೂ ಅನುಭವಕ್ಕೂ ಅನ್ವೇಷಣೆಗೂ ದೊರಕಲಾಗದ ಸಂಗತಿಗಳು ಲೋಕದಲ್ಲಿ ಎಷ್ಟೋ ಉಂಟೆಂದು ಅವರು ಗಣಿಸುವುದೇ ಇಲ್ಲ. ಇದೇ ಅವರ ಪ್ರಮಾದ.

ತಮಗಲ್ಲದೆ ಇತರರಿಗೆ ಊಹನೆಗೂ ಅನುಭವಕ್ಕೂ ದೊರೆತಿರಬಹುದಾದ ಸಂಗತಿಗಳು ಇರಲಾಗದೇ? ಲೋಕದ ಬಹುಕಾಲದ ಸಿದ್ಧಾಂತವನ್ನು ಅದು ತನ್ನ ಅನುಭವಕ್ಕೆ ಬರಲಿಲ್ಲವೆಂಬ ಕಾರಣದಿಂದ ಯಾರೊಬ್ಬನೂ ತಳ್ಳಿಹಾಕಲಾಗದು. ಇತರರ ನಂಬಿಕೆ ಪ್ರಮಾಣವಲ್ಲವೆಂದರೆ ಸ್ವಬುದ್ಧಿ ಹೆಚ್ಚು ಪ್ರಮಾಣವಾಗಲಾರದು.."

-ಡಿ.ವಿ.ಜಿ." ದೇವರನ್ನು ನಂಬುವುದಿಲ್ಲ ಎಂದು ನಾನೇನೂ ಪಣ ತೊಟ್ಟಿಲ್ಲ. ನಂಬಿಕೆ ಬರಲೊಲ್ಲದು - ಅಷ್ಟೇ! ಇತರರಿಗೆ ದೈವಭಕ್ತಿಯಿಂದ ಶಾಂತಿ ಬರುವುದಾದರೆ ಬರಲಿ, ಅದರಿಂದ ಸಜ್ಜನಿಕೆಗೆ ಉತ್ತೇಜನ ದೊರಕುವುದಾದರೆ ಅವರ ದೈವಭಕ್ತಿ ಸಂತತವಾಗಿ ಇರಲಿ. ನನಗೆ ನಂಬಿಕೆ ಬರಲೊಲ್ಲದು - ಇದು ನನ್ನ ತಪ್ಪಲ್ಲ.

ನನಗೆ ಅದರಲ್ಲಿ ನಂಬಿಕೆಯಿಲ್ಲ, ಇದರಲ್ಲಿ ನಂಬಿಕೆಯಿಲ್ಲ... 'ಇಲ್ಲ'ಗಳ ಪಟ್ಟಿ ದೊಡ್ಡದಾಯಿತು. ನನ್ನ ಬದುಕು 'ನ'ಕಾರದ ಭಜನೆಯೋ ಅಥವಾ ನನ್ನ ನಂಬಿಕೆಗೆ ಪಾತ್ರವಾಗಿರುವುದೂ ಏನಾದರೂ ಉಂಟೋ? ಉಂಟು. ಇಹಜೀವನದಲ್ಲಿ ನಂಬಿಕೆಯುಂಟು.. ಲೋಕದಲ್ಲಿ ಸಂಕಟ ಕಡಿಮೆಯಾಗುವಂತೆ. ಸಹಮಾನವರ ಬದುಕು ಸುಖಸಮೃದ್ದವಾಗುವಂತೆ ಕೈಲಾದದ್ದನ್ನು ಮಾಡುವುದು ಕರ್ತವ್ಯ ಎಂಬ ನಂಬಿಕೆಯುಂಟು..

ಬದುಕಿಗಾಗಿ ನನ್ನ ಕೃತಜ್ಞತೆಯನ್ನು ಸಮರ್ಪಿಸುತ್ತೇನೆ.."

- ಎ.ಎನ್. ಮೂರ್ತಿರಾವ್


ಎರಡು ಪುಸ್ತಕಗಳು. ಎರಡರ ಹೆಸರೂ 'ದೇವರು'. ಆದರೆ ಎರಡರ ವಸ್ತುಗಳು ತದ್ವಿರುದ್ಧ!! ದೇವರು ವರ್ಸಸ್ ದೇವರು!! ಮೂರ್ತಿರಾವ್ ವರ್ಸಸ್ ಡಿವಿಜಿ!!!


ಮೂರ್ತಿರಾಯರ ಬರವಣಿಗೆ ಸುಲಭವಾಗಿ ಓದಿಸಿಕೊಂಡು ಹೋಗುತ್ತೆ. ತಿಳಿಹಾಸ್ಯದೊಂದಿಗೆ ಬೆರೆತ ತರ್ಕ ಅದ್ಭುತವಾಗಿದೆ. ಈ ಅದ್ಭುತಕ್ಕೆ 'ಪಂಪ' ಪ್ರಶಸ್ತಿ ದೊರಕಿದೆಯಾದರೂ ಸಂಪ್ರದಾಯಸ್ತರನೇಕರಿಗೆ ಹಿಡಿಸೋದಿಲ್ಲ. 'ದೇವರು' ಅನ್ನೋದು ಬರೀ ಕಲ್ಪನೆ, ನಂಬಿಕೆ - ಎಂದು ಯಾರಾದರೂ ಹೇಳಿದರೆ ನಮ್ಮ ಜನರಿಗೆ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಅದನ್ನೊಪ್ಪಿಕೊಳ್ಳಿ ಎಂದೂ ಎಲ್ಲೂ ಹೇಳಿಲ್ಲ ಮೂರ್ತಿರಾಯರು. ಡಿವಿಜಿಯಷ್ಟೇ ಹಿರಿಯ ಸಾಹಿತಿ ಮೂರ್ತಿರಾಯರು ಡಿವಿಜಿಯವರ ತದ್ವಿರುದ್ಧದ ಚಿಂತನೆಗಳನ್ನು ಮಂಡಿಸಿದರೂ ಅನೇಕ ಮನಸ್ಸುಗಳನ್ನು ಗೆದ್ದರು. ಮತ್ತೆ ಮತ್ತೆ ಓದಿದರೂ ಬೇಸರವಾಗದೇ, ವಿಚಾರಶಕ್ತಿಯನ್ನು ಪ್ರಚೋದಿಸುವ ಸೊಗಸಾದ ಕೃತಿ - 'ದೇವರು'.


ಡಿವಿಜಿಯವರ 'ದೇವರು' ಪುಸ್ತಕ - ಚೆನ್ನಾಗಿದೆ. ಓದಬೇಕಾದ್ದು!!

- ಅ

26.04.2007
6PM

8 comments:

 1. ನಿಜ ನಿಜ...
  "ದೇವರು" - ಚಿಕ್ಕದಾದರೂ ಚೊಕ್ಕವಾಗಿದೆ.

  ಈ ಎರಡು ಪುಸ್ತಕಗಳಲ್ಲಿ ಮತ್ತೊಂದು ವೈರುದ್ಧ್ಯವುಂಟು... ಡಿವಿಜಿ ಅವರ "ದೇವರು" ಪುಸ್ತಕ ಕೇವಲ ೩೦ ಪುಟಗಳಷ್ಟೆ. ಮೂರ್ತಿರಾಯರ ಪುಸ್ತಕ ಇದಕ್ಕೆ ಹೋಲಿಸಿದರೆ ಸ್ವಲ್ಪ ದೊಡ್ಡದಾಗಿಯೇ ಇದೆ. :) :)

  ಡಿವಿಜಿ ಅವರ ದೇವರನ್ನು ನಾನು ನೋಡಿದ್ದೇನೆ. ಇನ್ನು ಮೂರ್ತಿರಾಯರ ದೇವರನ್ನು ಕಾಣುವುದೊಂದೆ ಬಾಕಿ :)

  ReplyDelete
 2. ಡಿವಿಜಿಯವರ 'ದೇವರು' ಓದಿಲ್ಲ. ಆದರೆ ಮೂರ್ತಿರಾಯರ 'ದೇವರು' ಈಗಾಗಲೇ ಓದಿಬಿಟ್ಟಿದ್ದೇನಾದ್ದರಿಂದ ಡಿವಿಜಿ-ದೇವರು ಓದೋದು ಈಗ ಕಷ್ಟವಾದೀತು.. :) ;)

  ReplyDelete
 3. [ಸುಶ್ರುತ] ಡಿವಿಜಿ-ದೇವರು ಬಹಳ ಚಿಕ್ಕ ಪುಸ್ತಕ. ಸ್ವಲ್ಪ ಕ್ಲಿಷ್ಟವೆನಿಸಿದರೂ ಅರ್ಧ ಮುಕ್ಕಾಲುಗಂಟೆಯಲ್ಲಿ ಮುಗಿಸಬಹುದು (ಏನೂ ನೋಟ್ಸ್ ಮಾಡಿಕೊಳ್ಳದೆ ಕಾದಂಬರಿ ಥರ ಓದಿದರೆ).

  ಆದರೆ ಎರಡು ಸಂಪೂರ್ಣ ಭಿನ್ನ ದೃಷ್ಟಿಕೋನಗಳನ್ನೋದುವಾಗ ಆನಂದ ಆಗುತ್ತೆ.. ಅದರಲ್ಲೂ ಇಬ್ಬರು ಗ್ರೇಟ್ ಸಾಹಿತಿಗಳ ಕೃತಿಗಳನ್ನು!!

  ReplyDelete
 4. hee hee ... nannantha confused soul gaLu eradannoo odidre sakktha maja vaagiruththe :-D

  ReplyDelete
 5. [ವಿಜಯ] ಎರಡನ್ನೂ ಓದಿ, ಇನ್ನೊಂದಿಷ್ಟು ಕನ್ಫ್ಯೂಸ್ ಆಗಿ, ಮೂರ್ತಿರಾಯರಿಗೂ, ಡಿವಿಜಿಗೂ ಕನ್ಫ್ಯೂಸ್ ಮಾಡಬಹುದು..

  ReplyDelete
 6. ನಾನು ಇವೆರಡು ಪುಸ್ತಕಗಳನ್ನು ಇನ್ನೂ ಓದಿಲ್ಲ.ಆದರೆ ಇವೆರಡರ ಸಾರಾ೦ಶವನ್ನು ನಿಮ್ಮ ಲೇಖನದಿ೦ದ ತಿಳಿದ೦ತಾಯಿತು... ಧನ್ಯವಾದಗಳು :)

  ReplyDelete
 7. Ee eradoo pustakagaLannu odbeku anta aase aagtide nanage.

  ReplyDelete
 8. [ವಿನುತ] ಪುಸಕ ಕೊಂಡೋದಿ.. ಸಾಹಿತ್ಯವನ್ನು ಬೆಳೆಸಿ... ಸಾರಾಂಶವನ್ನು ನೀವೇ ಬರೆಯಿರಿ, ಆಮೇಲೆ.. :-)

  [ಹರೀಶ್] ಓದಿ ಸರ್, ತುಂಬಾ ಸೊಗಸಾಗಿವೆ..

  ReplyDelete

ಒಂದಷ್ಟು ಚಿತ್ರಗಳು..