Thursday, April 19, 2007

ಕರೆ ಮಾಡಿ ತಲೆ ತಿನ್ನೋದು...

ಮೊಬೈಲ್ ಫೋನ್‍ಗೆ ಬೈತಾ ಇಲ್ಲ. ತಲೆತಿನ್ನುವವರನ್ನು ಬೈತಾ ಇದ್ದೀನಿ. ಮೊಬೈಲಿಗೆ ಯಾರುಯಾರೋ ಏನೇನೋ ಉದ್ದಿಶ್ಯದಿಂದ ಕರೆ ಮಾಡುತ್ತಾರಲ್ಲಾ ಅವರಿಗೆ. ಇದೊಂದು ಪದ್ಧತಿ ಅದು ಹೇಗೆ ಬಂತೋ ಏನೋ. ಕರೆ ಮಾಡಿ ಸಾಲ ಬೇಕಾ? ಕ್ರೆಡಿಟ್ ಕಾರ್ಡ್ ಬೇಕಾ? ಅಂತ ತಲೆ ತಿನ್ನೋ ಕೆಲಸ ಬಹುಶಃ ಕರೆ ಮಾಡುವವರಿಗೂ ಇಷ್ಟವಾಗಿರಲಾರದು..

ಟ್ರೆಕ್ಕಿಂಗ್ ಮಾಡ್ತಾ ಇದ್ದೆವು. ನಮ್ಮ ಲೀಡರ್ ಸ್ವಾಮಿ ಅವರ ಫೋನು ಅದ್ಯಾವುದೋ ಬೆಟ್ಟದ ಮೇಲೆ ರಿಂಗ್ ಆಗತೊಡಗಿತು. ವೈನಾಡಿನ ದಟ್ಟಡವಿಯಲ್ಲಿ ಸೊಗಸಾದ ಬೆಟ್ಟಗಳ ನಡುವೆ ಹಸಿರಿನ ಸ್ವಚ್ಛಂದ ವಾತಾವರಣದಲ್ಲಿ ಅವರು ತಮ್ಮ ಮೊಬೈಲನ್ನು ಚಾಲ್ತಿಯಲ್ಲಿಟ್ಟಿದ್ದು ಅವರ ತಪ್ಪೇ? ಅವರು ಚಾಲ್ತಿಯಲ್ಲಿಟ್ಟ ಕಾರಣಕ್ಕೆ ಸಿಗ್ನಲ್ ದೊರಕಿ ಆ ಫೋನು ಬಡಕೊಂಡಿದ್ದು ರಿಲಯನ್ಸ್ ತಪ್ಪೇ? ಅದು ಬಡುಕೊಂಡಿದ್ದು ಓಕೆ, ಆದರೆ ಅದು ಇಂಥ ಕರೆಯಾಗಿದ್ದುದು ಸ್ವಾಮಿಯವರ ಕರ್ಮದ ತಪ್ಪೇ??

"ಹಲೋ.. ದಿಸ್ ಈಸ್ ಫ್ರಮ್ ಕಂಟ್ರಿ ಕ್ಲಬ್.. " ಅಂದು, ಏನೇನೋ ಕೇಳಿ, ಕಡೆಗೆ "ಪ್ಲೀಸ್ ಗಿವ್ ಅಸ್ ಯುವರ್ ಕರೆಂಟ್ ಅಡ್ರೆಸ್" ಅಂದರು ಆ ಕಡೆಯ ಪಾರ್ಟಿ.

ಸ್ವಾಮಿ: "ಕರೆಂಟ್ ಅಡ್ರೆಸ್ಸಾ? ಓಕೆ, ಬರ್ಕೊಳಿ.. ಸೆಕೆಂಡ್ ಪೀಕ್.."

ಅವನು: "ಹ್ಂಂಂ"

ಸ್ವಾಮಿ: "ಚೆಂಬರ ಎಸ್ಟೇಟ್, ವೈನಾಡ್"

ಅವನು: "ಪಿನ್ ಕೋಡ್?"

ಸ್ವಾಮಿ: "ಪಿನ್ ಕೋಡ್ ಏನು ಬಂತು ಈ ಕಾಡಲ್ಲಿ. ನಂಗೆ ತಲೆ ತಿಂದ ಹಾಗೆ ಕೇರಳದ ಪೋಸ್ಟ್ ಆಫೀಸ್‍ಗೆ ಫೋನ್ ಮಾಡಿ ತಲೆ ತಿನ್ನಿ, ಕೊಡ್ತಾರೆ".

ಅವನು: "ಸಾರಿ ಸರ್"

ಫೋನ್ ಇಟ್ಟುಬಿಟ್ಟ.

ಕ್ಯಾಂಪಿನಲ್ಲಿ ಜೋರು ನಗು. "ಮೊದಲು ಫೋನ್ ಆಫ್ ಮಾಡ್ಬಿಡಿ ಸರ್" ಡೀನ್ ಹೇಳಿದರು ಸ್ವಾಮಿಗೆ. ಆಮೇಲೆ ಇನ್ಯಾರು ಇನ್ಯಾವ ವಿವರ ಕೇಳ್ತಾರೋ ಅಂತ.

--------------------------------------------------------------------------------------------

ನನಗೆ ಆ ರೀತಿ ಯಾರಾದರೂ ಕರೆ ಮಾಡಿದರೆ ಅವರ ತಲೆ ತಿನ್ನುತ್ತೇನೆ. ಸ್ವಚ್ಛ ಕನ್ನಡದಲ್ಲೇ ಮಾತನಾಡೋದು ಅವರುಗಳ ಜೊತೆ. ಸಾಮಾನ್ಯವಾಗಿ ಆ ರೀತಿ ಕರೆ ಮಾಡುವವರು ಮಲಯಾಳಿಗಳೋ ತಮಿಳರೋ ಆಗಿರುತ್ತಾರೆ. ಕರ್ನಾಟಕದಲ್ಲಿ ಕನ್ನಡವನ್ನೇ ಮಾತನಾಡಿ ಅಂತ ಅವರಿಗೂ ಒಂದು ಬೋಧನೆಯ ತರಗತಿಯನ್ನು ತೆಗೆದುಕೊಂಡ ನಂತರವೇ ಮಾತು ಮುಂದುವರೆಸುವುದು.

ಕೇರಂ ಆಡ್ತಾ ಇದ್ದೆ, ಮನಸ್ಸು ಬೇರೆ ಸರಿ ಇರಲಿಲ್ಲ. ಏನೋ ಜಗಳ ಮಾಡಿಕೊಂಡಿದ್ದೆ. ಒಂದು ಹುಡುಗಿ ಫೋನ್ ಮಾಡಿಬಿಟ್ಟಳು, "ಸರ್, ಹೆಚ್ ಡಿ ಎಫ್ ಸಿ ಬ್ಯಾಂಕಿನಿಂದ, ಕ್ರೆಡಿಟ್ ಕಾರ್ಡ್ ಬೇಕಾ??"

"ಬೇಡಾಮ್ಮ.. ನಿಂಗೆ ನನ್ನ ನಂಬರ್ ಯಾರು ಕೊಟ್ಟರು?"

"ಸರ್, ಡೈರೆಕ್ಟರಿಯಲ್ಲಿ ಸಿಕ್ತು ಸರ್"

"ಹಾಗೆಲ್ಲ ಕರೆ ಮಾಡಿದರೆ ತೊಂದರೆ ಆಗುತ್ತೆ ಅಲ್ವಾ? ನಾವು ಬಿಡುವಾಗಿರೋದಿಲ್ಲ ಅಲ್ವಾ?"

"ಸಾರಿ ಸರ್.. ನಿಮ್ಮ ಸ್ನೇಹಿತರ ನಂಬರ್ ಯಾರದ್ದಾದರೂ ಕೊಡ್ತೀರಾ?"

"ನಾನು ಅವರ ನಂಬರ್ ಕೊಡೋದು, ಅವರು ನನ್ನ ಅಮ್ಮ, ಅಕ್ಕ ಅಂತೆಲ್ಲಾ ಬೈಕೊಳ್ಳೋದು. ಇವೆಲ್ಲಾ ನಂಗೆ ಬೇಕಾಮ್ಮಾ??"

ಅವಳು ಫೋನ್ ಇಟ್ಟುಬಿಟ್ಟಳು.

-------------------------------------------------------------------------------------------

ಅವರ ಕೆಲಸವೇ ಹೀಗೆ. ಅನೇಕರು ಕೆಟ್ಟಕೆಟ್ಟದಾಗಿ ಬೈತಾರೆ. ಹಣಕ್ಕೋಸ್ಕರ ಇನ್ನೊಬ್ಬರಿಗೆ ತೊಂದರೆ ಕೊಟ್ಟು ಅವರಿಂದ ಉಗಿಸಿಕೊಳ್ಳುವ ಕಾರ್ಯ ಈ ಜನಗಳದ್ದು.

"ಸರ್. ದಿಸ್ ಈಸ್ ಫ್ರಂ ಐಸಿಐಸಿಐ.."

ಓಹ್.. ತಲೆ ತಿನ್ನೋಕೆ ಯಾವನೋ ಬೋಳಿಮಗ ಕರೆ ಮಾಡಿದ.. ಎಂದುಕೊಂಡೇ ಫೋನ್ ಅಲ್ಲಿ ಮಾತನಾಡುತ್ತಾರೆ..

ನಾನೆಂದೆ, "ಕನ್ನಡದಲ್ಲಿ ಮಾತಾಡಿಪ್ಪಾ"

ಅವನು: "ಓಗೆ. ನಿಮಗೆ ಬರ್ಸನಲ್ ಲೋನ್ ಬೇಗಾ??"

ನಾನು ತಲೆ ಕೆಡವಿಕೊಂಡು, ಅವನು ಹೇಳಿದ್ದನ್ನು ಇನ್ನೊಂದು ಸಲ ಹೇಳಿಕೊಂಡೆ. ಅರ್ಥವಾಯಿತು ಅವನು ಏನು ಕೇಳಿದ ಅಂತ.

" ಹೂಂ, ಬೇಕು.. ಐದು ಲಕ್ಷ.. ಆದರೆ ನಾನು ಈಗಾಗಲೇ ನಾಲ್ಕು ಕಡೆ ಸಾಲ ಮಾಡಿದ್ದೀನಿ. ತಪ್ಪಿಸಿಕೊಂಡಿದ್ದೀನಿ. ನೀವು ಸಾಲ ಕೊಟ್ಟರೆ ನಂಗೆ ತುಂಬಾ ಸಹಾಯ ಆಗುತ್ತೆ." ಎಂದೆ.

ಅವನು: "ಸರ್?????"

ನಾನು: "ಇನ್ನೇನಪ್ಪಾ, ಸಾಲ ಬೇಕು ಅಂದ್ರೆ ನಾನೇ ನಿಮ್ಮ ಹತ್ರ ಬರ್ತೀನಿ ಸುಮ್ಮನೆ ಹುಡುಕ್ಕೊಂಡ್ ಹುಡುಕ್ಕೊಂಡ್ ಸಾಲ ಕೊಡೋಕೆ ಯಾಕೆ ಬರ್ತೀರ?"

ಅವನು: "ಸಾರಿ ಸರ್. ನಿಮ್‍ಗೆ ಬೇಡವಾ ಹಾಗಾದ್ರೆ?"

ನಾನು: "ಬೇಡಪ್ಪಾ, ಥ್ಯಾಂಕ್ಸ್"ಅವನು: "ಓಗೆ ಸರ್, ದ್ಯಾಂಗ್ಯೂ.." ಎಂದು ಫೋನು ಕುಕ್ಕಿದ.

--------------------------------------------------------------------------------------------

ಮೊನ್ನೆ ನನ್ನ ಲ್ಯಾಂಡ್ ಲೈನ್ ಫೋನು ರಿಂಗಾಯಿತು. ಬರೀ ಇಂಟರ್‍ನೆಟ್ಟಿಗೆಂದು ಇದನ್ನು ಮೀಸಲಿಟ್ಟಿರುವ ನಾನು ಈ ಸಂಖ್ಯೆಯನ್ನು ಯಾರಿಗೂ ಕೊಟ್ಟೇ ಇಲ್ಲ. ಇದಕ್ಕೆ ಕರೆ ಬರುವುದಾಗಲೀ, ಇದರಿಂದ ಕರೆ ಮಾಡುವುದಾಗಲೀ ಅಭ್ಯಾಸವೇ ಇಲ್ಲ ಈ ಫೋನಿಗೆ, ಪಾಪ. ಇದ್ಯಾರಪ್ಪ ಈ ನಂಬರಿಗೆ ಕರೆ ಮಾಡ್ತಿರೋದು, ಟೆಲಿಫೋನ್ ಎಕ್ಸ್‍ಚೇಂಜಿನವರು ಇರಬೇಕು.. ಎಂದು ಫೋನ್ ಎತ್ತಿದೆ..

"ನಮಸ್ಕಾರ ಸರ್.."

"ನಮಸ್ಕಾರ... ಯಾರು???"

"ಸರ್, ನಾವು, ............................................ ಇಂದ.. .................................. ಸರ್ವೇ ಮಾಡ್ತಿದೀವಿ.."

ಅದೆಂಥದೋ ಕಂಪೆನಿ ಹೆಸರು ಹೇಳಿದಳು. ಅದೆಂಥದೋ ಸರ್ವೇ ಅಂತೆ, ನೆನಪಿಲ್ಲ. ಈ ರೀತಿಯ ಕರೆಗಳು ಬಂದು ಬಹಳ ದಿನಗಳಾಗಿದ್ದವು. ನಾನು ತಲೆ ತಿನ್ನೋಕೆ ಒಳ್ಳೇ ಅವಕಾಶವೆಂದುಕೊಂಡೆ. ನನ್ನ ಮನಸ್ಸೂ ಅಷ್ಟು ಚೆನ್ನಾಗಿರಲಿಲ್ಲ. ನಂಗೂ ಒಂದು ಬ್ರೇಕ್ ಬೇಕಿತ್ತು. ಇವರುಗಳು ನೂರೆಂಟು ಕೇಳ್ತಾರೆ, ಏನಾದರೂ ಹೇಳ್ತಾನೇ ಇರೋಣ ಎಂದುಕೊಂಡೆ.

"ಹೇಳಿಮ್ಮಾ, ಏನು ಬೇಕು?"

"ಸರ್, ಇದು ಆಫೀಸ್ ನಂಬರ್ರೋ ರೆಸಿಡೆನ್ಸ್ ನಂಬರ್ರೋ?"

"ರೆಸಿಡೆನ್ಸು.. ಯಾಕೆ?"

"ಥ್ಯಾಂಕ್ಯೂ ಸರ್"

"ಅಷ್ಟೇನಾ?"

"ನಮಗೆ ಅಷ್ಟೇ ಬೇಕಾಗಿರೋದು ಸರ್.. " ಎಂದು ಫೋನ್ ಇಟ್ಟುಬಿಟ್ಟಳು!!!

ರಿಸೀವರ್ ಇಂದ ತಲೆ ಚಚ್ಚಿಕೊಂಡೆ ಅಷ್ಟೇ.

- ಅ

19.04.2007
7PM

13 comments:

 1. sakkath comedy aagidhe article -u..
  inmele nangu yaaradru heege phone maadidre thale thinthini..maja baratte :-)

  ReplyDelete
 2. hehehehhehehe...tumbha thamashiyaagidhe ee ghatanegalu..ondh sala inthaavrige phone maadi "saala beka??? , club membership beka , survey maadthedheevi " antha phone maadi keladre henge ;)

  ReplyDelete
 3. ಅರುಣ್,

  ಇನ್ನೊ೦ದು ವಿಶೇಷ ಅ೦ದರೆ ಇ೦ತಾ ಕರೆಗಳು ಬೈಕ್ ಓಡಿಸುವಾಗ ಬರುವದು ಜಾಸ್ತಿ. ಅದರ ಪಟ್ಟಿಗೆ ಕಾಲರ್ ಟೋನ್ ಡೌನ್ಲೋಡ್ ಮಾಡಿ ಅದು ಇದು ಅನ್ನುವ ಕರೆಗಳೂ ಸೇರಿದೆ.

  ನಿನ್ನೆ ರಾತ್ರಿಯಿ೦ದ ಕೆಟ್ಟು ಕೆರ ಹಿಡಿದ ಮನಸಿಗೆ ಖುಷಿ ಕೊಟ್ಟ ಲೇಖನ........ತು೦ಬಾ ಚೆನ್ನಾಗಿದೆ.

  ReplyDelete
 4. [ಶ್ರೀಧರ] ಬಿಡಬೇಡ.. ತಲೆ ತಿನ್ನು.. ಆದರೆ ಅವರುಗಳ ಬಗ್ಗೆ ಸ್ವಲ್ಪ ಅನುಕಂಪ ಇರಲಿ..

  [ಕೌಸ್ತುಭ್] ಹೌದು.. ಅದನ್ನೂ ಒಮ್ಮೆ ಪ್ರಯತ್ನ ಪಡಬೇಕು ನೋಡಿ..

  [ಹರ್ಷ] ಆ ಕಾಲರ್ ಟ್ಯೂನ್ ಹಣೆಬರಹ ಇನ್ನೂ ಕೆಟ್ಟದಾಗಿದೆ.. ಅಲ್ಲಿ ನಾವು ಯಾರ ತಲೆಯನ್ನೂ ತಿನ್ನೋಕೆ ಆಗಲ್ಲ ಬೇರೆ. ಯಾವ್ದೋ ಆಟೋಮೇಟೆಡ್ ಕಾಲ್ ಬಂದು, ನಾವು ಅತ್ಯಂತ ಬಿಜಿಯಾಗಿರುವಾಗಲೇ ತೊಂದರೆ ಕೊಡುತ್ತೆ. ನನ್ನ ಸ್ನೇಹಿತರೊಬ್ಬರು ಆ ನಂಬರ್‍ನ "USELESS CALL" ಅಂತಲೇ save ಮಾಡಿಕೊಂಡಿದ್ದಾರೆ.. ನಾನು "DONT RECIEVE" ಅಂತ save ಮಾಡಿಕೊಂಡಿದ್ದೀನಿ.. :-)

  ReplyDelete
 5. junk emails ge spam controller iruva haage, junk calls ge ondu spam gaurd invent madidre chennagirthittu.. :)hehe.. anthaha dhatta aranya pradesha dalli kooda signal sikki, obbara thale innobbaru thindiddu yaara dhuradrushtavo gottilla.. ottinalli, inthaha calls indha yenoo use illa.. hagidru, ee jana calls yake madthare?

  ReplyDelete
 6. arun,, chennagidee... inthavrannella neglect madoke yenadru idea idyaaa!!!!

  ReplyDelete
 7. haa haaa haa... correct... intha call galu thale tinnOkke barOdu... adke naanu receive madokE hOgolla, msgs nOdokke hOgolla, but adrinda thondrenoo agutte, monne nanna phone disconct aythu yaake antha gottilla. two days aadmele biduvu madkondu spice dealer hatra hOdaga gottaythu, Govt. rule prakara ella clientsdoo ID & Adrs verfication agbeku antha. haagantha msgs kooda kalsidranthe, call kooda madidrante direct Deli ninda.... Yaariggottu? naanu receive maadidre thane!! Aamirkhan, Sharukh Khan, Hosa haadu antella hesralli msgs kalso ivrge ID proof Address proof antha kalsokagtirlilva.. naan nOdtirlilva....

  ReplyDelete
 8. ಅರುಣ್,
  ಮಸ್ತಾಗಿದೆ !ನಾನೂ ಈ ಫೋನ್ ಕಾಲುಗಳ ಬಗ್ಗೆ ಬರೆಯಬೇಕೆಂದಿದ್ದೆ! ನನ್ನ ಕೆಲ್ಸ ಕಡ್ಮೆ ಮಾಡ್ದೆ ಕಣಯ್ಯಾ! ನಕ್ಕು ನಕ್ಕು ಸುಸ್ತಾಯ್ತು!
  ಯಾರೋ ಒಬ್ಬ ವಿದೇಶಿಗ, ಈ ತರಹ ಫೋನ್ ಮಾಡುವವರ ತಲೆ ತಿನ್ನುವುದು ಹೇಗೆ ಅನ್ನುವುದರ ಬಗ್ಗೆ ಪುಸ್ತಕವನ್ನೇ ಬರೆದಿದ್ದಾನೆ! ( ನಮಗೆ ಸಮಯ ಇರಬೇಕು!)

  ReplyDelete
 9. Aadroo ee karegaLu full useless alla ... eega bandid calls nella collate maadi hege bardidna odhi yeshtondu khushi aaglilva ... yellaru mastagide, sakkath nakdvi anta heLiruvaaga ... they are not completely useless :-)

  ReplyDelete
 10. [ವಿನುತ] spam ಕರೆಗಳಿಗೆ ಸಹನೆಯಿಂದ ಉತ್ತರ ಕೊಡೋರೂ ಇರ್ತಾರೆ..

  [ಸುಬ್ಬು] ಏನಾದ್ರೂ ಐಡಿಯಾ ಸಿಕ್ರೆ ನಂಗೂ ಹೇಳೀಪ್ಪಾ...

  [ಅನ್ನಪೂರ್ಣ] ಈ ಮೊಬೈಲ್ ಸರ್ವೀಸ್ ಪ್ರೊವೈಡರ್‍ಗಳ ಕಥೆ ಅರ್ಥವೇ ಆಗಲ್ಲ..

  [ವಿಜಯಾ] ನಗಿಸುತ್ತೆ ಅಂದರೆ ಆ ಕರೆಗಳೆಲ್ಲಾ ನನಗೇ ಬರಲಿ..

  [ಶ್ರೀನಿಧಿ] ಆ ಪುಸ್ತಕವನ್ನು ನನಗೂ ಕೊಡ್ರೀ..

  [ಸುಶ್ರುತ] ದ್ಯಾಂಗ್ಯೂ ಸರ್... :-)

  ಯಾರೋ ಒಬ್ಬರು ಕಮೆಂಟು ದಿಲೀಟ್ ಮಾಡಿದ್ದಾರೆ.. ಅವರಿಗೂ ದ್ಯಾಂಗ್ಸ್... :-)

  ReplyDelete
 11. ಸೂಪರ್ ಗುರುಗಳೆ! ನೆಕ್ಕಿ ನೆಕ್ಕಿ ಹೊಟ್ಟೆ ಹುಣ್ಣಾಯ್ತು ! ಎಲ್ಲದಕ್ಕಿಂತ ಮಜಾ ಕೊಟ್ಟಿದ್ದು
  ಸರ್ವೇ : "ಇದು ರೆಸಿಡೆನ್ಸ್ ನಂಬರ್ರಾ ಆಫೀಸ್ ನಂಬರ್ರಾ?"
  ಬಿಬಿನ ಎಬಿನ....

  ReplyDelete

ಒಂದಷ್ಟು ಚಿತ್ರಗಳು..